22nd November 2024
Share

TUMAKURU:SHAKTHIPEETA FOUNDATION

ಲೋಕಸಭೆಗೆ ಚುನಾವಣೆ ನಡೆದು ಎರಡು ವರ್ಷವಾಯಿತು, ಪಲಿತಾಂಶ ಪ್ರಕಟವಾಗಿದ್ದ ದಿನ ಮೇ 23 ಇಂದು ನಮ್ಮ ರಾಜ್ಯದ ಸಂಸದರು  ಕೆಲವರು ಎರಡು ವರ್ಷ ತುಂಬಿಸಿದಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

ಸುಮಾರು 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರು ಸೇರಿ 40 ಜನರಿದ್ದಾರೆ, ಈ ಭಾರಿ ಬಹಳ ಅನುಭವಿಗಳಿದ್ದಾರೆ, ಜೊತೆಗೆ ರಾಜ್ಯ ಪ್ರತಿನಿಧಿಸುವ ಶ್ರೀಮತಿ ನಿರ್ಮಲಸಿತಾರಾಮನ್ ರವರು ಹಣಕಾಸು ಸಚಿವರಾಗಿದ್ದಾರೆ. ಶ್ರೀ ಪ್ರಹ್ಲಾದ್ ಜೋಷಿಯವರು ಸಂಸದೀಯ ಸಚಿವರಾಗಿದ್ದಾರೆ, ಮಾಜಿ ಮುಖ್ಯ ಮಂತ್ರಿಗಳಾಗಿದ್ದ ಶ್ರೀ ದಿ.ವಿ.ಸದಾನಂದಗೌಡರವರು ಸಚಿವರಾಗಿದ್ದಾರೆ.

ಜೊತೆಗೆ ಲೋಕಸಭೆಯಲ್ಲಿ ಸೋತಿದ್ದರೂ ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೆಗೌಡರವರು ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿದ್ದಾರೆ ಮತ್ತು ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ಪಕ್ಷೇತರರಾಗಿ ಶ್ರೀಮತಿ ಸುಮಲತಾ ಸಂಸದರಾಗಿದ್ದಾರೆ. ಯುವ ಸಂಸದರಾಗಿ ಶ್ರೀ ತೇಜಸ್ವಿಸೂರ್ಯರವರು ಮತ್ತು ಶ್ರೀ ಪ್ರಜ್ವಲ್ ರೇವಣ್ಣವರು ಇದ್ದಾರೆ, ಐದನೇ ಬಾರಿ ಸಂಸದರಾಗಿರುವ ಶ್ರೀ ಜಿ.ಎಸ್.ಬಸವರಾಜ್ ರವರು, ಅತ್ಯಂತ ಹಿರಿಯ ಸಂಸದರಾದ ಶ್ರೀ ಶ್ರೀನಿವಾಸ್ ಪ್ರಸಾದ್ ರವರು ಇದ್ದಾರೆ.

ರಾಜ್ಯಸಭೆಯಲ್ಲಿ ಅಭಿವೃದ್ಧಿ ಚಿಂತಕರಾದ ಶ್ರೀ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಪ್ರಭಾವಿ ನಾಯಕರಾದ ಶ್ರೀ ಆಸ್ಕರ್ ಪರ್ನಾಂಡೀಸ್‍ರವರು ಸೇರಿದಂತೆ ಹೀಗೆ ಹಲವಾರು ಜನರಿದ್ದಾರೆ. ಆಡಳಿತ ಪಕ್ಷದ ಸಂಸದರಾದ ಶ್ರೀ ನಳೀನ್ ಕುಮಾರ್ ಕಟೀಲ್ ರವರು ರಾಜ್ಯದ ಬಿಜೆಪಿ ಅಧ್ಯಕ್ಷರು ಆಗಿದ್ದಾರೆ.

ಮುಖ್ಯಮಂತ್ರಿಯವರ ಪುತ್ರರಾದ ಶ್ರೀ ಬಿ.ವೈ. ರಾಘವೇಂದ್ರರವರು ಸಂಸದರಾಗಿದ್ದಾರೆ. ಹೀಗೆ ಒಬ್ಬರಿಗಿಂತ ಒಬ್ಬರು ಪ್ರಭಾವಿಗಳೇ ಆಗಿದ್ದಾರೆ. ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು 25 ಜನ ಬಿಜೆಪಿ ಸಂಸದರು ಬಿಲಸೇರಿದ್ದಾರೆ. ಎಂದು ಪದೆ, ಪದೇ ಹೇಳುತ್ತಿದ್ದಾರೆ.

ರಾಜ್ಯಕ್ಕೆ ಯಾವ ಅನುದಾನ ತರಲು ವಿಫಲರಾಗಿದ್ದಾರೆ, ಹೇಗೆ ವಿಫಲಾರಾಗಿದ್ದಾರೆ, ಬೇರೆ ರಾಜ್ಯಗಳು ಯಾವ ರೀತಿ ಹೆಚ್ಚಿಗೆ ಅನುದಾನ ಪಡೆದಿದ್ದಾರೆ ಎಂಬ ಅಂಕಿ ಅಂಶಗಳತ್ತ ಇನ್ನೂ ಹೆಚ್ಚಿನ ಗಮನವನ್ನು ವಿರೋಧ ಪಕ್ಷದ ನಾಯಕರು ಹರಿಸ ಬೇಕಿದೆ.

