12th September 2024
Share

TUMAKURU:SHAKTHIPEETA FOUNDATION

ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಗುಬ್ಬಿ ಶಾಸಕರಾದ ಎಸ್.ಆರ್.ಶ್ರೀನಿವಾಸ್ ರವರ ಮಧ್ಯೆ ಅವಾಚ್ಯ ಮಾತುಗಳು ನಡೆದ ಹಿನ್ನಲೆಯಲ್ಲಿ  ಇಂಥಹ ಘಟನೆಗಳು ನಡೆಯಬಾರದು.

ಚುನಾಯಿತ ಜನಪ್ರತಿ ನಿಧಿಗಳು ಹಾದಿ ಬೀದಿಯಲ್ಲಿ ಹಂದಿ-ನಾಯಿ ಕಿತ್ತಾಡಿದ ಹಾಗೆ ಕಿತ್ತಾಡಬಹುದೇ, ಇವರಿಗೆ ಕಡಿವಾಣ ಹಾಕಲು    ಕಾನೂನು ಏನು ಹೇಳುತ್ತವೆ, ಪೇಸ್ ಬುಕ್ ಅಕೌಂಟನಲ್ಲಿ ಸತ್ತವರಂತೆ ಅಸಭ್ಯವಾಗಿ  ಪೋಸ್ಟ್ ಮಾಡಬಹುದೇ, ಟೀಕೆಗಳು ಯಾವ ಹಂತದಲ್ಲಿರ ಬಹುದು. ಆಧಾರ ರಹಿತ ಇಂಥಹ ಟೀಕೆಗಳಿಗೆ ಯಾವ ಕ್ರಮವಿದೆ. ಎಂಬ ಬಗ್ಗೆ ನನಗೆ ಮನವರಿಕೆ ಮಾಡಿಕೊಳ್ಳಲು ತುಮಕೂರು ಎಸ್.ಪಿ.ಯವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಗುಬ್ಬಿ ಶಾಸಕರಾದ ಎಸ್.ಆರ್.ಶ್ರೀನಿವಾಸ್ ರವರ ಮನೆ ಮುಂದೆ ಧರಣೆ ಕುಳಿತು ಈ ಬಗ್ಗೆ ಅವರಿಗೆ ಯೋಜನೆಗಳ ಬಗ್ಗೆ ಮನವರಿಕೆ ಮಾಡುವುದು ಮತ್ತು ಇಂಥಹ ಘಟನೆಗಳ ಬಗ್ಗೆ ಅವರ ಅನಿಸಿಕೆಗಳನ್ನು ತಿಳಿದುಕೊಳ್ಳುವ ತವಕ ನನಗಿತ್ತು.

ಮೇಲ್ಕಂಡ ಎರಡು ಅಂಶಗಳ ಬಗ್ಗೆ ಎಸ್.ಪಿ.ಯವರು ನನ್ನೊಡನೆ ಹಂಚಿಕೊಂಡ ವಿಚಾರಗಳು ನನಗೆ ತೃಪ್ತಿ ತಂದಿವೆ. ಇನ್ನೂ ಒಂದೆರಡು ಭಾರಿ ಸಮಾಲೋಚನೆ ನಡೆಸಿ ನಂತರ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಲಾಗುವುದು.

ದಿನಾಂಕ:19.08.2021 ರ ನಡೆಸಲು ಉದ್ದೇಶಿದ್ದ ಧರಣೆಯನ್ನು ಎಸ್.ಪಿ.ಯವರ ಸಲಹೆ ಮೇರೆಗೆ ಕೈಬಿಡಲಾಗಿದೆ. ಇನ್ನೂ ಮುಂದೆ ಯಾವುದೇ ಸಂಘಟನೆಯಾಗಲಿ, ರಾಜಕೀಯ ಪಕ್ಷಗಳಾಗಲಿ, ವ್ಯಕ್ತಿಯಾಗಲಿ ಇಂಥಹ ನಿರ್ಧಾರ ಮಾಡುವ ಮುನ್ನ ಎಸ್.ಪಿ.ಯವರ ಅನುಮತಿ ಇಲ್ಲದೆ ಮಾಡಬಾರದು ಎನ್ನುವುದು ಸತ್ಯ.