12th September 2024
Share

ಘೋಷ್ಠಿಯಲ್ಲಿ ಶ್ರೀ ಹೆಬ್ಬಾಕ ರವೀಶ್, ಬಾವಿಕಟ್ಟೆ ನಾಗಣ್ಣ, ಪಾವಗಡ ಶಿವಪ್ರಸಾದ್, ಕೊಪ್ಪಳನಾಗರಾಜ್, ಕಾಟೇನಹಳ್ಳಿ ಕುಮಾರ್, ಬಂಡಿಹಳ್ಳಿ ಚಂದ್ರಮೌಳಿ, ರಾಮಚಂದ್ರ ಇನ್ನೂ ಮಂತಾದವರು ಇದ್ದರು.

TUMAKURU:SHAKTHIPEETA FOUNDATION

ತುಮಕೂರು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮೇಲೆ ಅನಾಗರಿಕ ಪದ ಬಳಸಿ ಸುಳ್ಳು ಆರೋಪ ಮಾಡಿರುವ ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರ ವಿರುದ್ಧ ಅಭಿವೃದ್ಧಿ ಸಮರ ಸಾರುವ ಮೂಲಕ ಕ್ಷೇತ್ರದಲ್ಲಿ ಯಾರು ಏನು ಮಾಡಿದ್ದಾರೆ?  ಮಾಡಬೇಕಾಗಿತ್ತು? ಎಂಬ ಬಗ್ಗೆ ಜನಜಾಗೃತಿ ಮೂಡಿಸಲು ಘೋಷಣೆ ಮಾಡಲಾಯಿತು.

ಗುಬ್ಬಿ ತಾಲ್ಲೂಕು ನಂದಿಹಳ್ಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧಾಗ ಸಂಸದರನ್ನು ಆ ಭಾಗದ ಜನತೆ ಹೇಮಾವತಿ ನೀರು ಕಡಿಮೆ ಬರುತ್ತದೆ ಇದಕ್ಕೆ ಪರಿಹಾರ ನೀಡಿ ಎಂದಾಗ ಶ್ರೀ ಜಿ.ಎಸ್.ಬಸವರಾಜ್ ರವರು ರೂ 550 ಕೋಟಿ ವೆಚ್ಚದಲ್ಲಿ ಹೇಮಾವತಿ ನಾಲಾ ಆಧುನೀಕರಣವಾಗಲಿದೆ. ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಬೃಹತ್ ಕೊಡುಗೆ ನೀಡಿದ್ದಾರೆ ಎಂದು ಹೇಳುವ ಸಮಯದಲ್ಲಿ ಶಾಸಕರು ಏಕೋ ಏನೋ ಅನಾಗರಿಕರಂತೆ ವರ್ತಿಸಿದ್ದಾರೆ.

ಸಂಸದರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಇದೊಂದು ಸಾರ್ವಜನಿಕರು ತಲೆ ತಗ್ಗಿಸುವ ವಿಚಾರ.

ರಾಜಕರಾಣದಲ್ಲಿ ಎರಡು ಭಾಗಗಳಿವೆ. ಒಂದು ಚುನಾವಣಾ ರಾಜಕರಾಣ, ಇನ್ನೊಂದು ಅಭಿವೃದ್ಧಿ ರಾಜಕಾರಣ?

ಚುನಾವಣಾ ರಾಜಕರಾಣ ಆರೋಪ ಪತ್ಯಾರೋಪ, ಸುಳ್ಳೆ ಬಂಡವಾಳ, ಅಲ್ಲಿ ಹೇಳುವುದೇ ಬೇರೆ.

ಆದರೇ ಅಭಿವೃದ್ಧಿ ರಾಜಕಾರಣದಲ್ಲಿ ಈ ರೀತಿ ಆರೋಪ ಸರಿಯಲ್ಲ ಎಂದು ದಾಖಲೆ ಸಹಿತ ಉತ್ತರ ನೀಡಲಾಗಿದೆ.

