TUMAKURU:SHAKTHIPEETA FOUNDATION
ರಾಜ್ಯದ ಎಲ್ಲಾ ಮಾಜಿ ಮುಖ್ಯ ಮಂತ್ರಿಯವರಾದ
ಸನ್ಮಾನ್ಯ
1.ಶ್ರೀ ಹೆಚ್.ಡಿ.ದೇವೇಗೌಡರವರು.
2.ಶ್ರೀ ಎಸ್.ಎಂ.ಕೃಷ್ಣರವರು.
3.ಶ್ರೀ ಎಂ.ವೀರಪ್ಪ ಮೊಯ್ಲಿರವರು.
4.ಶ್ರೀ ಡಿ.ವಿ.ಸದನಂದಗೌಡರವರು.
5.ಶ್ರೀ.ಜಗದೀಶ್‍ಶೆಟ್ಟರ್‍ರವರು.
6.ಶ್ರೀ ಸಿದ್ಧರಾಮಯ್ಯನವರು.
7.ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು
ರವರಿಗೂ ಡಿಜಿಟಲ್ ಮನವಿ ಮಾಡಿ, ಮಾನ್ಯ ಮುಖ್ಯ ಮಂತ್ರಿಯವರಿಗೆ ಅಗತ್ಯ ಕ್ರಮ ಕೈಗೊಳ್ಳಲು ಪತ್ರ ಬರೆಯಲು ಮನವಿ ಮಾಡಲಾಗಿದೆ.
ಓದುಗರು ಸಲಹೆ ನೀಡಬಹುದಾಗಿದೆ.
ಗೆ ದಿನಾ0ಕ:27.05.2021
ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪವರು.
ಮಾನು ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ.
ಹಾಗೂ
ಅಧ್ಯಕ್ಷರು. ರಾಜ್ಯ ಮಟ್ಟದ ದಿಶಾ ಸಮಿತಿ.
ವಿಧಾನ ಸೌಧ, ಮೂರನೇ ಮಹಡಿ, ಬೆಂಗಳೂರು.
ಇವರಿಂದ.
ಕುಂದರನಹಳ್ಳಿ ರಮೇಶ್.
ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ. ಕರ್ನಾಟಕ ಸರ್ಕಾರ.
ಪಾರ್ವತಿ ನಿಲಯ, 1 ನೇ ಮುಖ್ಯ ರಸ್ತೆ, ಜಯನಗರ ಪೂರ್ವ, ಶೆಟ್ಟಿಹಳ್ಳಿ ಮುಖ್ಯ ರಸ್ತೆ. ತುಮಕೂರು-572102.
ಮೊ:9886774477
ಇವರ ಮುಖಾಂತರ
ಶ್ರೀಮತಿ ಶಾಲಿನಿ ರಜನೀಶ್
ಸದಸ್ಯ ಕಾರ್ಯದರ್ಶಿ, ರಾಜ್ಯ ಮಟ್ಟದ ದಿಶಾ ಸಮಿತಿ.
ಬಹುಮಹಡಿಗಳ ಕಟ್ಟಡ, 7 ನೇ ಪ್ಲೋರ್.
ಬೆಂಗಳೂರು.
ಮಾನ್ಯರೇ.
ವಿಷಯ: ರಾಜ್ಯ ನದಿ ಜೋಡಣೆ ಮತ್ತು ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಭಿವೃದ್ಧಿ
ನಾನೊಬ್ಬ ರೈತನಾದರೂ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ವಿವಿಧ ಇಲಾಖೆಗಳಿಗೆ ಹೊಣೆಗಾರಿಕೆ ನೀಡುವ ಬಗ್ಗೆ ಕೆಲವು ಅಭಿಪ್ರಾಯಗಳನ್ನು ನೀಡಲು ಬಯಸಿದ್ಧೇನೆ.
‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಘೋಷಣೆಯಡಿಯಲ್ಲಿ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಬೇಕು ಎಂಬ ಉದ್ದೇಶದಿಂದ ತಾವೂ ಈ ಭಾರಿ ಮುಖ್ಯಮಂತ್ರಿ ಆದ ಆರಂಭದಿಂದ ಕೆಲವು ಮಹತ್ತರವಾದ ಕ್ರಮಗಳನ್ನು ಕೊಂಡಿದ್ದೀರಿ ಎಂದು ತಿಳಿಸಲು ಹರ್ಷಿಸುತ್ತೇನೆ.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ, ತಾವೂ ಆದೇಶ ನೀಡಿದ ನಂತರ ಮಾಜಿ ಜಲಸಂಪನ್ಮೂಲ ಸಚಿವರಾದ ಶ್ರೀ ರಮೆಶ್ ಜಾರಕಿಹೊಳೆರವರು ಮತ್ತು ಜಲಸಂಪನ್ಮೂಲ ಅಪರಮುಖ್ಯ ಕಾರ್ಯದರ್ಶಿಗಳಾದ ಶ್ರೀ ರಾಕೇಶ್‍ಸಿಂಗ್‍ರವರು ರಾಜ್ಯದ ನದಿ ಜೋಡಣೆ ಬಗ್ಗೆ ವಿವರವಾದ ಡಿಪಿಆರ್ ಮಾಡಲು ನೋಡೆಲ್ ಅಧಿಕಾರಿಯಾಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರನ್ನು ನೇಮಿಸಿದ್ದಾರೆ.
