TUMAKURU:SHAKTHIPEETA FOUNDATION
ಆತ್ಮೀಯ ಓದುಗರಲ್ಲಿ ಮನವಿ.
ಬಹಳ ವಿಳಂಭವಾದರೂ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕೊರೊನಾಗೆ ಸಂಬಂಧಿಸಿದ ವಿವಿಧ ಹೊಣೆಗಾರಿಕೆಯನ್ನು ವಿವಿಧ ಸಚಿವರಿಗೆ ನೀಡಿರುವ ಕ್ರಮ.
ಸಂಸದ ಶ್ರೀ ತೇಜಸ್ವಿ ಸೂರ್ಯರವರ ಭರ್ಜರಿ ಕೊರೊನಾ ಭೇಟೆ.
ಸಂಸದ ಶ್ರೀ ಜಿ.ಎಸ್.ಬಸವರಾಜ್‍ರವರು ದಿಶಾ ಸಮಿತಿಯ ಪರಮಾಧಿಕಾರ ಬಳಸಿ ಕೊರೊನಾಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಜಿಲ್ಲೆಯ ಜನತೆಗೆ ಪಾರದರ್ಶಕವಾಗಿ ತಿಳಿಸಲು ಕರೆದಿರುವ ದಿಶಾ ಸಮಿತಿ ಸಭೆ ಮತ್ತು ಯಾವತ್ತೂ ದಿಶಾ ಸಮಿತಿ ಸಭೆಗೆ ಹಾಜರಾಗದೇ ಇದ್ದ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ದಿಶಾ ಸಮಿತಿ ಸಭೆಗೆ ನಾನು ಹಾಜರಾಗ ಬೇಕು ಎಂದು ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ ಚರ್ಚಿಸಿ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿಸಿದ್ದು.
ಸಾವು-ನೋವುಗಳಲ್ಲೂ ನನಗೆ ಬಹಳ ತೃಪ್ತಿ ತಂದ ವಿಷಯಗಳು. ಇವೆಲ್ಲಾ ಜನತೆಗೆ ಆತ್ಮಸ್ಥೈರ್ಯ ತುಂಬುವ ಕ್ರಮಗಳು.
ತುಮಕೂರು ಜಿಲ್ಲೆಯ ಕೊರೊನಾಗೆ ಸಂಬಂಧಿಸಿದ ಸಂಪೂರ್ಣ ವರದಿ ಸಿದ್ಧಪಡಿಸಲು ಚಿಂತನೆ ಮಾಡಿದ್ದೇನೆ. ಕೆಲವು ಮಾಹಿತಿಗಳನ್ನು ಇಲಾಖೆಯಿಂದ ಪಡೆಯಲು ದಿಶಾ ಸಮಿತಿಯ ಸದಸ್ಯಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಪ್ರತಿಯನ್ನು ಯಥಾವತ್ತಾಗಿ ತಮ್ಮ ಮುಂದೆ ಇಟ್ಟಿದ್ದೇನೆ. ಇನ್ನೂ ಯಾವುದಾದರೂ ವಿಷಯದ ಬಗ್ಗೆ ಗಮನ ಹರಿಸಲು ತಾವೂ ಸಲಹೆ ನೀಡಿದಲ್ಲಿ ಅವುಗಳ ಮಾಹಿತಿಯನ್ನು ಪಡೆಯಲಾಗುವುದು.
ನನ್ನ ಇ-ಪೇಪರ್ ಓದುಗರೇ ನನಗೆ ಎಲ್ಲಾ ವಿಷಯಗಳ ವಿಷನ್ ಗ್ರೂಪ್ ಸದಸ್ಯರು, ನೀವೂ ನೀಡುತ್ತಿರುವ ಸಲಹೆಗಳೇ ನನಗೆ ಜ್ಞಾನಭಂಡಾರವಾಗಿದೆ. ಸಲಹೆ ನೀಡುತ್ತಿರುವ ಎಲ್ಲಾ ನನ್ನ ಆತ್ಮೀಯರಿಗೆ ಮತ್ತೊಮ್ಮೆ ಅಭಿನಂದನೆಗಳು.
