17th April 2024
Share

ಮುಂದುವರೆದ ಭಾಗ

   ಆಗಿನ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಶ್ರೀ ಕೆ.ಹೆಚ್.ಮುನಿಯಪ್ಪನವರಿಗೆ ವಿಜ್ಞಾನಗುಡ್ಡದಲ್ಲಿ  ಎಂ.ಎಸ್.ಎಂ.ಇ ಟೆಕ್ನಲಾಜಿ ಸೆಂಟರ್ ಸ್ಥಾಪಿಸಲು ಶ್ರೀ ಜಿ.ಎಸ್.ಬಸವರಾಜ್‌ರವರು ಮನವಿ ಮಾಡುವುದರ ಜೊತೆಗೆ ಕೇಂದ್ರೀಯ ವಿದ್ಯಾಲಯದ ಉದ್ಘಾಟನೆಗೆ ಇದೇ ಜಾಗಕ್ಕೆ ಅವರನ್ನು ಕರೆಸುವ ಮೂಲಕ  ಗಮನ ಸೆಳೆದ ಹಿನ್ನೆಲೆಯಲ್ಲಿ ಸುಮಾರು ರೂ 100 ಕೋಟಿ ವೆಚ್ಚದ ಯೋಜನೆಗೆ ಹಸಿರು ನಿಶಾನೆ ನೀಡಿದರು.

    ಜಿಲ್ಲಾಧಿಕಾರಿ ವರ್ಗಾವಣೆಯಾದರು. ನಂತರ ಬಂದ ಜಿಲ್ಲಾಧಿಕಾರಿ  ಶ್ರೀ ಸತ್ಯಮೂರ್ತಿಯವರಿಗೆ ಅಲ್ಲಿನ ಸರ್ಕಾರಿ ಜಮೀನು ಸ್ವಾಧೀನದಲ್ಲಿರುವವರ ಮತ್ತು ಬಹಳ ದೂರದಲ್ಲಿರುವ ಕೆಲವು ಕ್ರಷರ್ ಮಾಲೀಕರ ಮೇಲೆ ಅಮರವಾದ ಪ್ರೇಮ ಹುಕ್ಕಿ ಅರಿಯಿತು.  ಅದೇ ವೇಳೆಗೆ ಶ್ರೀ ಜಿ.ಎಸ್.ಬಸವರಾಜ್ ಚುನಾವಣೆಯಲ್ಲಿ ಸೋಲುಂಡರು.

  ನಂತರ ಬಂದ ಲೋಕಸಭಾ ಸದಸ್ಯರಾದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರವರು ಈ ಯೋಜನೆ ಬಗ್ಗೆ ಆಸಕ್ತಿ ವಹಿಸಲಿಲ್ಲ. ಆದರೂ ಎಂ.ಎಸ್.ಎಂ.ಇ ಟೆಕ್ನಲಾಜಿ ಸೆಂಟರ್‌ಗೆ ಅವರು ಮತ್ತು ನನ್ನ ಆತ್ಮೀಯ ಸ್ನೇಹಿತರಾದ ಜಿಲ್ಲಾಧಿಕಾರಿ  ಶ್ರೀ ಸತ್ಯಮೂರ್ತಿಯವರ ಶ್ರಮದಿಂದ 15  ಎಕರೆ ಸರ್ಕಾರಿ ಜಮೀನು ಖಾತೆ ಮಾಡಿ ಹಸ್ತಾಂತರಿಸಿದ್ದಾರೆ. ಇವರಿಬ್ಬರಿಗೂ ನನ್ನ ಅಭಿನಂದನೆ.

   ಶ್ರೀ ಎಸ್.ಪಿ.ಮುದ್ದುಹನುಮೇಗೌಡರವರು ಯಾವುತ್ತು ನಮ್ಮ ತಂಡದ ಜೊತೆ ಈ ಯೋಜನೆ ಬಗ್ಗೆ ಸಮಾಲೋಚನೆ ನಡೆಸಲಿಲ್ಲ, ಆದ್ದರಿಂದ ಕರೆಯದವರ ಮನೆಗೆ ಊಟಕ್ಕೆ ಹೋಗಬಾರದು ಎಂಬ ನಾಣ್ಣುಡಿಯಂತೆ ನಾನು ಪುನಃ ಈ ಯೋಜನೆ ಕಡತದ ಅನುಸರಣೆ ಮಾಡಲಿಲ್ಲ.  ಯೋಜನೆ ನೆನೆಗುದಿಗೆ ಬಿತ್ತು.

