13th June 2024
Share

ಮತದಾರರ ಮುಂಗಡಪತ್ರ

  ಕೇಂದ್ರ ಸರ್ಕಾರ 2020-21 ನೇ ಸಾಲಿನ ಮುಂಗಡ ಪತ್ರದಲ್ಲಿ ಪ್ರಕಟಿಸಿರುವ ’ಮೂಲಭೂತ ಸೌಕರ್ಯಗಳ ಪೈಪ್ ಲೈನ್’ ಯೋಜನೆಯ ಮಾದರಿ ಯೋಜನೆಗೆ ಗ್ರಾಮವಾರು,  ಬಡವಾಣೆವಾರು, ವಿಧಾನಸಭಾ ಕ್ಷೇತ್ರವಾರು, ತಾಲ್ಲೂಕುವಾರು, ಜಿಲ್ಲಾವಾರು ಮೂಲಭೂತ ಸೌಕರ್ಯಗಳ ಪೈಪ್ ಲೈನ್ ಯೋಜನೆ ಜಾರಿ ಮಾಡಿ, ’ಮೊದಲು ಬಂದವರಿಗೆ ಮೊದಲ ಆಧ್ಯತೆ – ಪಿಪಿಪಿ ಮಾದರಿ ಯೋಜನೆಗಳಿಗೆ ಮೊದಲ ಆಧ್ಯತೆ’ ಎಂಬ ಘೋಷಣೆಯೊಂದಿಗೆ, ಅಗತ್ಯ ಯೋಜನೆಗಳ ಇಲಾಖಾವಾರು  ಸಿನಿಯಾರಿಟಿ ಲಿಸ್ಟ್ ಪ್ರಕಟಿಸಿ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಯೋಜನೆಗಳಿಗೆ ಮಂಜೂರಾತಿ ನೀಡುವ  ವಿಶೇಷ ಯೋಜನೆ ಜಾರಿ ಅಗತ್ಯ.

  ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಜಿಯವರ ಕನಸಿನ ಯೋಜನೆಗಳಾದ ನ್ಯೂ ಇಂಡಿಯಾ, ಡಿಜಿಟಲ್ ಇಂಡಿಯಾ, ನೀತಿ ಆಯೋಗ ಸಿದ್ಧಪಡಿಸರುವ 75 ನೇ ವರ್ಷದ ಸ್ಟ್ರಾಟಜಿ, ರೈತರ ಆದಾಯ ದುಪ್ಪಟ್ಟು ಯೋಜನೆ ಸೇರಿದಂತೆ  2022 ರ ಕಾಲಮಿತಿ ನಿಗದಿತ ಯೋಜನೆಗಳು,  ಯಾವ ಜಿಲ್ಲೆಯಲ್ಲಿ ಯಾವ ಭಾಗದಲ್ಲಿ ಯಾವ ಯೋಜನೆ ಇದೆ, ಎಲ್ಲಿ ಯಾವ ಯೋಜನೆ ಅಗತ್ಯವಾಗಿದೆ ಎಂಬ ಬಗ್ಗೆ ಅಧ್ಯಯನ ಮಾಡಿ ’ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ಒದಗಿಸಲು, ಯಾವುದೇ ವಿಧವಾದ ತಾರತಮ್ಯ ಮಾಡದೆ ಸೂಕ್ತ ಪ್ರಸ್ತಾವನೆ ಸಲ್ಲಿಸಿದಲ್ಲಿ ‘ನವ ಕರ್ನಾಟಕ’ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸುವ ಯೋಜನೆ ಜಾರಿಯಾಗಬೇಕು ಎಂಬುದು ಪ್ರಮುಖ ಉದ್ದೇಶ.

  2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಇರುವ 29340 ಗ್ರಾಮಗಳ ಮತ್ತು 347 ನಗರ ಮತ್ತು ಪಟ್ಟಣಗಳ, ಜನತೆಗೂ ಸಾಮಾಜಿಕ ನ್ಯಾಯದಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ನೆರವು ದೊರಕಿಸಲು ಮತ್ತು ರಾಜ್ಯದ ಒಂದು ಇಂಚು ಭೂಮಿಯ ಸಮಗ್ರ ಅಭಿವೃದ್ಧಿ ಬಗ್ಗೆ ಕರಾರು ವಕ್ಕಾದ ಡೇಟಾದೊಂದಿಗೆ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸುವುದು ಅಗತ್ಯವಾಗಿದೆ.

   ಕೇಂದ್ರ ಸರ್ಕಾರ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ರಾಜ್ಯ ದಿಶಾ ಸಮಿತಿಯ ಒಂದು ’ಟಾಸ್ಕ್ ಪೋರ್ಸ್’ ರಚಿಸಿ, ಕೇಂದ್ರ ಸರ್ಕಾರದ ನೀತಿ ಆಯೋಗದಂತೆ ಕಾರ್ಯನಿರ್ವಹಿಸಿ ಯೋಜನೆಗಳ ಜಾರಿಗೆ ಒಂದು ನಿರ್ಧಿಷ್ಠ ನಿಧಿಯನ್ನು ಮುಂಗಡ ಪತ್ರದಲ್ಲಿ ಕಾಯ್ದಿರಿಸಿ ಈ ಪಟ್ಟಿಯಲ್ಲಿ ಲಗತ್ತಿಸಿರುವ ಮತ್ತು ಅಗತ್ಯವಿರುವ ಯೋಜನೆಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಅನುದಾನ ಪಡೆಯುವುದು ಸೂಕ್ತವಾಗಿದೆ. ಆದ್ದರಿಂದ ಮತದಾರರೇ ಸಿದ್ಧಪಡಿಸಿರುವ ಮುಂಗಡ ಪತ್ರದ ಕೆಲವು ಅಂಶಗಳು.

ಕೃಷಿ

 1. ಜಿಲ್ಲೆಗೊಂದು ಕೃಷಿ ಪಾರ್ಕ್
 2. ಜಿಲ್ಲೆಗೊಂದು ಸಾವಯವ ಹಬ್.
 3. ಜಿಲ್ಲೆಗೊಂದು ಫಾರಂ ಮಿಷನರಿ ಥೀಮ್ ಪಾರ್ಕ್.
 4. ಗ್ರಾಮ ಪಂಚಾಯಿತಿಗೊಂದು ಬಿತ್ತನೆ ಬೀಜ, ಗೊಬ್ಬರ, ಯಂತ್ರೋಪಕರಣಗಳ, ಔಷದಿಗಳ ಹಬ್.
 5. ಗ್ರಾಮ ಪಂಚಾಯಿತಿ-1, ಕ್ರಾಪ್-1 ಕ್ಲಸ್ಟರ್ ಲೇಯರ್.
 6. ಮಳೆ ನೀರು ಸಂಗ್ರಹಕ್ಕಾಗಿ ಕೃಷಿಹೊಂಡ/ಜಲಸಂಗ್ರಹಾಗಾರ ’ಜಲ ಲಕ್ಷ್ಮಿಬಾಂಡ್’.
 7. ಮೌಲ್ಯವರ್ಧಿತ ಬೆಲೆಗಾಗಿ ಬೆಳೆಗೊಂದು/ಉತ್ಪನ್ನಕ್ಕೊಂದು ಎಸ್.ಇ.ಝಡ್/ಕ್ಲಸ್ಟರ್

ತೋಟಗಾರಿಕಾ

 1. ಗ್ರಾಮ ಪಂಚಾಯಿತಿಗೊಂದು ಸಿಪಿಓ ಮಾದರಿ ಬೆಳೆ ಆಧಾರಿತ ಸಂಸ್ಥೆ.
 2. ಗ್ರಾಮ ಪಂಚಾಯಿತಿಗೊಂದು ಗೋಡಾನ್.
 3. ಗ್ರಾಮ ಪಂಚಾಯಿತಿಗೊಂದು ಕೋಲ್ಡ್ ಸ್ಟೋರೇಜ್.
 4. ಗ್ರಾಮ ಪಂಚಾಯಿತಿ-1, ಕ್ರಾಪ್-1 ಕ್ಲಸ್ಟರ್ ಲೇಯರ್.
 5. ಮೌಲ್ಯವರ್ಧಿತ ಬೆಲೆಗಾಗಿ ಬೆಳೆಗೊಂದು/ಉತ್ಪನ್ನಕ್ಕೊಂದು ಎಸ್.ಇ.ಝಡ್/ಕ್ಲಸ್ಟರ್.

