22nd December 2024
Share

TUMAKURU:SHAKTHI PEETA FOUNDATION

ಕೊರೊನಾ ವಿಚಾರದಲ್ಲಿ ಮೊದಲನೇ ಅಲೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಒಳ್ಳೆಯ ಗಟ್ಟಿ ನಿರ್ಧಾರ ಕೈಗೊಂಡಿದ್ದರು. ಎರಡನೇ ಅಲೇ ವೇಳೆಗೆ ಪಂಚ ರಾಜ್ಯಗಳ ಚುನಾವಣೆ ಬಂದಿದ್ದರಿಂದ ಅವರಿಗೆ ಸಮಯ ಆಗಲಿಲ್ಲ.

ಚುನಾವಣೆಗೆ ದೇಶದ ಎಲ್ಲಾ ಭಾಗದ ಜನರು ಪಶ್ಚಿಮ ಬಂಗಾಳಕ್ಕೆ ಬಂದು ಊರಿಗೆ ಹೋದ ನಂತರ ಕೊರೊನಾ ಸುನಾಮಿ ಅಲೆ ಬಂದು ಬಿಟ್ಟಿತು. ಯುಗಾದಿ ಹಬ್ಬಗಳಲ್ಲಿ ಹಳ್ಳಿಯ ಜನ ದುಡ್ಡಿನಾಟ ಆಡಲು ಹೋಗಿ ಊರಿಗೆ ಬಂದ ಹೊರಗಿನ ಜನರೆಲ್ಲರೂ ಕೊರೊನಾ ಹಳ್ಳಿಗಳಿಗೆ ಹಬ್ಬಲು ಕಾರಣವಾಯಿತು.

ದೇಶದ ಎಲ್ಲಾ ರಾಜ್ಯಗಳಿಗೂ ಜನಸಂಖ್ಯೆ ಅಧಾರದಲ್ಲಿ ಲಸಿಕೆ ಹಂಚಿಕೆ ಹಾಗೂ ರೋಗಿಗಿಳ ಸಂಖ್ಯೆವಾರು ಆಕ್ಸಿಜಿನ್, ರೆಮ್ಡಿಸಿವಿರ್, ವೆಂಟಿಲೇಟರ್ ವಿತರಣೆ ಮತ್ತು ರಾಜ್ಯ ಸರ್ಕಾರಗಳಿಗೆ ಬಡ್ಡಿ ರಹಿತ ಸಾಲದ ರೂಪದಲ್ಲಾಗಲಿ ಉಚಿತ ಲಸಿಕೆ ನೀಡಬಹುದಿತ್ತು ಅನ್ನುವುದನ್ನು ಬಿಟ್ಟರೇ ಮೋದಿಯವರು ಇನ್ನೇನು ಮಾಡಲು ಸಾಧ್ಯ ಹೇಳಿ. ನ್ಯಾಯಾಲಯದ ಆದೇಶದ ಮೇರೆಗೆ ಕರ್ನಾಟಕಕ್ಕೆ ಆಕ್ಸಿಜಿನ್ ನೀಡುವ ಬದಲು ಅವರೇ ನಿರ್ಧಾರ ಕೈಗೊಳ್ಳಬಹುದಿತ್ತು ಎಂಬುದು ಬಿಜೆಪಿ ನಾಯಕರವಾದವೂ ಆಗಿದೆ.

ಆದರೂ ರಾತ್ರೋ ರಾತ್ರಿ ಇದ್ಯಾವುದನ್ನು ಹೆಚ್ಚಿಗೆ ಉತ್ಪನ್ನ ಮಾಡಲು ಸಾಧ್ಯವಿಲ್ಲ, ಮೋದಿಯವರ ಹೊರತು ಯಾರೇ ಇದ್ದರೂ ಇಷ್ಟು ಮಾಡಲು ಸಾದ್ಯವಾಗುತ್ತಿರಲಿಲ್ಲ.ಇಷ್ಟಾದರೂ ನೌಕರರ ವೇತನ ಕಡಿತ ಮಾಡಿಲ್ಲ, ರೈತರಿಗೆ ನೀಡುವ ಹಣಕಡಿತ ಮಾಡಿಲ್ಲ.ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅಷ್ಟೇನು ಅನುದಾನ ಕಡಿತ ಮಾಡಿಲ್ಲ.

