22nd May 2024
Share

TUMAKURU:SHAKTHIPEETA FOUNDATION

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಕೊರೊನಾ ಮುಕ್ತ ಗ್ರಾಮ’ ಆಂದೋಲನ ಕೈಗೊಳ್ಳಲು   ಜಿಲ್ಲಾಧಿಕಾರಿಗಳಿಗೆ ಕರೆನೀಡಿದ್ದರು. ಜೊತೆಗೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕೆಲವರಿಗೆ ‘ಪ್ಯಾಕೇಜ್ ಘೋಷಣೆ’ ಮಾಡಿದ್ದಾರೆ.

‘ಗ್ರಾಮ ಮಟ್ಟದ ಕೊರೊನಾ ಟಾಸ್ಕ್ ಪೋರ್ಸ್, ಗ್ರಾಮಪಂಚಾಯಿತಿ ಮಟ್ಟದ ಕೊರೊನಾ ಟಾಸ್ಕ್ ಪೋರ್ಸ್ ಮತ್ತು  ವಾರ್ಡ್ ಮಟ್ಟದ ಕೊರೊನಾ ಟಾಸ್ಕ್ ಪೋರ್ಸ್ ಚುರುಕೊಗೊಳಿಸಲು ಇಬ್ಬರೂ ಘೋಷಣೆ ಮಾಡಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಪ್ಯಾಕೇಜ್ ಒಳ್ಳೆಯ ಸಂಘಟನೆಗೆ ಅನೂಕೂಲವಾಗಲಿದೆ.’

ಕಳೆದ ಭಾರಿ ಪ್ಯಾಕೇಜ್ ಪಡೆಯಲು ಕೆಲವು ಜನ ಅರ್ಹರಿಗೂ ತೊಂದರೆಯಾಗಿತ್ತು. ಈಗ ಪುನಃ ಅರ್ಹರಿಗೆ ಅನ್ಯಾಯವಾಗದಂತೆ ಕೆಳಹಂತದ ಕೊರೊನಾ ಟಾಸ್ಕ್ ಪೋರ್ಸ್‍ಗಳ ಮೂಲಕ ಪರಶೀಲನೆ ಮಾಡುವುದು ಒಳ್ಳೆಯದು. ಸ್ಥಳೀಯರಿಗೆ ಇಂಚಿಂಚು ಮಾಹಿತಿ ಇರುತ್ತದೆ. ಅಧಿಕಾರಿಗಳು ಯಾರೋ ಹೇಳಿದ ಪಟ್ಟಿ ಮಾಡುತ್ತಾರೆ. ಈ ಸಮಿತಿಗಳಲ್ಲಿ ವಿವಿಧ ವರ್ಗದ ಜನರು ಇರುವುದರಿಂದ ಯಾರಿಗೂ ಅನ್ಯಾವಾಗುವುದಿಲ್ಲ.

ಈ ಭಾರಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅರ್ಹರ ಪಟ್ಟಿಯನ್ನು ಪ್ರಕಟಿಸಲಿ. ಇದು ಸಾಮಾಜಿಕ ನ್ಯಾಯದಡಿ ಅರ್ಹರಿಗೆ ದೊರೆಯಲಿದೆ. ಯಾರಿಗೂ ಡೂಪ್ಲಿಕೇಟ್ ಆಗಬಾರದು, ಜೊತೆಗೆ ಯಾವುದೇ ಕಾರಣಕ್ಕೂ ಅರ್ಹರಿಗೆ ಅನ್ಯಾಯವಾಗ ಬಾರದು.

ಇವರೆಲ್ಲರೂ ಸ್ಥಳೀಯ ಕೊರೊನಾ ಟಾಸ್ಕ್ ಪೋರ್ಸ್ ಸಮಿತಿಗಳಲ್ಲಿ ಸಂಪರ್ಕ ಇಟ್ಟುಕೊಳ್ಳುವುದರಿಂದ ಕೊರೊನಾ ಮುಕ್ತ ಗ್ರಾಮಕ್ಕೆ ಅನೂಕೂಲವಾಗಲಿದೆ. ‘ಗ್ರಾಮ ಪಂಚಾಯಿತಿ ಮಟ್ಟಕ್ಕೆ ವೈಧ್ಯರ ನೇಮಕ ‘ನಿಜಕ್ಕೂ ಬಹಳ ಒಳ್ಳೆಯದು. 

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆರವರು ಈಗ ಪ್ರತಿಯೊಬ್ಬ ಅಂಗನವಾಡಿ ಕಾರ್ಯರ್ತೆಯರ ವ್ಯಾಪ್ತಿಯಲ್ಲಿ ಎಷ್ಟು ಜನ ಮಕ್ಕಳಿದ್ದಾರೆ, ಎಷ್ಟು ಜನ ಅಪೌಷ್ಠಿಕ ಮಕ್ಕಳಿದ್ದಾರೆ ಎಂಬ ಅಂಕಿ ಅಂಶ ನೋಡಿ ಮಕ್ಕಳ ಕೋವಿಡ್ ಕೇರ್ ಸೆಂಟರ್ ಮಾಡಲು ಯೋಜನೆ ರೂಪಿಸಬೇಕಾಗುತ್ತದೆ. ತಜ್ಞರು ಹೇಳುವ ಪ್ರಕಾರ ಮುಂದಿನ ಕೊರೊನಾ ಅಲೆ ಮಕ್ಕಳ ಅಲೆ ಆದಲ್ಲಿ ಬಹಳ ಕಷ್ಟವಾಗಲಿದೆ. ಅದರಲ್ಲೂ ಅಪೌಷ್ಠಿಕ ಮಕ್ಕಳ ಸ್ಥಿತಿ ದೇವರೇ ಬಲ್ಲ.’