ದಿಶಾ ಸಂಘ ಸಂಸ್ಥೆಗಳ ಪ್ರತಿನಿಧಿಯಾದ ನನಗೆ ನಿಮ್ಮ ಸಲಹೆ, ಮಾರ್ಗದರ್ಶನವೇ ಬೆಲೆ ಕಟ್ಟದ ವಸ್ತುವಾಗಿದೆ. ನಿಮ್ಮೆಲ್ಲರ ಅಭಿಪ್ರಾಯಗಳನ್ನು ನಾನು ಸಭೆಗಳಲ್ಲಿ ಅರ್ಥಪೂರ್ಣವಾಗಿ ಮಂಡಿಸಲು ಶ್ರಮಿಸುತ್ತಿದ್ದೇನೆ ಅಷ್ಟೆ.
ಟೀಕೆ-ಟಿಪ್ಪಣೆಗಳನ್ನು ಅಷ್ಟೆ ಗಂಭೀರವಾಗಿ ತೆಗೆದು ಕೊಳ್ಳುತ್ತಿದ್ದೇನೆ, ಪ್ರತಿಕ್ರಿಯೆ ನೀಡುವುದು ಬೇಡ ಎಂಬ ನಿರ್ಧಾರಕ್ಕೂ ಬಂದಿದ್ದೇನೆ. ಅವರವರ ಅಭಿರುಚಿಗೆ ಗೌರವವನ್ನು ಕೊಡುವುದು ನಮ್ಮ ಕರ್ತವ್ಯ ಅಲ್ಲವೇ?
ಗೆ. ದಿನಾಂಕ:04.05.2021
ಸದಸ್ಯ ಕಾರ್ಯದರ್ಶಿ ತುಮಕೂರು ಜಿಲ್ಲಾ ದಿಶಾ ಸಮಿತಿ. ತುಮಕೂರು
ಹಾಗೂ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತುಮಕೂರು ಜಿಲ್ಲಾ ಪಂಚಾಯತ್. ತುಮಕೂರು
ಇಂದ
ಕುಂದರನಹಳ್ಳಿ ರಮೇಶ್.
ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯ.
ಪಾರ್ವತಿ ನಿಲಯ, 1 ನೇ ಮುಖ್ಯ ರಸ್ತೆ, ಜಯನಗರ ಪೂರ್ವ, ಶೆಟ್ಟಿಹಳ್ಳಿ ರಸ್ತೆ, ತುಮಕೂರು.
9886774477
ದಿನಾಂಕ:05.05.2021 ರಂದು ತುಮಕೂರು ಜಿಲ್ಲಾ ದಿಶಾ ಸಮತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‍ರವರ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಭೆಗೆ ಪೂರಕವಾಗಿ ಇದೂವರೆಗೂ ಯಾವುದೇ ಮಾಹಿತಿಗಳನ್ನು ನೀಡಿರುವುದಿಲ್ಲ. ಮಾಹಿತಿಗಳೇ ಇಲ್ಲದ ಮೇಲೆ ಸಭೆಗೆ ಬಂದು ಏನು ಮಾಡುವುದು. ನಾನು ದೂರವಾಣಿ ಮೂಲಕ ಮತ್ತು ಡಿಜಿಟಲ್ ಮೂಲಕ ವಿವಿಧ ಅಧಿಕಾರಿಗಳನ್ನು, ವಿವಿಧ ಮಾಹಿತಿ ನೀಡಲು ಕೋರಿದರೂ ಇನ್ನೂ ಕೆಲವು ಅಧಿಕಾರಿಗಳು, ಡಾಕ್ಟರ್‍ಗಳು ಮಾಹಿತಿ ನೀಡಿರುವುದಿಲ್ಲ.
ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಮತ್ತು ತುಮಕೂರು ಜಿಲ್ಲಾ ಸಮಿತಿ ಸದಸ್ಯನಾಗಿ, ರಾಜ್ಯ ದಿಶಾ ಸಮಿತಿ ಅಧ್ಯಕ್ಷರಿಗೆ ಮತ್ತು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಿಗೆ ದಿಶಾ ಸಮಿತಿಯ ಮಾರ್ಗದರ್ಶಿ ಸೂತ್ರದನ್ವಯ ವರದಿ ನೀಡಬೇಕಾಗಿರುವುದರಿಂದ ನನಗೆ ಈ ಕೆಳಕಂಡ ಮಾಹಿತಿಗಳನ್ನು ನೀಡಲು ಕೋರಿದೆ.
