1st November 2024
Share

TUMAKURU:SHAKTHIPEETA FOUNDATION

ವಿರೋಧ ಪಕ್ಷದ ನಾಯಕರು ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಪಾಪ ಮುಖ್ಯ ಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾತ್ರ ಮಾತ್ರೆ ಕೊಡಿ, ಲಸಿಕೆ ಕೊಡಿ, ಆಕ್ಸಿಜನ್ ಕೊಡಿ, ರೆಮ್ಡಿಸಿವಿರ್ ಕೊಡಿ ಎಂದು ಪ್ರಧಾನಿ ಶ್ರೀ ನರೇಂದ್ರಮೋದಿಯವರನ್ನು ಕಾಡಿ ಬೇಡುತ್ತಿದ್ದಾರೆ, 25 ಜನ ಸಂಸದರು ಬಿಲ ಸೇರಿದ್ದೀರಾ ಎಂಬ ಬಹಳ ಚಾಣಾಕ್ಷ ಹೇಳಿಕೆ ನೀಡುವ ಮೂಲಕ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

 ಇದರ ಹಿಂದಿನ ಉದ್ದೇಶ ಮಹತ್ತರವಾಗಿದೆ, ಈಗಲೇ ಇಂಡಿಯಂಟ್ ಹಾಕಿದ್ದಾರೆ. ಅದೇನೆ ಇರಲಿ ರಾಜಕೀಯ ತಂತ್ರ-ಕುತಂತ್ರ. ಸ್ವಾಮಿ 25 ಜನ ಸಂಸದರು ಬಿಲಸೇರಿದ್ದಾರೆ ಎಂದು ಹೇಳಬೇಡಿ, ಬೇರೆಯವರ ವಿಚಾರ ನನಗೆ ಗೊತ್ತಿಲ್ಲ.

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು ಕೊರೊನಾ ವಿಷಯವನ್ನೆ ಚರ್ಚಿಸಲು ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆ ಕರೆದು ತುಮಕೂರು ಜಿಲ್ಲೆಗೆ 2, 3 ಮತ್ತು 4 ನೇ ಕೊರೊನಾ ಅಲೆ ಬಂದರೂ, ಪೂರಕವಾಗಿ ತುಮಕೂರು ಜಿಲ್ಲೆಗೆ ಏನೇನು ಬೇಕು ಎಂಬ ಮಾಹಿತಿ ಸಂಗ್ರಹಸಿ ಸಭೆ ನಡವಳಿಕೆ ಮಾಡಿ, ರಾಜ್ಯ ಮಟ್ಟದ ದಿಶಾ ಸಮಿತಿ ಅಧ್ಯಕ್ಷರು ಹಾಗೂ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಹಾಗೂ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಮನವಿ ಪತ್ರ ಸಲ್ಲಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

ಅಷ್ಟೆ ಅಲ್ಲ ಪತ್ರಕ್ಕೆ ಸ್ಪಂಧಿಸದಿದ್ದರೆ ಜಿಲ್ಲೆಯ ಜನತೆಯ ಪ್ರಾಣ ಉಳಿಸಲು ದೆಹಲಿಗೆ ಹೋಗುವ ಚಿಂತನೆಯನ್ನು ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಸಹ ಭಾಗವಹಿಸಿ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಕುಳಿತು ಅಗತ್ಯವಿರುವ ಎಲ್ಲಾ ಬೇಡಿಕೆಗಳ ಪಟ್ಟಿ ಸಹಿತ ಸಭೆ ನಡವಳಿಕೆ ಮಾಡಲು ಸಲಹೆ ನೀಡಿದ್ದಾರೆ. ದಿಶಾ ಸಮಿತಿ ಉಪಾಧ್ಯಕ್ಷರಾದ ಚಿತ್ರದುರ್ಗ ಲೋಕಸಭಾ ಸದಸ್ಯರಾದ  ಶ್ರೀ ನಾರಾಯಣಸ್ವಾಮಿರವರು ಸಹ ಭಾಗವಹಿಸಿ ಸಲಹೆ ನೀಡಿದ್ದಾರೆ.

