11th December 2024
Share
ಸರ್ಕಾರದ ಹಣ ಪಡೆದು ಮಾಡಿರುವ ಬಯೋಡೈವರ್ಸಿಟಿ ದಾಖಲಾತಿ ಪುಸ್ತಕದ ಮುಖಪುಟ ನೋಡಿ.

ಗ್ರಾಮದವರೇ ಮಾಡಿರುವ ಪುಸ್ತಕದ ಮುಖ ಪುಟ ನೋಡಿ. ಪರಿಸರ ಎಷ್ಟು ಚೆಂದವಾಗಿದೆ.

TUMAKURU:SHAKTHIPEETA FOUNDATION

 ನಿನ್ನೆ(29.10.2021) ರಂದು ನಾನು ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಬೆಂಗಳೂರಿಗೆ ಹೊರಟಿದ್ದೆವು. ನಮ್ಮ ಮನೆ ಬಳಿ ಬಂದ ಮಣುವಿನಕುರಿಕೆ ಶ್ರೀ ಶಿವರುದ್ರಯ್ಯನವರು ಅವರ ಗ್ರಾಮದ ಡಾ.ಎಂ.ಪಿ.ಶಂಕರಪ್ಪನವರು ಬರೆದಿರುವ ಮಣುವಿನಕುರಿಕೆ ಇತಿಹಾಸ ಪುಸ್ತಕವನ್ನು ನೀಡಿದರು.

ಕಾರಿನಲ್ಲಿ ಪುಸ್ತಕ ತಿರುವಿ ಹಾಕಿದ ಸಂಸದರು, ಊರಿಗೊಂದು ಕೆರೆ- ಕೆರೆಗೆ ನದಿ ನೀರು,’ ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್’, ತುಮಕೂರು ಜಿಲ್ಲೆಯನ್ನು ಡಾಟಾ ಜಿಲ್ಲೆ ಎಂದು ಘೋಶಿಸಬೇಕಾದರೆ ‘ಊರಿಗೊಂದು ಡಾಟಾ/ಇತಿಹಾಸ ಪುಸ್ತಕ’ ಬೇಡವೇ ಶುರು ಮಾಡು ಎಂದು ಜೋಕ್ ಮಾಡಿದರು.

ನನಗೆ ತಕ್ಷಣ ನೆನಪಿಗೆ ಬಂದಿದ್ದು ಜೀವ ವೈವಿದ್ಯ ದಾಖಾಲಾತಿ ಪುಸ್ತಕ’ ವನ್ನು ಗ್ರಾಮ ಪಂಚಾಯಿತಿಗೊಂದು ಮಾಡಲು ಕೇಂದ್ರ ಸರ್ಕಾರ ಹಣ ನೀಡಿದೆ. ಹೌದು ನಾವು ಏಕೆ ಗ್ರಾಮಕ್ಕೊಂದು ಡಾಟಾ ಪುಸ್ತಕ’ ಮಾಡಬಾರದು, ಸಂಸದರ ಸಲಹೆ ಸೂಕ್ತವಲ್ಲವೇ ಎಂಬ ಯೋಚನೆ ನನಗೂ ಬಂತು.

ಸಂಸದರ ಜೊತೆ ಸಮಾಲೋಚನೆ ನಡೆಸಿದೆ. ಅವರು ಸೀರಿಯಸ್ ಆಗಿ ಮಾಡಿಸಲು ಸಲಹೆ ನೀಡಿದ್ದಾರೆ. ಇದಕ್ಕೆ ಅಪ್ಪ-ಅಮ್ಮ ಯಾವ ಇಲಾಖೆ ಯೋಚಿಸಬೇಕಿದೆ.

ಪ್ರವಾಸೋಧ್ಯಮ ಇಲಾಖೆ ಸಚಿವರಾಗಿದ್ದಾಗ ಶ್ರೀ ಸಿ.ಟಿ.ರವಿರವರು ಇಂಥದೊಂದು ಆಲೋಚನೆ ಹುಟ್ಟು ಹಾಕಿದ್ದರು. ಕನ್ನಡ ಸಂಸ್ಕøತಿ ಇಲಾಖೆಯವರ ಪಾತ್ರವೂ ಇದರಲ್ಲಿದೆ. ಡಾಟಾ ಪುಸ್ತಕ ಅಂದರೆ ಅಂಕಿಅಂಶಗಳ ಇಲಾಖೆಯ ಪಾತ್ರವೂ ಇದೆ. ನೋಡೋಣ ಏನು ಮಾಡಬಹುದು.

ತಾವೂ ಸಲಹೆ ನೀಡುವಿರಾ?