ಪಶು ಸಂಗೋಪನೆ

 1. ಜಿಲ್ಲೆಗೊಂದು ಹೈಟೆಕ್ ಪಶು ಆಸ್ಪತ್ರೆ.
 2. ಊರಿಗೊಂದು ನಾಟಿ ಹಸು ಗೋಶಾಲೆ ಸ್ಥಾಪನೆ ರೈತರ ಸಹಭಾಗಿತ್ವದಲ್ಲಿ ’ಗೋವು ಲಕ್ಷ್ಮಿಬಾಂಡ್’.

ರೇಷ್ಮೆ

 1. ರೇಷ್ಮೇ ಫಾರಂಗಳಲ್ಲಿ ರೇಷ್ಮೆ ಉತ್ಪನ್ನಗಳ ಕ್ಲಸ್ಟರ್.
 2. ಜಿಲ್ಲೆಗೊಂದು ರೇಷ್ಮೆ ಗ್ರಾಮ (ಬೆಳೆಯುವ ಪ್ರದೇಶದಲ್ಲಿ)

ಮೀನುಗಾರಿಕೆ

 1. ಮೀನುಗಾರಿಕೆ ಎಫ್.ಪಿ.ಓ
 2. ಜಿಲ್ಲೆಗೊಂದು ಮೀನುಗಾರಿಕಾ ಮೆಗಾಪಾರ್ಕ್ (ಮೀನು ದೊರೆಯುವ ಪ್ರದೇಶದಲ್ಲಿ)

ಸಹಕಾರ

 1. ಗ್ರಾಮ ಪಂಚಾಯಿತಿಗೊಂದು ಕೃಷಿ ಪತ್ತಿನ ಸಹಕಾರ ಸಂಘ.
 2. ಗ್ರಾಮ ಪಂಚಾಯಿಗೊಂದು ಎಟಿಎಂ.
 3. ಗ್ರಾಮ ಪಂಚಾಯಿತಿಗೊಂದು ಬ್ಯಾಂಕ್.
 4. ಗ್ರಾಮ ಪಂಚಾಯಿತಿಗೊಂದು ಎಫ್.ಪಿ.ಓ.(ನಬಾರ್ಡ್)
 5. ಗ್ರಾಮ ಪಂಚಾಯಿತಿಗೊಂದು ಕೃಷಿಯೇತರ ಪತ್ತಿನ ಸಹಕಾರ ಸಂಘ. (ಗೃಹ ಮತ್ತು ಸಣ್ಣ ಕೈಗಾರಿಕೆಗಳ ಹೊಣೆಗಾರಿಕೆ)
 6. ಜಾತಿ ಸಂಘಟನೆ ಮತ್ತು ಜಾತಿವಾರು ಪತ್ತಿನ ಸಹಕಾರ ಸಂಘಗಳಿಗೆ (ಗೃಹ ಮತ್ತು ಸಣ್ಣ ಕೈಗಾರಿಕೆಗಳ ಹೊಣೆಗಾರಿಕೆ)

ಎಪಿಎಂಸಿ

 1. ಎಪಿಎಂಸಿಗೊಂದು ಉತ್ಪನ್ನದ  ಎಸ್.ಇ.ಝಡ್/ ಮೆಗಾಕ್ಲಸ್ಟರ್/ ಮೆಗಾಪಾರ್ಕ್/ ಕ್ಲಸ್ಟರ್ ಹೊಣೆಗಾರಿಕೆ/ ಜವಾಬ್ಧಾರಿ
 2. ಎಂಪಿಸಿಎಸ್ ಮಾದರಿ ಸ್ತ್ರಿ ಶಕ್ತಿ- ಸ್ವಶಕ್ತಿ ಸಂಘಗಳ, ರೈತರ ಎಲ್ಲಾ ವಿಧವಾದ ಉತ್ಪನ್ನ ಮಾರಾಟಕ್ಕೆ ’ಧಾನ್ಯ ಲಕ್ಷ್ಮಿಬಾಂಡ್’.

ಜಲಸಂಪನ್ಮೂಲ

 1. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಗೆ ನದಿ ನೀರಿನ ಅಲೋಕೇಷನ್.
 2. ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಬದಲಿಗೆ ’ಜಲ ಶಕ್ತಿ ಕೌನ್ಸಿಲ್’
 3. ಪ್ಲಡ್ ಇರ್ರಿಗೇಷನ್ ಪದ್ಧತಿ ರದ್ದು, ಮೈಕ್ರೋ ಇರ್ರಿಗೇಷನ್ ಪದ್ಧತಿ ಜಾರಿ.
 4. ಜಿಲ್ಲೆಗೊಂದು ವಾಟರ್ ಬ್ಯಾಂಕ್ ನದಿಗಳ ಪ್ರವಾಹದ ನೀರನ್ನು ಸಂಗ್ರಹಿಸಲು ಪ್ರವಾಹ ಕೆನಾಲ್/ಗ್ರಿಡ್.
 5. ರಾಜ್ಯದ ನದಿ ಜೋಡಣೆ/ ವಾಟರ್ ಗ್ರಿಡ್.
 6. ಉತ್ತರ ಕರ್ನಾಟಕದ ಹಳ್ಳಗಳಲ್ಲಿ ನಿರ್ಮಿಸಿರುವ ಭಾಂಧಾರಗಳಲ್ಲಿ ಹೂಳು ತುಂಬಿ ಮತ್ತು ಒತ್ತುವರಿ ಮಾಡಿಕೊಂಡು ಸಮತಟ್ಟು ಮಾಡಿರುವ ಹಿನ್ನೆಲೆಯಲ್ಲಿ ಆಗುವ ಪರಿಣಾಮಗಳ ಅಧ್ಯಯನ ವರದಿಗೆ ತಾಂತ್ರಿಕ ಸಮಿತಿ ರಚನೆ.
 7. ಇಲಾಖೆಗೆ ಎಫ್.ಐ.ಆರ್ ಹಾಕಲು ಅವಕಾಶ.

ಸಣ್ಣ ನೀರಾವರಿ

 1. ಜಲಮೂಲಗಳ ಡಿಜಿಟಲ್ ಜಲಗಣತಿ ಮಾಹಿತಿಗಾಗಿ ’ಜಲಗ್ರಾಮ ಕ್ಯಾಲೆಂಡರ್’
 2. 2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿರುವ 347  ನಗರ/ಪಟ್ಟಣ ಪ್ರದೇಶಗಳು ಮತ್ತು 29340 ಗ್ರಾಮಗಳ ವಾಟರ್ ಆಡಿಟ್. ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ.
 3. ಅಟಲ್ ಭೂಜಲ್ ಮಾದರಿ ಎಲ್ಲಾ 6022 ಗ್ರಾಮ ಪಂಚಾಯಿತಿಗಳಿಗೂ ವಿಸ್ತರಣೆ.
 4. ಕರಾಬು/ರಾಜ ಕಾಲುವೆ  ಅಭಿವೃದ್ಧಿಗಾಗಿ ’ಕರಾಬು ಲಕ್ಷ್ಮಿಬಾಂಡ್’.
 5. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆ ಜಾರಿ.
 6. ರಾಜ್ಯದ ಎಲ್ಲಾ ಜಲಸಂಗ್ರಹಾಗಾರಗಳ ಮಾಲಿಕತ್ವ ಇಲಾಖೆ ಮತ್ತು ’ಗಂಗಾಮಾತೆ ಪುಣ್ಯ ಸ್ಥಳ’ವೆಂದು ಘೋಷಣೆ.
 7. ಇಲಾಖೆಗೆ ಎಫ್.ಐ.ಆರ್ ಹಾಕಲು ಅವಕಾಶ.