  ತುಮಕೂರಿಗೆ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಶಾಸಕರಾಗುವವರೆಗೂ ಯೋಜನೆ ನೆನೆಗುದಿಗೆ ಬಿದ್ದಿತ್ತು. ಅವರು ಶಾಸಕರಾದ ನಂತರ ಅವರಿಗೆ ನಾನು ಮನವರಿಕೆ ಮಾಡಿದೆ. ತುಮಕೂರು ಮಹಾನಗರ ಪಾಲಿಕೆಯ 10 ಕೀಮೀ ಸುತ್ತ-ಮುತ್ತ. ಯಾರಿಗೂ ಸರ್ಕಾರಿ ಜಮೀನು ಮಂಜೂರು ಮಾಡುವ ಹಾಗಿಲ್ಲ.

  ಬಗರ್ ಹುಕುಂ ಅಡಿಯಲ್ಲಿ ಹಾಕಿರುವ ಅರ್ಜಿಗಳು ವಜಾ ಆಗಲಿವೆ. ಹೊರವಲಯದಲ್ಲಿ ಫೆರಿ-ಫೆರಿಯಲ್ ರಿಂಗ್ ರಸ್ತೆ ಸಮೀಕ್ಷೆ ನಡೆಯುತ್ತಿದೆ. ಟೂಡಾ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ಮಾಡುವಾಗ ಫೆರಿ-ಫೆರಿಯಲ್ ರಿಂಗ್ ರಸ್ತೆವರೆಗೂ ಲೋಕಲ್ ಪ್ಲಾನಿಂಗ್ ಏರಿಯಾ ವಿಸ್ತರಿಸಿ, ಅದರ ಮಧ್ಯೆ ಬರುವ ಸರ್ಕಾರಿ ಜಾಗ ಪತ್ತೆ ಹಚ್ಚಿ, ತುಮಕೂರು ನಗರದಲ್ಲಿ ಸುಮಾರು 3000 ಜನರು ನಿವೇಶನ ಮತ್ತು ಮನೆಯಿಲ್ಲ ಎಂದು ಅರ್ಜಿಹಾಕಿದ್ದಾರೆ. ಅವರಿಗೆ ವಸತಿ, ಸರ್ಕಾರಿ ಯೋಜನೆಗಳಿಗೆ ಮತ್ತು ಕಚೇರಿಗಳಿಗೆ ಜಮೀನು ನಿಗದಿ ಮಾಡಿಸಿ.

  ಉಳಿದ ಸರ್ಕಾರಿ ಜಮೀನಿನಲ್ಲಿ AGRI STARTSUP INNOVATION HUB    ನಿರ್ಮಾಣ  ಮಾಡಿ ತುಮಕೂರು ಸ್ಮಾರ್ಟ್ ಸಿಟಿಯಲ್ಲಿ  ಕ್ಲಸ್ಟರ್ ಆಧಾರಿತ SKILL CITY ಯೋಜನೆ ಜಾರಿಗೊಳಿಸಿದಲ್ಲಿ ಇಡೀ ವಿಶ್ವದ ಗಮನ ಸೆಳೆಯುವ ಯೋಜನೆಯಾಗಲಿದೆ.

  ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡುವ ಬಗ್ಗೆ ಸಮರ ಸಾರಿದ್ದಾರೆ. ಇದರಲ್ಲಿ ಪ್ರಮುಖವಾದ ಎರಡು ಅಂಶಗಳಿವೆ ಮೊದಲನೆಯದಾಗಿ ರೈತರಿಗೆ ನೀರು ಮತ್ತು ಎರಡನೆಯದಾಗಿ ರೈತರ ಬೆಳೆಗಳಿಗೆ ಮೌಲ್ಯವರ್ಧಿತ ಬೆಲೆ.

 ರೈತರಿಗೆ ನೀರು ನೀಡುವ ಯೋಜನೆಗೆ ಶ್ರೀ ಜಿ.ಎಸ್.ಬಸವರಾಜ್ ಅವರ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ತಾವಿನ್ನೂ ಯುವಕರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಮುಂದಾಗ ಬೇಕು. ಅದರಲ್ಲೂ ರೈತರ ಮಕ್ಕಳನ್ನು ಐಟಿ-ಬಿಟಿಗಿಂತ ಮುಂಚೂಣೆಗೆ ತರಲು ಶ್ರಮ ಹಾಕುವುದು ಸೂಕ್ತ ಎಂಬ ನನ್ನ ಮಾತಿಗೆ ಎರೆಡು ಮಾತಿಲ್ಲದೇ ಅವರು ಸಕರಾತ್ಮಕವಾಗಿ ಸ್ಪಂದಿಸಿದರು.

