6th December 2024
Share

TUMAKURU:SHAKTHI PEETA FOUNDATION        

ತುಮಕೂರು ನಗರದಲ್ಲಿ ಮನೆ ಮನೆಗೆ ಗ್ಯಾಸ್ ಸಂಪರ್ಕ ಮಾಡುವ ಯೋಜನೆಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು 4 ನೇ ಅವಧಿಯಲ್ಲಿ ಸಂಸದರಾಗಿದ್ದ ವೇಳೆ ಮಂಜೂರು ಮಾಡಿಸಿದ್ದು ಇತಿಹಾಸ.

ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಗುಂಪಿನಲ್ಲಿ ಗೋವಿಂದ ಎಂಬಂತೆ ಹಲವಾರು ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಕಾಲವೂ ಇರುವುದಿಲ್ಲ. ಮಾಹಿತಿಯೂ ಇರುವುದಿಲ್ಲ. ಆದ್ದರಿಂದ ಬಸವರಾಜ್ ರವರು ಯೋಜನಾವಾರು ಸಂಬಂದಿಸಿದ ಇಲಾಖೆಗಳ ಸಭೆ ನಡೆಸುವತ್ತಾ ಗಮನ ಹರಿಸಿದ್ದಾರೆ.

ತುಮಕೂರು ನಗರದಲ್ಲಿ ವಾರ್ಡ್‍ವಾರು ಎಷ್ಟೆಷ್ಟು ಮನೆಗಳಿಗೆ ಗ್ಯಾಸ್ ಸಂಪರ್ಕ ಕೊಡಲಾಗಿದೆ.ಇನ್ನೂ ಎಷ್ಟಷ್ಟು ಮನೆಗಳಿಗೆ ಕೊಡಬೇಕು, ಯಾವಾಗ ಪೂರ್ಣಗೊಳಿಸಲು ಉದ್ದೇಶಿದ್ದೀರಿ ಎಂಬ ಬಗ್ಗೆ ಮಾಹಿತಿ ನೀಡಲು ಕೇಳಿದಾಗ ಗ್ಯಾಸ್ ಕಂಪನಿಯವರ ಬಳಿ ಉತ್ತರವಿರಲಿಲ್ಲ,

ನಿರುತ್ತರಾದ ಕಂಪನಿಯವರು ಮತ್ತು ಅಧಿಕಾರಿಗಳ ವಿರುದ್ದ ಗರಂ ಆದ ಜಿ.ಎಸ್.ಬಸವರಾಜ್ ರವರು ದಿನಾಂಕ:10.10.2021 ರೊಳಗೆ ಸಂಪೂರ್ಣ ಚಿತ್ರಣದೊಂದಿಗೆ ಸಭೆಗೆ ಹಾಜÀರಾಗಲು ಸೂಚಿಸಿದರು.

ಮನೆಗೆ ಸಂರ್ಪ ನೀಡುವಾಗ ಮನೆಗೆ ಒಂದು ಠೇವಣೆ ಮತ್ತು ಅದೇ ಮನೆಯಲ್ಲಿ ಬಾತ್ ರೂಂಗೆ ಸಂಪರ್ಕ ನೀಡಲು ಇನ್ನೋಮ್ಮೆ ಠೇವಣೆ ಹಣ ಏಕೆ ಪಡೆಯುತ್ತೀರಿ ಎಂಬ ಪ್ರಶ್ನೆ ಸಹಿತ ಎಂ.ಓ.ಯು ಪ್ರತಿ ಕೇಳಿದಾಗ ಮೌನವಾದರು. ಮುಂದಿನ ಸಭೆ ವೇಳೆಗೆ ನಿಖರ ಮಾಹಿತಿ ನೀಡುವುದಾಗಿ ತಿಳಿಸಿದರು.

ಒಂದು ರಸ್ತೆಯ ಎಲ್ಲಾ ಮನೆಗಳಿಗೂ ಸಂಪರ್ಕ ನೀಡಲು ಇರುವ ತೊಂದರೆಗಳ ಮಾಹಿತಿ ಬಗ್ಗೆ ಪಡೆದರು, ವಿವಿಧ ಇಲಾಖೆಗಳ ಸಮನ್ವಯದ ಕೊರತೆ ಬಗ್ಗೆ ಚರ್ಚೆ ಮಾಡಿ ಕಾಲ ಕಾಲಕ್ಕೆ ಆಧ್ಯತೆ ಮೇಲೆ ಸಹಕರಿಸಲು ಸೂಚಿಸಿದರು.

ಸಭೆಯಲ್ಲಿ ಮೇಯರ್ ಶ್ರೀ ಕೃಷ್ಣಪ್ಪ, ದಿಶಾ ಸಮಿತಿಯ ಸದಸ್ಯರುಗಳಾದ ಕುಂದರನಹಳ್ಳಿ ರಮೇಶ್, ಟಿ.ಆರ್.ರಘೋತ್ತಮರಾವ್, ಪಾಲಿಕೆ ಆಯಕ್ತರಾದ ಶ್ರೀಮತಿ ರೇಣುಕ, ಸ್ಮಾರ್ಟ್ ಸಿಟಿ ಎಂಡಿ.ಶ್ರೀ ರಂಗಸ್ವಾಮಿ, ಟೂಡಾ ಆಯುಕ್ತ ಶ್ರೀ ಯೋಗಾನಂದ್, ಬೆಸ್ಕಾಂ ಇ.ಇ ಶ್ರೀ ಜಗದೀಶ್, ನಗರ ನೀರು ಸರಬರಾಜು ಇಲಾಖೆಯ ಇಇ ಶ್ರೀ ವೀರಣ್ಣಗೌಡ, ಪಾಲಿಕೆಯ ಶ್ರೀಮತಿ ಆಶಾ ಸೇರಿದಂತೆ  ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.