12th October 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಬಹುತೇಕ ಬೆಂಗಳೂರಿನಷ್ಟೆ ಕೋವಿಡ್ ಸೋಂಕಿತರು ಅಗುವ ಹಂತಕ್ಕೆ ಬಂದಿದೆ, ಕೇಂದ್ರ ಸರ್ಕಾರ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸೂಚನೆಯಂತೆ ತುಮಕೂರು ಲೋಕಸಭಾ ಸದಸ್ಯ ಹಾಗೂ ತುಮಕೂರು ದಿಶಾ ಸಮಿತಿ ಅಧ್ಯಕ್ಷ ಶ್ರೀ ಜಿ.ಎಸ್.ಬಸವರಾಜ್‍ರವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಸಮಾಲೋಚನೆ ನಡೆಸಿ  ಕೋವಿಡ್‍ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒಂದೇ ಕಡೆ ಕ್ರೋಡೀಕರಿಸಿ ಸಾರ್ವಜನಿಕರಿಗೆ ಪಾರದರ್ಶಕವಾಗಿ ದೊರಕಿಸಲು ಮುಂದಾಗಿದ್ದಾರೆ.

ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರು ಆಗಿರುವ ಶ್ರೀ ಜಿ.ಎಸ್.ಬಸವರಾಜ್‍ರವರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೀಸಲಾಗುವಂತಿಲ್ಲ, ಅವರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ  ವ್ಯಾಪ್ತಿಯಲ್ಲೂ ಮಾಹಿತಿ ನಗರ ಮತ್ತು ಹಳ್ಳಿ ಹಳ್ಳಿಯ ಜನರಿಗೂ ದೊರಕಬೇಕು ಎಂಬ ಅನಿಸಿಕೆ ಅವರದ್ದಾಗಿದೆ.

 ಈ ಹಿನ್ನಲೆಯಲ್ಲಿ ಚಿತ್ರದುರ್ಗದ ಲೋಕಸಭಾ ಸದಸ್ಯರಾದ ಶ್ರೀ ನಾರಾಯಣಸ್ವಾಮಿರವರು ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಶ್ರೀ ಡಿ.ಕೆ.ಸುರೇಶ್ ರವರನ್ನು ದಿನಾಂಕ: 05.05.2021 ರಂದು ನಡೆಯುವ ದಿಶಾ ಸಭೆಗೆ ವಿಶೇಷವಾಗಿ ಆಹ್ವಾನಿಸಲು ದಿಶಾ ಸದಸ್ಯ ಕಾರ್ಯದರ್ಶಿರವರಿಗೆ ಸೂಚಿಸಿದ್ದಾರೆ.

ಎಲ್ಲವೂ ಪಾರದರ್ಶಕವಾಗಿ ಡಿಜಿಟಲ್ ಮೂಲಕ ನಡೆಯಲಿದೆ, ಅಗತ್ಯ ಬಿದ್ದಲ್ಲಿ ಯಾವುದಾದರೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ  ದಿಶಾ ವೆಬ್‍ಸೈಟ್ ಅಫ್‍ಲೋಡ್ ಮಾಡಲು ಚಿಂತನೆ ಇದೆ.  

ಗ್ರಾಮೀಣ ಮತ್ತು ನಗರ ಪ್ರದೇಶಗಳ ಪ್ರತಿ ಆಶಾ ಕಾರ್ಯಕರ್ತರ ವ್ಯಾಪ್ತಿಯಲ್ಲಿ ಸ್ವಯಂ ಕಾರ್ಯಕರ್ತರ ತಂಡ ಕಾರ್ಯನಿರ್ವಹಿಸುತ್ತಿರುವ ಮತ್ತು ಸರ್ಕಾರ ಈಗ ರಚಿಸಿರುವ ಟಾಸ್ಕ್‍ಪೋರ್ಸ್ ಕಾರ್ಯವೈಖರಿ ಬಗ್ಗೆಯು ವಿಶೇಷ ಗಮನಹರಿಸಬೇಕಿದೆ.

