1st October 2023
Share

TUMAKURU:SHAKTHIPEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್ ಗೆ ಭೇಟಿ ನೀಡಿ  ತುಮಕೂರು ನಗರದಲ್ಲಿ ಎಲ್ಲಿ ಜಾಸ್ತಿ ಆಕ್ಸಿಡೆಂಟ್ ಆಗುತ್ತಿವೆ. ಅದಕ್ಕೆ ಏನು ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ ಡಿಜಿಟಲ್ ಮಾಹಿತಿ ನೀಡಲು ಪೋಲೀಸ್ ಇಲಾಖೆಯ ಶ್ರೀ ತಿಪ್ಪೇಶ್ ರವರನ್ನು ಕೇಳಲಾಯಿತು.

ಐಸಿಸಿಸಿ ಪ್ರತಿ ವಾರ ಒಂದೊಂದು ಅನಾಲೀಸಿಸ್ ವರದಿಯನ್ನು ಜನತೆಗೆ ಬಿಡುಗಡೆ ಮಾಡಬೇಕು. ಡಾಟಾ ಇಟ್ಟುಕೊಂಡು ಸುಮ್ಮನೇ ಕೂರುವುದಲ್ಲಾ, ಇದರಿಂದ ಜನತೆಗೆ ಹೇಗೆ ಅನೂಕೂಲವಾಗಲಿದೆ ಎಂಬ ಅನಾಲೀಸಿಸ್ ಮುಖ್ಯ ಎಂಬ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.

ಐಸಿಸಿಸಿಯ ಶ್ರೀ ಅಶ್ವಿನ್ ರವರು ಮತ್ತು ಪೋಲೀಸ್ ಇಲಾಖೆಯ  ಶ್ರೀ ತಿಪ್ಪೇಶ್ ರವರು ನಾಳೆ ಉನ್ನತ ಅಧಿಕಾರಿಗಳ ಸಹಿಯೊಂದಿಗೆ ನಗರದಲ್ಲಿ ಎಲ್ಲಿ ಜಾಸ್ತಿ ಆಕ್ಸಿಡೆಂಟ್ ಆಗುತ್ತಿವೆ ಎಂಬ ವಿವರವಾದ ಮಾಹಿತಿ ನೀಡುವುದಾಗಿ ತಿಳಿಸಿದರು.

ಮುಂದಿನ ದಿಶಾ ಸಭೆಯಲ್ಲಿ ಈ ಬಗ್ಗೆ ಪಿಪಿಟಿ ಪ್ರದರ್ಶನ ಮಾಡಲು ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು

About The Author