22nd November 2024
Share

TUMAKURU:SHAKTHIPEETA FOUNDATION

ಕೊರೊನಾ ಮಾಹಾಮಾರಿಯಿಂದ ಸಾಯುವವರು ಎಷ್ಟು ಜನವೋ, ಉಳಿಯುವವರೋ ಎಷ್ಟ ಜನವೋ ಆ ದೇವರಿಗೆ ಗೊತ್ತು ಆಯುಷ್ ಔಷಧಿಗಳು, ಮನೆ ಮದ್ದು, ಈ ಬಗ್ಗೆ ಸರ್ಕಾರ ಎಷ್ಟು ಕೋಟಿ ಖರ್ಚು ಮಾಡಿದ್ದರೂ ಇಷ್ಟು ಪ್ರಚಾರ ಆಗುತ್ತಿರಲಿಲ್ಲ, ಬಹುತೇಕರು ಉದಾಸೀನ ಮಾಡುತ್ತಿದ್ದರು.

ಈಗ ಅಡುಗೆ ಮನೆ ಒಂದು ‘ಆಯುಷ್ ಮೆಡಿಕಲ್ ಸ್ಟೋರ್’ ಆಗಿದೆ, ರೈತರ ಜಮೀನು ಒಂದು ಹೋಲ್ ಸೇಲ್ ಮೆಡಿಕಲ್’ ಆಗುವ ಮಟ್ಟಕ್ಕೆ ಬರಲಿದೆ. ಬೇರೆ ದಾರಿ ಇಲ್ಲ ಬದುಕಲು ಆಸೆ ಇರುವವರು ಮತ್ತೆ ಆಯುಷ್‍ಗೆ ಜೋತು ಬೀಳುವುದು ಗ್ಯಾರಂಟಿ.

ಇಂಥ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬರುವ ಪುಕ್ಕಟೆ ಸಲಹೆಗಳು, ವಿನೂತನ ಐಡಿಯಾಗಳು, ಇನ್ನೊವೇಷನ್‍ಗಳು ಜನರ ಪಾಲಿಗೆ ಗೊಂದಲಗಳಾಗಿವೆ, ಯಾರೋ ಏನೋ ಹೇಳಿದ್ದಾರೆ ಎಂದು ಎಲ್ಲವನ್ನು ಮಾಡಿಕೊಳ್ಳಲು ಸಾಧ್ಯಾವಿಲ್ಲ.

 ಆದ್ದರಿಂದ ಪ್ರತಿಯೊಬ್ಬರೂ ನೀಡುವ ಸಲಹೆ, ಐಡಿಯಾಗಳನ್ನು ಪರಿಶೀಲಿಸಿ ಅಂತಿಮವಾಗಿ ಸರ್ಕಾರ ಪ್ರಕಟಿಸಬೇಕು, ಹೊಸ ಐಡಿಯಾ ನೀಡಿದವರಿಗೆ ಪ್ರೋತ್ಸಾಹ ನೀಡುವುದು ಒಳ್ಳೆಯದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಆಯುಷ್ ಪರಿಣಿತರ ತಂಡ ‘ರಚಿಸಿ,ಪ್ರತಿ ನಿತ್ಯ ಮಾಧ್ಯಮ, ಸೋಶಿಯಲ್ ಮೀಡಿಯಾ ಮತ್ತು ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಆಯುಷ್ ಔಷಧಿಗಳ ಬಗ್ಗೆ ಪರಿಚಯ ಮಾಡುವುದು ಒಳ್ಳೆಯದು. ಈಗ ಕೆಲವು ಟಿವಿಗಳು ಮಾಡುತ್ತಿವೆ ಒಳ್ಳೆಯ ಬೆಳವಣಿಗೆ.

  ನರೇಗಾ ಯೋಜನೆಯಡಿ ಊರಿಗೊಂದು ಆಯುಷ್ ಔಷಧಿ ವನ’ ಆಥವಾ ಮನೆಗೊಂದು ಆಯುಷ್ ಔಷಧಿ ವನ’  ಮಾಡಲು ಯೋಜನೆ ರೂಪಿಸುವುದು ಒಳ್ಳೆಯದು, ಯಾವ ರೈತ ತನ್ನ ಜಮೀನಿನಲ್ಲಿ ಔಷಧಿ ಗಿಡ ಬೆಳೆಯಲು ಮುಂದೆ ಬಂದರೆ ಅವರಿಗೆ ಅನುದಾನ ನೀಡುವ ಮೂಲಕ ಜಾಗೃತಿ ಗೊಳಿಸಲು ಒಳ್ಳೆಯ ಸಮುಯ ಕಬ್ಬಿಣ ಕಾದಿದೆ, ಈಗ ಬಗ್ಗಿಸ ಬಹುದು. ನಗರಗಳಲ್ಲಿ ‘ಟೆರೆಸ್ ಔಷಧಿ ವನ’ಕ್ಕೆ ಪ್ರೋತ್ಸಾಹ ಧನ ನೀಡುವುದು ಮತ್ತು ಈಗಾಗಲೇ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಯುಷ್ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡುವುದು ಸೂಕ್ತವಾಗಿದೆ.

ನಾಟಿ ವೈದ್ಯರ ಮತ್ತು ಔಷಧಿ ಗಿಡ ಗುರುತು ಮಾಡುವವರ ಸೇವೆ ಬಳಸಿಕೊಂಡು ಸ್ಕಿಲ್ ಡೆವಲಪ್ ಮೆಂಟ್ ಇಲಾಖೆ ತರಬೇತಿ ನೀಡಲು ಯೋಜನೆ ರೂಪಿಸಲು ಚಿಂತನೆ ಮಾಡುವುದು ಒಳ್ಳೆಯದು.