22nd December 2024
Share
ಕಾರಜೋಳರವರು ಬಸವರಾಜ್ ರವರು ನೀಡಿದ ಪತ್ರ ಮತ್ತು ಎನ್.ಐ.ಪಿ ಯೋಜನೆಯ ಪತ್ರ ಓದುತ್ತಿದ್ದಾರೆ.

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರನ್ನು ರಾಜ್ಯದ ನೀರಾವರಿ ವಿಚಾರದಲ್ಲಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಘೋಷಣೆಯಡಿಯಲ್ಲಿ ಜಲಗ್ರಂಥ’ ಬರೆಯಿರಿ ಎಂದು ಕೇಂದ್ರ ಜಲಶಕ್ತಿ ಸಮಿತಿ ಸದಸ್ಯ ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ವಿಷಯ ಹಂಚಿಕೊಂಡರು.

‘ರಾಜ್ಯದಲ್ಲಿ ನೀರಾವರಿ ತಜ್ಞರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಮುಖ್ಯ ಮಂತ್ರಿಗಳಿದ್ದಾರೆ, ಕೇಂದ್ರದಲ್ಲಿ ನೀರಾವರಿ ಹೋರಾಟಗಾರರಾದ ಶ್ರೀ ಗಜೇಂದ್ರ ಶೇಖಾವತ್ ರವರು ಜಲಶಕ್ತಿ ಸಚಿವರಾಗಿದ್ದಾರೆ. ಸಮಯದಲ್ಲಿ ನಾವೂ ಒಂದು ಗುರಿ ಮುಟ್ಟಲೇ ಬೇಕು ಎಂದು ಪ್ರತಿಪಾದಿಸಿದರು’.

ಕಾರಜೋಳರವರು ಮಾತನಾಡಿ ನಾನು ಮುಖ್ಯ ಮಂತ್ರಿಯವರು ದೆಹಲಿಯಲ್ಲಿ ಜಲಶಕ್ತಿ ಸಚಿವರನ್ನು ಭೇಟಿಯಾದಾಗ ನಿಮ್ಮ ಪತ್ರಗಳನ್ನು ತೋರಿಸಿದರು. ಪ್ರತಿ ಸಭೆಯಲ್ಲಿ ನೀವು ಮಾತನಾಡುವ ರೀತಿಯ ಬಗ್ಗೆಯೂ ಚರ್ಚಿಸಿದರು. ನೀವೇ ಸ್ವತಃ ನೀರಾವರಿ ತಜ್ಞರಾಗಿದ್ದೀರಿ. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಹ ನಿಮ್ಮ ನೀರಾವರಿ ಪರಿಕಲ್ಪನೆಯ ಕನಸುಗಳ ಮಾಹಿತಿ ನೀಡಿದ್ದಾರೆ.

ಸ್ವತಃ ಮುಖ್ಯ ಮಂತ್ರಿಗಳೇ ಒಂದು ಹೊಸ ರೂಪ ಕೊಡಲು ಹಗಲಿರಳು ಚಿಂತನೆ ನಡೆಸುತ್ತಿದ್ದಾರೆ. ಏನಾದರೂ ಒಂದು ಮಾಡಲೇ ಬೇಕು ಎಂದರು. ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ನೀರಾವರಿ ಸಚಿವರಾಗಿದ್ದರೂ  ನೀರಾವರಿ ಯೋಜನೆಗಳ ಬಗ್ಗೆ ಅವರು ಮಾತನಾಡಿದ ರೀತಿ ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಎಲ್ಲಾ ವಿಚಾರಗಳು ಅವರಿಗೆ ಈಗಾಗಲೇ ಮನವರಿಕೆಯಾಗಿವೆ.

ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳಿಗೆ ನದೀ ನೀರಿನಿಂದ ತುಂಬಿಸಲು ಕೇಂದ್ರ ಸರ್ಕಾರಕ್ಕೆ ಸಣ್ಣ ನೀರಾವರಿ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಸಚಿವರಾದ ಶ್ರೀ ಮಾಧುಸ್ವಾಮಿಯವರು ಸಹ ಜಲಶಕ್ತಿ ಸಚಿವರನ್ನು ಭೇಟಿಯಾಗಿದ್ದಾರೆ. ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ನಿಕಟ ಸಂಪರ್ಕದಲ್ಲಿದ್ದೇನೆ. ಪ್ರಸ್ತುತ ಹೇಮಾವತಿ, ಭಧ್ರಾ ಮೇಲ್ದಂಡೆ, ಎತ್ತಿನಹೊಳೆ, ತುಂಗಾ-ಭಧ್ರಾ ನೀರಿನ ಅಲೋಕೇಷನ್ ನಮ್ಮ ಜಿಲ್ಲೆಗೆ ಇದೆ.

ಜಲಜೀವನ್ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಕೋಡುವ ಯೋಜನೆ, ಕೆರೆಗಳಿಗೆ ಈಗ ಶೇ 40% ನೀರು ತುಂಬಿಸುವ ಯೋಜನೆ, ನಂತರ ಹೊಸ ಯೋಜನೆ ರೂಪಿಸಿದಾದ ಶೇ 100% ನೀರು ತುಂಬಿಸುವ ಯೋಜನೆಗೆ ನದಿ ನೀರಿನ ಅಲೋಕೇಷನ್ ಮಾಡಬೇಕಿದೆ’.

ನಾವೂ ತುಮಕೂರು ಜಿಲ್ಲೆಯ ದಿಶಾ ಸಮಿತಿಯ ಸಭೆಯಲ್ಲಿಟ್ಟು ಚರ್ಚಿಸಿ ಪ್ರಸ್ತಾವನೆ ಸಲ್ಲಿಸುತ್ತೇವೆ, ತಾವೂ ಸಂಭಂಧಿಸಿದ ಎಲ್ಲಾ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಿ, ನಂತರ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕೇಂದ್ರ ಸರ್ಕಾರಕ್ಕೆ ನೀರಿನ ಅಲೋಕೇಷನ್ ನೊಂದಿಗೆ ಪರಿಷ್ಕøತ ಪ್ರಸ್ತಾವನೆ ಸಲ್ಲಿಸ ಬೇಕಿದೆ.

ಈ ಯೋಜನೆಗೆ ಸಣ್ಣ ನೀರಾವರಿ ಇಲಾಖೆ ಶೇ 40 % ಹಣ ಭರಿಸಲು ಸಿದ್ಧವಿದೆ, ಉಳಿದ ಶೇ 60 % ಹಣವನ್ನು ಕೇಂದ್ರ ಸರ್ಕಾರದಿಂದ ಅಥವಾ ಬೇರೆ ಮಾರ್ಗದಲ್ಲಿ ಪಡೆಯಲೇ ಬೇಕಿದೆ. ಪ್ರಾಯೋಗಿಕವಾಗಿ ಒಂದು ಜಿಲ್ಲೆಯಲ್ಲಿ ಜಾರಿ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡುವ ಬಗ್ಗೆ ವಿವರವಾಗಿ ಸಮಾಲೋಚನೆ ನಡೆಸಲಾಯಿತು.

ಶೀಘ್ರದಲ್ಲಿ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.