27th July 2024
Share

TUMAKURU:SHAKTHI PEETA FOUNDATION

ಸಂಸದರ ಮತ್ತು ಶಾಸಕರ ಕಚೇರಿ ಕೋವಿಡ್ ಟಾಸ್ರ್ಕ್ ಪೋರ್ಸ್ ಫೇಸ್ ಬುಕ್ ಅಕೌಂಟ್

ಸೋಶಿಯಲ್ ಮೀಡಿಯಾಗಳಲ್ಲಿ ನಮ್ಮ ಶಾಸಕರು, ಸಂಸದರು ಇಂದ್ರ ಚಂದ್ರ ಎಂದು ಬಿಂಬಿಸುವುದು ಪ್ರಪಂಚದ್ಯಾಂತ ವಾಡಿಕೆಯಾಗಿದೆ. ವಿಧಾನಸಭಾ ಕ್ಷೇತ್ರವಾರು  ಒಂದು ಕೋವಿಡ್ ಟಾಸ್ರ್ಕ್ ಪೋರ್ಸ್ ಫೇಸ್ ಬುಕ್ ಅಕೌಂಟ್ ಮಾಡಿ, ಶಾಸಕರ, ಸಂಸದರ, ಸಚಿವರ ಕೈಯಲ್ಲಿ ಚಾಲನೆ ಕೊಡಿಸಿ, ಆಯಾ ಕೇತ್ರದ ಎಲ್ಲಾ ಗ್ರಾಮಪಂಚಾಯಿತಿಗಳ ಮಟ್ಟದ ಟಾಸ್ಕ್ ಪೋರ್ಸ್ ಮತ್ತು ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್‍ಗಳ ಡೇಟಾ ಆಪರೇಟರ್ ಅಪ್ ಡೇಟ್ ಮಾಡಲಿ.

ಯಾವ ಊರಿನಲ್ಲಿ ಎಷ್ಟು ಕೇಸ್ ಗಳಿವೆ ಎಂಬ ತಾಜಾ ಮಾಹಿತಿ ದೊರೆಯಲಿದೆ. ಸೋಂಕಿತರೆ ಅವರ ಅಭಿಪ್ರಾಯ ಅಪ್ ಡೇಟ್ ಮಾಡುತ್ತಾರೆ, ನಮಗೆ ಯಾವ ರೀತಿ ನೋಡಿಕೊಳ್ಳುತ್ತಾರೆ ಅಥವಾ ತೊಂದರೆ ಆಗಿದೆಯಾ ಇತ್ಯಾದಿ, ಗ್ರೌಂಡ್ ತಾಜಾ ಮಾಹಿತಿ ದೊರೆಯಲಿದೆ. ಯಾವ ಗ್ರಾಮದಿಂದ ಅಪ್ ಲೋಡ್ ಮಾಡಿಲ್ಲವೋ ಅವರನ್ನು ಫೋನ್ ಮೂಲಕ ಪ್ರಶ್ನೆ ಮಾಡಿ ತಿಳಿಸಿ, ಅಧಿಕಾರಿಗಳು ಸಹ ಸೋಕಿತರ ಪ್ರಶ್ನೆಗಳಿಗೆ ಅಲ್ಲಿಯೇ ಉತ್ತರ ನೀಡಲಿ. ಆಶಾ ಕಾರ್ಯಕರ್ತರ ಅಭಿಪ್ರಾಯ , ಪಿಡಿಓಗಳ ಅಭಿಪ್ರಾಯ, ಜನರ ಸಲಹೆ ಎಲ್ಲವೂ ಪಾರದರ್ಶಕವಾಗಿರುತ್ತದೆ.  ಅವರಿಗೆ ದೈರ್ಯ ಇಲ್ಲದೆ ಇದ್ದರೆ ನೀವೆ ಶಾಸಕರ ಮಾತುಗಳಿಂದ ಹೇಳಿಸಿ.

