TUMAKURU:SHAKTHIPEETA FOUNDATION
ತುಮಕೂರು ಜಿಲ್ಲಾ ದಿಶಾ ಮಾನಿಟರಿಂಗ್ ಸೆಲ್ ಹಾಗೂ ಡಿಸ್ಟಿಕ್ಟ್ ಡೆವಲಪ್ ಮೆಂಟ್ ಮಾನಿಟರಿಂಗ್ ಸೆಲ್ ಅನ್ನು ತುಮಕೂರು ಸ್ಮಾರ್ಟ್ ಸಿಟಿಯವರು ಆರಂಭಿಸಿರುವ ಐ.ಸಿ.ಸಿ.ಸಿ ಯಲ್ಲಿ ಡಿಜಿಟಲ್ ಡಾಟಾ ಗಳಿಗೆ ಸಂಭಂದಿಸಿದ ಎಲ್ಲಾ ವಿಭಾಗಗಳು ಒಂದೇ ಕಡೆ ಇರುವಂತಹ ಮಹತ್ವದ ನಿರ್ಣಯವನ್ನು ತುಮಕೂರು ಜಿಲ್ಲಾ ದಿಶಾ ಸಮಿತಿ ಕೈಗೊಂಡಿದೆ.
ತುಮಕೂರು ಜಿಲ್ಲಾ ಯೋಜನಾ ಸಮಿತಿ ಮತ್ತು ತುಮಕೂರು ಜಿಲ್ಲಾ ಅಂಕಿ ಅಂಶಗಳ ಇಲಾಖೆ ಮಹತ್ವದ ಪಾತ್ರ ವಹಿಸಬೇಕಿದೆ. ಇದು ಅವುಗಳ ಹೊಣೆಗಾರಿಕೆ ಮತ್ತು ಕರ್ತವ್ಯವೂ ಹೌದು. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಪಾತ್ರ ಇಲ್ಲಿ ಮಹತ್ತರವಾಗಿದೆ. ತುಮಕೂರು ಜಿ.ಐ.ಎಸ್. ಮಾದರಿ ಆಗಲೇ ಬೇಕಿದೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಎನ್.ಐ.ಸಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿರುವ ಎನ್.ಆರ್.ಡಿ.ಎಂ.ಎಸ್ ಮತ್ತು ಕೆ.ಎಂ.ಡಿ.ಎಂ.ಎಸ್. ಈ ಸಂಸ್ಥೆಗಳು ವಿಶೇಷ ಆಸಕ್ತಿ ವಹಿಸಬೇಕಿದೆ.
ತುಮಕೂರು ಸ್ಮಾರ್ಟ್ ಸಿಟಿಯವರು ಈಗಾಗಲೇ ಐಸಿಎಸ್‍ಟಿ ಯಿಂದ ಮಾಡಿಸಿರುವ ಡಿಜಿಟಲ್ ಮಾನಿಟರಿಂಗ್ ವ್ಯವಸ್ಥೆ ಏನಾಗಿದೆ ಎಂಬುದರ ಬಗ್ಗೆಯೂ ಪ್ರಸ್ತಾವನೆಯಲ್ಲಿ ನಮೂದಿಸಬೇಕಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಡಾಟಾ ಆಪರೇಟರ್‍ಗಳ ಮಾಹಿತಿಯನ್ನು ಇಲಾಖಾವಾರು ಸಂಗ್ರಹಿಸಬೇಕಿದೆ.
ಈ ಬಗ್ಗೆ ಎನ್.ಐ.ಸಿ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಲಾಯಿತು. ನಂತರ ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿರವರಾದ ಶ್ರೀಮತಿ ವಿದ್ಯಾಕುಮಾರಿಯವರೊಂದಿಗೂ ಸಮಾಲೋಚನೆ ಮಾಡಲಾಗಿದೆ.
ಇವರೆಲ್ಲರೂ ಒಟ್ಟಿಗೆ ಸೇರಿ ಪ್ರಸ್ತಾವನೆಯನ್ನು ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ನಂತರ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯುವುದು ಸೂಕ್ತವಾಗಿದೆ.
‘ಒಂದು ಜಿಲ್ಲೆ- ಒಂದು ನಕ್ಷೆ ಮತ್ತು ಒಂದು ಜಿಲ್ಲೆ-ಒಂದೇ ಡೇಟಾ’ ಯಶಸ್ವಿಗೆ ತುಮಕೂರು ಜಿಲ್ಲಾ ದಿಶಾ ಸಮಿತಿ ದೇಶಕ್ಕೆ ಮಾದರಿಯಾಗಲು ಚಿಂತನೆ ನಡೆಸಿದೆ. ಎಲ್ಲಾ ಇಲಾಖಾ ಅಧಿಕಾರಿಗಳ ಪಾತ್ರವೂ ಮಹತ್ತರವಾಗಿದೆ.
ದಿಶಾ ಸಮಿತಿಯ ಸಲಹೆಯಂತೆ ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿ ದೇಶದಲ್ಲಿಯೇ ಮಾದರಿ ಆಗಲೇ ಬೇಕು ಎಂಬ ಪರಿಕಲ್ಪನೆ ಹೊಂದಿದೆ.