30th September 2023
Share

TUMAKURU:SHAKTHI PEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ಅಸ್ಥಿತ್ವದಲ್ಲಿ ಇರುವಾಗಲೇ ಕೋಟಿಗಟ್ಟಲೇ ಖರ್ಚು ಮಾಡಿರುವ ಯೋಜನೆಗಳು ಕೇಳುವವರು ಇಲ್ಲದೆ ದಿಕ್ಕು ದಿವಾಳಿ ಇಲ್ಲದೇ ಪಾಳು ಬೀಳಲು ಆರಂಭಿಸಿವೆ.

ನಿರ್ವಹಣೆ ಮಾಡಲು ಲಕ್ಷಗಟ್ಟಲೇ ಹಣ ನೀಡಿದ್ದಾರೆ, ಇನ್ನೇನು ಕೆಲವೇ ತಿಂಗಳಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಕಣ್ಮರೆಯಾದರೂ ಆಗಬಹುದು. ಈಗಲೇ ಈ ಸ್ಥಿತಿ ಆದರೇ ಇನ್ನೂ ಮುಂದೆ ಈ ಯೋಜನೆಗಳಿಗೆ ಅಪ್ಪ ಅಮ್ಮ ಯಾರು?

ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ, ಸಂಸದರ ಕಚೇರಿ ಪಕ್ಕದಲ್ಲಿರುವ  ಅಮಾನಿ ಕೆರೆಯಲ್ಲಿ ಇರುವ ಸ್ಮಾರ್ಟ್ ಲಾಂಜ್ ಗೆ ಇಂಥಹ ಪರಿಸ್ಥಿತಿ ಬಂದಿದೆ.

ಈ ರೀತಿ ಗಿಡಗಳು ಬೆಳೆಯಲು ಎಷ್ಟು ದಿವಸ ಬೇಕಾಗುತ್ತದೆ ಪರಿಣಿತರು ಹೇಳಲಿ, ಅಷ್ಟು ಅವಧಿಯವರೆಗೂ ಯಾರೊಬ್ಬರೂ ಇಲ್ಲಿಗೆ ಹೋಗಿಲ್ಲವೇ ಅಥವಾ ಹೋಗಿದ್ದರೂ ಈ ರೀತಿ ಇದೆಯಾ?

ಈ ಬಗ್ಗೆ ವವಿವರವಾದ ಮಾಹಿತಿ ನೀಡಲು ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿ ಯವರೊಂದಿಗೆ ಮೊಬೈಲ್ ನಲ್ಲಿ ಮಾತಾನಾಡಿದ್ದೇನೆ.

ಈ ಯೋಜನೆ ನೋಡಿಕೊಳ್ಳುವವರು ಬದುಕಿದ್ದಾರೆಯೇ ಅಥವಾ ಕೊರೊನಾದಲ್ಲಿ ಹೋಗಿದ್ದಾರೆಯೇ ಮಾಹಿತಿ ನೀಡಲು ಕೇಳಿದ್ದೇನೆ. ನಾಳೆ ಸಂಜೆಯೊಳಗೆ ( 12.10.2021) ಈ ಯೋಜನೆಯ ವೆಚ್ಚ, ನಿರ್ವಹಣೆ ವೆಚ್ಚ, ಈ ರೀತಿ ಬರಲು ಕಾರಣಗಳ ಬಗ್ಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.

About The Author