ಅರಣ್ಯ

 1. ಜಿಲ್ಲೆಗೊಂದು ಲಾಲ್‌ಬಾಗ್ ಮಾದರಿ ಉದ್ಯಾನವನ.
 2. ಗ್ರಾಮವಾರು ಶೇ 33 ಸರ್ಕಾರಿ/ಖಾಸಗಿ ಅರಣ್ಯ ಕಡ್ಡಾಯ.
 3. ಹಸಿರು ಯೋಜನೆ ಜಾರಿಗಾಗಿ ’ ಹಸಿರು ಲಕ್ಷ್ಮಿಬಾಂಡ್’. 

 ಪರಿಸರ ಮತ್ತು ಜೀವಿಶಾಸ್ತ್ರ

 1. ಶುದ್ಧ ಗಾಳಿಗಾಗಿ ಪ್ರತಿ ನಗರದಲ್ಲೂ ಪರಿಸರ ಮಾಪನ.
 2. ಇಲಾಖೆಗೆ ಎಫ್.ಐ.ಆರ್ ಹಾಕಲು ಅವಕಾಶ.
 3. ಪ್ಯಾರೀಸ್ ಒಪ್ಪಂದದ ಯೋಜನೆಗಳ ಜಾರಿ.

ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ

 1. ಜಿಲ್ಲೆಗೊಂದು ಗುರುಕುಲ ಮಾದರಿ ಹೈಟೆಕ್ ಶಾಲೆ. 
 2. ಗ್ರಾಮ ಪಂಚಾಯಿತಿಗೊಂದು ಎಜುಕೇಷನ್ ಹಬ್.
 3. ಹಳೇ ವಿಧ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸರ್ಕಾರಿಗಳ ಶಾಲೆಗಳ ಅಭಿವೃದ್ಧಿಗಾಗಿ ’ವಿದ್ಯಾ ಲಕ್ಷ್ಮಿಬಾಂಡ್’.

ಉನ್ನತ ಶಿಕ್ಷಣ

 1. ಅಧ್ಯಯನ ಪೀಠಗಳು/ರೀಸರ್ಚ್ ಸಂಸ್ಥೆಗಳ ನೀತಿ ಜಾರಿ.
 2. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳಿಗೆ ಕೇಂದ್ರ ಮತ್ತು ರಾಜ್ಯಸರ್ಕಾರದ ಒಂದೊಂದು ಇಲಾಖೆಯ ಯೋಜನೆಗಳ ಅಧ್ಯಯನಕ್ಕೆ  ಹೊಣೆಗಾರಿಕೆ.
 3. ಜಿಲ್ಲೆಗೊಂದು ವಿಶ್ವವಿದ್ಯಾನಿಲಯ: ರಾಜ್ಯದಲ್ಲಿರುವ ಸರ್ಕಾರಿ, ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯ ಸೇರಿದಂತೆ ಸುಮಾರು 17  ಜಿಲ್ಲೆಗಳಲ್ಲಿವೆ. ಉಳಿದ 13 ಜಿಲ್ಲೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ 1. ವಾಟರ್ ಯೂನಿವರ್ಸಿಟಿ, 2. ಪ್ರವಾಸೋಧ್ಯಮ ಯೂನಿವರ್ಸಿಟಿ, 3. ಆಯುಷ್ ಯೂನಿವರ್ಸಿಟಿ, 4. ಏರೋಸ್ಪೇಸ್ ಯೂನಿವರ್ಸಿಟಿ, 5. ಫುಡ್ ಟೆಕ್ನಾಲಜಿ ಯೂನಿವರ್ಸಿಟಿ, 6. ಸ್ಕಿಲ್ ಯೂನಿವರ್ಸಿಟಿ, 7. ಪರಿಸರ ಯೂನಿವರ್ಸಿಟಿ, 8. ಮಿನರಲಾಜಿ ಯೂನಿವರ್ಸಿಟಿ, 9.ರೈಲ್ವೇ ಯೂನಿವರ್ಸಿಟಿ, 10. ಅರ್ಥ್ ಸೈನ್ಸ್ ಯೂನಿವರ್ಸಿಟಿ,11. ಡಿಫೆನ್ಸ್ ಯೂನಿವರ್ಸಿಟಿ,12. ರಿನ್ಯೂವಬಲ್ ಎನರ್ಜಿ ಯೂನಿವರ್ಸಿಟಿ, 13. ಸೋಶಿಯಲ್ ಸರ್ವಿಸ್ ಯೂನಿವರ್ಸಿಟಿ ಇತ್ಯಾದಿ ಸ್ಥಾಪನೆಗೆ ಕಾರ್ಯಸಾದ್ಯಾತಾ ವರದಿ.
 4. ವಿಶ್ವವಿದ್ಯಾನಿಲಯಗಳ ಅಧ್ಯಯನ ಪೀಠ, ರೀಸರ್ಚ್ ಕೇಂದ್ರಗಳು ಸೇರಿದಂತೆ ಜಿಲ್ಲೆಗೊಂದು ಅಧ್ಯಯನ ಕೇಂದ್ರಗಳ ಹಬ್.
 5. ತಾಲ್ಲೂಕಿಗೊಂದು ಪ್ರಥಮ ದರ್ಜೆ ಕಾಲೇಜು.

ಸಾರ್ವಜನಿಕ ಗ್ರಾಥಾಲಯ

 1. ರಾಜ್ಯದ ಎಲ್ಲಾ ಗ್ರಂಥಾಲಯಗಳ ಡಿಜಿಟಲೀಕರಣ
 2. ಪಿಪಿಪಿ ಮಾದರಿಯಲ್ಲಿ ಗ್ರಂಥಾಲಯಗಳ ಸ್ಥಾಪನೆ.

ವಯಸ್ಕರ ಶಿಕ್ಷಣ

 1. ವಯಸ್ಕರ ಶಿಕ್ಷಣದ ಪ್ರಗತಿಯ ಸೋಶಿಯಲ್ ಆಡಿಟ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

 1. ಎಲ್ಲಾ ಕಾಯಿಲೆಗಳಿಗೂ ವಿಮೆ.
 2. ಜನಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ಕಡೆ ಆಸ್ಪತ್ರೆ.
 3. ಜಿಲ್ಲೆಗೊಂದು ವಿವಿಧ ಹೈಟೆಕ್ ಆಸ್ಪತ್ರೆ.
 4. ಜಿಲ್ಲೆಗೊಂದು ಆರೋಗ್ಯ ಸಂಕೀರ್ಣ.
 5. ಗ್ರಾಮ ಪಂಚಾಯಿತಿಗೊಂದು ನೇಚರ್ ಕ್ಯೂರ್ ಸೆಂಟರ್.

ವೈದ್ಯಕೀಯ ಶಿಕ್ಷಣ

 1. ಜಿಲ್ಲೆಗೊಂದು ಮೆಡಿಕಲ್ ಕಾಲೇಜು.
 2. ಏಮ್ಸ್ ಮಾದರಿ ಮೆಡಿಕಲ್ ಕಾಲೇಜು

ಮಹಿಳಾ ಮತ್ತು ಮಕ್ಕಳ ಕಲ್ಯಾಣ

 1. ಜಿಲ್ಲೆಗೊಂದು ಹೈಟೆಕ್ ಶಾಪಿಂಗ್ ಸಂಕೀರ್ಣ/ ಮಾಲ್.
 2. ಜಿಲ್ಲೆಗೊಂದು ಶಿಶು ಥೀಮ್ ಪಾರ್ಕ್.
 3. ಜಿಲ್ಲೆಗೊಂದು ಮಹಿಳಾ ಥೀಮ್ ಪಾರ್ಕ್.
 4. ಗ್ರಾಮ ಪಂಚಾಯಿತಿಗೊಂದು ಹೈಟೆಕ್ ಎಲ್.ಕೆ.ಜಿ/ಯು.ಕೆ.ಜಿ ಅಂಗನವಾಡಿ.

