11th December 2024
Share

TUMAKURU:SHAKTHIPEETA FOUNDATION

ಲಿಂಗಾಯಿತರ ಒಳಸುಳಿ ಯಲ್ಲಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ತತ್ತರಿಸಿ ಹೋಗಿದ್ದಾರಂತೆ, ಲಿಂಗಾಯಿತರ ಪರಮೋಚ್ಚ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ, ಯಾವುದೇ ಪಕ್ಷದವರಾಗಿದ್ದರೂ ಬಿ.ಎಸ್.ಯಡಿಯೂರಪ್ಪನವರಿಗೆ ಇದೂವರೆಗೂ ಬೆಂಬಲ ನೀಡಿದ್ದಾರೆ.

ಪ್ರಸ್ತುತ ಹೆಸರಿಗೆ ಮಾತ್ರ ಶ್ರೀ ಬಿ.ಎಲ್. ಸಂತೋಷ್‍ರವರ ರಾಜಕೀಯ ಎಂದರೂ, ಅವರ ಟೀಂ ಜೋತೆ ಸೇರಿ ಈ ಭಾರಿ ಬಹುತೇಕ ಲಿಂಗಾಯಿತ ನಾಯಕರು ಯಡಿಯೂರಪ್ಪನರಿಗೆ ಕೈಕೊಡಲು ಸಜ್ಜಾಗಿದ್ದಾರಂತೆ.

ಬಿಜೆಪಿ ಬಿಟ್ಟು ಕೆಜಿಪಿ ಕಟ್ಟಿದಾಗ ಜೊಳ್ಳುಗಳೆಲ್ಲಾ ಹೋಗಿ ಗಟ್ಟಿ ಲಿಂಗಾಯಿತರು ಮಾತ್ರ ಬಿ.ಎಸ್.ಯಡಿಯೂರಪ್ಪನವರ ಬಳಿ ಇದ್ದರಂತೆ. ಈಗ ಮತ್ತೆ ಅದೇ ಜೊಳ್ಳು ಲಿಂಗಾಯಿತರು ಇವರ ಸುತ್ತ ಮುತ್ತ ಇದ್ದು, ಅಂದು ಜೀವಕ್ಕೆ ಜೀವ ಕೊಟ್ಟವರು ಅಬ್ಬೆಪಾರಿಗಳಾಗಿದ್ದರಂತೆ.

ಇದರ ಭಾಗವೇ ಬೆಳಗಾವಿಯಲ್ಲಿ ಲೀಡ್ ನಾಲ್ಕು ಲಕ್ಷದಿಂದ ನಾಲ್ಕು ಸಾವಿರ ಅಂತರ ಕುಸಿದಿದ್ದು.  ಮೊದಲು ಮುಖ್ಯ ಮಂತ್ರಿಗಳಾಗಿದ್ದಾಗ ಶ್ರೀಮತಿ ಶೋಭಾರವರ ಮೇಲೆ ಗೂಬೆ ಕೂರಿಸಿದ್ದವರು, ಈ ಭಾರಿ ಶ್ರೀ ಬಿ.ವೈ.ವಿಜಯೇಂದ್ರರವರ ಮೇಲೆ ಗೂಬೆಕೂರಿಸಿದ್ದಾರಂತೆ.

ಬಿ.ಎಸ್.ಯಡಿಯೂರಪ್ಪನವರು ಮಾತ್ರ ಈಗಲೂ ಒಳ್ಳೆಯವರಂತೆ ಆದರೇ ಅವರ ಮಗನಿಂದ ನಾವು ಬದಲಾಗೋಣ ಎಂಬ ಚೈನ್‍ಲಿಂಕ್ ದಿನ, ದಿನಕ್ಕೆ ಬೆಳೆಯುತ್ತಲೇ ಇದೆಯಂತೆ.

