12th September 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ದೇಶದಲ್ಲಿಯೇ ಅತಿ ಹೆಚ್ಚಿನ ಅನದಾನ ಪಡೆಯಲು ಸಾಧ್ಯವೇ? ಎಂಬ ಪ್ರಶ್ನೆಗೆ ಎಲ್ಲರ ಉತ್ತರ ಅಸಾಧ್ಯ, ಇದು ಮಾತನಾಡುವುದು ಒಂದು ಟೈಮ್‍ವೇಸ್ಟ್ ಎಂಬ ಭಾವನೆ ಬಂದು ಬಿಟ್ಟಿದೆ. ನಮ್ಮ ರಾಜ್ಯದ ಸಂಸದರ ಮೇಲೆ ಆಡಳಿತ ಮತ್ತು ವಿರೋಧ ಪಕ್ಷದ ರಾಜಕೀಯ ಪಕ್ಷಗಳ ನಾಯಕರಿಗೆ ವಿಶ್ವಾಸವಿಲ್ಲ.

ಇದು ಸ್ವಾತಂತ್ರ್ಯ ಬಂದಾಗಿನಿಂದ ಇದೆಯೋ ಅಥವಾ ಈಗ ಬಂದಿದೆಯೋ ಗೊತ್ತಿಲ್ಲ. ಈ ವಿಚಾರ ಈಗ ಅಪ್ರಸ್ತುತ ನಾವು ಒಂದು ಕನಸು ಕಾಣಲೇ ಬೇಕು, ನಮ್ಮ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲೇ ಬೇಕು, ಪಡೆದೇ ಪಡೆಯುತ್ತದೆ, ಕಾಲಮಿತಿ ಹೇಳಲು ಸಾಧ್ಯವಿಲ್ಲ ಏಕೆಂದರೆ ಇದು ಆರಂಭಿಕ ಹೆಜ್ಜೆ.

ಬರೋಬ್ಬರಿ 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರು ಇದ್ದಾರೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತವಿರುವ ಬಿಜೆಪಿ ಪಕ್ಷದಿಂದ 25 ಜನ ಲೋಕಸಭಾ ಸದಸ್ಯರು ಮತ್ತು 5 ಜನ ರಾಜ್ಯ ಸಭಾ ಸದಸ್ಯರು. ಕಾಂಗ್ರೆಸ್ ಪಕ್ಷದಿಂದ  ಒಬ್ಬರು ಲೋಕಸಭಾ ಸದಸ್ಯರು ಮತ್ತು 6 ಜನ ರಾಜ್ಯ ಸಭಾ ಸದಸ್ಯರು. ಜೆಡಿಎಸ್ ಪಕ್ಷದಿಂದ ಒಬ್ಬರು ಲೋಕಸಭಾ ಸದಸ್ಯರು ಮತ್ತು ಒಬ್ಬರು ರಾಜ್ಯ ಸಭಾ ಸದಸ್ಯರು ಹಾಗೂ ಒಬ್ಬ ಲೋಕಸಭಾ ಸದಸ್ಯರು ಪಕ್ಷೇತರರು ಇದ್ದಾರೆ.

ಮೊದಲು ಇವರು ರಾಜ್ಯದ ಅಭಿವೃದ್ಧಿ ಲಾಭಿಗಾಗಿ ಒಗ್ಗಟ್ಟಾಗುವರೇ, ರಾಜ್ಯದಲ್ಲಿಯೇ ಪಕ್ಷ ರಾಜಕಾರಣ ಬದಿಗಿಟ್ಟು, ದೆಹಲಿಯಲ್ಲಿ ಅಭಿವೃದ್ಧಿ ರಾಜಕೀಯ ಮಾಡುವರೇ ಎಂಬ ಪ್ರಶ್ನೆ ಬರಲಿದೆ. ನನ್ನ 33 ವರ್ಷದ ಅಭಿವೃದ್ಧಿ ಹೋರಾಟದ ಹಿನ್ನಲೆಯಲ್ಲಿ ಹೇಳುವುದಾದರೆ ಸಾದ್ಯವಿದೆ.

ನಾನು ಕಳೆದ 16 ನೇ ಲೋಕಸಭಾ ಅವಧಿಯಲ್ಲಿದ್ದ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರ ದೆಹಲಿಯ ಮನೆ, ಮನೆಗೆ ಎರಡು ಭಾರಿ ಭೇಟಿಕೊಟ್ಟಿದ್ದೆ. ಒಂದು ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕಿನ, ನಮ್ಮೂರಿನ ಬಳಿ ಇರುವ ಹೆಚ್.ಎ.ಎಲ್ ಗೋವಾಕ್ಕೆ ಸ್ಥಳಾಂತರವಾಗುವ ಭೀತಿ ಇದ್ದಾಗ ರಾಜ್ಯದಲ್ಲಿಯೇ ಉಳಿಸಿ ಎಂದು ಮತ್ತು ಇನ್ನೊಂದು ಭಾರಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಹೊರತಂದಿದ್ದ ವಿಷನ್ ಡಾಕ್ಯುಮೆಂಟ್ ನಲ್ಲಿರುವ ಅಂಶಗಳನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಿ ಎಂಬ ಮನವಿ ಮಾಡಲು ತಿರುಗಿದ್ದೆ.

