12th September 2024
Share

TUMAKURU:SHAKTHIPEETA FOUNDATION

ತುಮಕೂರು ನಗರ ಗ್ರಂಥಾಲಯದಲ್ಲಿ ಪಾದಯಾತ್ರೆ ಮಾಡುವ ಮೂಲP, ಅಲ್ಲಿ ಪ್ರತಿದಿನ ಓದಲು ಬರುತ್ತಿರುವ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಲಾಯಿತು.

ದಿನಾಂಕ:01.06.2023 ರಂದು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಗ್ರಂಥಾಲಯ ಅಧಿಕಾರಿಗಳೊಂದಿಗೆ ಎಲ್ಲಾ ವಿಭಾಗದ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಯಿತು.ಶೀಘ್ರದಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪರಸ್ಪರ ವಿಚಾರ ವಿನಿಮಯ ಮಾಡಲಾಗಿದೆ.

 ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿಯವರೊಂದಿಗೂ ಊರಿಗೊಂದು/ಬಡಾವಣೆಗೊಂದು ಪುಸ್ತಕ’ದ ಬಗ್ಗೆ ಚರ್ಚೆ ನಡೆಸಲಾಯಿತು.

ನಮ್ಮೂರಿನ. ನಮ್ಮ ಬಡಾವಣೆಯ ಇತಿಹಾಸ ನಮ್ಮಿಂದಲೇ ಎಂಬ ಪರಿಕಲ್ಪನೆಗೆ ಚಾಲನೇ ನೀಡುವ ಮೂಲಕ ತುಮಕೂರು ನಗರ ಗ್ರಂಥಾಲಯದಲ್ಲಿ ವಿಶಿಷ್ಠವಾಗಿ  ದೇಶದ ದಿಕ್ಕನ್ನೆ  ಬದಲಾಯಿಸುವ ಪರಿಕಲ್ಪನೆಯೊಂದಿಗೆ ವಿಶ್ವ ಪರಿಸರ ದಿನಾಚರಣೆ ಯನ್ನು ಆಚರಿಸಲು ಉದ್ದೇಶಿಸಲಾಗಿದೆ.

ಮೋದಿಪ್ರಧಾನಿ, ಸಿದ್ಧುಮುಖ್ಯ ಮಂತ್ರಿ, ಡಿಕೆಶಿಉಪಮುಖ್ಯ ಮಂತ್ರಿ ಇವರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ ಸಲ್ಲಿಸುವ ಊರಿಗೊಂದು/ಬಡಾವಣೆಗೊಂದು ಪುಸ್ತಕದ ಪ್ರಸ್ತಾವನೆಯನ್ನು ಇಲ್ಲಿ ಓದಲು ಬರುತ್ತಿರುವ ಐಎಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ವಿದ್ಯಾರ್ಥಿಗಳ ಮುಖಾಂತರ ಅವರವರ ಗ್ರಾಮಗಳಲ್ಲಿ/ ಬಡಾವಣೆಗಳಲ್ಲಿ ಪ್ರಾಯೋಗಿಕವಾಗಿ ಸಿದ್ಧಪಡಿಸಿ ಸಲ್ಲಿಸಲು ಯೋಚಿಸಲಾಗಿದೆ.

ಅದಕ್ಕೂ ಮೊದಲು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ, ಶೆಟ್ಟಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಗೋಪಾಲನಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಆರ್ಕ ಶ್ರೀ ರಘುರವರು ಮತ್ತು ಮಧುಗಿರಿ ವಿಧಾನಸಭಾ ಕ್ಷೇತ್ರದ, 5 ಎಸ್ ಶ್ರೀ ಸಿದ್ಧಗಂಗಪ್ಪನವರು ಅವರ ಹುಟ್ಟೂರಿನಲ್ಲಿ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಆಧ್ಯಯನ ವರದಿಯೇ ಬೇರೆ, ಪ್ರಾಯೋಗಿಕ ವರದಿಯೇ ಬೇರೆ, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರ ಸಹಕಾರ  ಅಗತ್ಯ. ನಮ್ಮೆಲ್ಲರ ಅಭಿಪ್ರಾಯದ ಜೊತೆಯಲ್ಲಿ ಅವರ ಕನಸಿನೊಂದಿಗೆ ಯೋಜನಾ ಇಲಾಖೆಯ ಸಚಿವರಾದ ಶ್ರೀ ಸುಧಾಕರ್ ರವರ ಸಹಭಾಗಿತ್ವದಲ್ಲಿ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯನ್ನವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ಮಂಡಿಸಲು ಚಿಂತನೆ ನಡೆಸಲಾಗಿದೆ.

ದಯವಿಟ್ಟು ನಿಮ್ಮ ಐಡಿಯಾ ಕೊಡಿ, ಪಿಪಿಟಿ ಟೆಂಪ್ಲೇಟ್ ಡ್ರಾಪ್ಟ್ ಬೇಕಾಗಿದ್ದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೇಳಬಹುದು.

ಶೀಘ್ರದಲ್ಲಿ ವಾರ್ ರೂಂ ತೆರೆಯಲಾಗುವುದು, ಈ ಬಗ್ಗೆ ಶ್ರೀ ಕೆ.ಆರ್ ಸೋಹನ್, ಶ್ರೀ ಆರ್ಕ ರಘು, ಶ್ರೀ 5 ಎಸ್ ಸಿದ್ಧಗಂಗಪ್ಪ, ಶ್ರೀ  ಕೃಷ್ಣಮೂರ್ತಿ, ಶ್ರೀ ಸತ್ಯಾನಂದ್, ಶ್ರೀ ಸಿದ್ದೇಶ್, ಶ್ರೀಮತಿ ಸುಪ್ರೀತ, ಶ್ರೀಮತಿ ಆಪೇಕ್ಷಾ, ಶ್ರೀಮತಿ ರೇಷ್ಮಾ ಇನ್ನೂ ಮುಂತಾದವರ ತಂಡವನ್ನು ಸಿದ್ಧಗೊಳಿಸುತ್ತಿದ್ದೇನೆ.