TUMAKURU:SHAKTHI PEETA FOUNDATION
ಕಳೆದ ಕೆಲವು ದಿವಸಗಳ ಹಿಂದೆ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರು ಬೆಂಗಳೂರಿಗೆ ಬಂದಿದ್ದರಂತೆ. ಆಗಿನ ಮಾನ್ಯ ಮುಖ್ಯಮಂತ್ರಿಯವರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ರಾಜ್ಯದ ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದರಂತೆ.
ಅಲ್ಲಿ ಕೇಂದ್ರದ ಅಧಿಕಾರಿಯೊಬ್ಬರೂ ಪ್ರತಿ ಮಾತಿಗೂ, ಸಾರಿ ಎಂದು ಹೇಳಿ ನಮ್ಮ ರಾಜ್ಯದ ವೈಫಲ್ಯಗಳು, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಅನುದಾನ ಬಳಸದೇ ವಾಪಸ್ಸು ಮಾಡಿರುವ ಕ್ರಮ, ಈ ಎಲ್ಲದರ ಬಗ್ಗೆ ಉಗಿದು ಉಪ್ಪು ಹಾಕಿದರಂತೆ.
ನೋಡಿ ಹೇಗಿದೆ ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದರೂ ಕೇಂದ್ರ ಸರ್ಕಾರ ನೀಡಿದ ಅನುದಾನ ಬಳಸಿಲ್ಲ ಎಂದರೆ ಏನರ್ಥ? ಮೋದಿಯವರ ದುಡ್ಡು ಇವರಿಗೆ ಬೇಕಿಲ್ಲವೇ?
ಈ ಬಗ್ಗೆ ನಿಖರವಾದ ಮಾಹಿತಿ ಸಂಗ್ರಹಿಸಿ ಸತ್ಯಾಂಶದ ಬಗ್ಗೆ ರಾಜ್ಯದ ಜನತೆಗೆ ತಿಳಿಸಲು ರಾಜ್ಯ ಸರ್ಕಾರದ ಒಬ್ಬ ಅಧಿಕಾರಿ ಸಲಹೆ ನೀಡಿದ್ದಾರೆ. ನೋಡೋಣ ಯಾವುದು ಸತ್ಯ?ಯಾವ ಇಲಾಖೆಯ ವೈಪಲ್ಯ ಎಂಬ ಬಗ್ಗೆ ಅವಲೋಕನ ಮಾಡಬೇಕಾಗಿದೆ. ಮಾಹಿತಿ ಇದ್ದವರೂ ಹಂಚಿಕೊಳ್ಳ ಬಹುದು.
ಸರಿ ಇಷ್ಟಾದರೂ ನಮ್ಮ ರಾಜ್ಯದ ವಿರೋಧ ಪಕ್ಷಗಳು ಈ ಬಗ್ಗೆ ಚಕಾರವೆತ್ತಿಲ್ಲ. ಅವರ ಕೆಲಸ ಇದಲ್ಲವೇನೋ? ಕೇವಲ ಆರ್.ಎಸ್.ಎಸ್ ಟೀಕೆ ಮಾಡಿದರೇ ಸಾಕು ಎನಿಸುತ್ತಿದೆ.ಎಂದು ಬಿಜೆಪಿ ನಾಯಕರೊಬ್ಬರು ಅಣಕ ಮಾಡುತ್ತಿದ್ದರು
ನಾಚಿಕೆಯಾಗ ಬೇಕು ಇವರಿಗೆಲ್ಲಾ.