ಶೇ 90 ರಷ್ಟು ಜನರನ್ನು ಖುದ್ಧಾಗಿ ಭೇಟಿ ಮಾಡಿದ್ದೆ. ನನಗೆ ಅಂದು ಅವರೆಲ್ಲಾ ಸ್ಪಂಧಿಸಿದ ರೀತಿ ನಿಜಕ್ಕೂ ಒಗ್ಗಟ್ಟು ಮಾಡಬಹುದು ಎನಿಸಿದೆ. ನಮ್ಮ ಸಂಸ್ಥೆ ವಿಷನ್ ಡಾಕ್ಯುಮೆಂಟ್‍ನಲ್ಲಿ ಮೂರು ಪ್ರಮುಖ ಅಂಶಗಳಿವೆ. ಇದರ ಅನುಷ್ಠಾನಕ್ಕೆ ಶ್ರಮಿಸಲು ಶಕ್ತಿಪೀಠ ಫೌಂಡೇಷನ್ ಸ್ಥಾಪನೆ ಮಾಡುವ ಮೂಲಕ ಚಾಲನೆ ನೀಡಲಾಗಿದೆ. ಮೂರು ವಿಭಾಗಗಳನ್ನು ಮಾಡಿ ಮೂರು ಉದ್ದೇಶಗಳ ಅನುಷ್ಠಾನಕ್ಕೆ ಶ್ರಮಿಸಲಾಗುವುದು.

ಶಕ್ತಿಪೀಠ:- ವಿಶ್ವದ 108 ಶಕ್ತಿಪಿಠಗಳ ಅಧ್ಯಯನ ಮತ್ತು ಪ್ರಾತ್ಯಾಕ್ಷಿಕೆ.

(ದಿನಾಂಕ:01.08.1988 ರಿಂದ ಸತತವಾಗಿ ಒಂದು ದಿವಸವೂ ಬಿಡದಂತೆ ದೇವಿ ಪುಸ್ತಕ ಪಾರಾಯಣ ಮಾಡಿದ ಫಲ)

ಅಭಿವೃದ್ಧಿ ಪೀಠ:-ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯುವುದು.

(1991 ರಿಂದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರ ಜೊತೆ ಸೇರಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಹೋರಾಟದ ಫಲ)

ಜಲಪೀಠ:- ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಘೋಷಣೆಯಲ್ಲಿ ರಾಜ್ಯದ 38608 ಕೆರೆಗಳಿಗೆ ನದಿ ನೀರಿನಿಂದ ತುಂಬಿಸುವುದು.

(ದಿನಾಂಕ:07.01.1997 ರಿಂದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಬದುಕಿರುವ ತನಕ   ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆ ಸೇರಿ ನೀರಾವರಿ ಯೋಜನೆಗಳ ಅನುಷ್ಠಾನ ಹೋರಾಟದ ಫಲ)

ನಮ್ಮ ಸಂಸ್ಥೆ ವಿವಿಧ ಯೋಜನೆಗಳಿಗೆ ಒಂದು ಪ್ಲಾಟ್ ಫಾರಂ/ವೇದಿಕೆ ಸೃಷ್ಠಿ ಮಾಡಲು ಮುಂದಾಗಿದೆ. ಒಂದೊಂದು ಆಸಕ್ತ ಸಂಸ್ಥೆಯವರು ಒಂದೊಂದು ಹೊಣೆಗಾರಿಕೆ ತೆಗೆದು ಕೊಳ್ಳಲು ಅವಕಾಶ ಕಲ್ಪಿಸ ಲಾಗುವುದು. 

 ಈ ಹಿನ್ನಲೆಯಲ್ಲಿ ಮೊದಲನೇ ಹಂತದಲ್ಲಿ 108 ಶಕ್ತಿಪಿಠಗಳ ಅಧ್ಯಯನ ಪ್ರಾತ್ಯಾಕ್ಷಿಕೆ ಕಾಮಗಾರಿಯನ್ನು ಕ್ಯಾಂಪಸ್‍ನಲ್ಲಿ ಲೈವ್ ಸಂಶೋಧನೆಯಾಗಿ ಆರಂಭಿಸಿದ್ದೇವೆ. ಉಳಿದ ಎರಡು ಉದ್ದೇಶಗಳಿಗೆ ಆರಂಭಿಕ ಹಂತದಲ್ಲಿ ರಾಜ್ಯದ 40 ಜನ ಸಂಸದರ ಶಕ್ತಿಯನ್ನು/ಯುಕ್ತಿಯನ್ನು ಬಳಸಿಕೊಂಡರೇ ಮಾತ್ರ ಗುರಿ ತಲುಪಬಹುದಾಗಿದೆ.

ಪ್ರಯತ್ನ ಆರಂಭವಾಗಿದೆ               —- ಮುಂದುವರೆಯಲಿದೆ.