ಅಂಗವಿಕಲರು ಮತ್ತು ಹಿರಿಯ ನಾಗರೀಕರು

 1. ಗ್ರಾಮ ಪಂಚಾಯಿತಿಗೊಂದು ವೃದ್ಧಾಶ್ರಮ/ಪ್ರಭುದ್ದಾಶ್ರಾಮ.
 2. ವೃದ್ಧರಿಗೆ ಅನ್ನಪೂರ್ಣ ದಾಸೋಹ ಯೋಜನೆ.
 3. ಜಿಲ್ಲೆಗೊಂದು ಹಿರಿಯ ನಾಗರೀಕರ (ವೃದ್ಧಾಶ್ರಮ)  ಸ್ಮಾರ್ಟ್ ವಿಲೇಜ್.
 4. ಜಿಲ್ಲೆಗೊಂದು ಅಂಗವಿಕಲರ  ಸ್ಮಾರ್ಟ್ ವಿಲೇಜ್.
 5. ಜಿಲ್ಲೆಗೊಂದು ಮಾನವೀಯತೆ ಥೀಮ್ ಪಾರ್ಕ್

ಸಮಾಜ ಕಲ್ಯಾಣ

 1. ಜಿಲ್ಲೆಗೊಂದು ಹೈಟೆಕ್ ಹಾಸ್ಟೆಲ್ ಹಬ್.
 2. ಜಿಲ್ಲೆಗೊಂದು ನಿರಾಶ್ರಿತರಿಗೆ ಹೈಟೆಕ್ ’ವಾತ್ಸಲ್ಯ ಗ್ರಾಮ’

ಹಿಂದುಳಿದ ವರ್ಗಗಳ ಅಭಿವೃದ್ಧಿ

 1. ಕೇಂದ್ರ ಸರ್ಕಾರ 2020-21 ನೇ ಸಾಲಿನ ಮುಂಗಡ ಪತ್ರದಲ್ಲಿ ಪ್ರಕಟಿಸಿರುವ ಡೇಟಾ ಪಾರ್ಕ್ ಯೋಜನೆಯಡಿಯಲ್ಲಿ ಕರ್ನಾಟಕದಲ್ಲಿ ವಾಸವಿರುವ ಪ್ರತಿಯೊಂದು ಜಾತಿ ಅಥವಾ ಜಾತಿಯ ಪ್ರಸಿದ್ದ ವ್ಯಕ್ತಿಯ ಹೆಸರಿನಲ್ಲಿ ಪಿಪಿಪಿ ಮಾದರಿಯ ನಿಗಮ/ಅಧ್ಯಯನ ಕೇಂದ್ರ ಸ್ಥಾಪನೆ.

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಛ್

 1. ವಕ್ಛ್ ಬೋರ್ಡ್ ಆಸ್ತಿಗಳಲ್ಲಿ ಕುಶಲಕರ್ಮಿಗಳ ಹಬ್.
 2. ಮಸೀದಿ/ಚರ್ಚ್‌ಗಳ  ಇ-ಸ್ವತ್ತು ಮತ್ತು ಅಭಿವೃದ್ಧಿಗೆ ’ಇ-ಲಕ್ಷ್ಮಿಬಾಂಡ್’

ವಸತಿ

 1. ಊರಿಗೊಂದು ನಿವೇಶನ/ವಸತಿ ಸೀನಿಯಾರಿಟಿ ಲಿಸ್ಟ್- 2022 ರೊಳಗೆ ಪ್ರತಿಯೊಬ್ಬರಿಗೂ ನಿವೇಶನ ಮತ್ತು ವಸತಿ ಯೋಜನೆ ಶೇಕಡ 100 ಜಾರಿಗಾಗಿ.
 2. ಊರಿಗೊಂದು ಮಾದರಿ ಲೇ-ಔಟ್ ರೈತರ ಸಹಭಾಗಿತ್ವದಲ್ಲಿ ಪಿಪಿಪಿ ಯೋಜನೆ.
 3. ಜಿಲ್ಲೆಗೊಂದು ಕೇಂದ್ರ ಸರ್ಕಾರಿ ನೌಕರರ ಸ್ಮಾರ್ಟ್ ವಿಲೇಜ್.
 4. ಜಿಲ್ಲೆಗೊಂದು ಹಾಲಿ ಮತ್ತು ಮಾಜಿ ಸೈನಿಕರ  ಸ್ಮಾರ್ಟ್ ವಿಲೇಜ್.
 5. ಜಿಲ್ಲೆಗೊಂದು ತೃತೀಯ ಲಿಂಗಿಗಳ  ಸ್ಮಾರ್ಟ್ ವಿಲೇಜ್.
 6. ಜಿಲ್ಲೆಗೊಂದು ಸ್ಮಾರ್ಟ್ ವಿಲೇಜ್.
 7. ಜಿಲ್ಲೆಗೊಂದು ಆಟೋ ಚಾಲಕರ ಸ್ಮಾರ್ಟ್ ವಿಲೇಜ್.
 8. ಜಿಲ್ಲೆಗೊಂದು ರಾಜ್ಯ ಸರ್ಕಾರಿ ನೌಕರರ ಸ್ಮಾರ್ಟ್ ವಿಲೇಜ್.
 9. ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ವಸತಿ ಗುಚ್ಚ.
 10.  ಕೊಳಗೇರಿ ರಹಿತ ರಾಜ್ಯ.

ಕಾರ್ಮಿಕ ಮತ್ತು ಉದ್ಯೋಗ ತರಬೇತಿ

 1. ಕೃಷಿ, ಸ್ವಯಂ, ಖಾಸಗಿ ಮತ್ತು ಸರ್ಕಾರಿ ಉದ್ಯೋಗಿ ಆಕಾಂಕ್ಷಿಗಳಿಗೆ ಉದ್ಯೋಗ ಗುರುತಿನ ಪತ್ರ
 2. ಬೀದಿ ವ್ಯಾಪಾರಿಗಳಿಗೆ ಪಿಪಿಪಿ ಮಾದರಿಯಲ್ಲಿ ಹೈಟೆಕ್ ಸ್ಪರ್ಷ.
 3. ಜಿಲ್ಲೆಗೊಂದು ಇಫಿಎಫ್ ಹೈಟೆಕ್ ಆಸ್ಪತ್ರೆ.
 4. ಜಿಲ್ಲೆಗೊಂದು ಕಾರ್ಮಿಕ ಸಮುದಾಯ ಭವನ

ಕೌಶಾಲ್ಯಾಭಿವೃದ್ಧಿ, ಉಧ್ಯಮಶೀಲತೆ ಮತ್ತು ಜೀವನೋಪಾಯ

 1. ಜಿಲ್ಲೆಗೊಂದು ಸ್ಕಿಲ್ ಸಿಟಿ.
 2. ನೀಡ್ ಬೇಸ್ಡ್ ಸ್ಕಿಲ್. ಎಂಡ್ ಟು ಎಂಡ್ ಸಲ್ಯೂಷನ್.

ಕನ್ನಡ ಮತ್ತು ಸಂಸ್ಕೃತಿ

 1. ಜಿಲ್ಲೆಗೊಂದು ಹೈಟೆಕ್ ’ಸಾಂಸ್ಕ್ರತಿಕ ಹಬ್’
 2. ತಾಲ್ಲೂಕಿಗೊಂದು ’ಕಲಾಗ್ರಾಮ’
 3. ಗ್ರಾಮ ಪಂಚಾಯಿತಿಗೊಂದು ಮನಿ ಬಯಲು ರಂಗ ಮಂದಿರ.

ಯುವ ಸಬಲೀಕರಣ ಮತ್ತು ಕ್ರೀಡೆ

 1. ತಾಲ್ಲೂಕಿಗೊಂದು ಕ್ರೀಡಾ ಸಂಕಿರ್ಣ.
 2. ಯುವಜನ ಆಯೋಗ ಸ್ಥಾಪನೆ.
 3. ಜಿಲ್ಲೆಗೊಂದು ಯುವ ಗ್ರಾಮ.

