16th September 2024
Share

TUMAKURU:SHAKTHI PEETA FOUNDATIN

ಯಾವುದೇ ರಾಜಕೀಯ ಪಕ್ಷಗಳಾಗಲಿ ಕೇಂದ್ರಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಕಡಿದು ಕಟ್ಟೆ ಹಾಕುತ್ತೇವೆ ಎಂದು ಚುನಾವಣಾ ಸಮಯದಲ್ಲಿ  ಪ್ರಚಾರ ಮಾಡುವುದು ಪಕ್ಷಗಳ ಸಹಜ ಗುಣ/ಧರ್ಮ?

ಪ್ರಸ್ತುತ ನಮ್ಮ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ, ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಈಗ ನೂತನವಾಗಿ ಮುಖ್ಯ ಮಂತ್ರಿಯಾಗಿರುವ ಶ್ರೀ ಬಸವರಾಜ್ ಬೊಮ್ಮಾಯಿಯರವರು ಸ್ವತಃ ನೀರಾವರಿ ತಜ್ಞರು, ಅಭಿವೃದ್ಧಿ ಪರಚಿಂತಕರು, ಹೋರಾಟಗಾರರು ಹೌದು.

ಯಾವ ಜನ್ಮದ ಫಲವೋ ಮುಖ್ಯಮಂತ್ರಿ ಸ್ಥಾನ ಅವರನ್ನೇ ಹುಡುಕಿಕೊಂಡು ಬಂದಿದೆ. ಈಗ ಅವರ ದೂರದೃಷ್ಠಿ ಏನು ಎಂಬುದು ಮುಖ್ಯ. ಅವರ ನಡೆಯನ್ನು ಭೂತುಗನ್ನಡಿ ಹಾಕಿ ಹುಡುಕಿದಾಗ ಈ ಕೆಳಕಂಡ ಐದು ಅಂಶಗಳು ನನ್ನ ಗಮನಕ್ಕೆ ಬಂದಿವೆ.

  1. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ.
  2. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ.
  3. ಎಲ್ಲಾ ಜಾತಿ- ಉಪಜಾತಿಯ ಆರ್ಥೀಕವಾಗಿ ಹಿಂದುಳಿದವರಿಗೆ ಸಾಮಾಜಿಕ ನ್ಯಾಯ.
  4. ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಜ್ಯದ 31 ಜಿಲ್ಲೆಗಳಿಗೂ ಸಾಮಾಜಿಕ ನ್ಯಾಯ.
  5. ಹೊರದೇಶಗಳ ಹೂಡಿಕೆಯಲ್ಲಿ ರಾಜ್ಯದ 31 ಜಿಲ್ಲೆಗಳಿಗೂ ಸಾಮಾಜಿಕ ನ್ಯಾಯ.

ಎಂಬ ಐದು ಅಂಶಗಳ ಮೇಲೆ ರಾಜ್ಯದ ಅಭಿವೃದ್ಧಿ ನಿಲ್ಲುವಂತೆ ಕಾಣುತ್ತಿದೆ. ಈಗ ಅಡಿಪಾಯ ಹಾಕಿ ಮುಂದುವರೆಸಲು ನಮಗೆ ಅಧಿಕಾರ ನೀಡಿ ಎಂಬ ಘೋಷಣೆ ಅವರದ್ದಾಗುವ ಲಕ್ಷಣಗಳು ಕಾಣುತ್ತಿವೆ.

ಡಾ.ಡಿ.ಎಂ.ನಂಜುಂಡಪ್ಪ ವರದಿ ಮತ್ತು ನೀತಿ ಆಯೋಗ ರೂಪಿಸಿರುವ 49 ಸೂಚಕಗಳನ್ನು ಅನುಸರಿಸಿ, ರಾಜ್ಯದ ಎಲ್ಲಾ ಭಾಗಗಳಿಗೂ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಬೇಕಾದರೆ, ವಿರೋಧ ಪಕ್ಷಗಳು ಸಂಶೋಧಕರಾಗಬೇಕು. ಪ್ರತಿಯೊಂದು ಅಂಶಗಳ ಬಗ್ಗೆ ಅಧ್ಯಯನ ಮಾಡಿ ಚಾಟಿ ಬೀಸುವಂತಾಗಬೇಕು.

31 ಜಿಲ್ಲಾವಾರು ನೀತಿ ಆಯೋಗದ ಅಥವಾ ನಂಜುಂಡಪ್ಪನವರ ವರಧಿ ಆಧಾರಿತ ಏನೇನು ಎಲ್ಲಿ ಕೊರತೆ ಇದೆ  ಎಂಬ ಚರ್ಚೆಗಳು ನಡೆಯಬೇಕು. ಚುನಾಯಿತ ಜನಪ್ರತಿನಿಧಿಗಳು ಬಂದ ಅನುದಾನವನ್ನು ಹಂಚಿಕೊಳ್ಳುವುದರಲ್ಲಿ ಇರುವ ಆಸಕ್ತಿ ಇದರಲ್ಲಿ ಇಲ್ಲ.

ವಿರೋಧ ಪಕ್ಷಗಳು ಈ ಐದು ಅಂಶಗಳ ಬಗ್ಗೆ ವ್ಯಾಪಕವಾದ ಹೋರಾಟಗಳನ್ನು ರೂಪಿಸುವಲ್ಲಿ ನಶಿಸಿ ಹೋಗಿವೆ.

ಶಕ್ತಿಪೀಠ ಕ್ಯಾಂಪಸ್ ಈ ಐದು ಅಂಶಗಳ ಸಂಶೋಧಕರಿಗೆ, ಅಧ್ಯಯನ ಗಾರರಿಗೆ ಎಲ್ಲಾ ಸವಲತ್ತು ನೀಡುವ ಮೂಲಕ ಸಹಕರಿಸಲಿದೆ. ಪ್ರಾಜೆಕ್ಟ್ ವರ್ಕ್ ಮಾಡುವ ವಿಧ್ಯಾರ್ಥಿಗಳು, ಪಿಹೆಚ್‍ಡಿ ಮಾಡುವವರು ಅಥವಾ ಆಸಕ್ತಿ ಇರುವವರು ಸಂಪರ್ಕಿಸಲು ಕೋರಿದೆ.