TUMAKURU: SHAKTHIPEETA FOUNDATION
ತುಮಕೂರು ಸ್ಮಾರ್ಟ್ ಸಿಟಿ ತುಮಕೂರು ನಗರದ ಸರ್ಕಾರಿ ಕಾಲೇಜು ಆವರಣದ ರಸ್ತೆಯಲ್ಲಿದ್ದ ಆಲದಮರಗಳಿಗೆ ಅಲಂಕಾರ ಮಾಡಿ ಒಂದು ಒಳ್ಳೆಯ ವನವನ್ನು ನಿರ್ಮಿಸಿದೆ. ಇನ್ನೂ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ.
ಈ ಸ್ಥಳವನ್ನು ಯಾವ ರೀತಿ ನಿರ್ವಹಣೆ ಮಾಡಬೇಕು? ಯಾರು ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಒಂದು ಚರ್ಚೆ ಇಂದು (03.08.2021) ರಂದು ಬೆಳಿಗ್ಗೆ ನಡೆಯಿತು. ತುಮಕೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಶ್ರೀ ಚನ್ನವೀರಯ್ಯನವರು, ಶ್ರೀ ಟಿ.ವಿ.ಎನ್. ಮೂರ್ತಿಯವರು, ಶ್ರೀ ಕೆರೆ-ಕಟ್ಟೆ ಗುಂಡಪ್ಪನವರು, ಶ್ರೀ ದನಿಯಾ ಕುಮಾರ್ ರವರು, ಕುಂದರನಹಳ್ಳಿ ರಮೇಶ್ ಇದ್ದರು.
ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಶಾಸಕರಾದ ಶ್ರೀ ಜಿ.ಬಿ.ಜ್ಯೋತಿ ಗಣೇಶ್ ರವರು ಈಗಾಗಲೇ ಪ್ರಾಥಮಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಈ ಯೋಜನೆಯ ನಿರ್ವಹಣೆ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಲು ಸಲಹೆ ನೀಡಿದ್ದಾರೆ.
ಶ್ರೀ ದನಿಯಾ ಕುಮಾರ್ ರವರು ಸಾರ್ ಈ ಜಾಗ ರಸ್ತೆ, ಕಾಲೇಜು ಆವರಣದಲ್ಲಿ ಇಲ್ಲ, ರಸ್ತೆಯಾದ್ದರಿಂದ ಇದು ತುಮಕೂರು ಮಹಾ ನಗರ ಪಾಲಿಕೆಯ ಸ್ವತ್ತು ಎಂಬ ಸಲಹೆಯೂ ಯೋಚಿಸುವಂತಿತ್ತು.
ಅದು ಏನೆ ಇರಲಿ ತುಮಕೂರು ನಗರದ ಯಾವ ವರ್ಗದ ಜನರು, ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಒಂದು ಪಿಪಿಟಿ ಯನ್ನು ಸಿದ್ಧಪಡಿಸಿ ಸಾರ್ವಜನಿಕರ ಮುಂದೆ ಪ್ರದರ್ಶಿಸಿ, ನಂತರ ವರ್ಷ ಪೂರ್ತಿ ಕಾರ್ಯಕ್ರಮಗಳು ನಡೆಯುವಂತೆ ಮತ್ತು ಪ್ರತಿನಿತ್ಯ ಎಷ್ಟು ಜನ ಪ್ರವೇಶ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲು ಚರ್ಚೆ ನಡೆಯಿತು. ಒಂದು ಅಂದಾಜಿನ ಪ್ರಕಾರ ಈ ಆವರಣದಲ್ಲಿನ ಸುಮಾರು 5000 ವಿದ್ಯಾರ್ಥಿಗಳು ಪ್ರವೇಶ ಮಾಡುವುದರ ಜೊತೆಗೆ ಬೆಳಿಗ್ಗೆ ಹಿರಿಯ ನಾಗರೀಕರು ಧ್ಯಾನ ಮಾಡುವ ಪದ್ಧತಿಯೂ ಆರಂಬವಾಗಿದೆಯಂತೆ.
ಶ್ರೀ ಮೂರ್ತಿಯವರು ಮತ್ತು ಅವರ ತಂಡ ಪರಿಸರ, ಜೀವ ವೈವಿಧ್ಯ, ಕಲೆ ಮತ್ತು ಸಾಂಸ್ಕøತಿಕವಾಗಿ ಒಂದು ಪಿಪಿಟಿ ಸಿದ್ಧಪಡಿಸಿ ದಿಶಾ ಸಭೆಯಲ್ಲಿ ಪ್ರದರ್ಶನ ಮಾಡಲು ತೀರ್ಮಾನ ಮಾಡಲಾಯಿತು.
ತುಮಕೂರು ಜಿಲ್ಲೆಯಲ್ಲಿ ಇಂಥಹ ಆನೇಕ ಸ್ಥಳಗಳು ಪಾಳು ಬಿದ್ದಿವೆ, ಇವೆಲ್ಲಕ್ಕೂ ಮುಕ್ತಿ ಕಾಣುವಂತಾಗಬೇಕು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ ಒಂದು ಅಧ್ಯಯನ ನಡೆಯಬೇಕಿದೆ. ಶತಮಾನ ಕಂಡ ಪಾರಂಪರಿಕ ಕಟ್ಟಡಗಳ ಪಟ್ಟಿಯನ್ನು ಆಸಕ್ತರು ನೀಡಲು ಮನವಿ ಮಾಡಲಾಗಿದೆ.