ಒಂದು ವೇಳೆ ನಾನು ಕೇಳಿರುವ ಎಲ್ಲಾ ಮಾಹಿತಿ ನೀಡಲು ತಮಗೆ ಇಂದೇ ಸಾಧ್ಯವಾಗದಿದ್ದಲ್ಲಿ ಹಾಗೂ ಕೊರೊನಾಗೆ ಸಂಬಂಧಿಸಿದ ಇತರೆ ಮಾಹಿತಿಗಳಿದ್ದಲ್ಲಿ, ಯಾವ ಮಾಹಿತಿಗಾಗಿ ಯಾರೊಂದಿಗೆ ಚರ್ಚಿಸಬೇಕು ಎಂಬ ಅಧಿಕಾರಿಗಳು ಮತ್ತು ನೌಕರರ ಪಟ್ಟಿಯನ್ನು ನೀಡಲು ಕೋರಿದೆ.
ಒಂದು ವೇಳೆ ನಾನು ಕೋರಿರುವ ಮಾಹಿತಿಗಳಲ್ಲಿ ರಹಸ್ಯ ಕಾಪಾಡುವ ಮಾಹಿತಿಗಳಿದ್ದಲ್ಲಿ ಲಿಖಿತವಾಗಿ ತಿಳಿಸಲು ಸಹ ಈ ಮೂಲಕ ಕೋರಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ
- ದಿನಾಂಕ:30.04.2021 ರಂದು ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರ ಪತ್ರದ ಪ್ರಕಾರ ಮಾಡಿರುವ ಪಟ್ಟಿ.
- ತುಮಕೂರು ಜಿಲ್ಲೆಯಲ್ಲಿರುವ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳವಾರು ಹೊಣೆಗಾರಿಕೆ ಮತ್ತು ಮುಖ್ಯಸ್ಥರ ಪಟ್ಟಿ.
- ಸೋಂಕಿತರ ಸ್ಠೆಜ್(ಕಡಿಮೆ, ಮಧ್ಯಮ ಮತ್ತು ತೀವೃ)ವಾರು ಯಾರು ನಿರ್ಣಯ ಮಾಡಬೇಕು ಮತ್ತು ಹೇಗೆ ನಿರ್ಣಯ ಮಾಡುತ್ತಿದ್ದಾರೆ.
- ಗ್ರಾಮ ಮಟ್ಟದ ಕಾರ್ಯಪಡೆ ಮತ್ತು ಸಭೆಗಳ ಮಾಹಿತಿ.
- ಗ್ರಾಮಪಂಚಾಯಿತಿ ಮಟ್ಟದ ಕಾರ್ಯಪಡೆ ಮತ್ತು ಸಭೆಗಳ ಮಾಹಿತಿ.
- ನಗರ ಸ್ಥಳೀಯ ಸಂಸ್ಥೆಗಳಲ್ಲಿನ ವಾರ್ಡ್ ಮಟ್ಟದ ಕಾರ್ಯಪಡೆ ಮತ್ತು ಸಭೆಗಳ ಮಾಹಿತಿ.
- ತಾಲ್ಲೂಕು ಮಟ್ಟದ ಕಾರ್ಯಪಡೆ ಮತ್ತು ಸಭೆಗಳ ಮಾಹಿತಿ.
- ಜಿಲ್ಲಾ ಮಟ್ಟದ ಕಾರ್ಯಪಡೆ ಮತ್ತು ಸಭೆಗಳ ಮಾಹಿತಿ.
- ಆಶಾ ಕಾರ್ಯಕರ್ತರ ವಾರು ವಿವಿಧ ವರ್ಗದ ಅಂದರೆ ಗುಣಮುಖರಾದವರು, ಸಾವು ಸಂಭವಿಸಿರುವವರು ಸೋಂಕಿತರ ಪಟ್ಟಿ.
- ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಸಾವು ಸಂಭವಿಸಿದವರ ಕುಟುಂಬಗಳ ಸ್ಥಿತಿಗತಿ ಮತ್ತು ಸರ್ಕಾರದಿಂದ ಮಾಡಿರುವ ಅಥವಾ ಮಾಡಬೇಕಾಗಿರುವ ಅನೂಕೂಲಗಳ ಪಟ್ಟಿ.
