19th April 2024
Share

TUMAKURU:SHAKTHIPEETA FOUNDATION

ತುಮಕೂರಿನಲ್ಲಿ ತುಮಕೂರು ಸ್ಮಾಟ್್ ಸಿಟಿ ಸುಮಾರು 54 ಉದ್ಯಾನವನಗಳ ಅಭಿವೃದ್ಧಿ ಮತ್ತು 44 ಹೈಟೆನ್ಷನ್ ಕೆಳಭಾಗದಲ್ಲಿ ಫೆನ್ಸಿಂಗ್ ಹಾಕಿದೆಯಂತೆ.

ಆದರ್ಶ ನಗರದ ಉಧ್ಯಾನವನಕ್ಕೆ ನಮ್ನ ಸ್ನೇಹಿತರಾದ ಶ್ರೀ ಸಿದ್ದಪ್ಪನವರು ಕರೆದುಕೊಂಡು ಹೋದರು. ಮಧ್ಯಾಹ್ನ ಸುಮಾರು 12.30 ಆಗಿತ್ತು. ಅಲ್ಲಿ ಶ್ರೀ ರಾಮಣ್ಣ ಎನ್ನುವರು ಉಧ್ಯಾನವನದಲ್ಲಿ ಕಾಯಕ ಮಾಡುತ್ತಿದ್ದರು. ನಾನು ಅವರನ್ನು ಕೇಳಿದೆ ನಿಮಗೆಷ್ಟು ವೇತನ ನೀಡುತ್ತಿದ್ದಾರೆ. ಸಾರ್ ಅಲ್ಲಿ ನಾಗರೀಕ ಸಮಿತಿ ಸದಸ್ಯರಿದ್ದಾರೆ ಅವರನ್ನು ಕೇಳಿ ಎಂದರು.

ನಾವು ಒಳಗಡೆ ಹೋದಾಗ ಅಲ್ಲಿದ್ದವರು ಇನ್ನೂ ಹಲವಾರು ಜನ ಆದರ್ಶ ನಗರ ನಾಗರೀಕ ಸಮಿತಿ ಸದಸ್ಯರನ್ನು ಕರೆದರು. ಈ ಉದ್ಯಾನವನದ ಕಾಮಗಾರಿ ಬಗ್ಗೆ ಚರ್ಚೆ ಆರಂಭವಾಯಿತು.

ನಿಮಗೂ ಈ ಪಾರ್ಕ್‍ಗೂ ಏನೂ ಸಂಭಂದ

ಸಾರ್ ಇದು ನಮ್ಮ ಬಡಾವಣೆಯಲ್ಲಿದೆ, ನಾವು ನಿರ್ವಹಣೆ ಮಾಡುತ್ತಿದ್ದೇವೆ ಎಂದರು.

ನಿಮಗೇನು ದತ್ತು ನೀಡಿದ್ದಾರಾ?

ಇಲ್ಲ ಸಾರ್ ತುಮಕೂರು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಬಹಳ ದಿವಸವಾಯಿತು. ಯಾರೊಬ್ಬರೂ ಇದೂವರೆಗೂ ಕಾಲ್ ಮಾಡಿಲ್ಲ.

ಈ ಗಿಡ ಹಾಕಿದವರು ಯಾರು?

ನಾವು ಹಣ ಸಂಗ್ರಹ ಮಾಡಿ ಈ ಗಿಡಗಳನ್ನು ಹಾಕಿ ಬೆಳೆಸುತ್ತಿದ್ದೇವೆ ಎಂದರು.

ಇದು ಸ್ಮಾರ್ಟ್ ಸಿಟಿ ಅಭಿವೃದ್ಧಿ ಪಡಿಸಿದ ಪಾರ್ಕ್ ಅವರು ಗಿಡ ಹಾಕುತ್ತಾರೆ. ನೀವೂ ಏಕೆ ಹಾಕುತ್ತೀರಿ?

