27th September 2023
Share

TUMAKURU:SHAKTHI PEETA FOUNDATION

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜಿನ್ ಕೊರತೆಯಾಗಿ 24/34 ಜನ ಸತ್ತಿದ್ದಾರೆ ಎಂಬ ಆರೋಪ ನಿಜವಾಗಿದ್ದರೆ ಮತ್ತು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆಕ್ಸಿಜಿನ್ ಕೊರತೆಯಾಗುವುದಾದರೆ ಕೂಡಲೇ 28 ಜನ ಲೋಸಭಾ ಸದಸ್ಯರು ಹಾಗೂ 12 ಜನ ರಾಜ್ಯ ಸಭಾ ಸದಸ್ಯರು ಪ್ರಧಾನಿ ಶ್ರೀ ನರೇಂದ್ರಮೋದಿಯವರಿಗೆ ಡಿಜಿಟಲ್ ಸಂದೇಶ ಕಳುಹಿಸಿ. ಅದೇ ರೀತಿ ಜಿಲ್ಲಾಧಿಕಾರಿಗಳ ಬಳಿ ಮಾಹಿತಿ ಪಡೆದು ಕೊಂಡು ಇನ್ನೂ ಏನೇನು ಕೊರತೆ ಇದೆ ಎಂಬ ಬಗ್ಗೆ ನೇರವಾಗಿ ಪ್ರಧಾನಿಯವರಿಗೆ ತಿಳಿಸಿ.

 ನಿಮಗೆ ರಾಜ್ಯ ಸರ್ಕಾರದ ಆರೋಗ್ಯ ಸಚಿವರಿಂದ ನ್ಯಾಯ ದೊರಕುವುದಿಲ್ಲ, ಏಕೆಂದರೆ ಅವರೇ ಆಕ್ಸಿಜಿನ್ ಕೃತಕ ಅಭಾವ ಸೃಷ್ಠಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಅನುದಾನದಿಂದ ಆಕ್ಸಿಜಿನ್ ಘಟಕ ತೆರೆಯುವ ಕಡತಕ್ಕೆ 6 ತಿಂಗಳುಗಳ ಕಾಲ ಅವರೇ ಸಹಿ ಹಾಕಿಲ್ಲ ಎಂಬ ಆರೋಪ ಮತ್ತು ಕೇಂದ್ರ ಸರ್ಕಾರ ನೀಡಿರುವ 1166 ವೆಂಟಿಲೇಟರ್‍ಗಳನ್ನು ಇದೂವರೆಗೂ ಬಳಸಿಲ್ಲ ಎಂಬ ಆರೋಪವಿದೆ.

ಇವೆಲ್ಲಾ ಆರೋಪಗಳಿಗೆ ಅವರು ಇದೂವರೆಗೂ ಉತ್ತರ ನೀಡಿಲ್ಲ, ಅಂದ ಮೇಲೆ ಅವರನ್ನು ನಂಬ ಬೇಡಿ, ನಿಮಗೆ ಕೊನೆ ಅವಕಾಶ ಪ್ರಧಾನಿಯವರು ಮಾತ್ರ. ಮತದಾರ ಪ್ರಭುಗಳು ನಿಮ್ಮ ಮನೆ ಮುಂದಕ್ಕೆ ಬರುವ ಮುನ್ನ ಮೊದಲು ಈ ಕೆಲಸ ಮಾಡಿ ಸಂಸದ ಪುಣ್ಯಾತ್ಮರೇ.

ಜಿಲ್ಲಾಧಿಕಾರಿಗಳೇ ಕೊರತೆ ಬಗ್ಗೆ ಲಿಖಿತ ಮಾಹಿತಿ ನೀಡಿ ಇಲ್ಲವಾದರೇ ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಿ ಜೈಲಿಗೆ ಕಳುಹಿಸುತ್ತಾರೆ ಈ ರಾಜಕಾರಣಿಗಳು.