ಹೇಮಾವತಿ ನಾಲೆಯನ್ನು ಗುಬ್ಬಿ ತಾಲ್ಲೂಕು ಸುಂಕಪುರದ ಬಳಿ ಇನ್ನೊಂದು ಎಕ್ಸ್ ಪ್ರಸೆ ಕೆನಾಲ್ ಮಾಡಿ ನೀರು ಕೊಂಡೊಯ್ಯುವ ಯೋಜನೆಗೆ ಜನ್ಮ ನೀಡಿದ್ದು ಶಾಸಕರು ಸಚಿವರಾಗಿದ್ದಾಗ.

ಈ ಯೋಜನೆ ತುಮಕೂರು ಜಿಲ್ಲೆಯ ಹೇಮಾವತಿ ಬಳಕೆದಾರರಿಗೆ ಮರಣ ಶಾಸನ ಮಾಡುವಂತ ಯೋಜನೆ.

ಸಚಿವ ಸಂಪುಟದಲ್ಲಿ ಈ ಬಗ್ಗೆ ಏಕೆ ಮಾತನಾಡಲಿಲ್ಲ. ಮತದಾರ ಪ್ರಭುಗಳಿಗೆ ಅನ್ಯಾವಾಗುವ ಯೋಜನೆಗೆ ಇವರು ಮುದ್ರೆ ಹೊತ್ತಿದ್ದಾರೆ? ಇದು ನ್ಯಾಯವೇ?

ಶ್ರೀ ಜಿ.ಎಸ್.ಬಸವರಾಜ್ ರವರು ಆಗ ಮಾಜಿ ಸಂಸದರು. ಆದರೂ ಛಲ ಬಿಡದೆ ಹೋರಾಟ ಮಾಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹುದೊಡ್ಡ ವಿಷಯವೇ ಆಯಿತು.

‘ಮಾಜಿ ಪ್ರಧಾನಿ, ಹೆಮ್ಮೆಯ ಕನ್ನಡಿಗ ಪುತ್ರ ಶ್ರೀ ಹೆಚ್.ಡಿ.ದೇವೆಗೌಡರವರ ಸೋಲಿಗೆ ನೂರಾರು ಕಾರಣಗಳಿದ್ದರೂ ಎಕ್ಸ್ ಪ್ರೆಸ್ ಕೆನಾಲ್ ಪ್ರಮುಖ ಕಾರಣಗಳಲ್ಲಿ ಒಂದು’.

ಚುನಾವಣಾ ಸಮಯಕ್ಕೆ ಮುಂಚೆ, ಚುನಾವಣಾ ನಂತರ ಗೆದ್ದಾಗಲೂ ಅವಿರತವಾಗಿ ಈ ಯೋಜನೆ ಮಂಜೂರಾತಿಗೆ ಶ್ರಮಿಸಿದ್ದು ಶ್ರೀ ಜಿ.ಎಸ್.ಬಸವರಾಜ್ ರವರು. ಅವರಿಗೆ ಹಲವಾರು ನಾಯಕರು ಕೈಜೋಡಿಸಿರ ಬಹುದು.

ಮಾಜಿಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಪರ ಸದಾ ಬಂಡೆಗಲ್ಲಿನಂತೆ ನಿಲ್ಲುತ್ತಿದ್ದ ಬಸವರಾಜ್ ರವರು, ಕೊರೊನಾ ಹಿನ್ನಲೆಯಲ್ಲಿ ಕಾಮಗಾರಿ ಮಂಜೂರಾತಿಗೆ ವಿಳಂಬ ಮಾಡಿದಾಗ ಪ್ರೀತಿಯ ಜಗಳವಾಡಿದ್ದಾರೆ. ತಿಂಗಳು ಗಟ್ಟಲೆ ಮುನಿಸಿಕೊಂಡಿದ್ದಾರೆ. ಜನತೆಗೆ ನ್ಯಾಯವಾಗಲಿದೆ ಎಂದು ಪರಿತಪಿಸಿದ್ದಾರೆ’.

