TUMAKURU:SHAKTHIPEETA FOUNDATION
ನ್ಯಾಷನಲ್ ಬಯೋಡೈವರ್ಸಿಟಿ ಆಥಾರಿಟಿ, ಸ್ಟೇಟ್ ಬಯೋಡೈವರ್ಸಿಟಿ ಆಥಾರಿಟಿ ಮತ್ತು ಗ್ರಾಮ ಪಂಚಾಯಿತಿಗಳು, ತಾಲ್ಲೋಕು ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ರಚಿಸಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳು ಸಕ್ರೀಯವಾಗಿ ಕಾರ್ಯ ನಿರ್ವಸದೇ ಇದ್ದಲ್ಲಿ ಮುಂದೆ ಇಡೀ ದೇಶವೇ ಬರಡಾಗುವ ದಿವಸಗಳು ದೂರ ಇಲ್ಲ.
ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಮಾನಿಟರಿಂಗ್ ಮಾಡುತ್ತಿರುವ ಬಿಎಂಸಿ ಗಳು ನಾಮಕಾವಸ್ಥೆ ಸಮಿತಿಗಳಾಗಿವೆ. ಇವುಗಳ ಮಹತ್ವ ಇನ್ನೂ ಜನಕ್ಕೆ ತಿಳಿದಿಲ್ಲ. ಇವುಗಳು ಚುರಾಕಬೇಕು, ಸಕ್ರೀಯವಾಗ ಬೇಕಾದರೆ ನಿಯಮಗಳಲ್ಲಿರುವ ‘ನಾಲೇಡ್ಜ್ ಪರ್ಸನ್’ ಎಂಬ ಚಿಂತನೆ ನಿಜಕ್ಕೂ ಅರ್ಥಪೂರ್ಣವಾಗಿದೆ. ಇವರಿಗೆ ನಿರಂತರವಾಗಿ ತರಬೇತಿ ನೀಡುವ ಮೂಲಕ ಆಂದೋಲನವಾದರೆ ಮಾತ್ರ ಮುಂದಿನ ಪೀಳಿಗೆಗೆ ಉಳಿಗಾಲ.
ಇಂದಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ‘ಜನಪ್ರತಿನಿಧಿಗಳು ಗೆಲ್ತಾರೆ- ಸೋಲ್ತಾರೆ, ಅಧಿಕಾರಿಗಳು ಬರ್ತಾರೆ – ಹೋಗ್ತಾರೆ’. ಪಾಪ ಅವರೆಲ್ಲಾ ಅವರ ಅವಧಿಯಲ್ಲಿ ಹೂಡಿಕೆಯನ್ನು ವಾಪಾಸ್ಸು ಪಡೆಯುವ ತವಕದಲ್ಲಿ ಇರುತ್ತಾರೆ. ಭವಿಷ್ಯದ ಬಗ್ಗೆ ಚಿಂತನೆ ಮಾಡಲು ಅವರ ಬಳಿ ಸಮಯವೇ ಇರುವುದಿಲ್ಲ.
ಆದರೇ ಪರಿಣಿತರು, ತಿಳುವಳಿಕೆ ಇರುವವರು, ಸಂಘಸಂಸ್ಥೆಗಳ ಪ್ರತಿನಿಧಿಗಳು, ವಿಷಯ ತಜ್ಞರು, ಸಂಶೋಧಕರು, ಹೋರಾಟ ಗಾರರು, ಪ್ರಗತಿಪರ ಚಿಂತಕರು, ಅಭಿವೃದ್ಧಿ ಪರ ಚಿಂತಕರು, ಪರಿಸರಾಸಕ್ತರು, ಇನ್ನೋವೇಟರ್ಸ್, ಅನುಭವಿಗಳು, ಮಾಹಿತಿ ಹಕ್ಕು ಹೋರಾಟ ಗಾರರು, ಸೋಶಿಯಲ್ ಮೀಡಿಯಾ/ ಮೀಡಿಯಾ ಪ್ರತಿನಿಧಿಗಳು, ದೇಶ ಪ್ರೇಮಿಗಳು ಆಯಾ ಪ್ರದೇಗಳಲ್ಲಿ ನಿರಂತರವಾಗಿ ವಾಸ ಮಾಡುತ್ತಾರೆ.
