2nd March 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿನೀರಿನ ಅಲೋಕೇಷನ್ ಬಗ್ಗೆ ಬಹು ದೊಡ್ಡ ಹೋರಾಟ ಆರಂಭವಾಗಿದೆ. ಈ ಹೋರಾಟದ ಮಜಲುಗಳ ಹಿಂದೆ ಹಾಲಿ ಕಾನೂನು ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಮತ್ತು ಮಾಜಿ ಕಾನೂನು ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರ ಜಿದ್ದಾ ಜಿದ್ದಿನ ರಾಜಕರಾಣದಂತಿದೆ.

ದಿವಂಗತ ಮಾಜಿ ಸಚಿವರಾದ ವೈ.ಕೆ.ರಾಮಯ್ಯನವರ ಕಾಲದಿಂದಲೂ ಕಳ್ಳಂಬೆಳ್ಳ- ಶಿರಾ ಕೆರೆಗೆ ಹೇಮಾವತಿ ನೀರಿನ ಜಗಳ ಆರಂಭವಾಗಿದೆ. ಅಂದಿನಿಂದ ಇಲ್ಲಿಯವರೆಗೂ ಈ ಯೋಜನೆಯ ವಿವಿಧ ಹಂತಗಳ ಬಗ್ಗೆ  ಬರೆಯಲು ಆಸಕ್ತಿ ಬಂದಿದೆ.

ಮೊನ್ನೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಹೋದಾಗ ಅಲ್ಲಿಯೇ ಇದ್ದ ಶ್ರೀ ಟಿ.ಬಿ.ಜಯಚಂದ್ರರವರು ಮತ್ತು ಶ್ರೀ ಈಶ್ವರಯ್ಯನವರ ಜೊತೆ ಮಾತನಾಡಿದಾಗ ಈ ಸರ್ಕಾರಿ ಆದೇಶ ನೀಡಿದರು.

ಇದರ ಬಗ್ಗೆ   ಹಾಲಿ ಕಾನೂನು ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಏನಂತಾರೆ? ನೋಡಿ ನಂತರ ಬರವಣಿಗೆ ಆರಂಭಿಸುತ್ತೇನೆ.

About The Author