22nd November 2024
Share

TUMAKURU:SHAKTHIPEETA FOUNDATION

  ಕೊರೊನಾ ವಿಷಯದಲ್ಲಿ ಕಾಂಗ್ರೆಸ್ ತಾನೆ ಗುಂಡಿ ತೋಡಿಕೊಂದು ಬಿದ್ದು ವಿಲವಿಲನೆ ಒದ್ದಾಡುವ ಸ್ಥಿತಿಗೆ ಬಂದಿದೆ.

ಮೊದಲನೆ ಕೊರೊನಾ ಅಲೆಯಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದೇವೆ ಎಂಬ ಹೇಳಿಕೆಯಿಂದ ಜನ ಮೆಚ್ಚುಗೆ ವ್ಯಕ್ತಪಡಿದ್ದರು.

ಆರ್.ಎಸ್.ಎಸ್. ಬಿಜೆಪಿಯ ಕಾರ್ಯಕರ್ತರು ಸೇರಿಸಿ ಕೊಂಡು, ಕೊರೊನಾ ವಿಷಯದಲ್ಲಿ ಬೀದಿಬೀದಿ ಅಲೆದು ಮೌನ ಸೇವೆ ಮಾಡುತ್ತಿದ್ದಾರೆ.

‘ಇಂತಹ ಕಷ್ಟದ ಸಮಯದಲ್ಲಿ ಜನರೊಂದಿಗೆ ಇರಬೇಕಾದ ಕಾಂಗ್ರೆಸ್ ಸೇವಾದಳ ಎಲ್ಲಿದೆ, ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಬಿಜೆಪಿ ಸಂಸದರು ಬಿಲ ಸೇರಿದ್ದಾರೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಸೇವಾದಳದ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಬಹುಷಃ ಅವರಿಗೆ ಸೇವಾದಳ ಇದೆ ಎಂಬ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ.’

ಆದರೇ ಕೆಪಿಸಿಸಿ ಅಧ್ಯಕ್ಷ ಶ್ರೀ ಡಿ.ಕೆ.ಶಿವಕುಮಾರ್‍ರವರಿಗೆ ಗೊತ್ತಿದೆ. ಕಡೇಪಕ್ಷ ಅವರ ಸಹೋದರಿ, ಸಹೋದರ ರಿಗಾದರೂ ಸೇವೆ ಮಾಡಬಹುದಿತ್ತು. ಸೇವಾದಳ ಚುರುಕುಗೊಳಿಸಿ ಕೊರೊನಾ ಸೇವೆಗೆ ಸ್ಪಂದಿಸದಿದ್ದಲ್ಲಿ ಕಾಂಗ್ರೆಸ್ ಕಟ್ಟಿದವರಿಗೆ ಮಾಡಿದ ಅಪಮಾನವಾದಂತೆ.

ಆರ್.ಆರ್.ಎಸ್ ಕಾರ್ಯಕರ್ತರ ಸೇವೆ ನೋಡಿ, ಸೇವಾದಳದ ಕಾರ್ಯಕರ್ತರಿಗೂ ನಾವೂ ಈ ರೀತಿ ಸೇವೆ ಮಾಡಬಹುದಿತ್ತು ನಮಗೆ ಕಮ್ಯಾಂಡರ್ ಇಲ್ಲ ಎನ್ನುವ ಸ್ಥಿತಿಗೆ ಬಂದಿದ್ದಾರೆ.

ಸೆಂಟ್ರಲ್ ವಿಸ್ತಾ ವಿಚಾರ ಬಿಟ್ಟು ಬಿಡಿ,  ಶಕ್ತಿ ಇದ್ದರೆ ಮೊದಿ ಮುಗಿಸುತ್ತಾರೆ, ಹಣ ಇಲ್ಲದಿದ್ದರೆ ನಿಲ್ಲಿಸುತ್ತಾರೆ. ಟೀಕೆ ಬಿಟ್ಟು ನಮ್ಮ ದೇಶ ಕಷ್ಟದಲ್ಲಿದೆ, ನಾವೂ ಸಹಕರಿಸಬೇಕು ಎಂಬ ಭಾವನೆ ಬಂದಲ್ಲಿ ಜನ ನಿಮ್ಮನ್ನು ಮೆಚ್ಚುತ್ತಾರೆ.

