4th February 2025
Share

TUMAKURU:SHAKTHIPEETA FOUNDATION

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ  ಮಾಹಾಮಾರಿಗೆ ಕಡಿವಾಣ ಹಾಕಲೇ ಬೇಕು ಎಂಬ ದೃಢ ನಿರ್ಧಾರ ಮಾಡಿ ವಾರ್ಡ್ ಕಮಿಟಿಗಳಿಗೆ ಇಂದು ಅಧಿಕೃತವಾಗಿ 30 ನೇವಾರ್ಡ್ ನಿಂದ ಚಾಲನೆ ನೀಡಲಾಗಿದೆ.

30 ನೇವಾರ್ಡ್‍ನ ಪಾಲಿಕೆ ಸದಸ್ಯ ಶ್ರೀ ವಿಷ್ಣು ತನ್ನ ವಾರ್ಡ್ ನಿಂದ ಆರಂಭಿಸಿ ವಿಷ್ಣುವಿನ ಸುದರ್ಶನ ಚಕ್ರವನ್ನು ಕೊರೊನಾ ಮಾರಿಯ ಮೇಲೆ ಬಿಡಲು ಸನ್ನದ್ದರಾಗಿದ್ದಾರೆ.

ಮೇಯರ್ ಶ್ರೀ ಕೃಷ್ಣಪ್ಪನವರು, ಆಯುಕ್ತೆ ಶ್ರೀ ಮತಿ ರೇಣುಕರವರು ಮತ್ತು ಆಯಾ ವಾರ್ಡ್‍ನ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ನಗರ ಪಾಲಿಕೆಯ 35 ವಾರ್ಡ್ ಕಮಿಟಿಗಳ ಸದಸ್ಯರು ವ್ಯಾಪ್ತಿಯಲ್ಲಿರುವ ಕೊರೊನಾ ಸೋಂಕಿತರ ಮನೆ, ಮನೆಗೆ ಹೋಗಿ ಮನೆಯಲ್ಲಿಯೇ ಐಸೋಲೇಷನ್ ಆಗಿರಲು ಇಷ್ಟ ಪಡುತ್ತಿರಾ ಅಥವಾ ಕೋವಿಡ್ ಕೇರ್ ಸೆಂಟರ್‍ಗೆ ಬನ್ನಿ ನಿಮಗೆ ಎಲ್ಲಾ ಸೌಕರ್ಯ ಮಾಡುತ್ತೇವೆ ಎಂಬ ಆತ್ಮಸ್ಥೆರ್ಯ ತುಂಬುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಈ ಕೆಲಸವನ್ನು ಮೊದಲೇ ಆರಂಭ ಮಾಡಬಹುದಿತ್ತು ಎಂಬ ಸಿಟ್ಟು ನಗರದ ಜನತೆಗೆ ಇದ್ದರೂ, ಈಗಲಾದರೂ ಒಳ್ಳೆಯ ಕೆಲಸಕ್ಕೆ ಪಾಲಿಕೆ ಕೈ ಹಾಕಿದೆ ಎಂಬ ನೆಮ್ಮದಿ ಬಂದಿದೆ, ಇಂದು ಅಥವಾ ನಾಳೆ ವೇಳೆಗೆ ಪ್ರತಿಯೊಬ್ಬ ಸೋಂಕಿತರನ್ನು ಕಮಿಟಿ ಸದಸ್ಯರು ಭೇಟಿ ಮಾಡಲಿದ್ದಾರಂತೆ.

ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರಿಗೆ ಪ್ರತಿ ದಿನದ, 35 ವಾರ್ಡ್‍ಗಳ  ಡಿಜಿಟಲ್ ವರದಿಯನ್ನು ನೀಡಲು ಆಯುಕ್ತರು ಒಂದು ತಂಡವನ್ನೆ ರಚಿಸಲಿದ್ದಾರೆ. ಯಾವ ಸೋಂಕಿತರು ನಮಗೆ ಅನ್ಯಾಯವಾಗಿದೆ ಎಂಬ ಮಾತು ಬರಬಾರದು ಇದ್ದುದರಲ್ಲಿ ಎಲ್ಲಾ ಸೌಕರ್ಯ ನೀಡಲೇ ಬೇಕು ಎಂಬ ಸಲಹೆಯನ್ನು ಶಾಸಕರು ಸೂಚಿಸಿದ್ದಾರೆ.

ಸಂಸದ ಶ್ರೀ ಜಿ.ಎಸ್.ಬಸವರಾಜ್‍ರವರ  ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿಯ ನಿರ್ಣಯವನ್ನು ಮೇಯರ್ , ಆಯುಕ್ತೆ ಮತ್ತು ಪಾಲಿಕೆ ಸದಸ್ಯರು ಶೀಘ್ರವಾಗಿ ಕಾರ್ಯರೂಪಕ್ಕೆ ತಂದಿದ್ದಾರೆ, ತಮಗೆ ಅಭಿನಂದನೆಗಳು.

 ನಿಮಗೆ ತಾತ್ಕಾಲಿಕ ಆಶಾ ಕಾರ್ಯಕರ್ತರ ಅಗತ್ಯ ಇದ್ದಲ್ಲಿ ವಾರ್ಡ್‍ವಾರು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದಲ್ಲಿ ಹಣ ಬಿಡುಗಡೆ ಮಾಡುವ ಜವಾಬ್ಧಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರದ್ದು. ಅವರು ಈಗಾಗಲೇ ದಿಶಾ ಸಭೆಯಲ್ಲಿಯೇ ಘೋಷಣೆ ಮಾಡಿದ್ದಾರೆ ಎಂಬ ಅಂಶವನ್ನು ಮತ್ತೊಮ್ಮೆ ನಿಮ್ಮ ಗಮನಕ್ಕೆ ತರಬಯಸುತ್ತೇನೆ.