4th February 2025
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿಹಿಡಿದು, ಸುಪ್ರೀಂ ಕೋರ್ಟ್ ನಿತ್ಯ ಕರ್ನಾಟಕ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಮ್ಲಜನಕ ನೀಡಲು ಆದೇಶ ನೀಡುವ ಮೂಲಕ ಕರ್ನಾಟಕ ರಾಜ್ಯದ ಕೊರೊನಾ ಸೋಂಕಿತರ ನೆರವಿಗೆ ಬಂದಾಂತಾಗಿದೆ.

ಇನ್ನೂ ಮುಂದೆ ರೆಮ್ಡಿಸಿವಿರ್, ಔಷಧಿ, ವೆಂಟಿಲೇಟರ್‍ಗಳನ್ನು ಸೋಂಕಿತರ ಸಂಖ್ಯೆ ಆಧಾರಿತ 37 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಸಾಮಾಜಿಕ ನ್ಯಾಯದಡಿ ಸಮಾನವಾಗಿ ಹಂಚಿಕೆ ಮಾಡಿ ಹಾಗೂ ಲಸಿಕೆಗಳನ್ನು ಸಹ ಆಯಾ ರಾಜ್ಯದ ಜನಸಂಖ್ಯೆ ಆಧಾರಿತ ಹಂಚಿಕೆ ಮಾಡಿ, ಯಾವುದೇ ರಾಜ್ಯಕ್ಕೆ ತಾರತಮ್ಯ ಆಗಬಾರದು ಎಂದರೆ ಮುಖ್ಯಮಂತ್ರಿಗಳು, ಸಂಸದರು, ಶಾಸಕರ ಪಾತ್ರ ?

ಕೊರೊನಾ ವಿಷಯದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಸೋತು ನೆಲಕಚ್ಚಿದರೆ, ನ್ಯಾಯಾಂಗ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಕೆಲಸ ಮಾಡಿದೆ ಎಂದರೆ ತಪ್ಪಾಗಲಾರದು. ಕೊನೆಗೂ ಸುಪ್ರೀಂ ಆಕ್ಸಿಜನ್ ದೊರಕಿದಂತಾಗಿದೆ.