TUMAKURU:SHAKTHIPEETA FOUNDATION
ಕಾಂಗ್ರೆಸ್ ಪಕ್ದದ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್‍ರವರು ಮತ್ತು ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಕಾಂಗ್ರೆಸ್ 110 ಕೋಟಿ ಲಸಿಕೆಗೆ ನೀಡಲಿದೆ ಎಂದು ಹೇಳಿರುವುದು ಸ್ವಾಗಾತಾರ್ಹ, ಕೊರೊನಾ ಲಸಿಕೆಯ 2 ನೇ ಅಲೆ ಬಂದ ನಂತರ ಹಳ್ಳಿ ಕಡೆ ಜನ ಹೇಳಿದ ಹಾಗೆ ‘ಅಪ್ಪಂಗ ಹುಟ್ಟಿದ ಮಾತು ಹೇಳ್ದೆ’ ಅಂತರಲ್ಲಾ ಹಾಗೆ ಒಳ್ಳೆಯ ನಿರ್ಧಾರ.
ಆದರೇ ಲಸಿಕೆಗೆ ಈ ದುಡ್ಡು ಕೊಡುವುದಕ್ಕಿಂತ ಇದರ ಜೊತೆಗೆ, ಬಿಜೆಪಿ, ದಳದ ದುಡ್ಡು ಸೇರಿಸಿಕೊಂಡು ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೊಂದು ‘ಆರೋಗ್ಯ ಧಾಮ’ ಕಟ್ಟಡ ನಿರ್ಮಾಣ ಮಾಡಿ. ಲಸಿಕೆಗೆ ಮೋದಿಯವರ ಬಳಿ ಹಣವಿದೆ, ಆದರೇ ಲಸಿಕೆ ಉತ್ಪಾದನೆ ವಿಳಂಭವಾಗಿದೆ ಅದು ಬೇರೆ ವಿಚಾರ.
ಹಳ್ಳಿ ಕಡೆ ಕೊರೊನಾ ಮಾಹಾ ಮಾರಿ ಹಬ್ಬಿದೆ, ಇಲ್ಲಿ ಇನ್ನೂ ಎಷ್ಟು ಅಲೆ ಬರುತ್ತದೋ ಗೊತ್ತಿಲ್ಲ. ಹೋಂ ಐಸೋಲೇಷನ್ ಬಹಳ ಕಷ್ಟದ ಕೆಲಸ, ಅದ್ದರಿಂದ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಜೀವನದಲ್ಲಿ ಒಂದು ಒಳ್ಳೆಯ ಕೆಲಸ ಮಾಡಲು ಮುನ್ನುಗ್ಗುವುದು ಒಳ್ಳೆಯದು.
ಏನಿದು ಆರೋಗ್ಯ ಧಾಮ!!
1.ಗ್ರಾಮ ಪಂಚಾಯಿತಿಗೆ ಕನಿಷ್ಟ 5 ಎಕರೆಯಿಂದ ಹೆಚ್ಚಿಗೆ ದೊರೆಯುವ ಸರ್ಕಾರಿ ಜಮೀನು ಗುರುತಿಸಿ.
2.ಕನಿಷ್ಟ 50 ಕೊಠಡಿಗಳನ್ನು ನಿರ್ಮಾಣ ಮಾಡಿ.
3.ಆಟ್ಯಾಚ್ ಬಾತ್‍ರೂಂ ಇರಲಿ.
4.ವಿಶಾಲವಾದ ಜಮೀನಿನಲ್ಲಿ ಆಯುಷ್ ವನ ಮಾಡಿ.
5.ಕಲೆ, ಸಂಸ್ಕøತಿ, ಯೋಗ, ಕ್ರೀಡೆ, ಧ್ಯಾನ, ಚಿಕಿತ್ಸೆ, ಉಟೋಪಾಚಾರದ ವ್ಯವಸ್ಥೆಗೆ ಸೌಲಭ್ಯಗಳಿರಲಿ.
6.ಸುಮಾರು 100 ಬೆಡ್‍ಗಳಿಗೆ ಅವಕಾಶವಿರಲಿ.
7.ಡಾಕ್ಟರ್, ನರ್ಸ್, ನೌಕರರು ಉಳಿದು ಕೊಳ್ಳಲು ಅವಕಾಶವಿರಲಿ.
8.ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ನೌಕರರು ಅಲ್ಲೇ ತಂಗುವ ವ್ಯವಸ್ಥೆಯನ್ನು ಮಾಡ ಬಹುದು.
9.ಶಕ್ತಿ ಇರುವವರು ದುಡಿಯಲು ಅವಕಾಶ ಮಾಡಬಹುದು.
ಕೊರೊನಾ ಮುಗಿದ ಮೇಲೆ ಏನು ಮಾಡಬೇಕು?
1.ಗ್ರಾಮಗಳಲ್ಲಿ ಎಷ್ಟೋ ಹಿರಿಯ ನಾಗರೀಕರಿಗೆ ಮನೆಗಳಲ್ಲಿ ಊಟ ಹಾಕುತ್ತಿಲ್ಲ.
2.ಅವರು ನರಕಯಾತನೆ ಅನುಭವಿಸುತ್ತಿದ್ದಾರೆ.
3.ಅಂಥವರು ಬಂದು ಇಲ್ಲಿ ಉಳಿದು ಕೊಳ್ಳಲಿ,
4.ಇಂದಿರಾ ಕ್ಯಾಂಟೀನ್ ಅಥವಾ ಅನ್ನ ದಾಸೋಹ ಮಾದರಿಯಲ್ಲಿ ಊಟ ಹಾಕಿ.
