20th December 2024
Share

TUMAKURU:SHAKTHI PEETA FOUNDATION

2014 ರಲ್ಲಿ ಕರ್ನಾಟಕ ರಾಜ್ಯದಲ್ಲಿ  ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಿದೆ.

ತುಮಕೂರು ಜಿಲ್ಲೆಯಲ್ಲಿಯೂ ಜಿಲ್ಲಾ ಕಾರ್ಯನಿರ್ವಹಣಾ  ಪ್ರಾಧಿಕಾರ ಇದೆಯಂತೆ.ಇದಕ್ಕೆ ಸದಸ್ಯ ಕಾರ್ಯದರ್ಶಿಯಾಗಿ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ನೇಮಕವಾಗಿದ್ದಾರಂತೆ.

2014 ರಲ್ಲಿ ರಚನೆಯಾದ ಈ ಕಾನೂನಿನಲ್ಲಿ ಪ್ರತಿ ಜಿಲ್ಲೆಯ ವಾಟರ್ ಬಾಡಿ ಡಾಟಾ ಬೇಸ್ ಇಟ್ಟುಕೊಳ್ಳಬೇಕಂತೆ. ಯಾವುದೇ ಸಮಿತಿ ಆಗಲಿ ಸದಸ್ಯ ಕಾರ್ಯದರ್ಶಿ ಕೆಲಸ ಮಹತ್ತರವಾದದು. ಅಧ್ಯಕ್ಷರು ಮತ್ತು ಸಮಿತಿ ಸೂಚಿಸಿದ ಕೆಲಸ ಮಾಡಿಸುವುದು ಅವರ ಹೊಣೆಗಾರಿಕೆ ಅಲ್ಲವೇ?

2019 ರಲ್ಲಿ ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದಂತೆ ಸಣ್ಣ ನೀರಾವರಿ ಇಲಾಖೆ ತುಮಕೂರು ಜಿಲ್ಲೆಯ ಎಲ್ಲಾ ವಿಧವಾದ ವಾಟರ್ ಬಾಡಿಗಳು, ಅವುಗಳಿಗೆ ಯಾವ ನದಿ ನೀರು ಬರುತ್ತಿದೆ, ಯಾವ ಗ್ರಾಮಗಳಲ್ಲಿ ಯಾವುದೇ ವಾಟರ್ ಬಾಡಿ ಇಲ್ಲ ಎಂಬ ಜಿಐಎಸ್ ಆಧಾರಿತ ಸಮೀಕ್ಷೆಯನ್ನು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯ ಸ್ವಾಮಿರವರು ವಿಶೇಷ ಆಸಕ್ತಿ ವಹಿಸಿ ಮಾಡಿಸಿದ್ದಾರೆ.

ದಿಶಾ ಸಮಿತಿಯಲ್ಲಿ ಎಲ್ಲಾ ಸಭೆಗಳಲ್ಲೂ ಚರ್ಚೆಯಾಗಿದೆ. ಜೊತೆಗೆ ಅಟಲ್ ಭೂಜಲ್ ಮತ್ತು ಜಲಾಮೃತ ಯೋಜನೆ ಜಾರಿ ಆಗಿದೆ. ಇಲ್ಲೂ ಸಹ ಡಾಟಾ ಬೇಸ್ ಮಾಡಬೇಕು. ಸ್ವತಃ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪ್ರತ್ಯೇಕವಾಗಿ ಸಭೆ ನಡೆಸಿ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆಯಡಿಯಲ್ಲಿ ಪ್ರತಿಯೊಂದು ಗ್ರಾಮಪಂಚಾಯಿತಿವಾರು ನಕ್ಷೆ ಸಹಿತ ತೋರಿಸಲೇ ಬೇಕು ಎಂದು ತಾಕೀತು ಮಾಡಿದ್ದಾರೆ.

