22nd November 2024
Share

TUMAKURU:SHAKTHI PEETA FOUNDATION

 ಭಾರತ ದೇಶದಲ್ಲಿರುವ ಮೋದಿಯವರ ಹಿತಶತ್ರುಗಳು, ವಿರೋಧ ಪಕ್ಷಗಳು ಮತ್ತು ಇಡೀ ವಿಶ್ವ ಬೆಚ್ಚಿ ಬೆರಗಾಗುವ ದಿನ ದೂರವಿಲ್ಲ. ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಕೊರೊನಾ ಲಸಿಕೆ ಪ್ರತಿಜ್ಞೆ ಮಾಡಿದ್ದಾರಂತೆ. ದಾಖಲೆ ಸಮಯದಲ್ಲಿ ಇಡೀ ಭಾರತ ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡಲೇ ಬೇಕಂತೆ.

 ಆರ್ಥಿಕವಾಗಿ ಲಸಿಕೆಗೆ ಬಂಡವಾಳ ಹಾಕಲು ನಮ್ಮ ದೇಶಕ್ಕೆ ಯಾವುದೇ ತೊಂದರೆ ಇಲ್ಲ, ವಿಶ್ವದಲ್ಲಿಯೇ ಅತಿ ಹೆಚ್ಚು ಮ್ಯಾನ್‍ಪವರ್ ನಮ್ಮಲ್ಲಿದೆ, ಮೂಲಭೂತ ಸೌಕರ್ಯಗಳು ಇದೆ, ಒಳ್ಳೆಯ ವಾತಾವರಣವೂ ಇದೆ. ಉತ್ಪಾದನೆ ಮಾಡುವ ವ್ಯವಸ್ಥೆ ಬದಲಾಗಬೇಕು. ಸಾಮಾಥ್ರ್ಯ ಹೆಚ್ಚಿಸಬೇಕು, ಇದಕ್ಕೆ ರೂಪಿಸಬೇಕಾದ ತಂತ್ರಗಳ ಬಗ್ಗೆ ಒಂದು ತಂಡ ಕಾರ್ಯ ತಂತ್ರ ರೂಪಿಸುತ್ತಿದೆಯಂತೆ, ಸ್ವತಃ ಮೋದಿಯವರೇ ಆ ಟೀಮ್ ನಾಯಕತ್ವ ವಹಿಸಿದ್ದಾರಂತೆ.

ಕೊರೊನಾ ತಡೆಗಟ್ಟುವುದು ಒಂದಾದರೆ, ಶರವೇಗದಲ್ಲಿ ಲಸಿಕೆ ಸಿದ್ಧಪಡಿಸುವುದು, ಕೊರೊನಾಗೆ ಸಂಬಂಧಿಸಿದ ಎಲ್ಲಾ ಔಷಧಿ, ಆಕ್ಸಿಜನ್ ಇತರೆ ಅಗತ್ಯ ಸಲಕರಣೆ ಮತ್ತು ಉಪಕರಣಗಳಿಗೆ ಯಾವುದೇ ರೀತಿ ಕೊರತೆಯಾಗಬಾರದು. ಮುಂದಿನ ಕೊರೊನಾ ಅಲೆ-ಮಕ್ಕಳ ಅಲೆ’ ಎಂದು ತಜ್ಞರು ಹೇಳುತ್ತಾರೆ.

ಮಕ್ಕಳ ಸಾವನ್ನು ನಿಜಕ್ಕೂ ಯಾರು ಸಹಿಸುವುದಿಲ್ಲಾ, ಇದಕ್ಕೆ ಏನಾದರೂ ಮಾಡಲೇಬೇಕು ಎಂಬ ದೃಢ ನಿರ್ಧಾರ ಮಾಡಿದ್ದಾರಂತೆ. ಇಲ್ಲಿ ಪ್ರಧಾನಿ ಗೆದ್ದರೆ – ಭಾರತ ಗೆದ್ದಂತೆ’ ಕೊರೊನಾ ಮಾನವ ಸೃಷ್ಠಿಯೋ-ದೈವ ಸೃಷ್ಠಿಯೋ’ ಇದೂವರೆಗೂ ವಿಶ್ವದ ಯಾರಿಗೂ ಅಧಿಕೃತವಾಗಿ ಹೇಳಲು ಆಗಿಲ್ಲ.

ಇದೊಂದು ಜೈವಿಕ ಯುದ್ದ, ಮೂರನೇ ಮಹಾಯುದ್ದಕ್ಕೂ ಮೀರಿಸುವಂತದ್ದು, ದೇಶದಲ್ಲಿರುವ ಎಲ್ಲಾ ನಾಯಕರು ಪಕ್ಷಬೇಧ ಮರೆತು ಸರ್ಕಾರದ ಜೊತೆ ನಿಲ್ಲಬೇಕಿತ್ತು. ಸರ್ಕಾರವೂ ಎಲ್ಲ ನಾಯಕರ ವಿಶ್ವಾಸ ತೆಗೆದುಕೊಳ್ಳಬೇಕಿತ್ತು, ಏಕೋ ಎನೋ ಎರಡೂ ಸಾದ್ಯವಾಗಿಲ್ಲ, ಇಡೀ ವಿಶ್ವಕ್ಕೆ ಮಾನವೀಯತೆ ಪಾಠ ಕಲಿಸುವ ಭಾರತದ ಪಾಲಿಗೆ ಇದೊಂದು ದುರಂತ’