12th September 2024
Share

TUMAKURU:SHAKTHIPEETA FOUNDATION

ದಿಶಾ ಸಮಿತಿ ಸಭೆ ಕರೆದು ಚರ್ಚಿಸಲು ನಿಮ್ಮ ನಿಮ್ಮ ಪಕ್ಷದ ಸಂಸದರಿಗೆ ಏನಾಗಿದೆ. ವರ್ಷದಲ್ಲಿ ಕನಿಷ್ಟ ನಾಲ್ಕು ಸಭೆ ನಡೆಸಲು ಇವರಿಗೆ ಸಮಯವಿಲ್ಲವೇ? ಕೇಂದ್ರ ಸರ್ಕಾರದ ಅನುದಾನದಲ್ಲಿ ನಮ್ಮ ಜಿಲ್ಲೆಯಲ್ಲಿ ಏನೇನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಆಸಕ್ತಿ ಸಂಸದರಿಗೆ ಇಲ್ಲವೇ? ಈ ಬಗ್ಗೆ ತಾವುಗಳು ಮೌನ ವಹಿಸುವುದು ಸರಿಯೇ?

  1. ಶ್ರೀ ನಳೀನ್ ಕುಮಾರ್ ಕಟೀಲ್‍ರವರು, ರಾಜ್ಯಾಧ್ಯಕ್ಷರು ಬಿಜೆಪಿ. ಕರ್ನಾಟಕ.
  2. ಶ್ರೀ ಡಿ.ಕೆ.ಶಿವಕುಮರ್ ರವರು ರಾಜ್ಯಾಧ್ಯಕ್ಷರು ಕೆಪಿಸಿಸಿ ಕರ್ನಾಟಕ.
  3. ಶ್ರೀ ಹೆಚ್.ಕೆ.ಕುಮಾರ್‍ಸ್ವಾಮಿರವರುರವರು ರಾಜ್ಯಾಧ್ಯಕ್ಷರು ಕೆಪಿಸಿಸಿ ಕರ್ನಾಟಕ.
  4. ಶ್ರೀಮತಿ ಸುಮಲತರವರು ಪಕ್ಷೇತರ ಲೋಕಸಭಾ ಸದಸ್ಯರು.

ರಾಜ್ಯದ 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯ ಸಭಾ ಸದಸ್ಯರಲ್ಲಿ ಸುಮಾರು 39 ಜನ ಟ್ವಿಟ್ಟರ್ ಖಾತೆ ತೆರೆದು ತಾವು ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಅಫ್ ಲೋಡ್ ಮಾಡುತ್ತಿದ್ದಾರೆ. ಕೆಲವರು ಆಕ್ಟೀವ್ ಆಗಿದ್ದರೆ, ಕೆಲವರು ಇನ್ ಆಕ್ಟೀವ್ ಆಗಿದ್ದಾರೆ.

ಆದರೇ ಮಾಜಿ ಸಚಿವರು ಹಾಗೂ ರಾಜ್ಯ ಸಭಾ ಸದಸ್ಯರಾದ ಶ್ರೀ ಆಸ್ಕರ್ ಪರ್ನಾಂಡೀಸ್‍ರವರು ಟ್ವಿಟ್ಟರ್ ಖಾತೆ ತೆರೆದಿಲ್ಲವೋ ಅಥವಾ ನನಗೆ ಸಿಗಲಿಲ್ಲವೋ ಅನುಮಾನವಿದೆ.

ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಕಾರ್ಯವೈಖರಿಯಲ್ಲಿ ನಮ್ಮ ರಾಜ್ಯ ದೇಶಕ್ಕೆ ಮಾದರಿಯಾಗಬೇಕಿದೆ. ಸುಮಾರು 28 ಜಿಲ್ಲೆಗಳಲ್ಲಿ ಬಿಜೆಪಿ ಲೋಕ ಸದಸ್ಯರು ಅಧ್ಯಕ್ಷರಾಗಿದ್ದರೂ, ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನ ಸಮಿತಿಯ ಸಭೆ ಕರೆದು ಚರ್ಚಿಸಲಿಲ್ಲ ಎಂದರೆ ಅವರಿಗೆ ಮಾಡಿದ ಅಪಮಾನವಾಗುತ್ತದೆ.

ರಾಜ್ಯದ ಜನತೆ/ಮತದಾರರ ಪ್ರಭುಗಳಿಗೂ ಮಾಡುವ ಅಪಮಾನವಾಗಲಿದೆ. ಈ ವರ್ಷ ನಮ್ಮ ರಾಜ್ಯ ದೇಶದಲ್ಲಿಯೇ ಪ್ರಥಮವಾಗಲು ಪ್ರಯತ್ನ ಮಾಡಬೇಕಿದೆ.

ಮೊದಲು ಜಿಲ್ಲಾವಾರು ಕೇಂದ್ರ ಸರ್ಕಾರದಿಂದ ಕೊರೊನಾ ಪರಿಹಾರಕ್ಕೆ ಬಂದಿರುವ ಅನುದಾನ, ಉಪಕರಣ, ಸಲಕರಣೆ ಮತ್ತು ಆತ್ಮನಿರ್ಭರ ಯೋಜನೆಯಡಿಯಲ್ಲಿ ಆಯಾ ಜಿಲ್ಲೆಗೆ ಬಂದಿರುವ ಅನುದಾನಗಳ ಬಗ್ಗೆ ಚರ್ಚೆ ಮಾಡಿ ಜನತೆಗೆ ತಿಳಿಸಲಿ.

 ಸೋಶಿಯಲ್ ಮೀಡಿಯಾಗಳಲ್ಲಿ ಬಿಜೆಪಿ ಸಂಸದರ ಮೂಗಿಗೆ ಹತ್ತಿ ಇಟ್ಟು ಅಪಮಾನ ಮಾಡುತ್ತಿದ್ದಾರೆ. ಪಾರದರ್ಶಕತೆಗೆ ಒತ್ತು ಕೊಡುವುದು ಸಂಸದರ ಕರ್ತವ್ಯವಲ್ಲವೇ? ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ, ಅವರದೇ ಪಕ್ಷದ 25 ಜನ ಸಂಸದರಿದ್ದರೂ ಏನೂ ಆಗಿಲ್ಲ ಎಂದು ಬೊಬ್ಬೆಹೊಡೆಯುತ್ತಿದ್ದಾರೆ. ಶ್ರೀ ನಳೀನ್ ಕುಮಾರ್‍ಕಟೀಲ್‍ರವರು ಜವಾಬ್ಧಾರರಲ್ಲವೇ?

ಸರ್ವಪಕ್ಷಗಳ ನಾಯಕರು ಈ ಬಗ್ಗೆ ವಿಶೇಷ ಆಸಕ್ತಿ ತೆಗೆದುಕೊಳ್ಳುವುದು ಸೂಕ್ತವಾಗಿದೆ. ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಬೇಕಾದರೆ, ದಿಶಾ ಸಮಿತಿಗಳು ಚೆನ್ನಾಗಿ ನಡೆಯ ಬೇಕು, ಜೊತೆಗೆ ಕ್ರಮಬದ್ಧವಾಗಿ ನಡೆಯಬೇಕಲ್ಲವೇ?