12th September 2024
Share

TUMAKURU:SHAKTHIPEETA FOUNDATI0N

ತುಮಕೂರು ನಗರದ ಮರಳೂರಿನಲ್ಲಿ 1976 ರಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಸುಮಾರು 74.33 ಎಕರೆ ಲೇ ಔಟ್ ಮಾಡಲಾಗಿದೆಯಂತೆ  ಈ ಲೇಔಟ್ ನಲ್ಲಿ ಇದೂವರೆಗೂ ಯಾವುದೇ ಇಲಾಖೆಯ ಅಧಿಕಾರಿಗಳು ಹೋಗಲು ಸಾದ್ಯಾವಿಲ್ಲವಂತೆ. ಸುಮಾರು ಕೋಟಿ ಕೋಟಿ ಹಗರಣ ನಿರಂತರವಾಗಿ ನಡೆಯುತ್ತಲೇ ಇದೆಯಂತೆ.

ಅಲ್ಲಿಂದ ಇಲ್ಲಿಯವರೆಗೂ ಅಡಳಿತ ನಡೆಸಿದವರಿಗೆ  ನಾಗರೀಕರು ಅಭಿನಂದನೆ ಸಲ್ಲಿಸಲೇ ಬೇಕಿದೆ. ರೈತರ ಜಮೀನು ಪಡೆದು, ಅನಧಿಕೃತವಾಗಿ ಅನುಭವದಲ್ಲಿ ಇರುವವರಿಗೆ ಪಾಲಿಕೆಯಿಂದ ಪಿಐಡಿ ನಂಬರ್ ಸಹ ನೀಡಿದ್ದಾರಂತೆ. ಹೌಸಿಂಗ್ ಬೋರ್ಡ್ ಹೆಸರಿಗೆ ದಾಖಲೆ ಇದ್ದರೂ  ಅಲಿನೇಷನ್ ಕೂಡ ಮಾಡಿಕೊಟ್ಟಿದ್ದಾರೆ ಎಂಬ ಗುಸು ಗುಸು ಇದೆ.

ರೈತರಿಗೆ ಉಂಡೆ ನಾಮ, ಅನಧಿಕೃತವಾಗಿ ಇರುವವರಿಂದ ಲಕ್ಷಾಂತರ ಹಣ ಪೀಕಿದ್ದಾರಂತೆ, ಅವರೆಲ್ಲರಿಗೂ ಢವ! ಢವ!! ಮಧ್ಯವರ್ತಿಗಳ ರಾಜದರ್ಭಾರ್ ನಿಜಕ್ಕೂ ಮೆಚ್ಚಲೇಬೇಕು ಅಲ್ಲವೇ? ಹೀಗೂ ಸಾಧ್ಯಾವೇ?

ಇಲ್ಲಿ ತಪ್ಪು ಯಾರದು, ಸರಿ ಯಾರದು ಹೇಳಬೇಕಾದವರೂ ಯಾರು?

ದಿನಾಂಕ:14.09.2021 ರಂದು ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯ ಹೌಸಿಂಗ್ ಫಾರ್ ಆಲ್ -2022 ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಹಿರಂಗ ಗೊಂಡ ಕಟು ಸತ್ಯ ಇದು.

ಅಷ್ಟೆ ಅಲ್ಲ 2014 ರಿಂದಲೂ ಮಂಜೂರಾದ ವಸತಿ ಹಣ ಖರ್ಚಾಗಿಲ್ಲ ಎಂಬ ಆತಂಕಕಾರಿ ಅಂಶಗಳು ಅನಾವರಣ ಗೊಂಡವು. ಅಷ್ಟೆ ಏಕೆ ಕೆಲವು ಯೋಜನೆಗಳಿಗೆ ಯಾವ ಇಲಾಖೆ ಹೊಣೆಗಾರಿಕೆ ಎಂಬ ಚರ್ಚೆಯೂ ನಡೆಯಿತು. ನಮಗೆ ಬರುವುದಿಲ್ಲಾ ಎಂಬ ಸಿದ್ಧ ಉತ್ತರವಿತ್ತು.

30 ದಿವಸದೊಳಗೆ ತುಮಕೂರು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯ ಪ್ರತಿ ಗ್ರಾಮವಾರು ಮತ್ತು ನಗರವಾರು ನಿವೇಶನಗಳಿಗೆ ಮತ್ತು ವಸತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳ ವಸ್ತು ಸ್ಥಿತಿ ತಾಜಾ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ.

ಕಾದು ನೋಡೋಣ?