TUMAKURU:SHAKTHIPEETA FOUNDATION
ವಿಶ್ವದಲ್ಲಿ ಲಕ್ಷಾಂತರ ಸಂಘಟನೆಗಳಿವೆ, ಪಾವಿತ್ರ್ಯತೆ ಉಳಿಸಿಕೊಂಡಿರುವ ಕೆಲವೇ ಸಂಘಟನೆಗಳಲ್ಲಿ ಆರ್.ಎಸ್.ಎಸ್. ಸಹ ಒಂದಾಗಿದೆ. ಇದನ್ನು ವಿಶ್ವದ ಎಲ್ಲರೂ ಒಪ್ಪಬೇಕಿಂದಿಲ್ಲ, ಅದು ಅವರವರ ಬಾವನೆ, ಅವರವರ ಕುಚೇಷ್ಟೆ, ಅವರವರ ತೆವಲಿಗೆ ತಕ್ಕಂತೆ ವ್ಯಾಖ್ಯಾನ ಮಾಡಬಹುದಾಗಿದೆ. ಮಾಡುತ್ತಲೂ ಇದ್ದಾರೆ. ಮಾಡುತ್ತಲೇ ಇರುತ್ತಾರೆ.
ಕೊರೊನಾ ಬಗ್ಗೆ ಆರ್.ಎಸ್.ಎಸ್. ಮುಖ್ಯಸ್ಥ ಶ್ರೀ ಮೋಹನ್ ಬಾಗವತ್‍ರವರು ಕಟು ಸತ್ಯ ನುಡಿದಿದ್ದಾರೆ. ಇದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಂದ ಆರಂಭಿಸಿ, ವಿವಿಧ ರಾಜ್ಯದ ಮುಖ್ಯ ಮಂತ್ರಿಗಳು, ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು, ಗ್ರಾಮೀಣ ಸಂಸ್ಥೆಗಳ ಸದಸ್ಯರು ಮತ್ತು ಅಧಿಕಾರಿಗಳು ಸರ್ಕಾರದ ಬಾಗವಾಗುತ್ತಾರೆ.
ಜನರು ಎಂದರೆ ನೀವೂ-ನಾವೆಲ್ಲಾ ಆಗುತ್ತೇವೆ. ಕೊರೊನಾ ವಿಚಾರದಲ್ಲಿ ಎಲ್ಲರೂ ತಪ್ಪು ಮಾಡಿದ್ದೇವೆ. ತಪ್ಪು ಮಾಡಿರುವುದು ಆಗಿ ಹೋಗಿದೆ, ಇನ್ನೂ ಮುಂದಾದರೂ ಎಲ್ಲರೂ ಎಚ್ಚೆತ್ತು ಕೊಳ್ಳಬೇಕಿದೆ. ಮುಂದೇನು ಮಾಡಬೇಕು ಎನ್ನುವುದನ್ನು ಮೋಹನ್ ಬಾಗವತ್‍ರವರು ದೇಶದ ಎಲ್ಲಾ ಸರ್ವ ಪಕ್ಷಗಳ, ಪರಿಣಿತರ, ತಜ್ಞರ ಅಭಿಪ್ರಾಯಗಳನ್ನು ಗಣನೆಗೆ ತೆಗೆದು ಕೊಂಡು ಒಂದು ಸರ್ವ ಸಮ್ಮತ ಸೂತ್ರವನ್ನು ಹೇಳುವುದು ಅಗತ್ಯವಾಗಿದೆ.
ಏಕೆಂದರೆ ಇವರ ಮಾತಿಗೆ ಬಿಜೆಪಿ ಪಕ್ಷ ಮತ್ತು ಬಿಜೆಪಿ ಸರ್ಕಾರಗಳಲ್ಲಿ ಬಹಳ ಬೆಲೆಯಿದೆ. ವೇದವಾಕ್ಯ ಎಂಬ ಮಾತು ಜನ ಜನಿತವಾಗಿದೆ. ಕೆಲವರಿಗೆ ಇವರ ಮಾತು ಬೆಂಕಿಯಾದರೆ, ಇನ್ನೂ ಕೆಲವರಿಗೆ ಬಿಸಿತುಪ್ಪವಾದರೆ, ಒಂದು ವರ್ಗ ಒಳಗೊಳಗೆ ಖುಷಿ ಪಡುತ್ತಾರೆ.