- ಆಶಾ ಕಾರ್ಯಕರ್ತರ ವ್ಯಾಪ್ತಿವಾರು ವಲಸೆ ಬಂದಿರುವವರ ಪಟ್ಟಿ ಮತ್ತು ಸರ್ಕಾರದಿಂದ ಮಾಡಿರುವ ಅಥವಾ ಮಾಡಬೇಕಾಗಿರುವ ಅನೂಕೂಲಗಳ ಪಟ್ಟಿ.
- ಆಶಾ ಕಾರ್ಯಕರ್ತರ ವ್ಯಾಪ್ತಿವಾರು ವಿವಿಧ ವರ್ಗವಾರು ಊಟ, ವಸತಿ, ಪ್ರವಾಸ ಇತ್ಯಾದಿ ಪಲಾನುಭವಿಗಳ ಪಟ್ಟಿ ಮತ್ತು ಸರ್ಕಾರದಿಂದ ಇವರಿಗೆ ಮಾಡಿರುವ ಅಥವಾ ಮಾಡಬೇಕಾಗಿರುವ ಅನೂಕೂಲಗಳ ಪಟ್ಟಿ.
- ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಕೇಂದ್ರ ಸರ್ಕಾರದಿಂದ ಗಣತಿ ಮಾಡಿರುವ ವಿವಿಧ ರೋಗಿಗಳ ಪಟ್ಟಿ.
- ಆಶಾ ಕಾರ್ಯಕರ್ತರ ಗ್ರಾಮೀಣ ವ್ಯಾಪ್ತಿ ಪಟ್ಟಿ.
- ಆಶಾ ಕಾರ್ಯಕರ್ತರ ನಗರ ವ್ಯಾಪ್ತಿ ಪಟ್ಟಿ.
- ಅಂಗನವಾಡಿ ಕಾರ್ಯಕರ್ತರ ಪಟ್ಟಿ ಮತ್ತು ಕರ್ತವ್ಯಗಳ ಮಾಹಿತಿ ಹಾಗೂ ಕೊರೊನಾದಲ್ಲಿ ಅವರ ಪಾತ್ರ.
- ಆಯುಷ್ಮಾನ್ ಅರೋಗ್ಯ ಮಿತ್ರರ ಪಟ್ಟಿ ಮತ್ತು ಕರ್ತವ್ಯಗಳ ಮಾಹಿತಿ.
- ರೆಮ್ಡಿಸಿವಿರ್ ಬಂದಿರುವುದು ಮತ್ತು ವಿತರಣೆ ಮಾಡಿರುವ ಪಟ್ಟಿ.
- ಇದೂವರೆಗೂ ಆಕ್ಸಿಜನ್ ಸರಬರಾಗಿರುವ ಮತ್ತು ವಿತರಣೆ ಮಾಡಿರುವವರ ಪಟ್ಟಿ,
- ಆಂಬುಲೆನ್ಸ್‍ಗಳು ಮತ್ತು ಅವುಗಳು ಕೋವಿಡ್ ಬಂದಾಗಿನಿಂದ ಅವುಗಳ ಬಳಕೆ ಮಾಹಿತಿ.
- ಕೋವಿಡ್ ಆರಂಭವಾದಗಿನಿಂದ ಕೇಂದ್ರ ಸರ್ಕಾರದ ವಿವಿದ ಯೋಜನೆಯಡಿ ಮಂಜೂರಾದ ಅನುದಾನಗಳ ಪಟ್ಟಿ.
- ಕೋವಿಡ್ ಆರಂಭವಾದಗಿನಿಂದ ರಾಜ್ಯ ಸರ್ಕಾರದ ವಿವಿದ ಯೋಜನೆಯಡಿ ಮಂಜೂರಾದ ಅನುದಾನಗಳ ಪಟ್ಟಿ.
- ತುಮಕೂರು ಜಿಲ್ಲೆಯ ವಿವಿಧ ಆಸ್ಪತ್ರೆಗಳವಾರು ಡಾಕ್ಟರ್ ಮತ್ತುನೌಕರರ ಹುದ್ದೆ, ಖಾಲಿ ಇರುವ ಹುದ್ದೆಗಳ ಪಟ್ಟಿ.
- ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಆಕ್ಸಿಜನ್ ಸರಬರಾಜು ಬೆಡ್‍ಗಳ ಪಟ್ಟಿ ಮತ್ತು ಹಂಚಿಕೆ ಮಾಡಿರುವ ಪಟ್ಟಿ.
- ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೆಂಟಿಲೇಟರ್ ಸಹಿತ ಬೆಡ್‍ಗಳ ಪಟ್ಟಿ.
- ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಐಸಿಯು ಬೆಡ್‍ಗಳ ಸಾಮಾಥ್ರ್ಯದ ಮಾಹಿತಿ.
- ತುಮಕೂರು ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‍ಗಳ ಮಾಹಿತಿ.
- ಆತ್ಮನಿರ್ಭರ ಯೋಜನೆಯಡಿ ತುಮಕೂರು ಜಿಲ್ಲೆಯ ಪಲಾನುಭವಿಗಳ ಪಟ್ಟಿ.
- ಆಯುಷ್ಮಾನ್ ಭಾರತ್ ಮತ್ತು ಅರೋಗ್ಯ ಕರ್ನಾಟಕ ಕಾರ್ಡ್‍ಗಳ ವಿತರಣೆ ಪಟ್ಟಿ.
- ತುಮಕೂರು ಜಿಲ್ಲೆಯ ಆಯುಷ್ಮಾನ್ ಭಾರತ್ ಮತ್ತು ಅರೋಗ್ಯ ಕರ್ನಾಟಕ ಕಾರ್ಡ್ ಪಡೆಯಲು ಅರ್ಹರ ಪಟ್ಟಿ.
- ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಲಸಿಕೆ ಪಡೆದವರ ಪಟ್ಟಿ.
- ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಲಸಿಕೆ ಪಡೆಯ ಬೇಕಾದವರ ಪಟ್ಟಿ.
- ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತರೆ ಅಧ್ಯಯನ ವರದಿ ಹಾಗೂ ಕೈಗೊಂಡ ಯೋಜನೆಗಳ ಮಾಹಿತಿ.
- ಆರೋಗ್ಯ ಇನ್ಸೂರೆನ್ಸ್‍ಗಳ ಮಾಹಿತಿ ಮತ್ತು ಪಡೆದವರ ಮಾಹಿತಿ.
- ಖಾಸಗಿ ಆಸ್ಪತ್ರೆಗಳ ಬಿಲ್‍ಗಳ ಮಾಹಿತಿ.
- ಕೋವಿಡ್ ಆರಂಭವಾದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಂದ ಮಾರ್ಗದರ್ಶಿ ಸೂತ್ರಗಳು, ಪತ್ರಗಳು ಮತ್ತು ಕೈಗೊಂಡ ಕ್ರಮಗಳ ಪಟ್ಟಿ.
- ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಆಪ್, ಲಿಂಕ್, ವೆಬ್ ಸೈಟ್‍ಗಳ ಮಾಹಿತಿ.
- ಆರೋಗ್ಯ ಇಲಾಖೆಯಿಂದ ತುಮಕೂರು ಜಿಐಎಸ್ ಪೋರ್ಟಲ್‍ನಲ್ಲಿ ಅಫ್ ಲೋಡ್ ಮಾಡಿರುವ ಜಿಐಎಸ್ ಲೇಯರ್‍ಗಳ ಪಟ್ಟಿ.
- ಆರೋಗ್ಯ ಇಲಾಖೆಯ ಪ್ರಗತಿಯಲ್ಲಿರುವ, ನೆನೆಗುದಿಗೆ ಬಿದ್ದಿರುವ, ಮಂಜೂರಾಗಿರುವ, ಮಂಜೂರಾಗ ಬೇಕಾ ಗಿರುವ, ಹೊಸ ಪ್ರಸ್ತಾವನೆಗಳ ಯೋಜನೆಗಳ ಮಾಹಿತಿ.
- ಕೊರೊನಾ ಯೋಜನೆಗೆ ಸಂಬಂಧಿಸಿದಂತೆ ಪಿಪಿಪಿ ಯೋಜನೆಗಳ ಮಾಹಿತಿ.