5.ರಾತ್ರಿ ಉಳಿಯುವವರು ಇಲ್ಲೆ ಇರಲಿ.
6.ಊರಿಗೆ ಹೋಗುವವರಿಗೆ, ಬರುವವರಿಗೆ ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಬಸ್ ಬಿಡಿ.
7.ಮಕ್ಕಳಿಗೆ ಊಟ ಹಾಕುತ್ತಿದ್ದೀರಿ ಒಳ್ಳೆಯದು, ಎಂಥಹ ಬಡ ಕುಟುಂಬದವರಾದರೂ, ತಾನು ಹಸಿದು ಕೊಂಡು ಮಕ್ಕಳಿಗೆ ಊಟ ಹಾಕುತ್ತಾರೆ, ಆದರೇ ಅಪ್ಪ-ಅಮ್ಮ, ಅತ್ತೆ-ಮಾವನಿಗೆ ಊಟ ಹಾಕುತ್ತಿಲ್ಲ.
8.ವೃದ್ಧಾಶ್ರಮ ಎಂದಾದರೂ ಕರೆಯಿರಿ, ಹಿರಿಯರ ಆರೋಗ್ಯಕ್ಕೂ ಗಮನ ಕೊಡುವುದರಿಂದ ಆರೋಗ್ಯ ಧಾಮ ಎಂದಾದರೂ ಕರೆಯಿರಿ. ಇದು ಲಾಭಾದಾಯಕವಲ್ಲ, ಸೇವೆ ಗಮನವಿರಲಿ.
9.ಅತಿವೃಷ್ಟಿ, ಅನಾವೃಷ್ಟಿ ಕಾಲದಲ್ಲಿಯೂ ನಿರಾಶ್ರಿತರಿಗೆ ಬಳಸಿಕೊಳ್ಳ ಬಹುದು.
ಹಣ ಸಾಕಾಗುತ್ತಾ?
1.ಕಾಂಗ್ರೆಸ್ ದುಡ್ಡಿನ ಜೊತೆಗೆ ಆ ಗ್ರಾಮಪಂಚಾಯಿತಿಯಲ್ಲಿ ಅಸ್ಥಿತ್ವದಲ್ಲಿರುವ ಇರುವ ಎಲ್ಲಾ ಪಕ್ಷಗಳ ದುಡ್ಡು ಸೇರಿಸಿ.
2.ರೂ ‘ಇಪ್ಪತ್ತೈದು ಸಾವಿರ ಕೋಟಿ’ ಗಣಿ ಹಣ ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದೆ. ಸರ್ಕಾರ ಮತ್ತು ಎಲ್ಲಾ ಪಕ್ಷದವರು ಸೇರಿ ನ್ಯಾಯಾಲಯಕ್ಕೆ ಮನವಿ ಮಾಡಿ, ಹಣ ಬಿಡುಗಡೆ ಮಾಡುತ್ತಾರೆ.
3.ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಬರುತ್ತಿದೆ, ಕೋಟಿಗಟ್ಟಲೇ ಖರ್ಚು ಮಾಡುವವರು, ದಾನ ನೀಡಲಿ.
4.ಬ್ಯಾಂಕ್ ಬಡ್ಡಿದರದಲ್ಲಿ ಸರ್ಕಾರ ಬಾಂಡ್ ಘೋಶಿಸಲಿ, ಬ್ಯಾಂಕಿನಲ್ಲಿ ಇಟ್ಟಿರುವ ಠೇವಣೆ ಹಣ ಪಡೆಯಲಿ, ತಿಂಗಳಿಗೆ ಬಡ್ಡಿ ನೀಡಿ, ನಿವೃತ್ತರ ಹಣ ಸಾಕಷ್ಟು ಬ್ಯಾಂಕಿನಲ್ಲಿ ಠೇವಣೆ ಇಟ್ಟಿದ್ದಾರೆ. ಅವರು ಸರ್ಕಾರಕ್ಕೆ ಬಾಂಡ್ ರೀತಿ ಹಣ ಕೊಡಲು ಅನುಮಾನ ಪಡಲ್ಲ.
5.ದಾನಿಗಳ ನೆರವು ಪಡೆಯಿರಿ.
6.ಸಿ.ಎಸ್.ಆರ್ ಫಂಡ್ ಈ ಕೆಲಸಕ್ಕೆ ನೀಡಲು ಸರ್ಕಾರಿ ಆದೇಶವಾಗಲಿ.
7.ಈ ಯೋಜನೆಗೆ ಬಾಂಡ್ ಕೊಳ್ಳುವವರಿಗೆ ದುಡ್ಡಿನ ಲೆಕ್ಕ ಕೇಳಲ್ಲ, ತೆರಿಗೆ ಮನ್ನಾ ಎನ್ನುವ ಸರ್ಕಾರಿ ಆದೆಶ ಮಾಡಿಸಿ, ಯೋಜನೆಗೆ ಹೆಚ್ಚಾಗುವಷ್ಷು ಹಣ ಹೂಡಿಕೆಯಾಗಲಿದೆ.
8.ನಿಮಗೆ ಜನ ಸೇವೆ ಮಾಡುವ ಮನಸ್ಸು ಇರಬೇಕು.
9.ಬಾಯಿ ತೆವಲಿಗೆ ಮಾತನಾಡದೆ ಎಲ್ಲರೂ ಒಗ್ಗಟ್ಟಾದರೆ ಜನ ನಿಮಗೆ ಪೂಜಿಸುತ್ತಾರೆ.