27th July 2024
Share

TUMAKURU:SHAKTHIPEETA FOUNDATION

ತುಮಕೂರು ನಗರದಲ್ಲಿ ಕೇವಲ 15 ಜನ ಆಶಾ ಮಾತ್ರ ಕಾರ್ಯಕರ್ತೆಯರು ಇದ್ದಾರೆ, ಅದರಲ್ಲಿ 5 ಜನ ಕೆಲಸಕ್ಕೆ ಬರುತ್ತಿಲ್ಲಾ ಎಂಬ ಅಂಶ ಬೆಳಕಿಗೆ ಬಂದಿದೆ. ದಿನಾಂಕ:05.05.2021 ರಂದು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಮಹತ್ತರವಾದ ತೀರ್ಮಾನ ಕೈಗೊಳ್ಳಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿನ ಮಾದರಿಯಲ್ಲಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಅಗತ್ಯವಿರುವ 136 ಹುದ್ದೆಗಳಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಹಾಲಿ ಇರುವ 10 ಜನರನ್ನು ಬಿಟ್ಟು ಉಳಿದ 126 ಜನರಿಗೆ ಅನುಮೋದನೆ ಪಡೆಯಲಾಗುವುದು.

ಕೋವಿಡ್ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ 126 ಜನರನ್ನು ಆಯ್ಕೆಮಾಡಿಕೊಂಡು ಕೆಲಸ ನಿರ್ವಹಿಸಲು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರಿಗೆ ಸೂಚಿಸಲಾಗಿದೆ. ತುಮಕೂರು ನಗರದ 35 ವಾರ್ಡ್‍ಗಳಲ್ಲೂ  ಮಹಾನಗರ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಸುಮಾರು 10 ಜನರ   ಕೋವಿಡ್ ವಾರ್ಡ್ ಸಮಿತಿ ರಚಿಸಲಿದ್ದಾರೆ.

ಆ ಸಮಿತಿ ಆಯಾ ವಾರ್ಡ್‍ನಲ್ಲಿರುವ ಸೋಂಕಿತರ ಮನೆಗಳ ಪಟ್ಟಿ ಪಡೆದು ಪ್ರತಿ ಮನೆಗೂ ಭೇಟಿ ನೀಡಿ ಸಹಕಾರ ನೀಡಲಿದ್ದಾರೆ. ಆಯಾ ವಾರ್ಡ್ ವ್ಯಾಪ್ತಿಯಲ್ಲಿ ವಾಸವಿರುವವರನ್ನೇ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವುದು ಒಳ್ಳೆಯದು. ಆಯಾ ಸಮಿತಿ, ಮೇಯರ್, ಆಯುಕ್ತರು ತೀರ್ಮಾನ ಕೈಗೊಳ್ಳುವುದು ಸೂಕ್ತವಾಗಿದೆ.

ಅವರಿಗೆ ಸರ್ಕಾರದಿಂದ ವೇತನ ನೀಡುವ ಜವಾಬ್ಧಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ದಿಶಾ ಸಭೆಯಲ್ಲಿಯೇ ಪ್ರಕಟಿಸಿದ್ದಾರೆ, ಶ್ರೀ ಜಿ.ಎಸ್.ಬಸವರಾಜ್‍ರವರು ಮತ್ತು ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರು ಸಹ ಶೀಘ್ರವಾಗಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಆಯಾ ಬಡಾವಣೆಯ ನಾಗರೀಕ ಸಮಿತಿಗಳ ಪದಾಧಿಕಾರಿಗಳು, ಸ್ವಯಂ ಸೇವಕರು, ಆಸಕ್ತರು ಈ ಸಮಿತಿಯೊಂದಿಗೆ ಕಾರ್ಯನಿರ್ವಹಿಸುವುದು ಸೂಕ್ತವಾಗಿದೆ. ಶಾಸಕರು ಅವರ ತಂಡಕ್ಕೆ ಸಕ್ರೀಯಾವಾಗಿ ಭಾಗವಹಿಸಿ ಆಂದೋಲನ ರೀತಿಯಲ್ಲಿ ಸಹಕರಿಸಲು ಸೂಚಿಸಿದ್ದಾರೆ.

ವಾರ್ಡ್ ಸಮಿತಿಗಳ ಅಭಿಪ್ರಾಯದೊಂದಿಗೆ ಕೋವಿಡ್ ಕೇರ್ ಸೆಂಟರ್ ಹೆಚ್ಚಳದ ಬಗ್ಗೆ ತಿರ್ಮಾನವನ್ನು ಸಚಿವರು, ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಕೈಗೊಳ್ಳಲಿದ್ದಾರೆ.

ಈ ಹಿನ್ನಲೆಯಲ್ಲಿ ಇಂದಿನಿಂದಲೇ ಕಾರ್ಯಾರಂಭ ಮಾಡಲು ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಖಡಕ್ ಸೂಚನೆ ನೀಡಿದ್ದಾರೆ. ನಾಳೆ 35 ವಾರ್ಡ್ ಸಮಿತಿಗಳ ಪ್ರಥಮ ಸಭೆಯ ವರದಿ ಆಯುಕ್ತರ ಕೈಗೆ ದೊರೆಯಬಹುದು ಎಂಬ ಆಶಾಭಾವನೆ ಶಾಸಕರದ್ದಾಗಿದೆ. 

ಮೇಯರ್ ಶ್ರೀ ಕೃಷ್ಣಪ್ಪನವರು ಅವರ ಸಹದ್ಯೋಗಿಗಳು  ಮತ್ತು ಆಯುಕ್ತರು ಇಂದು (06.05.2021) ಸಂಜೆ ವೇಳೆಗೆ ಸೂಕ್ತ ಕ್ರಮ ಕೈಗೊಂಡು ಕಾರ್ಯರಂಭ ಮಾಡುವ ಭರವಸೆಯಿದೆ.