ಬಿಜೆಪಿಯಲ್ಲಿ ಮುಖ್ಯ ಮಂತ್ರಿಗಳಾಗಿದ್ದವರಲ್ಲಿ ಲಿಂಗಾಯಿತರ ಕೋಟಾ, ಒಕ್ಕಲಿಗರ ಕೋಟಾ ಮುಗಿದಿದೆ, ಮತ್ತೆ ಈ ಭಾರಿ ಮಾಜಿ ಮಂತ್ರಿ ದಿವಂಗತ ಅನಂತ್ ಕುಮಾರ್ ಅವರ ಅನ್ಯಾಯ ಸರಿದೂಗಿಸಲು ಬ್ರಾಹ್ಮಣರಿಗೆ ಕೊಡಲಿ ಅಥವಾ ದಲಿತ ಟ್ರಂಪ್ ಗಾಗಿ ದಲಿತರಿಗೆ ಕೊಡಲಿ ಎಂಬ ಸಲಹೆ ಲಿಂಗಾಯಿತರ ನಾಯಕರದ್ದಾಗಿದೆಯಂತೆ.

ಕೊರೊನಾ ಹಿನ್ನಲೆಯಲ್ಲಿ ಕೇಂದ್ರದ ಜೊತೆ ನಿಕಟ ಸಂಪರ್ಕ, ರಾಜಕೀಯದ ಅನುಭವ ಇರುವ ಶ್ರೀ ಪ್ರಹ್ಲಾದ ಜೋಷಿಯವರಿಗೆ ಹೆಚ್ಚಿನ ಜನರ ಒಲವು ಇದೆಯಂತೆ. ಆರ್.ಎಸ್.ಎಸ್, ಶ್ರೀ ಬಿ.ಎಲ್.ಸಂತೋಷ್ ಪರವಿದ್ದರೂ ಜೋಷಿಯವರ ಕಡೆಗೂ ಒಲವು ತೋರಿದ್ದಾರೆ ಎಂಬ ಗುಸು, ಗುಸು ಇದೆಯಂತೆ.

ಇವರಿಬ್ಬರು ಕಿತ್ತಾಡಿದರೆ ಶ್ರೀ ಗೋವಿಂದಕಾರಜೋಳವರಾದರೇ ಹೇಗೆ ಎಂಬ ಚಿಂತನೆಯು ಉನ್ನತ ಮಟ್ಟದಲ್ಲಿಯಂತೆ. ಹೈಕಮಾಂಡ್ ತಲೆಯಲ್ಲಿ ಗೌಪ್ಯ ಹೆಸರೊಂದು ಇದೆಯಂತೆ.

ಲಿಂಗಾಯಿತರ ಅಭಿವೃದ್ಧಿ ನಿಗಮ ಮಾಡಿದ ಪರಿಣಾಮ ಇತರೆ ಜಾತಿಯ ನಾಯಕರು ಒಳಗೊಳಗೆ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಕುದಿಯುತ್ತಿದ್ದಾರಂತೆ.

ಬಿ.ಎಸ್.ಯಡಿಯೂರಪ್ಪನವರಿಗೆ ಲಿಂಗಾಯಿತ ಪದವೇ ಮುಳುವಾಗುತ್ತದೆಯೋ ಅಥವಾ ಅವರೆನ್ನಲ್ಲಾ ತನ್ನ ಚಾಣಾಕ್ಷ ತನದಿಂದ ಒಲಿಸಿಕೊಳ್ಳುತ್ತರೋ ನೋಡಬೇಕು ಎನ್ನುತ್ತಾರೆ ಅವರ ರಾಜಕೀಯ ವಿರೋಧಿಗಳು.

ಲಿಂಗಾಯಿತರಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ವಿರೋಧ ಮಾಡುವವರಲ್ಲಿಯೇ ಮೂರು ಬಣಗಳಿವೆಯಂತೆ, ಇದು ಬಿ.ಎಸ್.ಯಡಿಯೂರಪ್ಪನವರಿಗೆ ವರದಾನವಾಗಿದ್ದರೂ, ಒಂದು ವೇಳೆ ಇವರೆಲ್ಲರ ಸಹಕಾರ ಪಡೆದರೇ ಮುಂದಿನ ಸಿಎಂ ಜೋಷಿಯವರೇ ಎಂಬ ಮಾತು ದೆಹಲಿ ಮಟ್ಟದ ನಾಯಕರದ್ದಾಗಿದೆಯಂತೆ.