‘ಡಿಪಿಆರ್ ನೀಡುವ ಮುನ್ನ, ವಿಶ್ವದ ಬೆಸ್ಟ್ ಪ್ರಾಕ್ಟೀಸಸ್ ಮಾಹಿತಿ ಸಂಗ್ರಹಿಸಿ, ರಾಜ್ಯದ ನದಿ ನೀರು, ಕೇಂದ್ರದ ನದಿ ಜೋಡಣೆಯಿಂದ ರಾಜ್ಯಕ್ಕೆ ಹಂಚಿಕೆಯಾಗುವ ನದಿ ನೀರು, ಮಳೆ ನೀರು, ಪುನರ್ ಬಳಕೆ ನೀರು ಹೀಗೆ ಅಗತ್ಯವಿರುವ ಒಂದು ಹನಿ ನೀರಿನ ವೈಜ್ಞಾನಿಕ ಬಳಕೆ, ಅಕ್ರಮ ನೀರಿನ ಬಳಕೆಗೆ ಕಡಿವಾಣದೊಂದಿಗೆ ಜಲನೀತಿ ಆಧ್ಯತೆಗಳೊಂದಿಗೆ ಕಲ್ಪನಾ ವರದಿ ಸಿದ್ಧಪಡಿಸಿ ರಾಜ್ಯದ ಎಲ್ಲಾ ವರ್ಗದವರ ಅಭಿಪ್ರಾಯ ಸಂಗ್ರಹಿಸಲು ತಾವೇ ಖುದ್ದಾಗಿ ಪತ್ರ ಬರೆಯುವ ಮೂಲಕ ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಜನಸಾಮಾನ್ಯರು ಒಪ್ಪುವ ವರದಿ ತಯಾರಿಸಲು ಈ ಮೂಲಕ ಮನವಿ ಮಾಡಲಾಗಿದೆ.’
1.ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ ಚರ್ಚಿಸಿ ಆಯಾ ಜಿಲ್ಲೆಯ ಹಾಲಿ ಅಲೋಕೇಷನ್ ಆಗಿರುವ ನದಿ ನೀರು ಮತ್ತು ಅಗತ್ಯವಿರುವ ನದಿ ನೀರಿನ ಮಾಹಿತಿ ನೀಡಲು ಸೂಚಿಸುವುದು.
2.2016 ರಲ್ಲಿಯೇ ಮಾನ್ಯ ಪ್ರಧಾನ ಮಂತ್ರಿಯವರ ಸೂಚನೆ ಮೇರೆಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ‘ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್’ ಮಾಡಿ ಕೇಂದ್ರ ಸರ್ಕಾರದ ಪೋರ್ಟಲ್‍ನಲ್ಲಿ ಅಫ್‍ಲೋಡ್ ಮಾಡಿದ್ದಾರೆ. ಆ ವರದಿ ಬಗ್ಗೆ ಪುನರ್ ಪರಿಶೀಲನೆ ಅಗತ್ಯ ಇದ್ದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಕಮಿಟಿಯಿಂದ ವರದಿ ನೀಡಲು ಸೂಚಿಸುವುದು.
3.ರಾಜ್ಯದ ಎಲ್ಲಾ ಇಲಾಖೆಯ ಸಚಿವರುಗಳಿಗೆ ಪತ್ರ ಬರೆದು ಅವರ ಇಲಾಖೆಗಳಿಗೆ ಅಗತ್ಯವಿರುವ ನೀರಿನ ಮಾಹಿತಿ ಸಂಗ್ರಹಿಸುವುದು.
4.ತುಮಕೂರು ಜಿಲ್ಲೆಯಲ್ಲಿ ಸಣ್ಣನೀರಾವರಿ ಇಲಾಖೆ ಸಿದ್ಧಪಡಿಸಿರುವ ವರದಿಯ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ನದಿ ನೀರಿನ ಅಲೋಕೇಷನ್ ಮಾಹಿತಿ, ಗ್ರಾಮವಾರು ಜಲಸಂಗ್ರಹಾಗಾರಗಳ ಮಾಹಿತಿ, ಜಲಸಂಗ್ರಹಾಗಾರಗಳಿಲ್ಲದ ಗ್ರಾಮಗಳ ಮಾಹಿತಿ, ಇತ್ಯಾದಿ ಮಾಹಿತಿಯನ್ನು ಪಡೆಯಲು ಸಣ್ಣ ನೀರಾವರಿ ಇಲಾಖೆಗೆ ಸೂಚಿಸುವುದು.
