22nd May 2024
Share

ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಸದಸ್ಯರು 225 , ವಿಧಾನ ಪರಿಷತ್ ಸದಸ್ಯರು -75, ಲೋಕಸಭಾ ಸದಸ್ಯರು 28, ರಾಜ್ಯಸಭಾ ಸದಸ್ಯರು-12 , ಮತ್ತು ದೆಹಲಿ ಪ್ರತಿನಿಧಿ-2 (ನಾಮನಿರ್ಧೇಶಿತ) ಸೇರಿದಂತೆ ಒಟ್ಟು 342 ಆಧುನಿಕ ಚುನಾಯಿತ ಜನಪ್ರತಿನಿಧಿಗಳು ಸಹ ಹಿಂದಿನ ಕಾಲದಲ್ಲಿದ್ದ ರಾಜರು/ರಾಣಿಯರಿಗೆ ಸಮಾನರು.

 ಕರ್ನಾಟಕ ರಾಜ್ಯದ ಒಬ್ಬೊಬ್ಬ ಚುನಾಯಿತ ಜನಪ್ರನಿಧಿಯ ಅಧ್ಯಕ್ಷತೆಯಲ್ಲಿ ಒಂದು ಉತ್ಪನ್ನದ ಕ್ಲಸ್ಟರ್:-   2022 ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುವ ಯೋಜನೆ ಪೂರಕವಾಗಿ ರೈತರಿಗೆ ಸಂಬಂಧಿಸಿದ ಕೃಷಿ, ತೋಟಗಾರಿಕಾ, ಅರಣ್ಯ, ಆಯುಷ್, ಪಶು ಸಂಗೋಪನಾ, ರೇಷ್ಮೆ, ಮೀನುಗಾರಿಕೆ, ಕುಶಲಕರ್ಮಿ ಮತ್ತು ಇತರೆ ಪೂರಕವಾದ ಉತ್ಪನ್ನಗಳ ಆಯ್ಕೆ ಮಾಡಿ 342 ಉತ್ಪನ್ನಗಳ ಅಂತಿಮ ಪಟ್ಟಿ ಸಿದ್ಧಪಡಿಸಿದ ಉತ್ಪನ್ನಗಳಲ್ಲಿ ಒಂದು ಉತ್ಪನ್ನ ಆಯ್ಕೆ ಮಾಡಿಕೊಂಡು ಉತ್ಪನ್ನದ ವಿಶ್ವವಾರು ಡೇಟಾಬೇಸ್, ತರಬೇತಿ, ಕೈಗಾರಿಕೆ, ರಫ್ತು, ಫಾರ್‌ವಾರ್ಡ್ ಮತ್ತು ಬ್ಯಾಕ್‌ವಾರ್ಡ್ ಲಿಂಕೇಜ್ ಸೇರಿದಂತೆ ಪ್ರತಿಯೊಂದು ಮಾಹಿತಿಯೂ ಒಂದೇ ಕಡೆ ಲಭ್ಯವಾಗುವಂತಹ ಕ್ಲಸ್ಟರ್ ಸ್ಥಾಪಿಸಲು ಶ್ರಮಿಸಲು ಮನವಿ. 

    ರಾಜ್ಯ ಸರ್ಕಾರ ಈ ಉತ್ಪನ್ನಗಳ ಮಾರಾಟಕ್ಕೆ ಅನೂಕೂಲ ಕಲ್ಪಿಸಲು ಎಮ್.ಎಸ್.ಎಂ.ಇ ಸಾರ್ಥಕ್ ಎಂಬ ವಿನೂತನ ಯೋಜನೆಯನ್ನು ಆರಂಭಿಸುತ್ತಿದೆ.

 ಬಹುತೇಕ ಎಲ್ಲರೂ ಗೂಟದ ಕಾರಿನ ಬೇಡಿಕೆ ಇಡುವುದು ಸಾಮಾನ್ಯವಾಗಿದೆ. ಯಾವುದೇ ಪಕ್ಷದ ಸರ್ಕಾರದ ಮುಖ್ಯ ಮಂತ್ರಿಗಳಿಗೂ ಇದೂ ಒಂದು ದೊಡ್ಡ ತಲೆನೋವಾಗಿದೆ. ತಾವೂಗಳು ಕೇಳುವುದು ಸರಿಯಾಗಿದೆ ಎಂಬುದು ನನ್ನ ಭಾವನೆ.  

   ಆದ್ದರಿಂದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕನಿಷ್ಠ ಪಕ್ಷ ತಲಾ ಒಂದರಂತೆ, ಆಯಾ ಕ್ಷೇತ್ರದಲ್ಲಿ ಹೆಚ್ಚಾಗಿ ಬೆಳೆಯುವ 342 ಉತ್ಪನ್ನವಾರು ನಿಗಮ/ಮಂಡಳಿ ಸ್ಥಾಪಿಸಲು ಶ್ರಮ ವಹಿಸಿ, ಇದರಿಂದ ರೈತರ ಸೇವೆ ಮಾಡಿದಂತಾಗುತ್ತದೆ, ಪ್ರತಿಯೊಬ್ಬರೂ ಸಂಪುಟ ದರ್ಜೆ ಸಚಿವರಿಗೆ ಸಮನಾದ ಹೊಣೆಗಾರಿಕೆ ಪಡೆದು ಸೇವೆ ಮಾಡಲು ಮನವಿ.

 ಮುಂದಿನ ಮುಂಗಡ ಪತ್ರದಲ್ಲಿ ವಿಷಯ ಮಂಡಿಸಿ, ಸರ್ಕಾರದಿಂದ ಒಂದು ಆದೇಶ ಮಾಡಿಸಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲು ಮನವಿ.