ಶ್ರೀಮತಿ ಸೋನಿಯಾ ಗಾಂದಿಯವರು ಕೊರೊನಾ ಅನಾಥ ಮಕ್ಕಳಿಗೆ ಸಹಕಾರ ನೀಡಿ, ಶಿಕ್ಷಣ ಕೊಡಿಸಿ ಎಂದು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಇದು ರಚನಾತ್ಮಕ ಸಲಹೆ. ಈ ರೀತಿ ಮಾತನಾಡಿ ವಿಸ್ತ-ವಿಸ್ತಾ ಎಂದು ಪಿತ್ತ ‘ ಬರಿಸಿಕೊಳ್ಳ ಬೇಡಿ.

  ಹೌದು ಪಂಚರಾಜ್ಯಗಳ ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿಯವರು ಚುನಾವಣೆಯತ್ತ, ನಮ್ಮ ರಾಜ್ಯದಲ್ಲಿ ಮುಖ್ಯ ಮಂತ್ರಿಯವರು ಚುನಾವಣೆಯತ್ತ ಗಮನ ಹರಿಸಿದ್ದಾಗ ಕೊರೊನಾ ಚಟುವಟಿಕೆ ಸ್ವಲ್ಪ ಹಿನ್ನಡೆಯಾಗಿದ್ದು ನಿಜ. ಆಗ ಕೊರೊನಾ ಕಡಿಮೆಯಾಗಿದ್ದು, ಬಿರುಗಾಳಿ ಬಂದ ಹಾಗೆ 2 ನೇ  ಅಲೆ ಬಂದು ಬಿಟ್ಟಿದ್ದು ಒಂದು ಕಾರಣ.

ಆದರೇ ಈಗ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಹಗಲಿರಳು ಕೊರೊನಾ ಚಿಂತೆ ಮಾಡುತ್ತಿದ್ದರೆ. ಕಾಂಗ್ರೆಸ್ ವಿಸ್ತಾ ಬಗ್ಗೆ ತಲೆಕೆಡಿಸಿ ಕೊಂಡಿದೆ, ಕೊರೊನಾವನ್ನು ಒಂದು ಜೋಕ್’ ಆಗಿ ತೆಗೆದು ಕೊಂಡಿದೆ ಎಂದು ಜನ ಮಾತನಾಡುತ್ತಿದ್ದಾರೆ.

ಈಗಲೂ ವಿರೋಧ ಮಾಡಿದರೆ ಹೇಗೆ. ವಸ್ತುಸ್ತಿತಿ ಅರ್ಥ ಮಾಡಿಕೊಳ್ಳಿ.

  ‘ಹಾಗಂತ ಕಾಂಗ್ರೆಸ್ ನಾಯಕರು, ಕೆಲವು ಕಾರ್ಯಕರ್ತರು ಸುಮ್ಮನೆ ಕೂತಿಲ್ಲ, ಕೆಲವರು ತಮ್ಮ ಸ್ವಂತ ಕಟ್ಟಡದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿ ಸೇವೆ ಮಾಡುತ್ತಿದ್ದಾರೆ. ಇಂಥವರನ್ನು ಗುರುತಿಸಿ ಅಲ್ಲಿಗೆ ಭೇಟಿ ನೀಡಿ, ಅವರಿಗೂ ಹೆಮ್ಮೆಯಾಗಲಿದೆ. ಉಳಿದವರಿಗೂ ಸ್ಪೂರ್ತಿ ಬರಲಿದೆ.’

ಯಾರೇ ದೇಶದಲ್ಲಿ ಆಡಳಿತ ಮಾಡುತ್ತಿದ್ದರೂ ಇದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಸಾಧ್ಯವಿಲ್ಲ. ನೇಚರ್ ಯಾರ ಮಾತನ್ನು ಕೇಳುತ್ತದೆ ಸ್ವಾಮಿ’. ಭವಿಷ್ಯದಲ್ಲಿ ಒಳ್ಳೆಯದಾಗ ಬೇಕಾದರೆ ನೀವೂ ಬದಲಾಗಿ, ಇಲ್ಲ ಇದೇ ರೀತಿ ಕೂಗಾಡಿ.