ವಿರೋಧ ಪಕ್ಷದ ನಾಯಕರಾಗಿದ್ದಾಗ  ಹೇಮಾವತಿ ನಾಲೆ ಮೇಲೆ ಬಂದು ವೀಕ್ಷಣೆ ಮಾಡುವ ದಿವಸ, ಅರ್ಧಕ್ಕೆ ಮೊಟಕು ಗೊಳಿಸಿ ವಾಪಸ್ಸಾದ ಬಿಎಸ್ ವೈ ರವರು ಮುಖ್ಯ ಮಂತ್ರಿಯಾದರು.

ಕೊರೊನಾ ಹಿನ್ನಲೆಯಲ್ಲಿ ಯೋಜನೆ ಮಂಜೂರಾತಿ ವಿಳಂಭವಾದರೂ, ಅವರ ಕೊನೆಯ ಸಚಿವ ಸಂಪುಟದಲ್ಲಿ ಯೋಜನೆಯ ಟೆಂಡರ್ ಪ್ರಕ್ರೀಯೆಗೆ ಅಂತಿಮ ಮುದ್ರೆ ಹೊತ್ತಿ ತುಮಕೂರು ಜಿಲ್ಲೆಯ ಜನತೆಯ ದೃಷ್ಠಿಯಲ್ಲಿ  ಹೀರೋ ಆದರು.ಬಸವರಾಜ್ ರವರು ಜನತೆಗೆ ನೀಡಿದ್ಧ ಭರವಸೆ ಹಿಡೇರಿಸಿದ ತೃಪ್ತಿ ಭಾವನೆ ಹೊಂದಿದ್ದಾರೆ.

ಇದುಶ್ರೀನಿವಾಸ್ ರವರಿಗೆ ಗೊತ್ತಿಲ್ಲವೋ ಅಥವಾ ಜಾಣಕುರುಡರಾದರೋ ಅವರೇ ಆತ್ಮಾವಾಲೋಕನ ಮಾಡಿಕೊಳ್ಳಬೇಕು. 1984 ರಿಂದ ಇಲ್ಲಿಯವರೆಗೆ ಸಂಸದರ ಅಭಿವೃದ್ಧಿ ರಾಜಕಾರಣದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ಜನರ ಮುಂದೆ ಇಡಲು ಒಂದು ವೇದಿಕೆ ಸೃಷ್ಠಿಸಿದ್ದಾರೆ. ಕಳೆದ 30 ವರ್ಷದಿಂದಲೂ ಸಂಸದರ ಅಭಿವೃದ್ಧಿ ರಾಜಕಾರಣದಲ್ಲಿ ಸದಾ ಜೊತೆಯಲ್ಲಿದ್ದ ನನಗೆ ಇಂಚಿಂಚು ಮಾಹಿತಿ ಇದೆ’.

“ಮೋದಿಯವರು ಏನು ಹೇಳಿದ್ದಾರೆ? ಸಂಸದರು ಏನು ಮಾಡುತ್ತಿದ್ದಾರೆ? ಶಾಸಕರು ಏನು ಮಾಡಬೇಕಾಗಿತ್ತು? ಎಂಬ ಘೋಷಣೆಯೊಂದಿಗೆ ಅಭಿವೃದ್ಧಿ ಸಮರಕ್ಕೆ ಬಹಿರಂಗವಾಗಿ ಪಂಥಾಹ್ವಾನ ನೀಡಲಾಗಿದೆ.”

ದಿನಾಂಕ:14.08.2021 ರಂದು ನಡೆದ ಪತ್ರಿಕಾ ಘೋಷ್ಠಿಯ ಪ್ರಮುಖ ಅಂಶಗಳು

ಘೋಷ್ಠಿಯಲ್ಲಿ ಶ್ರೀ ಹೆಬ್ಬಾಕ ರವೀಶ್, ಬಾವಿಕಟ್ಟೆ ನಾಗಣ್ಣ, ಪಾವಗಡ ಶಿವಪ್ರಸಾದ್, ಕೊಪ್ಪಳನಾಗರಾಜ್, ಕಾಟೇನಹಳ್ಳಿ ಕುಮಾರ್, ಬಂಡಿಹಳ್ಳಿ ಚಂದ್ರಮೌಳಿ, ರಾಮಚಂದ್ರ ಇನ್ನೂ ಮಂತಾದವರು ಇದ್ದರು.