ದಿಶಾ ಸಮಿತಿ ಒಂದು ಲೈನ್ ಸಭೆ ನಡವಳಿಕೆ ಮಾಡಿದಂತೆ ಅಧಿಕಾರಿಗಳ ಅಗತ್ಯತೆ ಬಗ್ಗೆ ಪಟ್ಟಿ ಮಾಡಲು ಪೂರ್ಣವಾದ ಸ್ವತಂತ್ರ ನೀಡಿದ್ದೇವೆ. ಬಹುಷ: ದೇಶದ ಯಾವುದೇ ಸಂಸದರು ಹೀಗೆ ಮಾಡಿಲ್ಲ ಎಂಬ ಭಾವನೆ ನನ್ನದು, ಸರಿಯಾದ ಮಾಹಿತಿ ನನಗೆ ಇಲ್ಲ.

ಅದ್ದರಿಂದ ತುಮಕೂರು ಲೋಕಸಭಾ ಸದಸ್ಯರನ್ನು ಹೊರತು ಪಡಿಸಿ ಉಳಿದವರು ಬಿಲ ಸೇರಿದ್ದಾರೆ ಎಂದು ಹೇಳಬಹುದು. ಇದನ್ನು ಸ್ವಲ್ಪ ಬದಲಾವಾಣೆ ಮಾಡಿ, ಉಳಿದ ಮಾಹಿತಿ ನನಗಿಲ್ಲ.

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಆರಂಭಿಸಿರುವ ದಿಶಾ ಸಮಿತಿ ಕೇಂದ್ರ ಸರ್ಕಾರದ ಅನುದಾನ ಮತ್ತು ಯೋಜನೆಗಳಿಗೆ ಸಂವಿಧಾನದ ಒಳ್ಳೆ ಸರ್ವಪಕ್ಷಗಳ ವೇದಿಕೆ. ತಾವು ಮುಖ್ಯ ಮಂತ್ರಿಗಳಾಗಿದ್ದಾಗಲೇ ರಚಿಸಿದ್ದು, ತಾವು ಈ ಸಮಿತಿ ರಚಿಸಲಿಲ್ಲ.

 ಒಂದು ವೇಳೆ ನೀವೂ ಈ ಗೈಡ್ ಲೈನ್ ನೋಡಿದ್ದರೆ ಸಮಿತಿ ರಚಿಸುತ್ತಿದ್ದೀರಿ ಎಂಬ ಭಾವನೆ ಒಂದಾದರೇ, ಕೇಂದ್ರದ ಅನುದಾನದ ಬಗ್ಗೆ ನಾವು ಏಕೆ ಹೇಳಬೇಕು ಎಂಬ ಸದುದ್ದೇಶದಿಂದಲೂ ದಿಶಾ ಸಮಿತಿ ರಚಿಸದೆ ಇರಬಹುದು.

ಎಲ್ಲಾ ಪಕ್ಷಗಳ ಶಾಸಕರು, ಸಂಸದರು ಮತ್ತು ನಮ್ಮಂತವರು ಇದ್ದೇವೆ. ಇಲ್ಲಿ ತಮ್ಮ ಪಕ್ಷದ ಅಭಿಪ್ರಾಯಗಳನ್ನೂ ಹೇಳಬಹುದು, ನಿಮ್ಮ ಪಕ್ಷದ ಶಾಸಕಿ ಶ್ರೀ ಮತಿ ಸೌಮ್ಯ ರೆಡ್ಡಿಯವರು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾಗಿದ್ದಾರೆ. ದಿಶಾ ಸಮಿತಿ ಸಭೆ ಕರೆದು ಚರ್ಚಿಸಲು ಆಗ್ರಹ ಮಾಡುವುದನ್ನು ಬಿಟ್ಟು ಧರಣಿ ಕುಳಿತ್ತಿದ್ದಾರೆ ಇದು ಎಷ್ಟು ಸರಿ ನೀವೇ ಹೇಳಿ ಸಾರ್.

ತುಮಕೂರು ಸಂಸದರ ಬಗ್ಗೆ ಹೀಗೇಕೆ ಸ್ವಾಮಿ.

ಕುಂದರನಹಳ್ಳಿ ರಮೇಶ್

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.