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು

 1. ಜಿಲ್ಲೆಗೊಂದು  ಆಹಾರ ಗ್ರಾಮ
 2. ರೇಷನ್ ಕಾರ್ಡ್ – ಆಧಾರ್ – ಪಾನ್- ವಂಶವೃಕ್ಷ – ಕುಟುಂಬ/ವ್ಯಕ್ತಿ ಸ್ವತ್ತಿನ ದಾಖಲೆ – ಬಿಪಿಎಲ್ ಲಿಂಕ್

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

 1. ಮಹತ್ಮಾ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ರಾಜ್ಯದ 29340 ಗ್ರಾಮಗಳ ಜಿಐಎಸ್ ಆಧಾರಿತ ಇತಿಹಾಸ ಸಹಿತ ’ಡಿಜಿಟಲ್ ವಿಲೇಜ್ ಮ್ಯಾಪ್’
 2. ಗ್ರಾಮ ಪಂಚಾಯಿತಿ ಸರ್ಕಾರಿ ನೆರವಿನ ಡಿಜಿಟಲ್ ಮಾಹಿತಿಗಾಗಿ ಆಫ್.
 3. ’ವಿಲೇಜ್-1’ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಪಿಪಿಪಿ ಯೋಜನೆ
 4. 2022 ರೊಳಗೆ ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರಾಜ್ಯ ಸರ್ಕಾರದ ಜಲಧಾರೆ ಯೋಜನೆಯಡಿ ರಾಜ್ಯಧ್ಯಾಂತ ಪ್ರತಿ ಮನೆಗೂ ಶುದ್ಧ ನೀರು.
 5. ಗ್ರಾಮ ಪಂಚಾಯಿತಿಗೊಂದು ಸ್ಮಾರ್ಟ್ ವಿಲೇಜ್. 
 6. ಗ್ರಾಮ ಪಂಚಾತಿಯಿತಿಗೊಂದು ಹೈಟೆಕ್ ಘನತ್ಯಾಜ್ಯ ವಸ್ತು ಘಟಕ.
 7. ಊರಿಗೊಂದು ಉದ್ಯ್ಯಾನವನ ಅಭಿವೃದ್ಧಿ ಸ್ತ್ರೀ ಶಕ್ತಿ ಸಂಘಗಳ/ನಿರುದ್ಯೋಗಿಗಳ ಸಹಭಾಗಿತ್ವದಲ್ಲಿ ಪಿಪಿಪಿ/ದತ್ತು ಯೋಜನೆ.
 8. ರಾಜ್ಯದ ಎಲ್ಲಾ ಗ್ರಾಮಗಳಲ್ಲಿರುವ ಕಟ್ಟಡಗಳಿಗೆ ’ಇ-ಸ್ವತ್ತು ಲಕ್ಷ್ಮಿಬಾಂಡ್’. 
 9. ಗ್ರಾಮ ಪಂಚಾಯಿತ್ ವ್ಯಾಪ್ತಿಯ ಪ್ರತಿಯೊಂದು ಯೋಜನೆಗಳ ಇತಿಹಾಸ ಸಹಿತ ಜಿ.ಐ.ಎಸ್.ಆಧಾರಿತ ಲೇಯರ್.
 10. ಊರಿಗೊಂದು ಮಳೆ ಮಾಪನ.

ಯೋಜನೆ ಮತ್ತು ಪ್ರದೇಶಾಭಿವೃದ್ಧಿ

 1. ವಯಸ್ಸಿಗೆ ಅನುಗುಣವಾಗಿ ಮನೆ ಬಾಗಿಲಿಗೆ ಸರ್ಕಾರಿ ಗುರುತಿನ ಪತ್ರದ ದಾಖಲೆ.
 2. ಗ್ರಾಮೀಣ ಶಾಸಕರ ಅಧ್ಯಕ್ಷತೆಯ ಮಾದರಿಯಲ್ಲಿ ನಗರ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ.
 3. ಕೇಂದ್ರ ಸರ್ಕಾರದ ಅನುದಾನದ ಯುಟಿಲೈಷನ್ ಸರ್ಟಿಫಿಕೇಟ್ ಕಳುಹಿಸುವಾಗ ಜಿಲ್ಲಾ ದಿಶಾ  ಸಮಿತಿಯಲ್ಲಿ ಕಡ್ಡಾಯವಾಗಿ ಚರ್ಚೆ.
 4. ಎಲ್ಲಾ ಇಲಾಖೆಗಳ ವಿವಿಧ ಪರಿಣಿತರ ವರದಿಗಳ ಜಾರಿ.
 5. ದೆಹಲಿ ಪ್ರತಿನಿಧಿ ಸಚಿವಾಲಯ ಸ್ಥಾಪನೆ.
 6. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಲಹೆ ನೀಡಲು ಜಿಲ್ಲಾ ವ್ಯಾಪ್ತಿಯ ಹಾಲಿ ಮತ್ತು ಮಾಜಿ ಲೋಕಸಭಾ ಸದಸ್ಯರ, ರಾಜ್ಯಸಭಾ ಸದಸ್ಯರ, ವಿಧಾನಸಭಾ ಸದಸ್ಯರ ಮತ್ತು ವಿಧಾನ ಪರಿಷತ್ ಸದಸ್ಯರ ಸಮಿತಿ ರಚನೆ.
 7. ಸಸ್ಟೆನಬಲ್ ಡೆವಲಪ್‌ಮೆಂಟ್ ಗೋಲ್ಸ್ ಯೋಜನೆಗಳ ಜಾರಿ

ಅಂಕಿ ಅಂಶಗಳು

 1. ಜಿಲ್ಲೆಗೊಂದು ಅಭಿವೃದ್ಧಿ ’ಡೇಟಾ ಮ್ಯೂಸಿಯಂ’
 2. ಡೇಟಾ-1 ಸ್ಟೇಟ್-1 .
 3. ಜಿ.ಐ.ಎಸ್ ಆಧಾರಿತ ’ಮ್ಯಾಪ್-1 ಸ್ಟೇಟ್-1’

ನಗರಾಭಿವೃದ್ಧಿ

 1. ಬಡಾವಣೆ ಸರ್ಕಾರಿ ನೆರವಿನ ಡಿಜಿಟಲ್ ಮಾಹಿತಿಗಾಗಿ ಆಫ್.
 2. ಬಡಾವಾಣಿಯಲ್ಲಿರುವ ಪ್ರತಿಯೊಂದು ಯೋಜನೆಯ ಇತಿಹಾಸ ಸಹಿತ ಜಿಐಎಸ್ ಆಧಾರಿತ ಲೇಯರ್.
 3. ಬಡಾವಾಣಿ -1 ಸರ್ಕಾರಿ ಸೇವೆ ಮನೆ ಬಾಗಿಲಿಗೆ ಪಿಪಿಪಿ ಯೋಜನೆ
 4. ನಗರ ಸ್ಥಳೀಯ ಸಂಸ್ಥೆ ಸರ್ಕಾರಿ ನೆರವಿನ ಡಿಜಿಟಲ್ ಮಾಹಿತಿಗಾಗಿ ಆಫ್.
 5. ನಗರದಲ್ಲಿ ಪೂರ್ಣಗೊಂಡಿರುವ, ನೆನೆಗುದಿಗೆ ಬಿದ್ದಿರುವ, ಪ್ರಗತಿಯಲ್ಲಿರುವ, ಹೊಸಪ್ರಸ್ತಾವನೆಗಳ ಇತಿಹಾಸ ಸಹಿತ ಜಿ.ಐ.ಎಸ್.ಆಧಾರಿತ ಲೇಯರ್‍ಸ್.
 6. ನಗರದ ಸುತ್ತಲೂ ಬಹುಪಯೋಗಿ ರಿಂಗ್ ರಸ್ತೆ.