ಮಾಜಿ ಪ್ರಧಾನಿಯವರಾದ ದಿ. ಅಟಲ್ ಬಿಹಾರಿ ವಾಜಪೇಯಿರವರ ಕಾಲದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಶ್ರೀ ಎಸ್.ಎಂ.ಕೃಷ್ಣರವರು ಇದ್ದಾಗ ನಮ್ಮ ರಾಜ್ಯದ ಸಂಸದರು ಒಗ್ಗೂಡಿ ಒಂದು ಸಂಸದರ ವೇದಿಕೆ’ ಮಾಡಿಕೊಂಡಿದ್ದರು. ಸಂಚಾಲಕರಾಗಿ ಆಗಿನ ತುಮಕೂರು ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್‍ರವರು ಇದ್ದರು.

 ಈ ವೇದಿಕೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಶೇಷ ಗಮನ ಹರಿಸುತ್ತಿತ್ತು. ಕೇಂದ್ರ ಸರ್ಕಾರದ ಜೊತೆಗೆ ಸಮಾಲೋಚನೆ ನಡೆಸುತ್ತಿದ್ದರು, ಆಗಿನ ಕೇಂದ್ರ ಸಚಿವರಾದ ದಿ.ಅನಂತ್ ಕುಮಾರ್‍ರವರು ಸ್ಪಂಧಿಸುತ್ತಿದ್ದರು. ಈಗ ಅಂತಹ ವೇದಿಕೆ ಕಾಣುತ್ತಿಲ್ಲ. ಅವರವರ ಕ್ಷೇತ್ರದ ಅಭಿವೃದ್ಧಿ ಲಾಭಿ ಮಾಡುವುದರಲ್ಲಿ ಸಂಸದರು ನಿರತರಾಗಿದ್ದಾರೆ.

ಎರಡು ವರ್ಷದ ಈ ಅವಧಿಯಲ್ಲಿ ಒಂದು ವರ್ಷ ಕೊರೊನಾ ತಿಂದು ಹಾಕಿದರೆ, ಮೊದಲ ಅರ್ದ ವರ್ಷ ಆರಂಭದಲ್ಲಿ ಏನೂ ಕೆಲಸ ಮಾಡಲು ಆಗುವುದಿಲ್ಲ. ಆದರೂ ನಮ್ಮ ರಾಜ್ಯಕ್ಕೆ ಹಿಂದೆ ಮಂಜೂರಾತಿಗೆ ಇದ್ದ ಪ್ರಸ್ತಾವನೆಗಳ ಮತ್ತು ವಿಶೇಷ ಯೋಜನೆಗಳ ಮೂಲಕ ಹೆಚ್ಚಿಗೆ ಅನುದಾನ ಬಂದಿದೆ.

ಕಳೆದ ಲೋಕಸಭಾ ಅಧಿವೇಶನದಲ್ಲಿ ರಾಜ್ಯದ ಸಂಸದರ ವೇದಿಕೆಗೆ ಚಾಲನೆ ದೊರಕಿತ್ತು, ಪಂಚರಾಜ್ಯಗಳ ಚುನಾವಣೆ ಆರಂಭವಾದ ಹಿನ್ನಲೆಯಲ್ಲಿ ನೆನೆಗುದ್ದಿಗೆ ಬಿತ್ತು.ಇನ್ನೂ ಮುಂದಾರೂ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದರೇ, ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚಿನ ಕೆಲಸ ಮಾಡಬಹುದಾಗಿದೆ. ಬೆಂಕಿಗೆ ಗಂಟೆ ಕಟ್ಟುವವರು ಯಾರು ಎಂಬಂತಾಗಿದೆ.

ಕೊರೊನಾ ಅಲೆಗಳ ಮಧ್ಯೆಯೂ ಕೇಂದ್ರದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಹದಗೆಟ್ಟಿಲ್ಲ. ಯಾವುದೇ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿಲ್ಲ, ರಾಜ್ಯ ರಾಜ್ಯಗಳ ಮಧ್ಯೆ ಅನುದಾನ ತಾರತಮ್ಯವಾಗಲು ಕಾರಣ, ಅವರವರ ರಾಜ್ಯದ ಅಭಿವೃದ್ಧಿ ಲಾಭಿ ಮತ್ತು ಆಗಿಂದಾಗ್ಯೆ ನಡೆಯುವ ಚುನಾವಣೆಗಳು. ಇದೇ ರೀತಿ ಲಾಕ್‍ಡೌನ್‍ಗಳು ಮುಂದುವರೆದರೆ ಆರ್ಥಿಕ ಪರಿಸ್ಥಿತಿ ಏನಾಗುವುದು ಕಾದು ನೋಡಬೇಕು.

ಏನೇ ಅಗಲಿ ರಾಜ್ಯದ ಸಂಸದರು ಒಗ್ಗಟ್ಟಾದರೆ ರಾಜ್ಯಕ್ಕೆ ಅನೂಕೂಲವಾಗಲಿದೆ.