ಈ ಸಮಿತಿಯ ಅಧ್ಯಕ್ಷರು ಆಗಿರುವ ಹಿಂದಿನ ಜಿಲ್ಲಾಧಿಕಾರಿಗಳಾದ ಶ್ರೀ ರಾಕೇಶ್ ಕುಮಾರ್ ರವರು ದಿಶಾ ಸಭೆಯಲ್ಲಿ ಕಟ್ಟು ನಿಟ್ಟಿನ ನಿರ್ದೇಶನ ನೀಡಿದ್ದರು. ಈಗ ಇರುವ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಖಡಕ್ ನಿರ್ದೇಶನ ನೀಡಿದ್ದಾರೆ. ಸಂಸದರು ಜಿಲ್ಲಾ ಪಂಚಾಯಿತಿ ಸಿಇಓ ರವರಿಗೆ ಪತ್ರ ಬರೆದು ಈ ಮಾಹಿತಿ ಸಂಗ್ರಹಿಸಿ ಸಣ್ಣ ನೀರಾವರಿ ಇಲಾಖೆಗೆ ನೀಡಲು ಕೋರಿದ್ದಾರೆ. ಇದೂವರೆಗೂ ಸಾದ್ಯಾವಾಗಿಲ್ಲ ಎಂದರೆ ತಪ್ಪು ಯಾರದು?

ಕಾಟಚಾರದ ಜಲಶಕ್ತಿ ಅಭಿಯಾನ, ಇದಕ್ಕೆ ನೂರಾರು ಕೋಟಿ ಈ ದೇಶದಲ್ಲಿ ಖರ್ಚು, ಡಿಜಿಟಲ್ ಇಂಡಿಯಾ ಸೋಗು ಬೇರೆ, ಕೆಳಹಂತದಲ್ಲಿ ಕೆಲಸ ಮಾಡಲು ಸಾದ್ಯಾವಿಲ್ಲವೇ? 

ತುಮಕೂರು ಜಿಲ್ಲೆಯಲ್ಲಿ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ನಕ್ಷೆಯಲ್ಲಿ ಯಾವ ಗ್ರಾಮದಲ್ಲಿ ಎಷ್ಟು ಜಲಸಂಗ್ರಹಾಗಾರಗಳು ಮತ್ತು ಎಷ್ಟು ಕೀಮೀ ಉದ್ದದ ಕರಾಬುಹಳ್ಳಗಳು ಇವೆ ಎಂಬ ಮಾಹಿತಿಯನ್ನು ನೀಡಲು ಸೂಚಿಸಿದರು ಇದೂವರೆಗೂ ಮಾಡಿಲ್ಲ.

ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಎನ್.ಆರ್.ಡಿ.ಎಂ.ಎಸ್ ನಕ್ಷೆಯನ್ನು ಈಗಾಗಲೇ ರವಾನಿಸಿದೆಯಂತೆ. ಟೆಂಡರ್ ನೀಡಿ ತುಮಕೂರಿನ ಸ್ಪೆಕ್ಟ್ರಾದವರು ಮಾಡಿರುವ ನಕ್ಷೆಯಲ್ಲಿರುವ ಜಲಸಂಗ್ರಹಾಗಾರಗಳು ಮತ್ತು ಪ್ರತಿ ಗ್ರಾಮದಲ್ಲಿ ಇರುವ ಎಲ್ಲಾ ವಿಧವಾದ ಜಲಸಂಗ್ರಹಾಗಾರಗಳ ಡೇಟಾ ಬೇಸ್ ತಪಾಸಣೆ ಮಾಡಿ ಎಂದರೂ ಇದೂವರೆಗೂ ಮಾಹಿತಿ ನೀಡಲು ಸಾದ್ಯಾವಗಿಲ್ಲ.

ಹಾಗಾದರೇ 2014 ರಿಂದ ತುಮಕೂರು ಜಿಲ್ಲೆಯಲ್ಲಿ ಇರುವ ಸದಸ್ಯ ಕಾರ್ಯದರ್ಶಿರವರು ಏನು ಮಾಡುತ್ತಿದ್ದಾರೆ. ವೇತನ ಪಡೆಯುತ್ತಿಲ್ಲವೇ, ಇವರು ಕತ್ತೆ ಕಾಯುತ್ತಾ ಇದ್ದಾರೆಯೇ ಎಂದು ಜಿಲ್ಲಾ ಮಟ್ಟದ ಒಬ್ಬ ಅಧಿಕಾರಿ ನನ್ನ ಬಳಿ ಹೇಳಿದರು.

ನ್ಯಾಷನಲ್ ಬಯೋ ಡೈವರ್ಸಿಟಿ ಆಕ್ಟ್ ಪ್ರಕಾರವೂ ಈ ಡೇಟಾ ಬೇಸ್ ಇಟ್ಟುಕೊಳ್ಳಬೇಕು, ತುಮಕೂರು ಜಿಲ್ಲೆಯಲ್ಲಿ 352 ಬಿಎಂಸಿಗಳು ರಚನೆಯಾಗಿವೆ. ಇವು ನಿದ್ದೆ ಹೊಡೆಯುತ್ತಾ ಇರಬಹುದು.

ಈ ಸಮಿತಿಯಲ್ಲಿ ಎಸ್.ಪಿ ಯವರು ಇದ್ದಾರೆ, ಅವರ ಕಚೇರಿ ಆವರಣದಲ್ಲಿ ಸುಮಾರು 70 ಕೋಟಿ ವೆಚ್ಚದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಐಸಿಸಿಸಿ ಆಗುತ್ತಿದೆ. ಇಲ್ಲಿ ತುಮಕೂರು ಜಿಲ್ಲೆಯ ಜಿಐಎಸ್ ಲೇಯರ್ ಸಹಿತ ಎಲ್ಲಾ ಮಾಹಿತಿ ಇರಬೇಕು ಎಂಬ ಕನಸು ಸಂಸದರದ್ದು. ಅದು ಕನಸಾಗಿಯೇ ಇರಬಹುದಾ ಅಥವಾ ನನಸು ಆಗಲಿದೆಯೇ ಕಾದು  ನೋಡಬೇಕು.

ತುಮಕೂರು ಜಿಐಎಸ್ ಪೋರ್ಟಲ್ ಲಾಂಚ್ ಆಗಿದೆ. ಇಲ್ಲಿ ವಾಟರ್ ಬಾಡಿಗಳ ಜಿಐಎಸ್ ಲೇಯರ್ ಇರಬೇಕು. ಅಧಿಕಾರಿಗಳೇ ಇಂಜಿನಿಯರ್‍ಗಳೇ, ಪಿಡಿಓ ಗಳೇ ಒಂದು ಅರ್ಧ ಗಂಟೆ ಕುಳಿತು ಧ್ಯಾನ ಮಾಡಿ. ನೀವೂ ಮಾಡುತ್ತಿರುವ ಈ ಡಾಟಾ ಬೇಸ್ ಕೆಲಸ ನಿಮಗೆ ತೃಪ್ತಿ ಇದೆಯಾ? ಛಾಲೇಂಜ್ ಆಗಿ ತೆಗೆದು ಕೊಂಡರೆ ಒಂದು ವಾರದ ಕೆಲಸ ಇದು.

ನಿಯಮದ 13 ಮತ್ತು 15 ನೇ ಅಂಶವನ್ನು ನೋಡಿ, ಶಕ್ತಿಪೀಠ ಫೌಂಡೇಷನ್ ಈ ಡಾಟಾ ಬೇಸ್ ಗಾಗಿ ಚಂಡಿ ಅವತಾರ ಆಡಬಹುದು. ಜಲಶಕ್ತಿ ಅಭಿಯಾನದ ಬಗ್ಗೆ ನಮ್ಮ ಸಂಸ್ಥೆ ಅಧ್ಯಯನ ಮಾಡುತ್ತಿದೆ. ತುಮಕೂರು ಜಿಲ್ಲೆ ಮಾದರಿಯಾಗಿ ಮಾಡಲೇ ಬೇಕು ಎಂಬ ಹಠ ನಮ್ಮದಾಗಿದೆ.

ನೋಡೋಣ ಎಲ್ಲಿಗೆ ನಿಲ್ಲುತ್ತೆ ಈ ಡಾಟಾ ಬೇಸ್ ಜಲಶಕ್ತಿ ಅಭಿಯಾನದ ಹೋರಾಟ?