12th September 2024
Share

TUMAKURU:SHAKTHIPEETA FOUNDATION

ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರಿಗಿಂತ ಕೆಟ್ಟ ಪದ ಬಳಸಲು ನನಗೂ ಬರುತ್ತದೆ. ಆದರೆ ನಾನು ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ.ವೈಯಕ್ತಿಕ ಆರೋಪಕ್ಕೆ ಉದಾಸೀನವೇ ಮದ್ದು.ಯಾವುದೇ  ವ್ಯಕ್ತಿಗತವಾಗಿ ಹೋರಾಟ ಮಾಡುವುದು ನಮ್ಮ ಉದ್ದೇಶವೇ ಅಲ್ಲ.

 ಬಸವರಾಜ್ ರವರು ಉದ್ದೇಶಿತ ಡ್ಯಾಂ ಬಗ್ಗೆ ಹೇಳಿದರೇ ಶಾಸಕರು ಸುಳ್ಳ, ಕಳ್ಳ ಎಂಬ ಪದಬಳಕೆ ಅವರ ಘನತೆಗೆ ತಕ್ಕುದಲ್ಲ, ಬಸವರಾಜ್ ರವರ ಕಾರ್ಯಯೋಜನೆ ಬಗ್ಗೆ ಮಾಹಿತಿ ನೀಡಿದರೆ ಏನೇನೋ ಮಾತನಾಡಿದರೆ, ಹಂತದಲ್ಲಿ ಅವರನ್ನು ತಿದ್ದುವುದು ದೇವರು ಮಾತ್ರ’.

ಶಾಸಕರೇ ತಿಳಿದುಕೊಳ್ಳಿ, ನಿಮ್ಮನ್ನು ಸೇರಿಸಿಕೊಂಡು ಈ ರಾಜ್ಯದ ಯಾವುದೇ ಒಬ್ಬ ಶಾಸಕರು, ಸಂಸದರು, ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದಾಗ ಜನರಿಗೆ ಜಾಗೃತಿ ಮೂಡಿಸಲು ಶಕ್ತಿಪೀಠ ಫೌಂಡೇಷನ್ ಸ್ಥಾಪನೆಯ ಒಂದು ಉದ್ದೇಶವೂ ಆಗಿದೆ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಳೆದ 20 ವರ್ಷಗಳು ನಿರಂತರವಾಗಿ ಶ್ರಮಿಸುತ್ತಿದೆ, ನಮಗೆ ಯಾರ ಸರ್ಟಿಫಿಕೆಟ್ ಬೇಕಿಲ್ಲ. ನಾನು 108 ಶಕ್ತಿದೇವತೆಗಳ ಆಶ್ರಯದಲ್ಲಿ ಆದಷ್ಟು ಕೆಲಸ ಮಾಡಬೇಕು ಎನ್ನುವುದೇ ನನ್ನ ಗುರಿ.

ನಿಮ್ಮಂತ ಸಾವಿರ ಜನ ಏನೇ ಹೇಳಿದರೂ ವಿಚಲಿತನಾಗದೆ, ನನ್ನದು ಒಂದೇ ಗುರಿ ಅಭಿವೃದ್ಧಿ ಜಾಗೃತಿ.ದಯವಿಟ್ಟು ನಿಮ್ಮ ಸಮಯವನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳಲು ಮತ್ತೊಮ್ಮೆ ಮನವಿ.

 ನೀವೇ ಕುಳಿತು ಕೊಂಡು ಯೋಚಿಸಿ, ನಂತರ ಶ್ರೀ ಜಿ.ಎಸ್.ಬಸವರಾಜ್ ರವರ ಮನೆಗೆ ಹೋಗಿ ಅವರೊಂದಿಗೆ ಮಾತನಾಡಿ, ಪಕ್ಷ ಯಾವುದೇ ಇರಲಿ, ಜಾತಿ ಯಾವುದೇ ಇರಲಿ, ಚುನಾವಣೆ ಬಂದಾಗ ಏನಾದರೂ ಮಾಡಿಕೊಳ್ಳಿ ಅಭಿವೃದ್ಧಿಯಲ್ಲಿ ಒಗ್ಗಟ್ಟಾಗಿ ಎಂದು ಹೇಳಲು ದಾಖಲೆಗಳೊಂದಿಗೆ ನಿಮ್ಮ ಮನೆಗೆ ಬರಲು ಇಚ್ಚಿಸಿದ್ದೇನೆ. ಅದರೆ ಎಸ್.ಪಿ.ಯವರು ಅನುಮತಿ ನೀಡಿದರೆ ಮಾತ್ರ.

ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರ ಡ್ಯಾಂ ಆರೋಪವೇ ಸುಳ್ಳು, ಬಸವರಾಜ್ ರವರು ಹೇಳಿರುವುದು ಅವರ ಪರಿಕಲ್ಪನೆ ಎಂಬ ಬಗ್ಗೆ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗ ಗೊಳಿಸುವುದು ಉತ್ತಮ ಎಂಬ ಅಭಿಪ್ರಾಯ ನನ್ನದಾಗಿದೆ.

ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಜಲಶಕ್ತಿ ಸಮಿತಿ ಸದಸ್ಯರು ಹೌದು. ಅವರು 5 ನೇ ಭಾರಿ ಲೋಕಸಭೆಗೆ ಆಯ್ಕೆಯಾದ ನಂತರ ತುಮಕೂರು ಜಿಲ್ಲೆಯ ಮತ್ತು ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ಈ ಕೆಳಕಂಡಂತೆ ಇದೆ.

 ಇನ್ನೂ ಕೆಲವು ಕಾಗದ ಪತ್ರಗಳು ಮಿಸ್ ಆಗಿವೆ.ಅವುಗಳನ್ನು ಸಂಗ್ರಹಿಸಿಕೊಂಡು, ಇಲಾಖೆಯಲ್ಲಿ ಯಾವ ಕಡತ ಯಾರ ಬಳಿ ಇದೆ ಎಂಬ ಮಾಹಿತಿಯನ್ನು ಶಾಸಕರಿಗೆ ಅಗತ್ಯವಿದ್ದಲ್ಲಿ ಅವರ ಮನೆ ಮುಂದೆ ಕುಳಿತು ಅವರಿಗೆ ಹೇಳಲು  ಇಚ್ಚಿಸಿದ್ದೇನೆ. ಕೇಳುವುದು ಬಿಡುವುದು ಅವರಿಗೆ ಬಿಟ್ಟಿದ್ದು’,