- ತುಮಕೂರು ದಿಶಾ ವೆಬ್‍ಸೈಟ್‍ನಲ್ಲಿ ಕೊರೊನಾಗೆ ಸಂಬಂಧಿಸಿದ ಎ ಟು ಝಡ್ ಮಾಹಿತಿ ಅಫ್ ಲೋಡ್ ಹಾಗೂ ವಿವಿಧ ಲಿಂಕ್‍ಗಳ ಬಗ್ಗೆ.
- 2025 ರ ವಿಷನ್ ಡಾಕ್ಯುಮೆಂಟ್ ಪ್ರಕಾರ ತುಮಕೂರು ಜಿಲ್ಲೆಗೆ ಆರೋಗ್ಯ ಇಲಾಖೆ ಸಿದ್ಧಪಡಿಸಿದ್ದ ವಿಷನ್ ಡಾಕ್ಯುಮೆಂಟ್ ಮಾಹಿತಿ.
- ಡಾ,ಡಿ.ಎಂ.ನಂಜುಂಡಪ್ಪ ವರದಿಯ ಪ್ರಕಾರ ಕೈಗೊಂಡಿರುವ ಕ್ರಮಗಳ ಪಟ್ಟಿ, ಏನು ಮಾಡಬೇಕಾಗಿತ್ತು, ಏನೇನು ಮಾಡಿದೆ.
- ಕೊರೊನಾ ಸೋಂಕಿತರ ಅಥವಾ ಅವರ ಕುಟುಂಬದ ದೂರುಗಳ ಮಾಹಿತಿ.
- ವಿವಿಧ ಅವಧಿಯ ಲಾಕ್‍ಡೌನ್ ಮಾಹಿತಿಗಳು.
ಆಯುಷ್ ಇಲಾಖೆ
- ಆಯುಷ್ ಇಲಾಖೆ ಕೊರೊನಾ ಹಿನ್ನಲೆಯಲ್ಲಿ ಕೈಗೊಂಡಿರುವ ಕ್ರಮಗಳ ಪಟ್ಟಿ ಹಾಗೂ ಪಲಾನುಭವಿಗಳ ಪಟ್ಟಿ.
- ಆಯುಷ್ ಇಲಾಖೆಯ ಪ್ರಗತಿಯಲ್ಲಿರುವ, ನೆನೆಗುದಿಗೆ ಬಿದ್ದಿರುವ, ಮಂಜೂರಾಗಿರುವ, ಮಂಜೂರಾಗ ಬೇಕಾ ಗಿರುವ, ಹೊಸ ಪ್ರಸ್ತಾವನೆಗಳ ಯೋಜನೆಗಳ ಮಾಹಿತಿ.
- ಆಯುಷ್ ಇಲಾಖೆಯಿಂದ ತುಮಕೂರು ಜಿಐಎಸ್ ಪೋರ್ಟಲ್‍ನಲ್ಲಿ ಅಫ್ ಲೋಡ್ ಮಾಡಿರುವ ಜಿಐಎಸ್ ಲೇಯರ್‍ಗಳ ಪಟ್ಟಿ.
- ಆಯುಷ್ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪಟ್ಟಿ.
- ಆಯುಷ್ ಇಲಾಖೆಯ ವಿವಿಧ ಆಸ್ಪತ್ರೆಗಳು ಡಾಕ್ಟರ್, ನೌಕರರ ಹುದ್ದೆ ಮತ್ತು ಖಾಲಿ ಇರುವ ಪಟ್ಟಿ.
- 2025 ರ ವಿಷನ್ ಡಾಕ್ಯುಮೆಂಟ್ ಪ್ರಕಾರ ತುಮಕೂರು ಜಿಲ್ಲೆಗೆ ಆಯುಷ್ ಇಲಾಖೆ ಸಿದ್ಧಪಡಿಸಿದ್ದ ವಿಷನ್ ಡಾಕ್ಯುಮೆಂಟ್ ಮಾಹಿತಿ.
- ಆಯುಷ್ ಇಲಾಖೆಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಆಪ್, ಲಿಂಕ್, ವೆಬ್ ಸೈಟ್‍ಗಳ ಮಾಹಿತಿ.
-ಕುಂದರನಹಳ್ಳಿ ರಮೇಶ್
ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯ.