27th July 2024
Share

TUMAKURU:SHAKTHIPEETA FOUNDATION

ಕರ್ನಾಟಕ ಕೊರೊನಾ ರಾಜಕಾರಣ ನೋಡಿದರೆ, ಸೂಕ್ಷ್ಮವಾಗಿ ಗಮನಿಸಿದರೆ, ಕರ್ನಾಟಕ ರಾಜ್ಯದ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಶ್ರೀ ಸಿದ್ಧರಾಮಯ್ಯನವರಾದರೆ, ಮುಖ್ಯ ಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ವಿರೋಧ ನಾಯಕ ಬಿಜೆಪಿ ಪಕ್ಷದ ಶ್ರೀ ಬಿ.ಎಲ್.ಸಂತೋಷ್ ಎಂದರೆ ತಪ್ಪೆ?

ಮುಖ್ಯ ಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಸರ್ವಪಕ್ಷಗಳ ಮುಖ್ಯಮಂತ್ರಿಯವರು ಎಂಬ ಪಟ್ಟವನ್ನು ಬಿಜೆಪಿ ಪಕ್ಷದ ಮುಖಂಡರಾದ ಶ್ರೀ ಬಸವರಾಜ್ ಪಾಟೀಲ್ ಯತ್ನಾಳ್ ಘೋಷಣೆ ಮಾಡಿದ್ದಾರೆ. ಇದರ ಹಿನ್ನಲೆಯೂ ಬಿ.ಎಲ್.ಸಂತೋಷ್ ಪಾತ್ರ ಇದೆ ಎನ್ನುತ್ತಾರೆ.

ಸಂಸದ ಶ್ರೀ ತೇಜಸ್ವಿ ಸೂರ್ಯರವರ ಬೆಡ್ ದಂಧೆ ಭರ್ಜರಿ ಭೇಟಿಯ ಕೈವಾಡ ಬಿ.ಎಲ್.ಸಂತೋಷ್ ರವರದ್ದೆ ಎನ್ನುತ್ತಾರೆ, ಇಲ್ಲಿ ಒಂದು ಕೋಮಿನ ಪಟ್ಟಿ ಬಿಡುಗಡೆ ಮಾಡಿ ಅಡಕ ಕತ್ತರಿಯಲ್ಲಿ ತೇಜಸ್ವಿ ಸೂರ್ಯರವರನ್ನು ಸಿಕ್ಕಿಹಾಕಿಸಿದ್ದು  ಶ್ರೀ ಬಿ.ಎಸ್.ಯಡಿಯೂರಪ್ಪನವರ ಕಿಚನ್ ಕ್ಯಾಬಿನೇಟ್ ಶ್ರೀ ಸಿದ್ಧರಾಮಯ್ಯನವರು, ಶ್ರೀ ಡಿ.ಕೆ.ಶಿವಕುಮಾರ್‍ರವರು ಮತ್ತು ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು ಎಂದು ಒಂದು ಬಣ ಹೇಳಿದರೆ, ಸೂರ್ಯರವರ ಸ್ಪೀಡ್‍ಗೆ ಬ್ರೇಕ್ ಹಾಕಿದ್ದು ರಹಸ್ಯ ತಂಡ ಎನ್ನುತ್ತಾರೆ.  ಹೇಗಿದೆ ನೋಡಿ ಕೊರೊನಾ ರಾಜಕಾರಣ.

ಚಾಮರಾಜನಗರದ ಆಕ್ಸಿಜಿನ್ ಪ್ರಕರಣಕ್ಕೆ ನಿಜವಾಗಿ ಬಲಿಯಾಗಿದ್ದು ಸಜ್ಜನ ರಾಜಕಾರಣೆ ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸುರೇಶ್ ಕುಮಾರ್ ರವರು, ಶ್ರೀ ಸಿ.ಟಿ.ರವಿಯವರು ಪ್ರಕರಣವನ್ನು ಖಂಡನೆ ಮಾಡುವ ಹಿಂದಿರುವ ನಿಗೂಢ ರಹಸ್ಯವೂ  ಬಿ.ಎಲ್.ಸಂತೋಷ್ ಪಾತ್ರವಂತೆ. 

ಶ್ರೀ ಬಿ.ಎಲ್.ಸಂತೋಷ್‍ರವರ ಅಭಿಮಾನಿಗಳು ಹೇಳುವ ಪ್ರಕಾರ ಧೈರ್ಯವಾಗಿ, ನೇರವಾಗಿ, ಆಖಾಡಕ್ಕೆ ಇಳಿಯದೇ ನಮ್ಮ ನಾಯಕರು ಹಿನ್ನಲೆ ಗಾಯಕರಾಗಿ ಸೋಲು ಅನುಭವಿಸುತ್ತಿದ್ದಾರೆ, ಇದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಂದಲೂ ಆರಂಭವಾಗಿದೆ ಎನ್ನುತ್ತಾರೆ.

ಶ್ರೀ ರಾಹುಲ್ ಗಾಂದಿಯವರು ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವಧಿಯಲ್ಲಿ 10 ವರ್ಷಗಳ ಕಾಲ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರೆ, ಇಂದು ದೊಡ್ಡ ನಾಯಕರ ಪಟ್ಟಿಯಲ್ಲಿ ಅವರ ಹೆಸರು ಇರುತ್ತಿತ್ತು.

ಹಾಗೆಯೇ ಪಕ್ಷದ ಸಂಘಟನಾ ಚತುರ, ವಿಷಯಗಳ ಜ್ಞಾನ ಭಂಡಾರ ವಾಗಿರುವ ಶ್ರೀ ಬಿ.ಎಲ್.ಸಂತೋಷ್ ರವರು ಯಾವುದೇ ಚುನಾವಣಾ ರಾಜಕಾರಣಕ್ಕೆ ಇಳಿಯದೆ ಇರುವುದು, ಅವರ ಎಲ್ಲಾ ಪಟ್ಟುಗಳನ್ನು ಸೋಲಿಸಿದೆ. ದಿವಂಗತ ಅನಂತಕುಮಾರ್‍ರವರ ಸ್ಥಾನವನ್ನು ತುಂಬುವ ಅವಕಾಶ ಶ್ರೀ ಬಿ.ಎಲ್.ಸಂತೋಷ್‍ರವರು ಮತ್ತು ಶ್ರೀ ಪ್ರಹ್ಲಾದ್ ಜೋಷಿಯವರಿಗೆ ಇದೆ. ಭವಿಷ್ಯದಲ್ಲಿ ಬೆಳೆಯುವ ಅವಕಾಶದತ್ತ ಸಾಗಿದ್ದ ಸಂಸದ ಶ್ರೀ ತೇಜಸ್ವಿ ಸೂರ್ಯರವರಿಗೆ ಯಾವುದೋ ಕೈವಾಡ ತುಳಿಯಲು ಹೊರಟಿದೆ ಎನ್ನುತ್ತಾರೆ ಬ್ರಾಹ್ಮಣ ಸಮಾಜದ ಶ್ರೀ ಬಾಲಾಜಿಯವರು.

ಬಿಜೆಪಿ ಪಕ್ಷದ ಬ್ರಾಹ್ಮಣರಲ್ಲೂ ಅನಂತಕುಮಾರ್ ಬಣ ಮತ್ತು ಬಿ.ಎಲ್.ಸಂತೋಷ್ ಬಣ ಒಳಗೊಳಗೆ ಕತ್ತಿ ಮಸೆಯುತ್ತಿದೆಯಂತೆ. ಅನಂತಕುಮಾರ್‍ರವರು ಮಾಜಿ ಮುಖ್ಯ ಮಂತ್ರಿಯಾಗದೇ ಪರಲೋಕ ತ್ಯಜಿಸಿದರಲ್ಲಾ ಎಂಬ ನೋವು ನನಗೂ ಇದೆ. ಬಹುತೇಕ ರಾಜ್ಯದ ಎಲ್ಲಾ ಪಕ್ಷದ ನಾಯಕರುಗಳು ಈ ಮಾತನ್ನು ಹೇಳುತ್ತಾರೆ.

ಶ್ರೀ ಬಿ.ಎಸ್.ಯಡಿಯೂರಪ್ಪನವರ ನಂತರದ ರಾಜಕಾರಣಕ್ಕೆ ದಿವಂಗತ ಮಾಜಿ ಮುಖ್ಯಮಂತ್ರಿಯವರಾದ ಜೆ.ಹೆಚ್.ಪಟೇಲ್ ರವರು ಹೇಳುತ್ತಿದ್ದ ಭಾಷೆಯಲ್ಲಿ ಈಗ ಬೀಳುತ್ತೆ, ಆಗ ಬೀಳುತ್ತೆ, ಎಂದು ಹಿಂದೆ, ಹಿಂದೆಯೇ ನಾಯಿ ಹೋದಂತೆ  ಕಾಯುತ್ತಿರುವವರ ದಂಡೇ ಇದೆ. ಕೊರೊನಾದಲ್ಲೂ ರಾಜಕಾರಣ, ಬಲಿಯಾದವರೂ ಜನರು ನೋಡಿ ಸ್ವಾಮಿ ನಾವಿರೋದೆ ಹೀಗೆ ಎನ್ನುತ್ತಾರೆ ರಾಜಕಾರಣಿಗಳು.