 ಇದರಿಂದ ಜನರಿಗೆ ಆತ್ಮಸ್ಥೈರ್ಯ ಬರಲಿದೆ, ನಾವು ಹೇಳಿದ್ದನ್ನು ನಮ್ಮ ಶಾಸಕರು,ಸಂಸದರು, ಸಚಿವರು ಕೇಳುತ್ತಾರೆ ಎಂಬ ಸುದ್ದಿಯೇ ಅರ್ಧ ಕಾಯಿಲೆ ವಾಸಿಯಾಗುತ್ತೆ. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ ಸಂಸದರ ಆದರ್ಶ ಯೋಜನೆ ಮಾಹಿತಿಗೆ ಒಂದು ವಾಟ್ಸ್‍ಅಫ್‍ಗ್ರೂಪ್ ಮಾಡಿದ್ದಾರೆ. ಅಲ್ಲಿನ ಬಿಲ್ ಕಲೆಕ್ಟರ್ ಮಾಹಿತಿ ಅಫ್ ಡೇಟ್ ಮಾಡುತ್ತಿದ್ದಾರೆ.

ನನಗೆ ಪ್ರಶ್ನೆ ಮಾಡಿದ ಜನರೇ ಸೋಶಿಯಲ್ ಮೀಡಿಯಾದಲ್ಲಿ ಖುಷಿಯಾಗಿ ಈ ರೀತಿ ಕೆಲಸ ಮಾಡಿ ಎಂಬ ಮಾತು ಆಡಿದ್ದಾರೆ, ಇದರಿಂದ ಗ್ರಾಮ ಪಂಚಾಯಿತಿ ನೌರರಿಗೂ ತೃಪ್ತಿ, ಜನರಿಗೂ ಸಮಾಧಾನ, ನಿಮಗೂ ಸಮಾಧಾನವಾಗಲಿದೆ. ನನಗಂತು ತೃಪ್ತಿ ಇದೆ.

ಸಭೆಗಳ ಪೋಟೋ ಹಾಕಲಿ, ಸ್ಯಾನಿಟೈಸರ್ ಮಾಡುವ ಫೋಟೋ ಹಾಕಲಿ, ಗುಣಮುಖರಾಗಿರುವವರ ಅಭಿಪ್ರಾಯ ಹಾಕಲಿ, ಒಳ್ಳೆಯ ದೈರ್ಯ ತುಂಬುವ ಮಾತುಗಳನ್ನು ಸಚಿವರಿಂದ, ಸಂಸದರಿಂದ,ಶಾಸಕರಿಂದ, ಜಿಲ್ಲಾಧಿಕಾರಿಗಳಿಂದ, ಸಿಇಓರವರಿಂದ, ದಿಹೆಚ್‍ಓ ರವರಿಂದ  ಹೇಳಿಸಿ, ಸಂಘ ಸಂಸ್ಥೆಗಳ ದಾನಗಳ ಬಗ್ಗೆ ಮಾಹಿತಿ ಕೊಡಿ, ಕೋವಿಡ್ ಕೇರ್ ಸೆಂಟರ್ ಮಾಹಿತಿ ನೀಡಿ, ಹೀಗೆ ಒಳ್ಳೆಯ ಕೆಲಸ ಮಾಡ್ರಪ್ಪ ಆಪ್ತಕಾರ್ಯದರ್ಶಿ, ಆಪ್ತಸಹಾಯಕ, ಗನ್ ಮ್ಯಾನ್, ಡ್ರೈವರ್ ಎಲ್ಲಾ ಸೇರಿ ಸಂಘಟಿತರಾಗಿ ಮಾಡಿ. ಇದು ಒಂದು ದೇಶ ಸೇವೆ.

    ಸಂಸದರ ಮತ್ತು ಶಾಸಕರ ಕಚೇರಿಗಳು ಈ ಬಗ್ಗೆ ವಿಶೇಷ ಗಮನ ಹರಿಸುವುದು ಒಳ್ಳೆಯದು. ಇವರೆಲ್ಲಾ ಏನು ಮಾಡುತ್ತಾರೆ ನೊಡೊಣ!