ಕೇಂದ್ರ ಸರ್ಕಾರವೂ ಆರ್ಥಿಕ ಪರಿಸ್ಥಿತಿಯಲ್ಲಿ ಹದಗೆಟ್ಟಿಲ್ಲ, ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಲ್ಲಿ ಇದ್ದುದರಲ್ಲಿ ಭಾರತವೇ ದೃಢವಾಗಿದೆ ಎಂಬ ಮಾತನ್ನು ಬಿಜೆಪಿ ವಿರೋಧಿಗಳು ಮತ್ತು ಮೋದಿಯವರ ವಿರೋಧಿಗಳಾದ ಶ್ರೀ ಎಂ.ನಾಯರ್ ಒಪ್ಪುತ್ತಾರೆ.

ದೇಶದ ಯಾವುದೇ ವಿರೋಧ ಪಕ್ಷಗಳು ಕೊರೊನಾ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ರಚನಾತ್ಮಕ ಸಲಹೆ ನೀಡಿವೆ ಹೇಳಿ, ಸುಮ್ಮನೆ ಬಾಯಿಗೆ ಬಂದಿದ್ದು ಹೇಳುತ್ತವೆ. ಕೇರಳದಲ್ಲಿ ಮೋದಿಯವರ ಯೋಜನೆಗಳನ್ನು  ಸಮರ್ಪಕವಾಗಿ ಬಳಸಿಕೊಂಡಿದ್ದು, ಕಮ್ಯುನಿಷ್ಟ್ ಸರ್ಕಾರವಿದ್ದರೂ ಮೋದಿಯವರೇ ಪ್ರಶಂಸೆ ಮಾಡಲಿಲ್ಲವೇ, ಅಷ್ಟೆ ಏಕೆ ಆಂತರಿಕವಾಗಿ ಕಮ್ಯುನಿಷ್ಟ್‍ರು ಸಹ ಮೋದಿಯವರ ನಿರ್ಧಾರಗಳನ್ನು ಒಪ್ಪಿಕೊಳ್ಳುತ್ತಾರೆ  ಹೆಸರು ಬರೆಯಬೇಡಿ ಎಂದು ದೆಹಲಿ ನಾಯಕರೊಬ್ಬರು ಹೇಳಿದ ಮನದಾಳದ ಮಾತುಗಳು. 

ಇಂಥಹ ಸಮಯದಲ್ಲಿ ಅನಗತ್ಯವಾಗಿ ಸೋಶಿಯಲ್ ಮಿಡಿಯಾದಲ್ಲಿ ಬೊಬ್ಬೆ ಹೊಡೆಯುವ ಜನರು ಅತ್ಮಾವಲೋಕನ ಮಾಡಿಕೊಳ್ಳಲಿ ಎನ್ನುತ್ತಾರೆ ಮಂಗಳೂರಿನ ಪ್ರದೀಪ್‍ರವರು.

ನಮ್ಮ ಪಕ್ಷದಲ್ಲೂ ಎಲ್ಲವೂ ಸರಿಯಿಲ್ಲ, ನಮ್ಮ ಪಕ್ಷದ ಶ್ರೀ ಬಿ.ಎಸ್.ಯಡಿಯೂರಪ್ಪನವರ ವಿರೋಧಿಗಳ ಕೃಪಾಪೋಷಿತ ಮಂಡಳಿಯವರ ಸೃಷ್ಟಿ ಎಂದು ಬಳ್ಳಾರಿಯ ಕು.ಪ್ರಿಯಾಂಕ ಹೇಳುತ್ತಾರೆ.

ಕೊರೊನಾ ಬಂದು ಜನ ಸಾಯುವ ವಿಚಾರದಲ್ಲೂ ಹೇಗಿದೆ ನೋಡಿ ಒಳ ರಾಜಕಾರಣ.