ಪೌರಾಡಳಿತ

 1. ಬಡಾವಣೆ ಸರ್ಕಾರಿ ನೆರವಿನ ಡಿಜಿಟಲ್ ಮಾಹಿತಿಗಾಗಿ ಆಫ್.
 2. ಬಡಾವಾಣಿಯಲ್ಲಿರುವ ಪ್ರತಿಯೊಂದು ಯೋಜನೆಯ ಇತಿಹಾಸ ಸಹಿತ ಜಿಐಎಸ್ ಆಧಾರಿತ ಲೇಯರ್.
 3. ’ಬಡಾವಾಣಿ -1’ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಪಿಪಿಪಿ ಯೋಜನೆ
 4. ನಗರದಲ್ಲಿ ಪೂರ್ಣಗೊಂಡಿರುವ, ನೆನೆಗುದಿಗೆ ಬಿದ್ದಿರುವ, ಪ್ರಗತಿಯಲ್ಲಿರುವ, ಹೊಸಪ್ರಸ್ತಾವನೆಗಳ ಇತಿಹಾಸ ಸಹಿತ ಜಿ.ಐ.ಎಸ್.ಆಧಾರಿತ ಲೇಯರ್‍ಸ್.
 5. ನಗರದ ಸುತ್ತಲೂ ಬಹುಪಯೋಗಿ ರಿಂಗ್ ರಸ್ತೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

 1. ಬೆಂಗಳೂರಿನಲ್ಲಿ ಪೂರ್ಣಗೊಂಡಿರುವ, ನೆನೆಗುದಿಗೆ ಬಿದ್ದಿರುವ, ಪ್ರಗತಿಯಲ್ಲಿರುವ, ಹೊಸಪ್ರಸ್ತಾವನೆಗಳ ಇತಿಹಾಸ ಸಹಿತ ಜಿ.ಐ.ಎಸ್.ಆಧಾರಿತ ಲೇಯರ್‍ಸ್.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 

 1. ನಗರದ ಸುತ್ತಲೂ ಬಹುಪಯೋಗಿ ಫೆರಿ-ಫೆರಿಯಲ್ ರಿಂಗ್ ರಸ್ತೆ.
 2. ನಗರದ ಸುತ್ತಲೂ ಬಹುಪಯೋಗಿ ಫೆರಿ-ಫೆರಿಯಲ್ ರೈಲ್ವೇ ಕಾರಿಡಾರ್.
 3. ನಗರದ ಸುತ್ತಲೂ ಬಹುಪಯೋಗಿ ಫೆರಿ-ಫೆರಿಯಲ್ ವಾಟರ್ ವೇಸ್. 

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

 1. ಬೆಂಗಳೂರು ನಗರಕ್ಕೆ 2050 ರವರಿಗೆ ನೀರಿನ ಮೂಲ.

ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ

 1. ಸ್ಮಾರ್ಟ್ ಸಿಟಿ ಮಾದರಿಯಲ್ಲಿ ರಾಜ್ಯದ ಎಲ್ಲಾ ನಗರಗಳ ಅಭಿವೃದ್ಧಿಗೆ ಯೋಜನೆ.

ಬೆಂಗಳೂರು ಮೆಟ್ರೋ ರೈಲು

 1. ನಗರದ ಸುತ್ತಲೂ ಬಹುಪಯೋಗಿ ಫೆರಿ-ಫೆರಿಯಲ್ ಮೆಟ್ರೋ ಕಾರಿಡಾರ್.

ನಗರ ಭೂ ಸಾರಿಗೆ ನಿರ್ದೇಶನಾಲಯ

 1. ಸಬ್ ಅರ್ಬನ್ ರೈಲು
 2. ನಗರಗಳ ಸಾರಿಗೆ ಮಾಸ್ಟರ್ ಪ್ಲಾನ್.

ಕಂದಾಯ

 1. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ರೈತರ ಸ್ವಂತ ಜಮೀನು ಕುಸಿದಾಗ ಬದಲಿಗೆ ಸರ್ಕಾರಿ ಸಮತಟ್ಟು ಜಮೀನು ನೀಡಲು ಯೋಜನೆ.
 2. ವ್ಯಕ್ತಿಗತ, ಸಾಮಾಜಿಕ ಭದ್ರತೆ ಸರ್ಕಾರಿ ನೆರವಿನ ಡಿಜಿಟಲ್ ಮಾಹಿತಿಗಾಗಿ ಆಫ್.
 3. ವ್ಯಕ್ತಿ ಸಾಲ ಮಿತಿ ಕಾರ್ಡ್.
 4. ಮನೆ ಬಾಗಿಲಿಗೆ ಡಿಜಿಟಲ್ ವಂಶವೃಕ್ಷ.
 5. ಕುಟುಂಬ ಸಾಲ ಮಿತಿ ಕಾರ್ಡ್.
 6. ಕುಟುಂಬವಾರು ಸರ್ಕಾರಿ ನೆರವಿನ ಡಿಜಿಟಲ್ ಮಾಹಿತಿಗಾಗಿ ಆಫ್.
 7. ಗ್ರಾಮಗಳ ಸರ್ಕಾರಿ ನೆರವಿನ ಅಭಿವೃದ್ಧಿ ಡಿಜಿಟಲ್ ಮಾಹಿತಿಗಾಗಿ ಆಫ್.
 8. ಸರ್ವೆನಂಬರ್ ವಾರು ಸರ್ಕಾರಿ ನೆರವಿನ ಅಭಿವೃದ್ಧಿ ಡಿಜಿಟಲ್ ಮಾಹಿತಿಗಾಗಿ ಆಫ್.
 9. ಪ್ರತಿ ವರ್ಷದ ತಾಜಾ ಮಾಹಿತಿಗಾಗಿ ಸರ್ವೇ ನಂಬರ್‌ವಾರು ಬೆಳೆ ಪದ್ಧತಿ ನಿಗದಿ ಆಪ್.
 10. ಜಿಲ್ಲೆಗೊಂದು ಸರ್ಕಾರಿ ಕಚೇರಿಗಳ ಸಂಕಿರ್ಣ.
 11. ತಾಲ್ಲೂಕಿಗೊಂದು ಕಚೇರಿಗಳ ಸಂಕಿರ್ಣ.
 12. ಗ್ರಾಮ ಪಂಚಾಯಿತಿಗೊಂದು ಕಚೇರಿಗಳ ಸಂಕಿರ್ಣ.
 13. ರೈತರು ತಮ್ಮ ಜಮೀನಿನಲ್ಲಿ ಸ್ವಂತ ವಾಸಕ್ಕೆ ಮನೆ ನಿರ್ಮಾಣ ಮಾಡಿದಲ್ಲಿ ಆಟೋಮ್ಯಾಟಿಕ್ ಆಗಿ ಭೂ ಪರಿವರ್ತನೆ ಯೋಜನೆ.
 14. ಪ್ರತಿಯೊಬ್ಬ ರೈತರ ಜಮೀನಿಗೆ  ದಾರಿ ಗ್ರಾಮ ನಕ್ಷೆಯಲ್ಲಿ ನಮೂದು.
 15. ಸರ್ಕಾರಿ ಜಮೀನು ಕರಾಬು ಪಿಪಿಪಿ ಅಭಿವೃದ್ಧಿ ’ಸರ್ಕಾರಿ ಸ್ವತ್ತು ಲಕ್ಷ್ಮಿಬಾಂಡ್’.
 16. ಭೂ ಬಳಕೆ ಡಿಜಿಟಲ್ ಮ್ಯಾಪ್.
 17. ಪ್ರತಿ ಸರ್ವೆ ನಂಬರ್‌ವಾರು ಡಿಜಿಟಲ್ ಸರ್ವೆ ’ಸಮೀಕ್ಷಾ ಲಕ್ಷ್ಮಿಬಾಂಡ್’
 18. ರಾಜ್ಯದ ಪ್ರತಿ ಇಂಚು ಭೂಮಿಯಲ್ಲಿನ ಯೋಜನೆಗಳ ಇತಿಹಾಸ ಸಹಿತ ಜಿಐಎಸ್ ಲೇಯರ್‍ಸ್.