ನೋಡಿ ಸಾರ್ ಈ ಗಿಡ ಎಂಪಿ ಶ್ರೀ ಜಿ.ಎಸ್.ಬಸವರಾಜ್‍ರವರು ಹಾಕಿದ್ದು. ಈ ಗಿಡ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಹಾಕಿದ್ದು ಎಂದು ತೋರಿಸಿದರು.

ಸರಿ ಕಳೆದ 10 ವರ್ಷದ ಹಿಂದೆ ಇದೇ ಉದ್ಯಾನವನದಲ್ಲಿ ಆಗಿನ ಶಾಸಕರಾದ ಶ್ರೀ ಸೊಗಡು ಶಿವಣ್ಣನವರು ಬಂದು ತುಂಬಾ ಗಿಡ ಹಾಕಿದ್ದರು. ಅವು ಏನಾದೋ? ನಾನು ಅಂದು ಇಲ್ಲಿಗೆ ಬಂದಿದ್ದೆ. ನಮ್ಮ ಹಸಿರು ತುಮಕೂರು ಯೋಜನೆಗೆ ವಿರೋಧ ಮಾಡಿ ಇಲ್ಲಿ ನಾವೂ ಗಿಡಹಾಕುತ್ತೇವೆ ಎಂದು ಹಾಕಿದ್ದರೂ. ಅಂದು ನನಗೂ ಅವರಿಗೂ ಜಗಳ ಆಗಿತ್ತು ಎಂದು ಹೇಳಿದಾಗ ಎಲ್ಲರೂ ನಕ್ಕರು.

ಸೊಗಡು ಹಾಕಿದ ಗಿಡದಲ್ಲಿ ಈ ಒಂದು ಮರ ಇದೆ ನೋಡಿ ಎಂದರು.

ಸರಿ ಕೆಲಸ ಮಾಡುತ್ತಿದ್ದ ಶ್ರೀ ರಾಮಣ್ಣನವರುನ್ನು ತೋರಿಸಿ ಆಯಪ್ಪನಿಗೆ ಯಾರು ವೇತನ ನೀಡುತ್ತಿದ್ದಾರೆ ಎಂದೆ.

ಸಾರ್ ಉಚಿತವಾಗಿ ಕೆಲಸ ಮಾಡುತ್ತಿದ್ದಾರೆ ಎಂದಾಗ ನನಗೂ ಆಶ್ಚರ್ಯವಾಯಿತು. ಅವರಿಗೆ ಎರಡು ಕೈಜೋಡಿಸಿ ಮುಗಿದೆ.

ತಕ್ಷಣ ನಾನು ಸ್ಮಾರ್ಟ್ ಸಿಟಿ ಎಂ.ಡಿ.ಯವರಾದ ಶ್ರೀ ರಂಗಸ್ವಾಮಿರವರಿಗೆ ಕರೆ ಮಾತನಾಡಿದೆ.

ಅವರು ಕೂಡಲೇ ಇಂಜಿನಿಯರ್ ರವರನ್ನು ಅಲ್ಲಿಗೆ ಕಳುಹಿಸುವುದಾಗಿ ತಿಳಿಸಿದರು.

ಶ್ರಿ ಮತಿ ಲಕ್ಮಿ ಮತ್ತು ಶ್ರೀ ರವಿವರ್ಮ ಇಬ್ಬರು ಇಂಜಿನಿಯರ್‍ಗಳು ಬಂದರು.

ನಾನು ಈ ಉದ್ಯಾನವನದಲ್ಲಿ ಗಿಡ ಹಾಕಲು ಎಷ್ಟು ಹಣ ಖರ್ಚಾಗಿದೆ ಎಂದೆ.

ಇಲ್ಲಾ ಸಾರ್ ಗಿಡಹಾಕಲು ನಾವು ಅಂದಾಜು ಪಟ್ಟಿಯಲ್ಲಿ ಹಣ ಸೇರಿಸಿಲ್ಲ.

