22nd December 2024
Share

TUMAKURU:SHAKTHIPEETA FOUNDATION

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಕೊರೊನಾ ವಿಚಾರದಲ್ಲಿ ಹಗಲಿರಳು ಶ್ರಮಿಸುವ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಯುದ್ಧ ಕಮಾಂಡರ್‍ಗಳಂತೆ ಕಾರ್ಯನಿರ್ವಸುತ್ತಿದ್ದೀರಿ ಎಂದು ತಿಳಿಸುವ ಮೂಲಕ ಕಿರೀಟ ಇಟ್ಟಿದ್ದಾರೆ.

ನೇರವಾಗಿ ದೇಶದ 100 ಜಿಲ್ಲಾಧಿಕಾರಿಗಳಿಂದ ಅನುಭವ ಹಂಚಿಕೊಳ್ಳುವ ಮೊದಲನೇ ದಿನದ ಸಭೆಯಲ್ಲಿ ನಿಮ್ಮ ಅನುಭವ ಮತ್ತು ಸಲಹೆಗಳನ್ನು ಸರ್ಕಾರಗಳೊಂದಿಗೆ ಹಂಚಿಕೊಳ್ಳಲು ಕರೆ ನೀಡುವ ಮೂಲಕ ಅಧಿಕಾರಿಗಳಿಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ.

ಆಯಾ ಜಿಲ್ಲೆಗಳ ಸ್ಥಿತಿಗತಿ ನೋಡಿ ನೀವೇ ಸೂಕ್ತ ನಿರ್ಧಾರ ಕೈಗೊಳ್ಳಿ ಎಂಬ ಸಲಹೆ ನೀಡಿರುವುದು, ಕೆಲವರಿಗೆ ಹೊಟ್ಟೆ ಕಿವುಚಿದಂತಾದರೂ ಜಿಲ್ಲಾಧಿಕಾರಿಗಳಿಗೆ ಸ್ಪೂರ್ತಿ ತುಂಬಿದಂತಾಗಿದೆ.

ಮೋದಿಯವರ ಮಾತು ಕೇಳುವಾಗ ಮಾಜಿ ಪ್ರಧಾನ ಮಂತ್ರಿಯವರಾಗಿದ್ದ ದಿ.ರಾಜೀವ್ ಗಾಂಧಿಯವರು ಕೇಂದ್ರ ನೀಡಿದ ಅನುದಾನದಲ್ಲಿ ಶೇಕಡ 30 ರಷ್ಟು ಮಾತ್ರ ಜನರಿಗೆ ತಲುಪುತ್ತಿದೆ, ಉಳಿದ ಶೇ 70 ರಷ್ಟು ಮಧ್ಯವರ್ತಿಗಳ ಪಾಲಾಗುತ್ತದೆ ಎಂಬ ಮಾತು ನೆನಪಿಗೆ ಬಂತು.

ಕೇಂದ್ರ ಸರ್ಕಾರ ನೀಡುತ್ತಿರುವ ಕೊರೊನಾ ಅನುದಾನ, ಉಪಕರಣಗಳ, ಸಲಕರಣೆಗಳ ಕಾಳಸಂತೆಕೋರರನ್ನು ಹಿಡಿಯಿರಿ ಎಂದು ಕರೆ ನೀಡಿರುವುದರ ಹಿಂದೆ, ಇನ್ನೂ ಮುಂದೆ ನೇರವಾಗಿ ಸೋಂಕಿತರಿಗೆ ಅಥವಾ ಜಿಲ್ಲಾಧಿಕಾರಿಗಳಿಗೆ ಕೇಂದ್ರದ ನೆರವು ಬಂದರೂ ಆಶ್ಚರ್ಯವಿಲ್ಲ.

ಕೃತಕ ಅಭಾವ ಸೃಷ್ಟಿ ಮಾಡಿ ಕೇಂದ್ರದ ಮೇಲೆ ಗೂಬೆ ಕೂರಿಸುವ ರಾಜ್ಯ ಸರ್ಕಾರಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ನೀಡಿರುವ ಸಲಕರಣೆಗಳನ್ನು ರಾಜಕೀಯ ನಾಯಕರುಗಳು ಸಂಗ್ರಹಮಾಡಿ ಹಂಚುತ್ತಿರುವುದು, ಮೋದಿಯವರಿಗೆ ಇಂಚಿಂಚು ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ನೀಡಿರುವ ವೆಂಟಿಲೇಟರ್ ಆಡಿಟ್ ಮಾಡಿ ಎಂದು  ಕೆಲವೇ ದಿನಗಳ ಹಿಂದೆ ಘೋಶಿಸಿದ್ದು ಇದೇ ಕಾರಣಕ್ಕಿರ ಬಹುದು.