 ಯೋಜನೆಯ ಬಗ್ಗೆ ನಾನು ಮನವರಿಕೆ ಮಾಡಿದಾಗ ವಿಜ್ಞಾನ ಗುಡ್ಡದ ಯೋಜನೆಗೆ ಕೆಲವು ಕ್ರಷರ್ ಮಾಲೀಕರು ವಿರೋಧ ಮಾಡಿದ್ದರು. ಈಗ ಅದೇ ಜಮೀನೀನನಲ್ಲಿ ಪುನಃ ಯೋಜನೆ ಜಾರಿಯಾದರೆ  ಅವರಿಗೆ ತೊಂದರೆಯಾಗುವುದಿಲ್ಲವೇ ಎಂಬ ನೇರ ಪ್ರಶ್ನೆ ಹಾಕಿದರು.

  ಇಲ್ಲಾ ಸಾರ್ ಯಾವುದೇ ಕಾರಣಕ್ಕೂ ಕ್ರಷರ್ ಮಾಲೀಕರಿಗೆ ತೊಂದರೆ ಆಗುವುದಿಲ್ಲ, ಅವರಿಗೆ ನೀಡಿರುವ ಜಾಗದಿಂದ ಸುಮಾರು 500  ಮೀ ದೂರದ ಸರ್ಕಾರಿ ಜಮೀನಿನಲ್ಲಿ ಯೋಜನೆ ರೂಪಿಸೋಣ, ಜೊತೆಗೆ ಕ್ರಷರ್‌ಗಳು ಸಹ ಒಂದು ಉದ್ದಿಮೆಯಲ್ಲವೇ, ಆದ್ದರಿಂದ ವಿರೋಧದ ಪ್ರಶ್ನೆ ಬರುವುದಿಲ್ಲ. ಹಿಂದಿನ ನಕ್ಷೆಯಲ್ಲಿರುವ ಕೆಲವು ಜಮೀನುಗಳನ್ನು ಬಿಟ್ಟು ಬಿಡಬಹುದು ಅವರೊಂದಿಗೂ ಸಮಾಲೋಚನೆ ಮಾಡೋಣ ಎಂಬ ವಾಸ್ತವ ಸ್ಥಿತಿ ಹೇಳಿದೆ.

   ತಾವು ಒಪ್ಪಿದರೆ ಮಾತ್ರ ಈ ಯೋಜನೆಗೆ ಕೈಹಾಕುತ್ತೇನೆ, ಇಲ್ಲವಾದಲ್ಲಿ ನಾನು ಈ ಸುದ್ದಿಗೆ ಬರುವುದಿಲ್ಲಾ ಎಂದು ಸ್ಪಷ್ಟವಾಗಿ ತಿಳಿಸಿದಾಗ, ಅವರು ಒಂದು ಮಾತು ಹೇಳಿದರೂ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಯೋಜನೆ ರೂಪಿಸೋಣ, ಎಲ್ಲಾ ಜಾತಿಯ ಬಡವರ ಯೋಜನೆ, ರೈತರ ಮಕ್ಕಳಿಗೆ ರೈತರ ಉತ್ಪನ್ನಗಳ ಸ್ಟಾರ್ಟ್‌ಅಫ್ ಯೋಜನೆಯಾದ್ದರಿಂದ ಎಲ್ಲರೂ ಒಪ್ಪಲಿದ್ದಾರೆ, ಮುಂದುವರಿಯೋಣ ಒಮ್ಮೆ ಎಂಪಿಯವರ ಬಳಿ ಚರ್ಚಿಸಿ ಎಂದು ಸಲಹೆ ನೀಡಿದರು.

  ಎಂಪಿಯವರ ಜೊತೆ ಸಮಾಲೋಚನೆ ಮಾಡಿದಾಗ ಮೊದಲು ಎಂ.ಎಸ್.ಎಂ.ಇ ಟೆಕ್ನಲಾಜಿ ಸೆಂಟರ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಕಡತ ಯಾವ ಸ್ಥಿತಿಯಲ್ಲಿದೆ ಎಂಬ ಪ್ರಶ್ನೆ? ಪುನಃ ನೆನೆಗುದಿಗೆ ಬಿದ್ದ ಕಡತಗಳಿಗೆ ಚಾಲನೆ ದೊರಕಿತು.

                                                   – ಮುಂದುವರೆಯಲಿದೆ.