13th June 2024
Share

TUMAKURU:SHAKTHI PEETA FOUNDATION

ಯಾವುದೇ ಪಕ್ಷದವರಾಗಲಿ ರಾಜಕಾರಣಿಗಳು ಕೈಚೆಲ್ಲಿದ್ದಾರೆ, ನಾಟಕವಾಡುವುದು ಬಿಟ್ಟು ಅವರೇನು ಮಾಡಲು ಸಾದ್ಯವಿಲ್ಲ, ಆದರೂ ಸುಮ್ಮನಿಲ್ಲ, ಅವರ ಹಂತವನ್ನು ಮೀರಿದೆ ಕೋರೊನಾ.

ಪರಿಣಿತರು, ವಿಜ್ಞಾನಿಗಳು, ಜ್ಞಾನಿಗಳ ಇವರೆಲ್ಲರನ್ನೂ ಯಾಮರಿಸಿದೆ, ಅವರ ಹಂತವನ್ನು ಮೀರಿದೆ ಕೋರೊನಾ. ಪಾಪ ವಿಲವಿಲ ಒದ್ದಾಡುತ್ತಿದ್ದಾರೆ.

ಡಾಕ್ಟರ್, ನರ್ಸ್, ಆಶಾ ಕಾರ್ಯಕರ್ತೆಯರು ನಿಜವಾದ ಸೇವೇಯೇ ದೇವರ ಸೇವೆ, ಎಂದು ಅವರ ಕೈಲಾದ ಸೇವೆ ಮಾಡುತ್ತಿರುವವರು ಒಂದು ವರ್ಗ.

ಸಾದ್ಯಾವಾದಷ್ಟು ಪೀಕುವುದು. ದೋಚುವುದು, ಕಬಳಿಸುವುದು ಇನ್ನೊಂದು ವರ್ಗದ ವಿಕೃತ ಮನಸು. ಇವರ ಹಂತವನ್ನು ಮೀರಿದೆ ಈ ಕೋರೊನಾ.

ಜನ ಕಷ್ಟ ಬಂದಾಗ ದೇವರನ್ನು ನೆನೆಯುತ್ತಾರೆ ಎಂಬುದು ವಾಡಿಕೆ.

ಕಾಯಿಲೆ ಬಂದಾಗ ಯಾರಾದರೂ ಹೇಳಿದ ಯೋಗ, ಧ್ಯಾನ ಮಾಡುವುರು ಎಂಬುದು ಕಟು ಸತ್ಯ.

ದೇವರು ಯಾರು? ಎಲ್ಲಿದ್ದಾನೆ ಇದೂವರೆಗೂ ಯಾರಿಂದಲೂ ಉತ್ತರವಿಲ್ಲ.

ನಂಬಿಕೆಯೇ ದೇವರು, ಪರಿಸರವೇ ದೇವರು, ಕಾಯಕವೇ ದೇವರು ನಂಬುವವರು ನಂಬಬಹುದು ಅಷ್ಟೆ.

ಸೋಶಿಯಲ್ ಮಿಡಿಯಾದ ಘೋಷಣೆಗಳಾದ ನಿಮ್ಮ ಜೀವ ನಿಮ್ಮ ಕೈಯಲ್ಲಿ, ಸರ್ಕಾರಕ್ಕೆ ಒಂದು ಸಂಖ್ಯೆ, ಡಾಕ್ಟರ್‍ಗಳಿಗೆ ಒಂದು ಜೀವ, ನಿಮ್ಮ ಕುಟುಂಬಕ್ಕೆ ಒಂದು ಅಮೂಲ್ಯ ಜೀವ.

ಕೋರೊನಾ ಬಂದು ಸತ್ತಸುದ್ದಿ ತಿಳಿಯುತ್ತಲೆ, ನಮ್ಮ ನಿಮ್ಮ ಮೊದಲ ಮಾತು, ದಯವಿಟ್ಟು ಯಾರೂ ಸಮಾಧಿ ಬಳಿ ಹೋಗಬೇಡಿ, ಆಗಿದ್ದು ಆಯಿತು.

ಪಾಪ ಈ ಪೋಲೀಸ್ ಇಲಾಖೆಯವರು ಲಾಠಿ ಬೀಸಿದರೇ ಕಾನೂನು ಇಲ್ಲ ಎನ್ನುತ್ತಾರೆ, ಕಂಟ್ರೋಲ್ ಮಾಡದಿದ್ದರೆ ನಾಲಾಯಕ್ ಎನ್ನುತ್ತಾರೆ.

ಇಂತಹ ಟೈಮ್‍ನಲ್ಲೂ ರಾಜಕೀಯ ಪಕ್ಷಗಳ ನಾಟಕ ನೋಡಿದರೇ ಅಯ್ಯೋ ಎನಿಸುತ್ತಿದೆ.

ಬದುಕಿ ಉಳಿದವರೂ ಇನ್ನೂ ಮುಂದಾದರೂ ಪರಿಸರವೇ ದೇವರು ಎಂದು ನಂಬಿ ಕೈಲಾದಷ್ಟು ಸೇವೆ ಮಾಡುವುದು, ನಿಜವಾದ ದೇವರ ಸೇವೆ. ಬದುಕುವ ಅವಧಿ ನಮ್ಮ ಕೈಲಿಲ್ಲ. ಅದು ದೇವರ ಇಚ್ಚೆ.

ಧೈರ್ಯವಾಗಿರಿ, ಮನೆಯಲ್ಲೇ ಇರಿ, ಮನೆಯಲ್ಲಿದ್ದವರಿಗೂ ಒಕ್ಕೊರಿಸುವ ಮಾರಿಯಾ ಜೊತೆಯಲ್ಲಿ ಹೋಗಲು ಸಿದ್ಧವಾಗಿರುವುದು ಬಿಟ್ಟರೇ ಇನ್ನೇನೂ ಉಳಿದಿಲ್ಲ. ದೇವರು ಹುಟ್ಟುವಾಗಲೇ ನಮ್ಮ ಸಾವಿನ ಗಳಿಗೆಯನ್ನು ಬರೆದಿದ್ದಾನೆ. ಹೆದರ ಬೇಡಿ, ಧೈರ್ಯವೇ ನಿಜವಾದ ಔಷಧಿ. ಭಯಪಟ್ಟು ಸತ್ತಿರುವವರೇ ಜಾಸ್ತಿಯಂತೆ.