19th May 2024
Share

TUMAKURU:SHAKTHI PEETA FOUNDATION

ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನನ್ನ ಮೇಲೆ ಮಾಡಿರುವ ಆಪಾದನೆಗಳು ಸಾರ್ವಜನಿಕ ಜೀವನದಲ್ಲಿ ಕಳಂಕ ತರುವಂತಿದೆ. ಈ ಹಿನ್ನೆಲೆಯಲ್ಲಿ ಅವರು ಮಾಡಿರುವ ಆಪಾದನೆಗಳ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸಿ, ನಂತರ ಮುಂದಿನ ನಿರ್ಧಾರ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.

ಕಳೆದ 33 ವರ್ಷಗಳಿಂದ ಅಭಿವೃದ್ಧಿ ರಾಜಕಾರಣ ಮಾಡಿಕೊಂಡು ಬರುತ್ತಿರುವ ನನಗೆ ವೈಯಕ್ತಿಕವಾಗಿ ಇದೂವರೆಗೂ ಯಾರೊಬ್ಬರ ಮೇಲೂ ನಿಂದನೆ, ಆರೋಪ, ಮಾಡಿರುವ ಉದಾಹರಣೆಗಳು ನನ್ನ ಬಳಿ ಇಲ್ಲ. ನಾನು ಶಾಸಕರ ಅಭಿವೃದ್ಧಿ ಸಮರಕ್ಕೆ’ ಸಜ್ಜಾಗಿದ್ದೇನೆಯೇ ಹೊರತು ವೈಯಕ್ತಿಕ ನಿಂದನೆಗೆ ಅಲ್ಲ.

ಆದರೇ ಶಾಸಕರು ವೈಯಕ್ತಿಕ ನಿಂದನೆ ಮಾಡಿರುವುದರಿಂದ ಅವರೊಂದಿಗೆ ಮೊದಲು ಮುಕ್ತವಾಗಿ ಸಮಾಲೋಚನೆ ನಡೆಸಲು ತಾಯಿ ಶಕ್ತಿದೇವತೆ ನನಗೆ ಆದೇಶಿಸಿದ್ದಾರೆ. ಆದ್ದರಿಂದ ಅನುಮತಿಗಾಗಿ ಎಸ್.ಪಿ.ರವರಿಗೆ ಪತ್ರ ಬರೆಯಲಾಗಿದೆ.

ಕ್ರಮಾಂಕ:ಶಕ್ತಿ/ಎಸ್.ಪಿ.ತು/1/2021                                                ದಿನಾಂಕ:16.08.2021

ಗೆ                                                                             

ಎಸ್.ಪಿ.ರವರು

ತುಮಕೂರು ಜಿಲ್ಲೆ. ತುಮಕೂರು

ಮಾನ್ಯರೇ

ವಿಷಯ: ದಿನಾಂಕ:19.08.2021 ನೇ ಗುರುವಾರ ಬೆಳಿಗ್ಗೆ  11 ಗಂಟೆಗೆ ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರ ಮನೆ ಮುಂದೆ ಧರಣಿ ಕುಳಿತು ಕೊಂಡು ಅವರು ಮಾಡಿರುವ ಆಪಾದನೆಗಳ ಬಗ್ಗೆ ಸಮಾಲೋಚನೆ ನಡೆಸಲು ಅನುಮತಿ ನೀಡುವ ಬಗ್ಗೆ.

ದಿನಾಂಕ:14.08.2021 ರಂದು ಮತ್ತು ದಿನಾಂಕ:15.08.2021 ರಂದು   ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನನ್ನ ಮೇಲೆ ಮಾಡಿರುವ ಆಪಾದನೆಗಳ ಬಗ್ಗೆ ಮುಕ್ತವಾಗಿ ಶಾಸಕರೊಂದಿಗೆ ಸಮಾಲೋಚನೆ ನಡೆಸಲು, ತುಮಕೂರಿನ ವಿದ್ಯಾ ನಗರದಲ್ಲಿರುವ ಅವರ ಮನೆ ಮುಂದೆ ಧರಣೆ ನಡೆಸಲಾಗುವುದು.

 ಆದ್ದರಿಂದ ನನಗೆ ದಿನಾಂಕ:19.08.2021 ನೇ ಗುರುವಾರ ಬೆಳಿಗ್ಗೆ  11 ಗಂಟೆಗೆ ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರ ಮನೆ ಮುಂದೆ ಧರಣೆ ಕುಳಿತು ಕೊಳ್ಳಲು ಅನುಮತಿ ನೀಡಲು ಈ ಮೂಲಕ ಕೋರಿದೆ.

ಒಂದು ವೇಳೆ ತಾವೂ ಅಥವಾ ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರು ಬೇರೆ ಸಮಯದಲ್ಲಿ ಅಥವಾ ಬೇರೆ ಸ್ಥಳದಲ್ಲಿ ಸಮಾಲೋಚನೆ ನಡೆಸಲು ಇಚ್ಚಿಸಿದರೂ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲಾಗುವುದು ಎಂಬ ಅಂಶವನ್ನು ತಮ್ಮ ಆಧ್ಯ ಗಮನಕ್ಕೆ ತರಬಯಸುತ್ತೇನೆ.

ಈ ಪತ್ರದ ಜೊತೆ ರವಾನಿಸಲಾಗಿದೆ.

  1. ದಿನಾಂಕ:14.08.2021 ರ ತುಮಕೂರು ಸಂಸದರ ಮತ್ತು ಗುಬ್ಬಿ ಶಾಸಕರ ನಡುವೆ ನಡೆದ ವಿಡಿಯೋ ತುಣುಕು.
  2. ದಿನಾಂಕ:14.08.2021 ರಂದು ನನಗೆ ಬಂದಿರುವ ಗುಬ್ಬಿ ಶಾಸಕರ ಪೇಸ್‍ಬುಕ್  ತುಣುಕು.
  3. ದಿನಾಂಕ:14.08.2021 ರಂದು ನಾನು ನಡೆಸಿರುವ ಪತ್ರಿಕಾ ಘೋಷ್ಠಿಯ ವಿಡಿಯೋ ತುಣುಕು.
  4. ದಿನಾಂಕ:15.08.2021 ರ ಗುಬ್ಬಿ ಶಾಸಕರ ಆಪಾದನೆ ಮಾಡಿರುವ ವಿಡಿಯೋ ತುಣುಕು.

ವಂದನೆಗಳೊಂದಿಗೆ                                                   ತಮ್ಮ ವಿಶ್ವಾಸಿ

(ಕುಂದರನಹಳ್ಳಿ ರಮೇಶ್)

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ. ಕರ್ನಾಟಕ.

ಹಾಗೂ ಸಂಸ್ಥಾಪಕ ಟ್ರಸ್ಟಿ. ಶಕ್ತಿಪೀಠ ಫೌಂಡೇಷನ್.