ಇವರೆಲ್ಲಾ ಶೇ 100 ರಷ್ಟು ಪ್ರಾಮಾಣಿಕರು ಅಂತ ಅಲ್ಲ, ಇವರಲ್ಲಿಯೂ ಭ್ರಷ್ಠರೂ, ಬ್ಲಾಕ್ ಮೇಲ್ ಮಾಡುವವರು, ಅಸೂಯೇ ಪಡುವವರು, ಹೊಟ್ಟೆ ಉರುಕರು ಇದ್ದರೂ ಶೇ ವಾರು ಒಳ್ಳೆಯವರು ಇರುತ್ತಾರೆ. ಅವರಿಗೆ ಅವರ ಗ್ರಾಮಗಳ ಮಟ್ಟದ ಸಂಪೂರ್ಣ ಜ್ಞಾನ ಇರುತ್ತದೆ. ಇದಕ್ಕೆ ಬೆಲೆಕಟ್ಟಲು ಸಾಧ್ಯಾವಿಲ್ಲ.
ಈ ಹಿನ್ನಲೆಯಲ್ಲಿ ಕರ್ನಾಟಕ ಜೀವಿ ವೈವಿಧ್ಯ ಮಂಡಳಿ ಮಹತ್ತರವಾದ ಪಾತ್ರ ವಹಿಸಬೇಕಾಗುತ್ತದೆ. ಇದೊಂದು ಕೇಂದ್ರ ಸರ್ಕಾರದ ಮಹತ್ತರವಾದ ಯೋಜನೆ ಆಗಿರುವುದರಿಂದ, ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಯವರೊಂದಿಗೆ, ಆರಂಭದಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಸಮಾಲೋಚನೆಯನ್ನು ನಡೆಸಲು ಉದ್ದೇಶಿಸಲಾಗಿದೆ.ಆಸಕ್ತರು ಕೈಜೋಡಿಸಲು ಮನವಿ.
- ಬಿ.ಎಂ.ಸಿ ಮಾನಿಟರಿಂಗ್ ಸೆಲ್
- ಪಿಬಿಆರ್ ಮೌಲ್ಯ ಮಾಪನ
- ಜಿಐಎಸ್ ಮ್ಯಾಪ್
- ಪಿಬಿಆರ್-ನಾಟಿ ವೈಧ್ಯರು, ಹಕೀಮರು ಮತ್ತು ಪಾರಂಪರಿಕ ವೈಧ್ಯರ ಡಾಟಾ ಬೇಸ್ – ಮಾನದಂಡಗಳು- ಗುರುತಿನ ಪತ್ರ ವಿತರಣೆ
- ಪಿಬಿಆರ್- ನಾಲೇಡ್ಜ್ ಪರ್‍ಸನ್ ಡಾಟಾ ಬೇಸ್ – ಮಾನದಂಡಗಳು- ಗುರುತಿನ ಪತ್ರ ವಿತರಣೆ
- ಔಷಧಿಯ ಗಿಡಗಳ ಡೆಮೋ ಪ್ಲಾಟ್/ಔಷಧಿಯ ಸಸ್ಯಗಳ ಡಾಟಾ ಬೇಸ್.
- ಜಲಸಂಗ್ರಹಾಗಾರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ
- ಯೂ ಟ್ಯೂಬ್ ಲ್ಯಾಬ್/ ಯೂ ಟ್ಯೂಬ್ ಮೊಬೈಲ್ ಲ್ಯಾಬ್
- ಪ್ರತಿ ವಾರದ 5 ದಿವಸ ಬ್ಯಾಚ್ ವೈಸ್ ರೆಸಿಡೆನ್ಸಿಯಲ್ ಸ್ಕಿಲ್ ತರಬೇತಿ