ನೋಡಿ ಇದು ಹೇಗಿದೆ ಲಿಂಗಾಯತ ನಾಯಕರನ್ನು ಲಿಂಗಾಯಿತ ನಾಯಕರೇ ಮುಗಿಸಲು ಹೊರಟಿದ್ದಾರೆ. ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೆಗೌಡರವರನ್ನು ಮುಗಿಸಿದ್ದು ಒಕ್ಕಲಿಗರಂತೆ ಇವರ ಅಣೆ ಬರಹ ಯಾವ ಜನಾಂಗ ಬೆಳೆಸಿ ಎತ್ತಿ ಮುದ್ದಾಡಿದ್ದರೋ ಅವರೇ ಬೆಳಸಿದ ಮರವನ್ನು ಕಡಿಯಲು ಹೊಟಿರುವುದು ಒಂದು ವಿಸ್ಮಯವೇ ಸರಿ.

ಪಾಪ ಬಿ.ಎಸ್.ಯಡಿಯೂರಪ್ಪನವರು ತನ್ನ ಕುರ್ಚಿಯನ್ನು ಉಳಿಸಿಕೊಳ್ಳಲು ಶ್ರಮಿಸುವುದರ ಜೊತೆಗೆ, ಕೊರೊನಾ ಮಾಹಾಮಾರಿಯನ್ನು ತೊಲಗಿಸಲು ಹಗಲಿರಳು ಶ್ರಮಿಸುತ್ತಿದ್ದಾರೆ. ಶತ್ರುಗಳು ಬಗಲಿನಲ್ಲಿದ್ದಾರೆ ಎಂಬುದು ಮುಖ್ಯ ಮಂತ್ರಿಯವರಿಗೆ ತಿಳಿದೆ ಇರುತ್ತದೆ.

ವಿಜಯೇಂದ್ರ ಮಹಿಮೆಯನ್ನು ಅಷ್ಟು ಸುಲಭವಾಗಿ ತೆಗೆದು ಕಾಕುವ ಆಗಿಲ್ಲ, ಎಲ್ಲಾ ರಾಜಕೀಯ ಪಟ್ಟುಗಳು ಅವರಲ್ಲಿವೆ ಇವೆ ಎನ್ನುತ್ತಾರೆ ಅವರ ಅಭಿಮಾನಿಗಳ ದಂಡು, ಅವರನ್ನೇ ಉಪಮುಖ್ಯಮಂತ್ರಿ ಮಾಡಿದರೆ ಲಿಂಗಾಯಿತರೇ ಠುಸ್ ಪಟಾಕಿ ಆಗುತ್ತಾರೆ ಎಂಬ ನಂಬಿಕೆ ಕೇಂದ್ರದ ನಾಯಕರಿಗಿದೆಯಂತೆ.

ಕೊರೊನಾ ಸಾವಿನ ಮನೆಯಲ್ಲಿ ರಾಜಕೀಯ ಹತ್ಯೆ?

ಮಾಜಿಮುಖ್ಯ ಮಂತ್ರಿ ಶ್ರೀ ಸಿದ್ಧರಾಮಯ್ಯನವರ ಅಭಿಮಾನಿಗಳು ಮಾತ್ರ ಶ್ರೀಬಿ.ಎಸ್.ಯಡಿಯೂರಪ್ಪನವರನ್ನು ಕಿತ್ತು ಹಾಕಿದರೇ  ಮುಂದಿನ ಮುಖ್ಯ ಮಂತ್ರಿ ಸಿದ್ದುನೇ ಎನ್ನುತ್ತಿದ್ದಾರಂತೆ.