ಮುಜರಾಯಿ

 1. ದೇವಾಯಗಳ ಆಸ್ತಿ ಇ-ಸ್ವತ್ತು ಮತ್ತು ಅಭಿವೃದ್ಧಿಗೆ ’ಪೂಜಾ ಲಕ್ಷ್ಮಿಬಾಂಡ್’.
 2. ಸಾಮೂಹಿಕ ವಿವಾಹ.
 3. ಮುಜರಾಯಿ ಇಲಾಖೆ ಜಮೀನಿನಲ್ಲಿ ಪೂಜೆಗೆ ಸಂಭಂದಿಸಿದ ಗೃಹ ಕೈಗಾರಿಕೆ

ಇಂಧನ

 1. ಸರ್ಕಾರಿ/ಖಾಸಗಿ ಪ್ರತಿ ಬೋರ್‌ವೆಲ್‌ಗೂ ಸೌರಶಕ್ತಿ.
 2. ಸರ್ಕಾರಿ/ಖಾಸಗಿ ಪ್ರತಿ ಬೋರ್‌ವೆಲ್‌ಗೂ ಒಂದು ಪ್ರತ್ಯೇಕ ಟ್ರಾನ್ಸ್ ಪಾರ್‍ಮರ್.
 3. ನೀರಾವರಿ ಕಾಲುವೆ ಮೇಲೆ ಸೋಲಾರ್.
 4. ಎಚ್.ಟಿ.ಲೈನ್ ಅಕ್ಕ ಪಕ್ಕ ಭೂ ಸ್ವಾಧೀನ ಪಡಿಸಿಕೊಂಡು ರಸ್ತೆ ನಿರ್ಮಾಣ.
 5. ಅಗತ್ಯವಿರುವ ಕಡೆ ಎಂಯುಎಸ್‌ಎಸ್ ಸ್ಥಾಪನೆ ಲೇಯರ್.
 6. ಅಗತ್ಯವಿರುವ ಕಡೆ ರೀಸಿವಿಂಗ್ ಸ್ಟೇಷನ್ ಸ್ಥಾಪನೆ ಲೇಯರ್.

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ

 1. ರಾಜ್ಯದ ಜಿಲ್ಲಾ ಕೇಂದ್ರಗಳ ಸಂಪರ್ಕಕ್ಕಾಗಿ ನಾಲ್ಕು ಪಥದ ಕಾರಿಡಾರ್ ಕಾರ್ಯಸಾದ್ಯಾತಾ ವರದಿ.
 2. ರಾಜ್ಯ ಹೆದ್ಧಾರಿಯಾಗಿ ಮೇಲ್ದರ್ಜೆಗೆರಿಸುವ ರಸ್ತೆಗಳ ಲೇಯರ್.
 3. ರಾಷ್ಟ್ರೀಯ ಹೆದ್ಧಾರಿಯಾಗಿ ಮೇಲ್ದರ್ಜೆಗೆರಿಸುವ ರಸ್ತೆಗಳ ಲೇಯರ್.

ಮೂಲ ಸೌಕರ್ಯ

 1. ಬೆಂಗಳೂರು ಸುತ್ತಲೂ ಇರುವ ಕೈಗಾರಿಕಾ ವಸಾಹತುಗಳ ಸಂಪರ್ಕಕ್ಕೆ ರೈಲ್ ಕಾರಿಡಾರ್
 2. ಜಿಲ್ಲೆಗೊಂದು ವಿಮಾನ ನಿಲ್ಧಾಣ/ಏರ್ ಕಾರ್ಗೊ.
 3. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಸಂಪರ್ಕಕ್ಕಾಗಿ ರೈಲ್ವೆ ಕಾರಿಡಾರ್ ಕಾರ್ಯಸಾದ್ಯಾತಾ ವರದಿ.
 4. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಸಂಪರ್ಕಕ್ಕಾಗಿ ರೈಲ್ವೆ ಕಾರಿಡಾರ್ ಕಾರ್ಯಸಾದ್ಯಾತಾ ವರದಿ.
 5. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಸಂಪರ್ಕಕ್ಕಾಗಿ ಮೆಟ್ರೋ ಕಾರಿಡಾರ್ ಕಾರ್ಯಸಾದ್ಯಾತಾ ವರದಿ.
 6. ಪ್ರತಿ ತಾಲ್ಲೂಕಿಗೂ ರೈಲು ಸಂಪರ್ಕ ಕಾರ್ಯಸಾಧ್ಯಾತಾ ವರದಿ.
 7. ಎಲ್ಲಾ ನಗರಗಳ ಮನೆಗಳಿಗೆ ಗ್ಯಾಸ್ ಗ್ರಿಡ್.

ವಾಣಿಜ್ಯ ಮತ್ತು ಕೈಗಾರಿಕೆ

 1. ಜಿಲ್ಲೆಗೊಂದು ರಫ್ತು ಹಬ್.
 2. ಕೇಂದ್ರ ಸರ್ಕಾರ 2020-21  ನೇ ಸಾಲಿನ ಮುಂಗಡ ಪತ್ರದಲ್ಲಿ ಪ್ರಕಟಿಸಿರುವ ರಾಜ್ಯದ ನಿಗಮ/ಮಂಡಳಿ/ಕಾರ್ಪೋರೇಷನ್‌ಗಳಿಗೆ ರೈತರ ಉತ್ಪನ್ನಗಳ ಎಸ್.ಇ.ಝಡ್/ ಮೆಗಾ ಪಾರ್ಕ್ / ಮೆಗಾ ಕ್ಲಸ್ಟರ್ ಸ್ಥಾಪನೆ ಹೋಣೆಗಾರಿಕೆ.
 3. ಐಎಎಸ್ ಮತ್ತು ಸಮಾನಾಂತರ ಹುದ್ದೆ ಅಧಿಕಾರಿಗಳಿಗೊಂದು ಉತ್ಪನ್ನದ ಎಸ್.ಇ.ಝಡ್/ ಮೆಗಾ ಕ್ಲಸ್ಟರ್/ಪಾರ್ಕ್/ ಕ್ಲಸ್ಟರ್ ಹೊಣೆಗಾರಿಕೆ/ಜವಾಬ್ಧಾರಿ.
 4. ಕೆಎಎಸ್ ಮತ್ತು ಸಮಾನಾಂತರ ಹುದ್ದೆ ಅಧಿಕಾರಿಗಳಿಗೊಂದು ಉತ್ಪನ್ನದ ಎಸ್.ಇ.ಝಡ್/ ಮೆಗಾ ಕ್ಲಸ್ಟರ್/ಪಾರ್ಕ್/ ಕ್ಲಸ್ಟರ್ ಹೊಣೆಗಾರಿಕೆ/ ಜವಾಬ್ಧಾರಿ.
 5. ಯಾವುದೇ ಸರ್ಕಾರಿ ಅಥವಾ ಖಾಸಗಿ ಬೃಹತ್ ಉದ್ದಿಮೆಗಳು ಜಾರಿಯಾಗುವ ಪ್ರದೇಶದ ಸುತ್ತ ಮುತ್ತಲಿನ ಗ್ರಾಮಗಳನ್ನು ಸ್ಮಾರ್ಟ್ ವಿಲೇಜ್ ಆಗಿ ಪರಿವರ್ತಿಸಲು ಪಿಪಿಪಿ ಮಾದರಿ ಯೋಜನೆ.

ಸಣ್ಣ ಕೈಗಾರಿಕೆ

 1. ಗ್ರಾಮ ಪಂಚಾಯಿಗೊಂದು ಕೈಗಾರಿಕಾ ವಸಾಹತು.
 2. ಸರ್ಕಾರಿ ಯೋಜನೆಗಳಿಗಾಗಿ ಊರಿಗೊಂದು ಭೂ ಬ್ಯಾಂಕ್.
 3. ಗ್ರಾಮ ಪಂಚಾಯಿತಿ-1, ಪ್ರಾಡಕ್ಟ್-1
 4. ಊರಿಗೊಂದು ಮಿನಿ ಕೈಗಾರಿಕಾ ವಲಯ ರೈತರ ಸಹಭಾಗಿತ್ವದಲ್ಲಿ ಪಿಪಿಪಿ ಯೋಜನೆ.

