23rd March 2024
Share

TUMAKURU:SHAKTHIPEETA FOUNDATION

ಊರಿಗೊಂದು/ ಬಡಾವಣೆಗೊಂದು ಪುಸ್ತಕ/  ವಿಷನ್ ಡಾಕ್ಯುಮೆಂಟ್ @ 2047 ಇದೊಂದು ಮಹತ್ತರವಾದ ಕಾರ್ಯ. ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಆಯ್ಕೆ ಮಾಡಿಕೊಂಡು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

ತುಮಕೂರು ವಿಶ್ವ ವಿದ್ಯಾನಿಲಯ ವಿದ್ಯಾರ್ಥಿಗಳಿಗೆ, ಇಂಟರ್ನ್ ಶಿಪ್ ಆಗಿ ಘೋಷಣೆ ಮಾಡಿದ ನಂತರ ಬರೆಯಲು ಆರಂಭಿಸಿದ್ದಾರೆ. 2047 ನೇ ಇಸವಿವರೆಗೂ ನಿರಂತರ ಪ್ರಯತ್ನ ಸಾಗಲಿದೆ. ಪ್ರತಿ ಗ್ರಾಮದಲ್ಲೂ ಪಂಚವಟಿ ಗಿಡ ಹಾಕಿ ಗಿಡಗಳು ಬೆಳೆದಂತೆ, ಡಾಟಾ ಮಿತ್ರ, ಅವರ ಕುಟುಂಬ, ನಂತರ ಅವರವರ ಊರುಗಳ/ ಬಡಾವಣೆಗಳ ಅಭಿವೃದ್ಧಿಗೆ ಶ್ರಮಿಸುವುದು  ನಮ್ಮ ಆಲೋಚನೆ.

ಹಸಿರು ತುಮಕೂರು ಯೋಜನೆಯಡಿ ಶ್ರೀ ಜಿ.ಎಸ್.ಬಸವರಾಜ್ ರವರ ಅನುದಾನದ ಅಡಿಯಲ್ಲಿ, ಕುಂದರನಹಳ್ಳಿ ರಮೇಶ್ ರವರ ತಂಡ, ತುಮಕೂರು ನಗರದಲ್ಲಿ ಹಾಕಿಸಿರುವ   ಸುಮಾರು 36500 ಗಿಡಗಳಲ್ಲಿನ  ಗಿಡ.

ವಾಣಿವಿಲಾಸ ಕಾಲುವೆಯ ಅಕ್ಕ ಪಕ್ಕದ ಸರ್ಕಾರಿ ಜಮೀನು ಗುರುತಿಸಿ, ಗ್ರೀನ್ ಕಾರಿಡಾರ್ ಮಾಡಲು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ವಿಜೆಎನ್ ಎಲ್‍ಎಂಡಿಯವರಾದ ಶ್ರೀ ಕೆ.ಜೈಪ್ರಕಾಶ್ ರವರಿಗೆ ಮನವಿ ಸಲ್ಲಿಸಿತ್ತು.ನಂತರ ಬಂದ ಎಂ.ಡಿಯವರಾದ ಶ್ರೀ ಲಕ್ಷ್ಮಣರಾವ್ ಪೇಶ್ವೆರವರು ಸಮೀಕ್ಷೆ ಮಾಡಿಸಿದ್ದಾರೆ.ಈಗ ಮತ್ತೆ ಆ ಯೋಜನೆಗೆ ಜೈಪ್ರಕಾಶ್ ರವರು ಚಾಲನೆ ನೀಡಿದ್ದಾರೆ.

ಮನವಿ ಸಲ್ಲಿಸಿದ ದಿನ, ಶಕ್ತಿಪೀಠ ಕ್ಯಾಂಪಸ್ ಬಳಿ ಇರುವ ಕುಂದರನಹಳ್ಳಿ ರಮೇಶ್ ಸಹೋದರ ಶ್ರೀ ಎಸ್.ಪಿ.ರಾಜೇಶ್ ಅವರ ಜಮೀನಿಗೆ ಹೊಂದಿಕೊಂಡಂತೆ, ವಾಣಿ ವಿಲಾಸ ಕಾಲುವೆಯ ಪಕ್ಕ, ನಿಗಮದ ಜಮೀನನಲ್ಲಿ ಗಿಡಗಳನ್ನು  ಹಾಕಿ ಬೆಳಸಿರುವುದು.

ಹಿರಿಯೂರು, ಶಕ್ತಿಪೀಠ ಕ್ಯಾಂಪಸ್ ನಲ್ಲಿ ಹಾಕಿರುವ ಪಂಚವಟಿ ಗಿಡ.

ಬೆಂಗಳೂರಿನ ಪಿಜೆಸಿ ಕ್ಯಾಂಪಸ್ ನಲ್ಲಿ ಹಾಕಿರುವ ಪಂಚವಟಿ ಗಿಡ.

ತುಮಕೂರಿನ ಜಯನಗರ ಪೂರ್ವದಲ್ಲಿರುವ ‘ಶಕ್ತಿಭವನ’ ದ ಹಿಂಬಾಗ ಇರುವ ಪಾರ್ಕ್ ನಲ್ಲಿ   ಹಾಕಿರುವ ಪಂಚವಟಿ ಗಿಡ.

ಈಗ ತುಮಕೂರು ಜಿಲ್ಲೆಯ 3550 ಗ್ರಾಮಗಳು ಮತ್ತು ಬಡಾವಣೆಗ¼ಲ್ಲೂ À ಪಂಚವಟಿ ಗಿಡ ಹಾಕಲು ಚಿಂತನೆ ಆರಂಭವಾಗಿದೆ.

ಕುಂದರನಹಳ್ಳಿ ರಮೇಶ್ ರವರಿಗೆ ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಪಂಚವಟಿ ಗಿಡ ಹಾಕಲು ಪಾರಂಪರಿಕ ವೈಧ್ಯ ಕೊರಟಗೆರೆಯ ಶ್ರೀ ಗುರುಸಿದ್ಧರಾಧ್ಯರವರು ಸಲಹೆ ನೀಡಿದ್ದರಂತೆ. ದಿನಾಂಕ:22.01.2024 ರಂದು ಪಂಚವಟಿ ಗಿಡಗಳ ಬಗ್ಗೆ, ಒಂದು ಬ್ರೋಚರ್ ಮತ್ತು ಗಿಡ ಹಾಕುವ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಲು ಆರಾಧ್ಯರಿಗೆ ತಿಳಿಸಿದ್ದಾರೆ.

ಎಸ್.ಪಿ.ರಾಜೇಶ್ ಮತ್ತು ಅವರ ತಂಡ ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮಗಳು ಮತ್ತು ವಾಣಿವಿಲಾಸ ಕಾಲುವೆಯ ಪಕ್ಕದ ನಿಗಮದ ಜಮೀನನಲ್ಲಿ ಪಂಚವಟಿ ಗಿಡ ಹಾಕಿಸಲು ಶ್ರಮಿಸುವ ಬಗ್ಗೆ ದಿನಾಂಕ:26.01.2024 ರಿಂದ ಚರ್ಚೆ ಆರಂಭವಾಗಿದೆ.

ಆಸಕ್ತರು ಸಹಕರಿಸ ಬಹುದು.

ಇದೂವರೆಗೂ ಹಾಕಿಸಿರುವ ಗಿಡಗಳ ಗ್ರೀನ್ ಆಡಿಟ್ ಆಗಬೇಕಿದೆ.

ಸಾಧನೆ ಪ್ರೇರಪಣೆ ಆಗಬೇಕು.

–      ಆಗೋಚರ ಶಕ್ತಿ.