22nd December 2024
Share

TUMAKURU:SHAKTHI PEETA FOUNDATION

ಭಾರತ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶ್ರೀ ರಾಹುಲ್ ಗಾಂಧಿ ಮತ್ತು ಶ್ರೀಮತಿ ಪ್ರಿಯಾಂಕ ಗಾಂಧಿ ಇನ್ನೂ ಜೀವ ಎಂದರೆ ತಪ್ಪಾಗಲ್ಲ. ಇವರಿಬ್ಬರ ತಲೆಗೆ ಯಾರೋ ವಿಸ್ಥಾ ನಿರ್ಮಾಣದ ಬಗ್ಗೆ ಹುಳು ಬಿಟ್ಟಿದ್ದಾರೆ. ಹೋದಲೆಲ್ಲಾ, ಮೈಕ್ ಕಂಡಾಗಲೇಲ್ಲಾ ವಿಸಾ(ಹೊಸದಾಗಿ ಕಟ್ಟುತ್ತಿರುವ ಪಾರ್ಲಿಮೆಂಟ್ ಕಟ್ಟಡ)  ಏಕೆ ಬೇಕು ಎನ್ನುತ್ತಿದ್ದಾರೆ.

 ಅದನ್ನು ಕಟ್ಟಿಕೊಂಡು ನಿಮಗೇನು, ಕಟ್ಟಿದರೆ ಕಟ್ಟಲಿ ಬಿಡಿ, ನೀವು ಈಗ ಕೇಳಬೇಕಾಗಿರುವುದು ಕೊರೊನಾ ಲಸಿಕೆ, ಆಕ್ಸಿಜಿನ್, ರೆಮ್ಡಿಸಿವಿರ್, ವೆಂಟಿಲೇಟರ್ ಗಳನ್ನು ದೇಶದ ಜನತೆಗೆ ಕೊಡಿ. ನಿಮಗೇಕೆ ಸಾಧ್ಯಾವಾಗಿಲ್ಲ ಮೋದಿ ಎಂಬ ಬಗ್ಗೆ ದೇಶಾದ್ಯಾಂತ ಕೂಗಾಡಿ ಜನ ನಂಬುತ್ತಾರೆ.

ಪ್ರಧಾನಿಯವರಾದ ಮೋದಿಯವರು ಬಹುತೇಕ ಯೋಜನೆಗಳಿಗೆ ಕಾಲಮಿತಿ ನಿಗದಿ ಗೊಳಿಸಿದ್ದಾರೆ, ಇವುಗಳನ್ನು ನಿಡಲು ಕಾಲಮಿತಿ ಅವಧಿ ಘೋಷಣೆ ಮಾಡಿದರೂ ಜನ ಕಾಯುತ್ತಾರೆ, ಅದು ಮಾಡಿಲ್ಲ, ಏಕೆ ಎಂಬುದೇ ರಹಸ್ಯ.

ಇಲ್ಲ ನಿಮ್ಮ ಗುರಿ

ಹಿರಿಯರು  ಇಂತಿಷ್ಟು ಜನ ಸಾಯಬೇಕು.

ವಯಸ್ಕರು ಇಂತಿಷ್ಟು ಜನ ಸಾಯಬೇಕು.

ಮಹಿಳೆಯರು ಇಂತಿಷ್ಟು ಜನ ಸಾಯಬೇಕು.

ಯುವ ಜನಾಂಗ  ಇಂತಿಷ್ಟು ಜನ ಸಾಯಬೇಕು.

ಮಕ್ಕಳು ಇಂತಿಷ್ಟು ಜನ ಸಾಯಬೇಕು.

ರೈತ ಹೋರಾಟಗಾರರು ಇಂತಿಷ್ಟು ಜನ ಸಾಯಬೇಕು.

ಬಿಜೆಪಿಗೆ ಮತ ಹಾಕದವರು ಇಂತಿಷ್ಟು ಜನ ಸಾಯಬೇಕು.

ಎಂಬ ಹಿಡನ್ ಅಜೆಂಡಾ ಇದೆಯಾ ಮೋದಿಯವರೇ ಎಂಬ ಘೋಷಣೆ ಆರಂಭಿಸಿ, ಶ್ರೀ ರಾಹುಲ್ ಗಾಂಧಿ ಮತ್ತು ಶ್ರೀಮತಿ ಪ್ರಿಯಾಂಕ ಗಾಂದಿಯವರೇ.ಎನ್ನುತ್ತಿದ್ದಾರೆ ಕೆಪಿಸಿಸಿ ಸದಸ್ಯರಾದ ಇಕ್ಬಾಲ ಅಹ್ಮದ್ ರವರು