TUMAKURU:SHAKTHIPEETA FOUNDATION
ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂಪ್ಪನವರು.
ಮಾನ್ಯ ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆರವರು.
ಮಾನ್ಯ ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಮನ್‍ರವರು.
ಮಾನ್ಯ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿರವರು.
ಮಾನ್ಯ ಕೇಂದ್ರ ಸಚಿವರಾದ ಶ್ರೀ ಡಿ.ವಿ.ಸದಾನಂದ್‍ಗೌಡರವರು.
ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು.
ಮಾನ್ಯ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು.
ತಮ್ಮಲ್ಲಿ ಮತದಾರಪ್ರಭುಗಳ ಒಂದು ಸಣ್ಣ ಮನವಿ/ಪ್ರಾರ್ಥನೆ. ದೇವರು ನಿಮಗೆಲ್ಲರಿಗೂ ಅಧಿಕಾರ ನೀಡಿದ್ದಾನೆ. ಶಕ್ತಿದೇವತೆ ತಮಗೆಲ್ಲರಿಗೂ ಉತ್ತಮ ಅವಕಾಶ ಕಲ್ಪಿಸಿದ್ದಾಳೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮೊದಲಿನಿಂದಲೂ ಇದ್ದೆ ಇದೆ, ಇಲ್ಲಿ ಪಕ್ಷಗಳ ಲೆಕ್ಕ ಬರುವುದಿಲ್ಲಾ ಹಾಗೂ ಕೆಲವೊಮ್ಮೆ ಯಾವುದು ಲೆಕ್ಕಕ್ಕೆ ಬರದೇ ಕೋಟ್ಯಾನು ಕೋಟಿ ಹಣ ಬಂದಿರುವ ಉದಾಹರಣೆಗಳು ನಮ್ಮಲ್ಲಿ ಇವೆ.
‘ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯ ಹೆಚ್ಚಿಗೆ ಅನುದಾನ ಪಡೆದ ರಾಜ್ಯವಾಗಬೇಕು’, ಎಂಬ ಆಸೆ, ಅತಿಯಾಸೆ ನಮ್ಮ ಸಂಸ್ಥೆಯದ್ದಾಗಿದೆ. ಈ ಬಗ್ಗೆ ಕಳೆದ 33 ವರ್ಷಗಳಿಂದ ಕೆಲಸ ಮಾಡಿರುವ ಅನುಭವ ಸ್ವಲ್ಪ ಇದೆ.
ರಾಜ್ಯದ 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರು, 225 ಜನ ವಿಧಾನ ಸಭಾ ಸದಸ್ಯರು ಹಾಗೂ 75 ಜನ ವಿಧಾನಪರಿಷತ್ ಸದಸ್ಯರು ಮತ್ತು ಒಬ್ಬರು ದೆಹಲಿ ಪ್ರತಿನಿಧಿ ಸೇರಿದಂತೆ 341 ಜನರು ಪ್ರಾಮಾಣಿಕವಾಗಿ ಶ್ರಮಿಸಿದರೇ, ಕೊರೊನಾದಿಂದ ಬದುಕಿ ಉಳಿದರೆ, ಖಂಡಿತಾ ನಮ್ಮ ಕಣ್ಣು ಮುಂದೆ ನೋಡಬಹುದಾಗಿದೆ. ಪಕ್ಷ ರಾಜಕಾರಣ ಚುನಾವಣೆಗೆ ಬಿಡಿ, ಅಭಿವೃದ್ಧಿ ರಾಜಕಾರಣಕ್ಕೆ ಒಂದಾಗಿ ಆದರ್ಶವಾಗಲು ಮನವಿ.
‘ಸಿದ್ಧರಾಮಯ್ಯನವರು ವಿಧಾನಸಭೆಗೆ ವಿರೋಧ ಪಕ್ಷದ ನಾಯಕರಾದರೆ, ನಮ್ಮ ಟೀಂ 341 ಜನರಿಗೂ ವಿರೋಧ ಪಕ್ಷದ ನಾಯಕರಂತೆ ಕಾರ್ಯನಿರ್ವಹಿಸಲಿದೆ, ಕೇಂದ್ರದ ಯೋಜನೆಗಳ ಮಂಜೂರಾತಿಗಾಗಿ ನಿಮ್ಮ ಕರ್ತವ್ಯಗಳ ಬಗ್ಗೆ ಡಿಜಿಟಲ್ ವಾರ್ ಮಾಡುವುದು ನಮ್ಮ ಗುರಿ’
ಕಡೇ ಪಕ್ಷ ರಾಜ್ಯದ ನದಿಜೋಡಣೆ ವಿಚಾರದಲ್ಲಿಯಾದರೂ ಒಂದಾದರೆ, ರಾಜ್ಯದ 36608 ಕೆರೆ-ಕಟ್ಟೆಗಳಿಗೂ ನದಿ ನೀರಿನಿಂದ ತುಂಬಿಸುವ ಮೂಲಕ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ನೀಡಬಹುದಾಗಿದೆ. ಪೂರಕವಾಗಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರ ಮನವಿ ಮೇರೆಗೆ ಮಾನ್ಯ ಮುಖ್ಯ ಮಂತ್ರಿಯವರು ಶುಭಾರಂಭ ಮಾಡಿದ್ದಾರೆ, 340 ಜನರ ಸಹಭಾಗಿತ್ವ ಯೋಜನೆ ರೂಪಿಸಲು ಬೇಕಿದೆ.
ಜಲಸಂಪನ್ಮೂಲ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‍ಸಿಂಗ್‍ರವರು ಮತ್ತು ಅವರ ಉನ್ನತ ಮಟ್ಟದ ಅಧಿಕಾರಿಗಳ ತಂಡ ಕೇಂದ್ರದ ಎನ್.ಪಿ.ಪಿ ಯೋಜನೆಯಡಿಯಲ್ಲಿ ಅನುದಾನ ತರಲು ಕ್ರಮಬದ್ಧವಾಗಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಫಲ ದೊರೆಯಲಾರಂಭಿಸಿದೆ. ‘ಭಧ್ರಾಮೇಲ್ದಂಡೆ ಯೋಜನೆ ಎನ್.ಪಿ.ಪಿ ಯೋಜನೆಯಾಗಿ ಇತಿಹಾಸದ ಪುಟದಲ್ಲಿ ಸೇರ್ಪಡೆಯಾಗಲಿದೆ.’
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್‍ರವರು ರಾಜ್ಯದ ನದಿ ಜೋಡಣೆ ಯೋಜನೆಯ ನೋಡೆಲ್ ಆಫೀಸರ್ ಆಗಿದ್ದಾರೆ. ನಿಮ್ಮ ನಿಮ್ಮ ಪಕ್ಷದ ನಿಲುವು, ಸಲಹೆ, ಮಾರ್ಗದರ್ಶನ ಅಗತ್ಯವಾಗಿದೆ.
ನಾನು ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯನಾಗಿ ತಮ್ಮೆಲ್ಲರ ಸಹಕಾರದಿಂದ ಈ ಯೋಜನೆಗೆ ಶ್ರಮಿಸಲು ಉತ್ಸುಕನಾಗಿದ್ದೇನೆ. ಎಲ್ಲರೂ ಪಕ್ಷಾತೀತವಾಗಿ ಕೈಜೋಡಿಸಿಸಲು ಸವಿನಯ ಪ್ರಾರ್ಥನೆ.