ರಾಜ್ಯ ಸರ್ಕಾರ ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರಿಗೂ ನಿರ್ದಿಷ್ಠ ಹೊಣೆಗಾರಿಕೆ ಪಟ್ಟಿ ಮಾಡಲು ಸೂಚಿಸಿದೆ. ಈ ಪಟ್ಟಿಯ ಎಲ್ಲರ ಜೊತೆಯು ದಿಶಾ ಸಮಿತಿ ನಿಕಟ ಸಂಪರ್ಕದಲ್ಲಿ ಇರಲಿದೆ.

ಕೇಂದ್ರದಿಂದ ತುಮಕೂರು ಜಿಲ್ಲೆಗೆ ಕೊರೊನಾ ಆರಂಭವಾದಾಗಿನಿಂದ ಬಂದಿರುವ ಎಲ್ಲಾ ಅನುದಾನಗಳ ಮಾಹಿತಿ, ಆತ್ಮನಿರ್ಭರ ಯೋಜನೆಯಡಿಯಲ್ಲಿ ಜಿಲ್ಲೆಗೆ ದೊರಕಿರುವ ಅನುದಾನದ ಮಾಹಿತಿಯು ದೊರಕಲಿದೆ.

ಎಲ್ಲಾ ವಿಧಗಳ ಆಸ್ಪತ್ರೆಗಳು, ಬೆಡ್‍ಗಳು, ವೆಂಟಿಲೇಟರ್‍ಗಳು,  ಕೋವಿಡ್ ಕೇರ್ ಸೆಂಟರ್, ಉಚಿತ ಊಟದ ವ್ಯವಸ್ಥೆ, ಇತರೆ ದಾನಿಗಳು, ಉಚಿತ ವಿವಿಧ ಸೇವೆ ಮಾಡುವ ಸಂಘಸಂಸ್ಥೆಗಳ ಮಾಹಿತಿಯೂ ಒಂದೇ ಕಡೆ ದೊರಕಲಿದೆ.

ನಿಯಾಮನುಸಾರ ಎಷ್ಟು ಜನಸಂಖ್ಯೆಗೆ ಒಂದು ಆಸ್ಪತ್ರೆ ಇರಬೇಕು ಎಂಬ ಮಾಹಿತಿ ಆಧರಿಸಿ, ಅಸ್ಪತ್ರೆ ಇಲ್ಲದ ಕಡೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಸಹ ಯೋಚಿಸಲಾಗಿದೆ.

ಇವೆಲ್ಲದರ ಜೊತೆಗೆ ಆಯುಷ್ ಇಲಾಖೆಯ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿಯು ಲಿಂಕ್ ಆಗಲಿದೆ. ಆಯುಷ್ ಪರಿಣಿತರ ವಿಷನ್ ಗ್ರೂಪ್‍ಗಳ ಸೇವೆಯು ಲಭ್ಯವಾಗಲಿದೆ.

   ವಿಶೇಷವಾಗಿ ಹೋಮ್ ಐಸೋಲೇಷನ್ ಆಗಿರುವ ಸೋಂಕಿತರ ಅಥವಾ ಅವರ ಕುಟುಂಬದವರು ಅವರ ಸಮಸ್ಯೆಗಳನ್ನು ನೇರವಾಗಿ ಚಾಟ್ ಮಾಡುವ ಮೂಲಕ ಪಾರದರ್ಶಕತೆ ತರುವ ಸಾಧ್ಯತೆ ಬಗ್ಗೆಯೂ ಚಿಂತನೆ ನಡೆದಿದೆ.

ಜಿಲ್ಲೆಯ ಎಲ್ಲಾ ವಿಧಾನಸಭಾ ಸದಸ್ಯರ, ವಿಧಾನ ಪರಿಷತ್ ಸದಸ್ಯರ, ಲೋಕಸಭಾ ಸದಸ್ಯರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೈಗೊಂಡಿರುವ ಕ್ರಮಗಳ ಮಾಹಿತಿಯೂ ಅಫ್ ಲೋಡ್ ಆಗಲಿದೆ.

ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಬಂದಿರುವ ಅನುದಾನಗಳ ಮಾಹಿತಿಯೂ ಲಭ್ಯವಾಗಲಿದೆ.

ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ, ವಿವಿದ ಇನ್ನಸೂರೆನ್ಸ್‍ಗಳ ಮಾಹಿತಿಯೂ ಒಂದೇ ಕಡೆ ದೊರಕಲಿದೆ.

ತುಮಕೂರು ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳ ಬಗ್ಗೆ ಕೆಲವು ಜನರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ, ಅವರು ಯಾರು ಏನು ಮಾಡುತ್ತಿಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ. ಎಲ್ಲವನ್ನು ಎಲ್ಲರಿಗೂ ಹೇಳಲು ಸಾದ್ಯವಿಲ್ಲ, ಆದರೆ ಡಿಜಿಟಲ್ ರೂಪದಲ್ಲಿ ಎಲ್ಲಾ ಮಾಹಿತಿಗಳು ದೊರಕಿದ ನಂತರವೂ, ಅಂಥಹವರು ಸಹ ತಮ್ಮ ಅಮೂಲ್ಯವಾದ ಸಲಹೆಗಳನ್ನು ಅಫ್ ಲೋಡ್ ಮಾಡಲು ಅವಕಾಶ ನೀಡಿ, ನಿಯಮದ ಅಡಿಯಲ್ಲಿ ಸಾಧ್ಯವಾದಲ್ಲಿ ಅವುಗಳ ಬಗ್ಗೆಯೂ ಗಮನಹರಿಸಲಾಗುವುದು.

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯರ ಹೇಳುವ ಪ್ರಕಾರ ಹೋಮ್ ಐಸೋಲೇಷನ್ ಜೊತೆಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ವ್ಯವಸ್ಥೆ ಮಾಡುವುದು ಬಹಳ ಉತ್ತಮವಾಗಿದೆ. ಇದರಿಂದ ಬಹಳ ಪ್ರಯೋಜನಗಳು ಆಗಲಿವೆ, ಈ ಬಗ್ಗೆಯೂ ಮಾಹಿತಿ ನೀಡಲು ಉದ್ದೇಶಿಸಲಾಗಿದೆ.

 ಡಾಕ್ಟರ್‍ಗಳು ಮತ್ತು ಅಧಿಕಾರಿಗಳು ಅವರವರ ಇಲಾಖೆಯ ಡಾಟಾ ಅಫರೇಟರ್ ಮತ್ತು ವಿವಿಧ ಯೋಜನೆಗಳ ಕೇಸ್ ವರ್ಕರ್ ಅವರ ಕಚೇರಿಯಿಂದಲೇ ಅಫ್ ಲೋಡ್ ಮಾಡಲು ಪಾಸ್‍ವಾರ್ಡ್ ನೀಡ ಬೇಕಾಗುತ್ತದೆ. ಖಾಸಗಿ ಆಸ್ಪತ್ರೆಯವರಿಗೂ ಪಾಸ್ ವಾರ್ಡ್ ನೀಡಿ ಅವರ ಬೆಡ್ ಸೇರಿದಂತೆ ವಿವಿಧ ಮಾಹಿತಿಯನ್ನು ಅವರೇ ಅಫ್ ಲೋಡ್ ಮಾಡಲು ಸೂಚಿಸಬೇಕಾಗುತ್ತದೆ.

ಪಕ್ಷಬೇಧ ಮರೆತು ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಂಘಸಂಸ್ಥೆಗಳು, ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಪಾರದರ್ಶಕತೆಯ ಜೊತೆಗೆ ಜನರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಆರಂಭವಾಗುವ ಎಲ್ಲಾ ಅವಕಾಶಗಳು ಇವೆ.  

ದಿಶಾ ಸಮಿತಿಯ ಉದ್ದೇಶವೇ ಇದಾಗಿದೆ. ಕೊರೊನಾ 2 ನೇ ಅಲೇ ಪರಿಹಾರ, 3 ಮತ್ತು 4 ನೇ ಅಲೆಗೆ ಸಜ್ಜಾಗಲು ಜಿಲ್ಲಾಡಳಿತ ಮುಂದಾಗಿದೆ.