ಪಾಕ್ ್ ಅಭಿವೃದ್ಧಿ ಮಾಡಿ, ಗಿಡ ಹಾಕಲು ಹಣ ಸೇರಿಸಿಲ್ಲ ಎಂದರೆ ಹೇಗೆ?

ಹೋಗಲಿ ನಿರ್ವಹಣೆಗಾಗಿ ಎಷ್ಟು ಹಣ ಖರ್ಚು ಮಾಡುತ್ತಿದ್ದೀರಿ?

ಈ ಪಾರ್ಕ್ ನಿರ್ವಹಣೆಗೆ ಹಣ ನೀಡುತ್ತಿಲ್ಲ ಸಾರ್.

ಬೇರೆ ಯಾವ ಪಾರ್ಕ್ ಗೆ ನಿರ್ವಹಣೆಗಾಗಿ ಹಣ ನೀಡುತ್ತಿದ್ದೀರಿ.

ಕೆಲವು ಪಾರ್ಕ್‍ಗೆ ಮೂರು ತಿಂಗಳಿಗೆ ರೂ 35000 ಹಣ ನೀಡುತ್ತಿದ್ದೇವೆ ಎಂದರು.

ನಾಗರೀಕ ಸಮಿತಿಗಳಿಗೆ ಏಕೆ ನೀಡುತ್ತಿಲ್ಲ ಎಂದಾಗ ಅವರು ಮೌನವಾದರು.

ನಾನು ಅವರಿಗೆ ಹೇಳಿದ್ದು ತುಮಕೂರು ನಗರದ ಎಲ್ಲಾ 94 ಉಧ್ಯಾನವನಗಳ ಬಗ್ಗೆ ಚರ್ಚೆ ಮಾಡುತ್ತೇನೆ ನನಗೆ ಪಟ್ಟಿ ನೀಡಿ ಎಂದು ಹೇಳಿದೆ.

ನಾಗರೀಕ ಸಮಿತಿಯವರಿಗೆ ಇನ್ನೂ ಎಷ್ಟು ಗಿಡ ಹಾಕಬೇಕು, ನೀರಿನ ವ್ಯವವಸ್ಥೆ ಏನು, ನಿರ್ವಹಣೆ ಹೇಗೆ ಮಾಡುತ್ತೀರಿ ಎಂಬ ಪಟ್ಟಿ ನೀಡಿ ಎಂದು ಸಲಹೆ ನೀಡಿದೆ.

ಈ ಉದ್ಯಾನವನದಲ್ಲಿ ಪಂಚವಟಿ ಗಿಡ ಹಾಕಲು 5 ಗಿಡಗಳನ್ನು ಸಾಮಾಜಿಕ ಅರಣ್ಯ ಇಲಾಖೆಯಿಂದ ಕೊಡಿಸಿದ್ದೆ. ಶ್ರೀ ಸಿದ್ದಪ್ಪನವರು ಇಲ್ಲಿ ಗಿಡಹಾಕಿಸಿದ್ದೇ ಎಂದು ತೋರಿಸಿದರು. ಅಲ್ಲಿ ಒಂದು ಗಿಡವೂ ಇರಲಿಲ್ಲ. ನಾಗರೀಕ ಸಮಿತಿಯವರು ಇಲ್ಲಿ ಯಾರು ಗಿಡ ಹಾಕಿಲ್ಲ ಎಂದರು, ಈ ಬಗ್ಗೆ ಏನೂ ಮಾಡಬೇಕು ಎಂಬುದು ನನಗೆ ಅರ್ಥವಾಗಲಿಲ್ಲ.

 ಮತ್ತೊಮ್ಮೆ ಬರುವುದಾಗಿ ಬಂದೆ.

ಇಷ್ಟೆಲ್ಲಾ ಏಕೆ ಹೇಳಿದೆ ಎಂಬ ಬಗ್ಗೆ ಶೀಘ್ರದಲ್ಲಿ ಒಂದು ರೂಪು ರೇಷೆ ಹೊರಬೀಳಲಿದೆ.