27th July 2024
Share

TUMAKURU:SHAKTHIPEETA FOUNDATION

ಕೊರೊನಾ ಬೆಡ್ ದಂಧೆ ವಿಷಯವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯರವರ ಕಾಯವೈಖರಿಯನ್ನು ಮೆಚ್ಚುವವರು ಒಂದು ವರ್ಗ,

ಹೊರಗುತ್ತಿಗೆ ಆಧಾರದ ಮೇಲೆ ಸುಮಾರು 200 ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು ಕೇವಲ 17 ಜನ ಒಂದೇ ಕೋಮಿನ ಜನರ ಬಗ್ಗೆ ಏಕೆ ಆರೋಪ ಎಂದು ಟೀಕಿಸುವವರು ಒಂದು ವರ್ಗ,

ಆಡಳಿತ ಪಕ್ಷದ ಸಂಸದರಾಗಿ ಮಾಧ್ಯಮಗಳಲ್ಲಿ ಬಹಿರಂಗ ಪಡಿಸುವ ಬದಲು ಮುಖ್ಯ ಮಂತ್ರಿಯವರ ಜೊತೆಯಲ್ಲಿ ಸಮಾಲೋಚನೆ ನಡೆಸಬಹುದಿತ್ತು ಇದು ಮುಖ್ಯ ಮಂತ್ರಿಯವರ ತೇಜೋವಧೆ ಮಾಡುವ ಮಾರ್ಗ ಎನ್ನುವವರು ಒಂದು ವರ್ಗ,

ಮುಖ್ಯ ಮಂತ್ರಿಯವರ ಬಳಿ ಖಾಸಗಿಯಾಗಿ ಚರ್ಚಿಸಿದಾಗ IAS ನವರು ಕಳ್ಳರು ಎಂಬ ಪದದ ಪ್ರಚಾರ ಮಾಡಿ  ಸರ್ಕಾರ ಮತ್ತು IAS ಮಧ್ಯೆ ಬಹುದೊಡ್ಡ ಬಿರುಕು ಮೂಡಿಸುವ ಮೂಲಕ ಮುಖ್ಯ ಮಂತ್ರಿಯವರ ತೇಜೋವಧೆ ಮಾಡುವ ಮಾರ್ಗ ಎನ್ನುವವರು ಒಂದು ವರ್ಗ,

ಒಬ್ಬ ಲೋಕಸಭಾ ಸದಸ್ಯರಾಗಿ ಮಾಹಿತಿ ಪಡೆಯಲು 8-10 ದಿವಸಗಳು ಶ್ರಮ ಪಡಬೇಕಾಯಿತು ಎಂದು ಸಂಸದರೇ ಹೇಳಿಕೆ ನೀಡಿರುವುದನ್ನು ನೋಡಿದರೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದಿಶಾ ಸಮಿತಿ ಮಾರ್ಗದರ್ಶಿ ಸೂತ್ರದ ಪ್ರಕಾರ ದಿಶಾ ಸಮಿತಿ ಸದಸ್ಯರು ಯಾವುದೇ ದಾಖಲೆಗಳನ್ನು, ಯಾವಾಗಬೇಕಾದರು ಪರಿಶಿಲಿಸಬಹುದು. ಸಂಸದರಾಗಿ ಇವರಿಗೆ ಅದು ಸಾದ್ಯಾವಾಗಲಿಲ್ಲವಾ ಎಂದು ಪ್ರಶ್ನೆ ಮಾಡುವವರು ಒಂದು ವರ್ಗ,

ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ರವರ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಯಾರು ಬೇಕಾದರು, ಯಾವುದೇ ದಾಖಲೆ ಪರಿಶೀಲನೆ ಮಾಡಿ ತಮಗೆ ಬೇಕಾದ ದಾಖಲೆ ಪಡೆಯಬಹುದು.  ಸಂಸದರಿಗೆ ದಾಖಲೆ ಪಡೆಯಲು ಕಷ್ಟವಾಯಿತ ಎನ್ನುವವರು ಒಂದು ವರ್ಗ,

ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಕಾಂಗ್ರೆಸ್  ಪಕ್ದದವರು ಎಂದು ಕಾಂಗ್ರೆಸ್ ನಾಯಕರ ಜೊತೆ ಇರುವ ಫೋಟೋಗಳನ್ನು ಹಾಕಿ, ಈ ವಿಚಾರದಲ್ಲಿ ವಿರೋಧ ಪಕ್ಷಗಳ ಮೌನ ಏಕೆ? ಎಂದು ಟೀಕಿಸುವವರು ಒಂದು ವರ್ಗ,

ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳ ಯಾವ ವರದಿ ಸರಿ ಎಂದು ಜನರಿಗೆ ಗೊಂದಲ ಹುಟ್ಟಿಸುವ ಮೂಲಕ ಸತ್ಯವನ್ನು ಸಾಯಿಸುವ ಕೆಲಸ ಆಗಲಿದೆ ಎಂಬ ಭಾವನೆ ಬಹುತೇಕ ಜನರಲ್ಲಿ ಬಂದಾಗಿದೆ. ಗೋವಿಂದ! ಗೋವಿಂದ!! ಗೋವಿಂದಾ!!!