ಗಣಿ ಮತ್ತು ಭೂ ವಿಜ್ಞಾನ

 1. ಗಣಿಗಾರಿಕೆಗಳ ಸುತ್ತ ಮುತ್ತಲಿನ ಗ್ರಾಮಗಳ ಸ್ಮಾರ್ಟ್ ವಿಲೇಜ್.
 2. ಗಣಿಗಾರಿಕೆಗಳ ಸುತ್ತ ಮುತ್ತ ಪರಿಸರ ಮಾಪನ ಅಳವಡಿಕೆ. 

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ

 1. ಕೇಂದ್ರ ಸರ್ಕಾರ 2020-21 ನೇ ಸಾಲಿನ ಮುಂಗಡ ಪತ್ರದಲ್ಲಿ ಪ್ರಕಟಿಸಿರುವ ಡೇಟಾ ಪಾರ್ಕ್ ಯೋಜನೆಯಡಿಯಲ್ಲಿ 224 ವಿಧಾನಸಭಾ ಕ್ಷೇತ್ರವಾರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಇಲಾಖಾವಾರು ಅಭಿವೃದ್ಧಿ ಅಧ್ಯಯನ ಡೇಟಾ ಪಾರ್ಕ್ ಸ್ಥಾಪನೆ.
 2. ಜಿಲ್ಲೆಗೊಂದು ಸ್ಟಾರ್ಟ್‌ಅಫ್ ಕೆ-ಟೆಕ್ ಇನ್ನೋವೇಷನ್ ಹಬ್
 3. ಗ್ರಾಮ ಪಂಚಾಯಿತಿಗೊಂದು ಅಗ್ರಿ ಸ್ಟಾರ್ಟ್ ಅಫ್ ಇನ್ನೊವೇಷನ್ ಹಬ್.
 4. ಪ್ರತಿ ಕುಟುಂಬ ಮತ್ತು ವ್ಯಕ್ತಿಗೂ ಡಿಜಿಟಲ್ ಲಾಕರ್.
 5. ಜಿಲ್ಲೆಗೊಂದು ಮಕ್ಕಳ ವಿಜ್ಞಾನ ಪಾರ್ಕ್.

             ಆಡಳಿತ

 1. ರಾಜ್ಯದ ಪ್ರತಿಯೊಂದು ಇಲಾಖೆಯ ಎಲ್ಲಾ ಕಚೇರಿಗಳು ಇ-ಆಫಿಸ್. 

ಪ್ರವಾಸೋಧ್ಯಮ

 1. ಮಠ ಮಾನ್ಯಗಳು ಪಿಪಿಪಿ ಮಾದರಿಯಲ್ಲಿ  ಪಿರಮಿಡ್ ಧ್ಯಾನ/ ಯೋಗ/ ಮಾನವೀಯತೆ/ ಕಲೆ/ ಸಾಹಿತ್ಯ/ ಸಂಸ್ಕೃತಿ/ ಪ್ರವಾಸೋಧ್ಯಮ ಪಾರ್ಕ್ ಸ್ಥಾಪಿಸಲು ಯೋಜನೆ.
 2. ಜಿಲ್ಲೆಗೊಂದು ವೀರಗಲ್ಲು/ ಸ್ಮಾರಕ ಹಬ್.
 3. ಜಿಲ್ಲೆಗೊಂದು ಪ್ರವಾಸೋದ್ಯಮ ಸರ್ಕ್ಯೂಟ್.
 4. ಗ್ರಾಮ ಪಂಚಾಯಿತಿಗೊಂದು ಜಲಸಂಗ್ರಹಾಗಾರ ಪ್ರವಾಸೋಧ್ಯಮ.
 5. ಗ್ರಾಮ ಪಂಚಾಯಿತಿಗೊಂದು ಕೃಷಿ ಪ್ರವಾಸೋಧ್ಯಮ.
 6. ಗ್ರಾಮ ಪಂಚಾಯಿತಿಗೊಂದು ಎಕನಾಮಿಕಲ್ ಸ್ಮಾರ್ಟ್ ವಿಲೇಜ್ ಪ್ರವಾಸೋಧ್ಯಮ.
 7. ಗ್ರಾಮಗಳ ಇತಿಹಾಸ ಡಿಜಿಟಲ್ ದಾಖಲೆ.
 8. ಹೆಲಿಟೂರಿಸಂ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

ಡಿಪಿಎಆರ್(ಜನಸ್ಪಂದನ)

 1. ಸಕಾಲ ಯೋಜನೆಯಡಿ ತತ್ಕಾಲ್ ಯೋಜನೆ.
 2. ಮಾಹಿತಿ ಹಕ್ಕು ಅಧಿನಿಯಮ ಡೇಟಾ ಬ್ಯಾಂಕ್

ಡಿಪಿಎಆರ್(ಸೇವೆ)

 1. ಅಧಿಕಾರಿಗಳ ಕಾರ್ಯನಿರ್ವಹಿಸುವ ಇಲಾಖಾವಾರು ಅವಧಿ ಲೇಯರ್
 2. ಹೊರಗುತ್ತಿಗೆ ಆಧಾರದ ನೌಕರರ ಇಲಾಖಾವಾರು ಲೇಯರ್.

ಸಾಮಾನ್ಯ ಆಡಳಿತ

 1. ಲೋಕಯುಕ್ತಕ್ಕೆ ವಿಶೇಷ ಅಧಿಕಾರ

  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ

 1. ಜಿಲ್ಲೆಗೊಂದು ಮಾಧ್ಯಮ ನಗರ
 2. ತಾಲ್ಲೂಕಿಗೊಂದು ಮಾಧ್ಯಮ ನಗರ

ಒಳಾಡಳಿತ

 1. ಜನಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ಕಡೆ ಪೋಲೀಸ್ ಸ್ಟೇಷನ್.
 2. ತಾಲ್ಲೂಕಿಗೊಂದು ಮಹಿಳಾ ಠಾಣೆ.

ಸಾರಿಗೆ

 1. ತಾಲ್ಲೂಕಿಗೊಂದು ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ
 2. ಜಿಲ್ಲೆಗೊಂದು ತರಬೇತಿ ಕೇಂದ್ರ

ಕಾನೂನು ಮತ್ತು ನ್ಯಾಯಾಲಗಳು

 1. ಜಿಲ್ಲೆಗೊಂದು ’ನ್ಯಾಯ ಗ್ರಾಮ’
 2. ’ಗ್ರಾಮ ನ್ಯಾಯ ಸಮಿತಿ’ ರಚನೆ.
 3. ಅನಗತ್ಯ ಕಾನೂನುಗಳ ಪರಿಷ್ಕರಣೆ.

ಸಂಸದೀಯ

 1. ಸಚಿವ ಸಂಪುಟದಲ್ಲಿನ ವಿಚಾರಗಳ ಚರ್ಚೆಗೆ ಫೋರಂ.
 2. ಅಧಿವೇಶನ ಕಲಾಪಗಳ ಬಗ್ಗೆ ಸಾರ್ವಜನಿಕ ಚರ್ಚೆ.

ಹಣಕಾಸು

 1. ಮೂರು ತಿಂಗಳಿಗೊಮ್ಮೆ ಮುಂಗಡ ಪತ್ರದ ಅನುಷ್ಠಾನ ಶ್ವೇತ ಪತ್ರ.
 2. ಆಡಳಿತ ಪಕ್ಷಗಳ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ಅವಲೋಕನ.
 3. ಮೂರು ತಿಂಗಳಿಗೊಮ್ಮೆ ತೆರಿಗೆದಾರರ ಬಾಕಿ ಶ್ವೇತ ಪತ್ರ.

ಅಬಕಾರಿ

 1. ತೆಂಗು ಬೆಳೆಯುವ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗೊಂದು ’ನೀರಾ ಪಾರ್ಕ್‌ಗೆ’ ಅನುಮತಿ.