  1. ಶ್ರೀ ಜಿ.ಎಸ್.ಬಸವರಾಜ್ ರವರು 5 ನೇ ಭಾರಿ ಲೋಕಸಭೆಗೆ ಆಯ್ಕೆಯಾದ ಪಲಿತಾಂಶ ಪ್ರಕಟವಾಗಿದ್ದು ದಿನಾಂಕ:23.05.2019
  2. ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:03.06.2019 ರಂದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಬರೆದ ಪತ್ರ.
  3. ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:10.07.2019 ರಂದು ಪ್ರಧಾನಿಯವರಿಗೆ ಬರೆದ ಪತ್ರ.
  4. ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಮಾನ್ಯ ಶ್ರೀ ಗಜೇಂದ್ರ ಶೇಖಾವತ್ ರವರಿಗೆ ಬರೆದ ಪತ್ರ ದಿನಾಂಕ:29.07.2019
  5. ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:04.09.2019 ರಂದು ಅಘಿನಾಷಿನಿÀ ಯೋಜನೆ ಡಿಪಿಆರ್ ಮಾಡಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದ ಪತ್ರ.
  6. ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:04.09.2019 ರಂದು ಶರಾವತಿÀ ಯೋಜನೆ ಡಿಪಿಆರ್ ಮಾಡಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದ ಪತ್ರ.
  7. ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:05.09.2019 ರಂದು ಕುಮಾರಧಾರ ಯೋಜನೆ ಡಿಪಿಆರ್ ಮಾಡಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದ ಪತ್ರ.
  8. ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:26.09.2019 ರಂದು ಜಲಗ್ರಾಮ ಕ್ಯಾಲೆಂಡರ್ ಯೋಜನೆ  ಮಾಡಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದ ಪತ್ರ.
  9. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ  ದಿನಾಂಕ:10.10.2019 ರಂದು ಬರೆದ ಪತ್ರ.
  10. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ  ದಿನಾಂಕ:12.10.2019 ರಂದು ಬರೆದ ಪತ್ರ.
  11. ಶ್ರೀ ಜಿ.ಎಸ್.ಬಸವರಾಜ್ ಮನವಿ ಮೇರೆಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ದಿನಾಂಕ:16.10.2019 ರಂದು ಬಂದ ಪತ್ರ.
  12. ದಿನಾಂಕ:21.10.2019 ರಂದು ತುಮಕೂರು ಜಿಲ್ಲಾ ಮಟ್ಟದ ದಿಶಾ ¸ಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡ ವಿಚಾರಗಳು.
  13. ದಿನಾಂಕ:31.11.2019 ರಂದು ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತಯೆಯಲ್ಲಿ ನಡೆದ ಸಭೆ ನಡವಳಿಕೆ.
  14. ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಮಾನ್ಯ ಶ್ರೀ ಗಜೇಂದ್ರ ಶೇಖಾವತ್ ರವರಿಗೆ  ರಾಜ್ಯದ ನದಿ ಜೋಡಣೆ  ಬಗ್ಗೆ ಬರೆದ ಪತ್ರ ದಿನಾಂಕ: 05.01.2020
  15. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ  ದಿನಾಂಕ:10.02.2020 ರಂದು ಬರೆದ ಪತ್ರ.
  16. ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ದಿನಾಂಕ:08.05.2020  ರಂದು ನಡೆಸಿದ ಸಭೆ ಮಾಹಿತಿ.
  17. ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ ಆ ಕೆರೆಗೆ ನದಿ ನೀರು ಯೋಜನೆ ಬಗ್ಗೆ  ದಿನಾಂಕ:09.11.2020ಮಾಡಿದ ಆದೇಶ.
  18. ದಿನಾಂಕ:10.02.2021 ರಂದು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಗಜೇಂದ್ರ ಶೇಖಾವತ್ ರವರಿಗೆ ಎತ್ತಿನಹೊಳೆ ಯೋಜನೆಯನ್ನು ಎನ್.ಪಿ.ಪಿ ಯೋಜನೆಯಾಗಿ ಮಾಡಲು ಬರೆದ ಪತ್ರ.
  19. ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಮಾನ್ಯ ಶ್ರೀ ಗಜೇಂದ್ರ ಶೇಖಾವತ್ ರವರಿಗೆ  ರಾಜ್ಯದ ವಿವಿದ ಯೋಜನೆಗಳ ಬಗ್ಗೆ ಬರೆದ ಪತ್ರ ದಿನಾಂಕ: 11.02.2021
  20. ರಾಜ್ಯದ ನದಿ ಜೋಡಣೆ ಡಿಪಿಆರ್ ಮಾಡಲು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಿದ ದಿನಾಂಕ:22.02.2021  ರ ಪತ್ರ.
  21. ದಿನಾಂಕ:16.03.2021 ರಂದು ನ್ಯಾಷನಲ್ ವಾಟರ್ ಡೆವಲಪ್ ಮೆಂಟ್ ಎಜೆನ್ಸಿ ಯಿಂದ ಬಂದ ಪತ್ರ.
  22. ದಿನಾಂಕ:19.03.2021 ರಂದು ತುಮಕೂರು ಮಹಾನಗರ ಪಾಲಿಕೆಯಲ್ಲಿ ನಡೆದ ನಗರ ಜಲಶಕ್ತಿ ಯೋಜನೆಯ ಸಭೆ ನಡವಳಿಕೆ.
  23. ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ವಿಶೇಷ ಸಭೆ ದಿನಾಂಕ:24.06.2021
  24. ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ವಿಶೇಷ ಸಭೆ ದಿನಾಂಕ:13.07.2021
  25. ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಮಾನ್ಯ ಶ್ರೀ ಗಜೇಂದ್ರ ಶೇಖಾವತ್ ರವರಿಗೆ ಸಣ್ಣ ನೀರಾವರಿ ಇಲಾಖೆ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಸಿದ್ಧಪಡಿಸಿರುವ ಯೋಜನೆ ಮಂಜೂರಾತಿ ಬಗ್ಗೆ ಬರೆದ ಪತ್ರ ದಿನಾಂಕ: 10.08.2021
  26. ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳು ನಕ್ಷೆಯಲ್ಲಿ ಜಲಮೂಲಗಳ ಜಿಐಎಸ್ ಮಾಹಿತಿ ಸಿದ್ಧಪಡಿಸುತ್ತಿವೆ.
  27. ತುಮಕೂರು ಮತ್ತು ಗುಬ್ಬಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಡ್ಯಾ ನಿರ್ಮಾಣದ ಪರಿಕಲ್ಪನೆ ನಕ್ಷೆ.
  28. ಜಲಶಕ್ತಿ ಕೇಂದ್ರ ರಚನೆಃ ಕೇಂದ್ರ ಜಲಶಕ್ತಿ ಸಚಿವಾಲಯದ ಆದೇಶದಂತೆ ತುಮಕೂರು ಜಿಲ್ಲೆಯಲ್ಲೂ ಜಲಶಕ್ತಿ ಕೇಂದ್ರ ಸ್ಥಾಪನೆ. ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ಮತ್ತು 11 ಸ್ಥಳೀಯ ಸಂಸ್ಥೆಗಳ ಆಸಕ್ತರ ಸಹಕಾರ.
  29. ರಾಜ್ಯ ಮಟ್ಟದ ಜಲಶಕ್ತಿ ಅಭಿಯಾನ: ತುಮಕೂರು ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಜಲಶಕ್ತಿ ಅಭಿಯಾನ ನಡೆಸಲು ಚಿಂತನೆ.

ವಂದನೆಗಳೊಂದಿಗೆ                                                             ತಮ್ಮ ವಿಶ್ವಾಸಿ

                                                                      (ಕುಂದರನಹಳ್ಳಿ ರಮೇಶ್)

                                                 ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.ಕರ್ನಾಟಕ.