 ಅಥವಾ ತಾವೂ ಇಷ್ಟಪಡುವ ಕ್ಷೇತ್ರದಲ್ಲಿ ಒಂದು ಎಸ್.ಪಿ.ವಿ. ರಚಿಸ ಬೇಕು ಅಥವಾ ಹಾಲಿ ಇರುವ ಎಫ್.ಪಿ.ಓ ಅಥವಾ ಎನ್.ಆರ್.ಎಲ್.ಎಮ್ ಫೇಡರೇಷನ್‌ಗಳ ಮುಖಾಂತರವೂ ಪ್ರಯತ್ನಿಸ ಬಹುದು. ಕ್ಷೇತ್ರದ ನಿರುದ್ಯೋಗಿಗಳ ಮುಖಾಂತರ ಸ್ಟಾರ್ಟ್ ಅಫ್  ಕಂಪನಿ ಸ್ಥಾಪಿಸಿ ತಾವೇ ಚೇರ್‍ಮನ್ ಆಗಬಹುದು.

  ಸುಮಾರು 50  ರಿಂದ 500 ಎಕರೆವರಿಗೂ ಸರ್ಕಾರಿ ಜಾಗ ಇದ್ದಲ್ಲಿ ಉದ್ದೇಶಿತ ಯೋಜನೆಗೆ ಕಾಯ್ದಿರಿಸಲು ಕ್ರಮಕೈಗೊಳ್ಳಬೇಕು,   ಸರ್ಕಾರಿ ಜಮೀನು ಇಲ್ಲದೇ ಇದ್ದಲ್ಲಿ ತಾವೇ ಅಗತ್ಯವಿರುವ ಜಮೀನನನ್ನು ಕೊಂಡು ಕೊಂಡು ಉದ್ದಶಿತ ಎಸ್.ಪಿ.ವಿ ಗೆ 15 ವರ್ಷದ ಲೀಸ್ ಕಂ/ಬಾಡಿಗೆ ನೀಡಬಹುದಾಗಿದೆ. ಅಥವಾ ಜಮೀನು ಇರುವವರಿಂದ ಬಾಡಿಗೆ ಪಡೆಯಬಹುದು ಅಥವಾ ತಾವೂಗಳು ಮನಸ್ಸು ಮಾಡಿದಲ್ಲಿ ಕಂಪನಿ ಹೆಸರಿಗೆ ಜಮೀನುಕೊಳ್ಳಲು ಯಾವುದೇ ಸಮಸ್ಯೆ ಆಗಲಾರದು. ಹಾಲಿ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಗಳ ಮೂಲಕವೇ ಹತ್ತಾರು ಕೋಟಿ ಅನುದಾನ ಪಡೆಯಬಹುದಾಗಿದೆ. 

ಒಂದು ಅಧ್ಯಯನ ಕೇಂದ್ರ:- ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ, ಕೇಂದ್ರ ಸರ್ಕಾರದ ಇಲಾಖೆಗಳು, ರಾಜ್ಯ ಸರ್ಕಾರದ ಇಲಾಖೆಗಳು, ನಿಗಮ,ಮಂಡಳಿ, ಕಾರ್ಪೋರೇಷನ್, ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ, ಮುಖ್ಯಮಂತ್ರಿ, ದೆಹಲಿ ಪ್ರತಿನಿಧಿ ಮತ್ತು ರಾಜ್ಯ ಮಟ್ಟದ ಅಧ್ಯಯನ ಪೀಠ ಸೇರಿದಂತೆ 342  ಅಧ್ಯಯನ ಪೀಠ ಸ್ಥಾಪಿಸಿ, ಒಬ್ಬ ಚುನಾಯಿತ ಜನಪ್ರತಿನಿಧಿ ಒಂದು ಪೀಠದ ನೇತೃತ್ವ ವಹಿಸಿಕೊಳ್ಳುವುದರ ಮೂಲಕ  ಪ್ರತಿಯೊಬ್ಬರೂ ಒಂದೊಂದು ಅಧ್ಯಯನ ಪೀಠದ ಹೊಣೆಗಾರಿಕೆ ಹೊರಲು ಮಂದಾಗಲು ಮನವಿ.

  ಮೇಲ್ಕಂಡ ಕ್ಲಸ್ಟರ್‌ಗಳ ಧರ್ಮದ ನಿಧಿಯಲ್ಲಿ ನಡೆಸಿಕೊಂಡು ಹೋಗ ಬಹುದಾಗಿದೆ. ಇದರಿಂದ ತಾಜಾ ಅಭಿವೃದ್ಧಿ ಡೇಟಾ ದೊರೆಯಲಿದೆ. ತಮ್ಮ ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ ಪಡೆಯಲು ಅನೂಕೂಲವಾಗಲಿದೆ. ಪ್ರತಿಯೊಬ್ಬರೂ ಆಯಾ ಕ್ಷೇತ್ರದಲ್ಲಿ ಪರಿಣಿತರಾಗುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬೃಹತ್ ಕೊಡುಗೆ ನೀಡ ಬಹುದಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪ್ಲಾನಿಂಗ್, ಪ್ರೋಗ್ರಾಮ್ ಮಾನಿಟರಿಂಗ್  ಮತ್ತು ಅಂಕಿ ಅಂಶಗಳ ಇಲಾಖೆ. ಕರ್ನಾಟಕ ಸರ್ಕಾರ. ಎಂ.ಎಸ್.ಬಿಲ್ಡಿಂಗ್  ಬೆಂಗಳೂರು. ಇವರೊಂದಿಗೆ ಸಮಾಲೋಚನೆ ಮಾಡಿ ಈ ಯೋಜನೆ ರೂಪಿಸಲು ಪ್ರಸ್ತಾವನೆ ಸಿದ್ಧಪಡಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಮನವಿ ಮಾಡಲಾಗಿದೆ.