5.ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಂದ ಕೆರೆ-ಕಟ್ಟೆಗಳ ಜಿಐಎಸ್ ಆಧಾರಿತ ಜಿಐಎಸ್ ಆಧಾರಿತ ಮಾಹಿತಿ ನೀಡಲು ಸೂಚಿಸುವುದು.
6.ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕೆರೆ-ಕಟ್ಟೆಗಳ ಜಿಐಎಸ್ ಆಧಾರಿತ ಜಿಐಎಸ್ ಆಧಾರಿತ ಮಾಹಿತಿ ನೀಡಲು ಸೂಚಿಸುವುದು.
7.ಸುಮಾರು 600 ಟಿ.ಎಂ.ಸಿ ಅಡಿ ನೀರಿನ ರಾಜ್ಯದ ನದಿ ಜೋಡಣೆ ಯೋಜನೆ ಮಾಡಲು, ತಾವು ಈಗಾಗಲೇ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದ ಅಂಶಗಳ ಬಗ್ಗೆ ರಾಜ್ಯದ ಸರ್ವಪಕ್ಷಗಳ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಲು ಪತ್ರ ಬರೆಯುವುದು.
8.ರಾಜ್ಯದ ಎಲ್ಲಾ ಮಾಜಿ ಮುಖ್ಯ ಮಂತ್ರಿಯವರ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಲು ಪತ್ರ ಬರೆಯುವುದು.
9.ರಾಜ್ಯದ ಎಲ್ಲಾ ಮಾಜಿ ಜಲಸಂಪನ್ಮೂಲ ಸಚಿವರ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಲು ಪತ್ರ ಬರೆಯುವುದು.
10.ರಾಜ್ಯದ 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯ ಸಭಾ ಸದಸ್ಯರು, 225 ಜನ ವಿಧಾನ ಸಭಾ ಸದಸ್ಯರು ಮತ್ತು 75 ಜನ ವಿಧಾಬಪರಿಷತ್ ಸದಸ್ರಿಗೂ ಪತ್ರ ಬರೆದು ಅವರ ವೈಯಕ್ತಿಕ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸುವುದು.
11.ರಾಜ್ಯದ ನೀರಾವರಿ ಪರಿಣಿತರು, ಧಾರ್ಮಿಕ ಮುಖಂಡುರುಗಳು, ಮಠಮಾನ್ಯಗಳು, ಪರಿಸರ ಸಂಘಟನೆಗಳ, ಜಾತಿ ಸಂಘಟನೆಗಳು, ನೀರಾವರಿ ಹೋರಾಟಗಾರರು, ಸಂಘ ಸಂಸ್ಥೆಗಳು, ರೈತ ಸಂಘಟನೆಗಳು ಸೇರಿದಂತೆ ಎಲ್ಲಾವರ್ಗದವರು ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು ಮಾಧ್ಯಮಗಳಲ್ಲಿ ಜಾಹಿರಾತು ನೀಡುವುದು.
12.ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಇರುವ ಅಧಿಕಾರಿಗಳ ಮತ್ತು ಇಂಜಿನಿಯರ್‍ಗಳ ವೈಯಕ್ತಿಕ ಸಲಹೆ ಅಭಿಪ್ರಾಯ ಸಂಗ್ರಹಣೆ ಮಾಡಲು ಎಲ್ಲಾ ಇಲಾಖೆಗಳಿಗೂ ಪತ್ರ ಬರೆಯುವುದು.
13.ಒಂದು ‘ಪೋರ್ಟಲ್’ ಮಾಡಿ ಎಲ್ಲಾ ಹಂತದವರು ಅವರ ಅಭಿಪ್ರಾಯಗಳನ್ನು ಅಪ್‍ಲೋಡ್ ಮಾಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವುದು.
14.ರಾಜ್ಯದ ಮಾಜಿ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸುವುದು.
15.ಪಿಪಿಪಿ ಮಾದರಿಯಲ್ಲಿ ನೀರಾವರಿ ಯೋಜನೆಗಳಿಗೆ ಹೂಡಿಕೆ ಮಾಡುವವರ ಮಾಹಿತಿ ಸಂಗ್ರಹಿಸಲು ಒಂದು ‘ಉನ್ನತ ಮಟ್ಟದ ಸಮಿತಿ’ ರಚಿಸುವುದು.
16.ರಾಜ್ಯ ಮಟ್ಟದ ದಿಶಾ ಸಮಿತಿಯಿಂದ , ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೂ ಒಬ್ಬೊಬ್ಬ ಜಲಸಂಪನ್ಮೂಲ ಇಲಾಖೆಯ ಅಥವಾ ಸಿವಿಲ್ ವಿಭಾಗದ ಮುಖ್ಯ ಇಂಜಿನಿಯರ್ ನೇಮಿಸಿ, ಗ್ರಾಮವಾರು, ಸ್ಥಳೀಯ ಸಂಸ್ಥೆವಾರು ತಾಂತ್ರಿಕ ಮಾಹಿತಿ ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳುವುದು.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
(ಕುಂದರನಹಳ್ಳಿ ರಮೇಶ್)