ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಗರದ ಎಸ್.ಪಿ.ಕಚೇರಿ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್ ಗೆ ಭೇಟಿ ನೀಡಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮಾಹಿತಿ ಪಡೆದರು.
ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಮುಂದಿನ ವರ್ಷದ ಆಗಸ್ಟ್ 2022 Àಕ್ಕೆ ದೇಶದಲ್ಲಿ ಸುಮಾರು 75 ಬೃಹತ್ ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಯೋಚಿಸಿದ್ದಾರೆ. ಈ ವೇಳೆಗೆ ತುಮಕೂರು ಜಿಲ್ಲೆಯಲ್ಲೂ ಸುಮಾರು 75 ಯೋಜನೆಗಳ ಲೋಕಾರ್ಪಣೆ ಅಥವಾ ಶಂಕುಸ್ಥಾಪನೆ ಮಾಡುವ ಬಗ್ಗೆ ಮಾಹಿತಿಯನ್ನು ಐಸಿಸಿಸಿಯಲ್ಲಿ ಜಿಐಎಸ್ ಲೇಯರ್ ಮಾಡಲು ಸೂಚಿಸಿದರು.
ಈ ಕಟ್ಟಡ ಆರಂಭವಾಗುವ ವೇಳೆಗೆ ತುಮಕೂರು ಜಿಲ್ಲಾ ಮಟ್ಟದ ದಿಶಾ ಮಾನಿಟರಿಂಗ್ ಸೆಲ್ ನ ಎಲ್ಲಾ ಡಿಜಿಟಲ್ ಡಾಟಾ ಅಂಶಗಳ ಲೋಕಾರ್ಪಣೆ ಮಾಡಲೇ ಬೇಕಿದೆ. ಜಿಲ್ಲೆಯ 330 ಗ್ರಾಮಪಂಚಾಯಿತಿಗಳು, 11 ನಗರ ಸ್ಥಳೀಯ ಡಿಜಿಟಲ್ ಮಾಹಿತಿಗಳು ಇಲ್ಲಿ ದೊರೆಯುಂತಾಗಬೇಕು ಎಂದು ಖಡಕ್ ಸೂಚಿಸಿದರು.
ವಿಶೇಷವಾಗಿ ಮಾಹಿತಿ ಸಂಗ್ರಹ ಎಷ್ಟು ಮುಖ್ಯವೋ ಅವುಗಳ ಅನಾಲೀಸಿಸ್ ಮಾಡುವುದು ಅಷ್ಟೆ ಮುಖ್ಯ. ಹಿಂದೆ ಈ ಬಗ್ಗೆ ತುಮಕೂರು ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಜಿಲ್ಲಾಧಿಕಾರಿಗಳಾದ ಶ್ರೀ ರಾಕೇಶ್ ಕುಮಾರ್ ರವರು, ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಸೇರಿದಂತೆ ಪ್ರತಿ ಶುಕ್ರವಾರ ಸಂಜೆ 5 ಗಂಟೆಗೆ ಸಭೆ ಸೇರಿ ಚರ್ಚೇ ಮಾಡುತ್ತಿರುವ ಅಂಶವನ್ನು ಎಸ್.ಪಿ ಯವರ ಗಮನಕ್ಕೆ ತಂದರು.
ಎಂ.ಡಿ.ಶ್ರೀ ರಂಗಸ್ವಾಮಿಯವರು ಮಾತನಾಡಿ ದಿಶಾ ಸಮಿತಿಯ ನಿರ್ಣಯದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ, ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ಕುಂದರನಹಳ್ಳಿ ರಮೇಶ್ ರವರು ಸಮಾಲೋಚನೆ ನಡಸಿ ತಮ್ಮ ಸಹಕಾರದೊಂದಿಗೆ ಆದೇಶ ನೀಡಿಸುವುದಾಗಿಯೂ ತಿಳಿಸಿದ್ದಾರೆ. ಆದ್ದರಿಂದ 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಡಿಜಿಟಲ್ ಆಂದೋಲನ ಕೈಗೊಳ್ಳಲು ರಮೇಶ್ ರವರು ಸಲಹೆ ನೀಡಿದ್ದಾರೆ. ಈ ಬಗ್ಗೆಯೂ ಶೀಘ್ರದಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದರು.
ನಾವು ತಾವೂ ಸೂಚಿಸಿಉವ ಎಲ್ಲಾ ಅಂಶಗಳನ್ನು /ಯೋಜನೆಗಳನ್ನು ತರಲಿದ್ದೇವೆ ಎಂದು ತಿಳಿಸಿದರು. ಪುನಃ ಪ್ರತಿ ಶುಕ್ರವಾರ ಸಂಜೆ ಸಭೆ ನಡೆಸಲು ಜಿಲ್ಲಾಧಿಕಾರಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಂಸದರು ಎಸ್.ಪಿ ಯವರೊಂದಿಗೆ ಮಾತನಾಡಿ ನಿಮ್ಮ ಕಚೇರಿ ಆವರಣದಲ್ಲಿ ನಡೆಯುವ ಯೋಜನೆ ಹುಷಾಗಿರ ಬೇಕು ಎಂದು ಮಾರ್ಮಿಕವಾಗಿ ನುಡಿದರು. ಈ ಯೋಜನೆಯ ಯಶಸ್ಸಿಗೆ ನಮ್ಮ ಇಲಾಖೆಯೂ ಸಹ ಕೈಜೋಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಪಿ.ಯವರಾದ ಶ್ರೀ ರಾಹುಲ್ ಕುಮಾರ್ ಶಹಪುರ್ ವಾಡ್ ರವರು, ಸ್ಮಾಟ್ ್ ಸಿಟಿ ಎಂ.ಡಿ ಯವರಾದ ಶ್ರೀ ರಂಗಸ್ವಾಮಿಯವರು, ಎಇಇ ಶ್ರೀ ಚನ್ನವೀರಯ್ಯನವರು ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್, ಪರಿಸರವಾದಿ ಶ್ರೀ ಸಿದ್ಧಪ್ಪ ಇನ್ನೂ ಮುಂತಾದವರು ಇದ್ದರು.